For Quick Alerts
ALLOW NOTIFICATIONS  
For Daily Alerts

ಫೆ. 1 ಬಜೆಟ್ ಮಂಡನೆಯಂದು ಶನಿವಾರವಾದರೂ ಷೇರು ಮಾರುಕಟ್ಟೆ ವಹಿವಾಟು

|

ಇದೇ ವರ್ಷದ ಫೆಬ್ರವರಿ ಒಂದನೇ ತಾರೀಕಿನ ಶನಿವಾರದಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದು ನಿರ್ಮಲಾ ಅವರ ಎರಡನೇ ಬಜೆಟ್. ಅಂದು ವಾರಾಂತ್ಯವಾದರೂ ಷೇರು ಮಾರುಕಟ್ಟೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಬಿಎಸ್ ಇ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ದಿನ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಕೂಡ ಕಾರ್ಯ ನಿರ್ವಹಿಸುವ ಸಾಧ್ಯತೆ ಇದ್ದು, ಈ ಎರಡೂ ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ಸಾಮಾನ್ಯವಾಗಿ ಶನಿವಾರ- ಭಾನುವಾರದಂದು ರಜಾ ಇರುತ್ತದೆ. ಈ ಬಾರಿಯ ಕೇಂದ್ರ ಬಜೆಟ್ ಪೂರ್ವಭಾವಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗಾರಿಕೋದ್ಯಮಿಗಳು ಮತ್ತು ಆರ್ಥಿಕತಜ್ಞರ ಜತೆಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಆರ್ಥಿಕತೆ ಉತ್ತೇಜನಕ್ಕೆ ಕೆಲ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಫೆ. 1 ಬಜೆಟ್ ಮಂಡನೆಯಂದು ಶನಿವಾರವಾದರೂ ಷೇರು ಮಾರುಕಟ್ಟೆ ವಹಿವಾಟು

ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಇಳಿಕೆ ಮಾಡುವ ಸಾಧ್ಯತೆ ಇಲ್ಲ ಎಂದು ಈಗಾಗಲೇ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈಕ್ವಿಟಿ ಮಾರುಕಟ್ಟೆಯಲ್ಲಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡಬಹುದಾ ಎಂಬ ನಿರೀಕ್ಷೆ ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಇದೆ.

English summary

Stock Market Remain Open On February 1st Budget Day, Saturday

February 1st. Saturday union budget will be presented. Stock market remain open on that day.
Story first published: Friday, January 10, 2020, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X