For Quick Alerts
ALLOW NOTIFICATIONS  
For Daily Alerts

ಹೈದರಾಬಾದಿನಲ್ಲಿ ಕೆಜಿ ಈರುಳ್ಳಿ ಬೆಲೆ 35 ರು ಮಾತ್ರ!

|

ದೇಶದೆಲ್ಲೆಡೆ ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹೊತ್ತಿನಲ್ಲಿ, ಕೇಂದ್ರ ಸರ್ಕಾರ ದಾಸ್ತಾನು ಮೇಲೆ ನಿಯಂತ್ರಣಕ್ಕೆ ಕ್ರಮ ಅನುಸರಿಸುತ್ತಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರ ಕೂಡಾ ರೈತರಿಗೆ ಬೆಂಬಲ ಘೋಷಿಸಿದೆ. ಸರ್ಕಾರಿ ಸ್ವಾಮ್ಯದ ರೈತು ಬಜಾರ್ ಗಳಲ್ಲಿ 35 ರು ಪ್ರತಿ ಕೆಜಿಯಂತೆ ಈರುಳ್ಳಿ ಮಾರಾಟ ಮಾಡಲಾಗುವುದು ಎಂದು ತೆಲಂಗಾಣದ ಕೆ ಚಂದ್ರಶೇಖರ್ ಸರ್ಕಾರ ಘೋಷಿಸಿದೆ.

ಈರುಳ್ಳಿ ರೀಟೇಲ್ ದರ ಕೆಜಿಗೆ 75ರಿಂದ 100 ರೂ. ದಾಟುತ್ತಿದೆ. ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಈರುಳ್ಳಿ ದಾಸ್ತಾನು ಮೇಲೆ ಸರ್ಕಾರ ಮಿತಿ ವಿಧಿಸಿದೆ. ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿರ್ಬಂಧಿಸಿ, ಆಮದು ಹೆಚ್ಚಿದ್ದರಿಂದ ಚಿಲ್ಲರೆ ಹಾಗೂ ಹೋಲ್‌ಸೇಲ್ ಮಾರಾಟಗಾರರು ಈರುಳ್ಳಿ ಸಂಗ್ರಹ ಮಾಡುವುದರ ಮೇಲೆ ಮಿತಿ ಹೇರಿದೆ.

 

ಈರುಳ್ಳಿ ದರ ಕೆಜಿಗೆ 100 ರೂ, ರೀಟೇಲ್ ದರ ತಗ್ಗಿಸಲು ಸರ್ಕಾರ ಯತ್ನ

ಇದೇ ರೀತಿ ಸಬ್ಸಿಡಿ ಮಾರಾಟವನ್ನು ಹೈದರಾಬಾದಿನ 11 ರೈತು ಬಜಾರ್ ಗಳಲ್ಲಿ ಆರಂಭಿಸಲಾಗಿದೆ. ಈ ರೈತು ಬಜಾರ್ ಗಳಿಗೆ ಸಣ್ಣ ಪ್ರಮಾಣದ ರೈತರು ನೇರವಾಗಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುತ್ತಿದ್ದಾರೆ.

ಹೈದರಾಬಾದಿನಲ್ಲಿ ಕೆಜಿ ಈರುಳ್ಳಿ ಬೆಲೆ 35 ರು ಮಾತ್ರ!

ಪ್ರತಿ ವ್ಯಕ್ತಿ 2 ಕೆ.ಜಿ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬಹುದು. ಸರ್ಕಾರಕ್ಕೆ ಲಾಭಕ್ಕಿಂತ ರೈತರ ಸಮಸ್ಯೆ ಬಗೆಹರಿಸುವುದು ಮುಖ್ಯವಾಗಿದೆ ಎಂದು ಕೃಷಿ ಸಚಿವ ಎಸ್ ನಿರಂಜನ್ ರೆಡ್ಡಿ ಹೇಳಿದ್ದಾರೆ.

English summary

Telangana govt to sell Onions at Rs 35 per kilo in Hyderabad

The Telangana government on Saturday decided to sell onions at Rs 35 per kilo at the government-run 'Rythu Bazaars' here in the wake of a sharp rise in the price of the edible bulb in the open market.
Story first published: Sunday, October 25, 2020, 12:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X