For Quick Alerts
ALLOW NOTIFICATIONS  
For Daily Alerts

ಕಚೇರಿ ಬಾಡಿಗೆ ಕಟ್ಟದ ಟ್ವಿಟ್ಟರ್, ದೂರು ದಾಖಲು

|

ಟ್ವಿಟ್ಟರ್ ಭಾರೀ ನಷ್ಟದಲ್ಲಿದೆ ಎಂದು ಈಗಾಗಲೇ ನಮಗೆಲ್ಲ ತಿಳಿದಿರುವ ವಿಷಯವಾಗಿದೆ. ಆದರೆ ಬಾಡಿಗೆಯನ್ನು ಪಾವತಿಸಿಲ್ಲ ಎಂಬುವುದು ನಿಮಗೆ ಗೊತ್ತೆ?, ಹೌದು ಟ್ವಿಟ್ಟರ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ತನ್ನ ಕಚೇರಿಯ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ದೂರು ದಾಖಲು ಮಾಡಲಾಗಿದೆ.

ಟ್ವಿಟ್ಟರ್ ಸಂಸ್ಥೆಯು ಆಸ್ತಿಯ ಮಾಲೀಕರಾದ ಕೊಲಾಂಬಿಯಾ ರೈಟ್‌ಗೆ 136,250 ಡಾಲರ್ ಬಾಡಿಗೆ ಮೊತ್ತವನ್ನು ಪಾವತಿಸಿಲ್ಲ. ಯುಎಸ್‌ನಲ್ಲಿರುವ ಈ ಹಾರ್ಟ್‌ಫಾರ್ಡ್ ಬಿಲ್ಡಿಂಗ್‌ನ 30ನೇ ಮಳಿಗೆಯನ್ನು ವಿಶ್ವದ ಎರಡನೇ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಕಚೇರಿಗಾಗಿ ಬಾಡಿಗೆ ಪಡೆದಿದ್ದಾರೆ.

400 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ಡೇಟಾ ಕದ್ದ ಹ್ಯಾಕರ್, ಸಲ್ಮಾನ್, ಪಿಚೈ ಡೇಟಾ ಬಿಡುಗಡೆ!400 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ಡೇಟಾ ಕದ್ದ ಹ್ಯಾಕರ್, ಸಲ್ಮಾನ್, ಪಿಚೈ ಡೇಟಾ ಬಿಡುಗಡೆ!

ಎಲಾನ್ ಮಸ್ಕ್ ಹಲವಾರು ವಿವಾದಗಳ ಬಳಿಕ ಕಳೆದ ವರ್ಷ ಟ್ವಿಟ್ಟರ್ ಅನ್ನು ಸುಮಾರು 44 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಿದ್ದಾರೆ. ಅದಾದ ಬಳಿಕ ಟ್ವಿಟ್ಟರ್ ಭಾರೀ ನಷ್ಟವನ್ನು ಕಂಡಿದೆ. ಇದರಿಂದಾಗಿ ಟ್ವಿಟ್ಟರ್‌ನಲ್ಲಿ ಉದ್ಯೋಗ ಕಡಿತ ಸೇರಿದಂತೆ ಹಲವಾರು ವೆಚ್ಚಗಳನ್ನು ಕಡಿತ ಮಾಡಲಾಗಿದೆ.

ಕಚೇರಿ ಬಾಡಿಗೆ ಕಟ್ಟದ ಟ್ವಿಟ್ಟರ್,  ದೂರು ದಾಖಲು

ಮುಖ್ಯ ಕಚೇರಿಯ ಬಾಡಿಗೆ ಕಟ್ಟದ ಟ್ಟಿಟ್ಟರ್

ಟ್ಟಿಟ್ಟರ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ತನ್ನ ಮುಖ್ಯ ಕಚೇರಿಯ ಬಾಡಿಗೆಯನ್ನು ಪಾವತಿ ಮಾಡಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ ಎಷ್ಟು ತಿಂಗಳ ಬಾಡಿಗೆಯನ್ನು ಟ್ವಿಟ್ಟರ್ ಪಾವತಿಸಿಲ್ಲ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಟ್ವಿಟ್ಟರ್ ವರ್ಕ್ ಫ್ರಮ್ ಹೋಮ್ ಅಥವಾ ವರ್ಕ್ ಫ್ರಮ್ ಅನಿವೇರ್ ಎಂಬ ನೀತಿಯನ್ನು ಅಳವಡಿಸಿದೆ. ಇದಾದ ಬಳಿಕ ಹಲವಾರು ಕಚೇರಿಗಳನ್ನು ಟ್ವಿಟ್ಟರ್ ಬಂದ್ ಮಾಡಿದೆ. ಆದರೆ ಎಲಾನ್ ಮಸ್ಕ್ ಅಕ್ಟೋಬರ್‌ನಲ್ಲಿ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಸಂಸ್ಥೆಯು ಎಲ್ಲ ಉದ್ಯೋಗಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು ಎಂದು ಆದೇಶಿಸಿದೆ.

ಚಾರ್ಟರ್ ಫ್ಲೈಟ್ ಬಾಡಿಗೆ ಪಾವತಿಸಿಲ್ಲ ಟ್ವಿಟ್ಟರ್

ಇನ್ನು ಟ್ವಿಟ್ಟರ್ ಚಾರ್ಟರ್ ಫ್ಲೈಟ್‌ನ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಆರೋಪವು ಕೂಡಾ ಇದೆ. ಟ್ವಿಟ್ಟರ್ ಅಕ್ಟೋಬರ್‌ನಲ್ಲಿ ಎರಡು ಚಾರ್ಟರ್ ಫ್ಲೈಟ್‌ನ ಬಾಡಿಗೆಯನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ದೂರು ದಾಖಲಾಗಿದೆ. ಜೆಟ್ ಸರ್ವಿಸ್ ಗ್ರೂಪ್‌ಗೆ ಸಂಸ್ಥೆಯು 197,725 ಡಾಲರ್ ನೀಡಬೇಕಾಗಿದೆ. ಕಳೆದ ತಿಂಗಳು ಈ ಬಗ್ಗೆ ನ್ಯೂ ಹ್ಯಾಮ್‌ಸ್ಪಿಯರ್ ಜಿಲ್ಲಾ ಕೋರ್ಟ್‌ನಲ್ಲಿ ದೂರು ದಾಖಲಾಗಿದೆ.

ಆದರೆ ಎಲಾನ್ ಮಸ್ಕ್ ಮಾತ್ರ ಸಂಸ್ಥೆಯ ಈ ಹಿಂದಿನ ಮಾಲೀಕರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಹಿಂದಿನ ಮಾಲೀಕರು ಉದ್ಯೋಗಿಗಳಿಗೆ ಉಚಿತ ಆಹಾರ, ಸೌಲಭ್ಯಗಳನ್ನು ನೀಡಲು ದುಂದುವೆಚ್ಚವನ್ನು ಮಾಡಿದ್ದಾರೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಇನ್ನು ಎಲಾನ್ ಮಸ್ಕ್ ಈಗಾಗಲೇ ಜಾಗತಿಕವಾಗಿ ಟ್ವಿಟ್ಟರ್‌ನ ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.

English summary

Twitter Did Not Pay Rent for San Francisco Office, Sued for $136,250

Twitter has been sued for not paying rent on its San Fransisco office.Twitter Did Not Pay Rent for San Fransisco Office, Sued for $136,250.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X