For Quick Alerts
ALLOW NOTIFICATIONS  
For Daily Alerts

ಜನವರಿ 31ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭ: ಫೆಬ್ರವರಿ 1ಕ್ಕೆ ಬಜೆಟ್

|

2020ರ ಕೇಂದ್ರ ಬಜೆಟ್ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದ್ದು, 2 ಹಂತಗಳಲ್ಲಿ ನಡೆಸಲು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಶಿಫಾರಸು ಮಾಡಿದೆ.

 

ಬಿಜೆಪಿ ನೇತೃತ್ವದ ಎನ್‌ಡಿಎ-2 ಸರ್ಕಾರದ ಪೂರ್ಣ ಬಜೆಟ್ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದು, ಮೊದಲ ಹಂತದ ಬಜೆಟ್ ಅಧಿವೇಶನವು ಜನವರಿ 31ರಿಂದ ಫೆಬ್ರವರಿ 11ರವರೆಗೆ ನಡೆಯಲಿದೆ. ನಂತರ ಸ್ವಲ್ಪ ವಿರಾಮದ ಬಳಿಕ ಎರಡನೇ ಹಂತದ ಅಧಿವೇಶನ ಮಾರ್ಚ್‌ 2ರಿಂದ ಏಪ್ರಿಲ್ 3ರವರೆಗೆ ನಡೆಯಲಿದೆ.

 
ಜನವರಿ 31ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭ: ಫೆಬ್ರವರಿ 1ಕ್ಕೆ ಬಜೆಟ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 2 ಹಂತದಲ್ಲಿ ಬಜೆಟ್ ಅಧಿವೇಶನ ನಡೆಸಲು ಅಧಿವೇಶನದ ವೇಳಾಪಟ್ಟಿಯನ್ನು ಶಿಫಾರಸು ಮಾಡಲಾಗಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಂಸತ್ ನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭ ಆಗುತ್ತದೆ.

English summary

Union Budget 2020 Session In Two Phases From January 31

The cabinet committee on parliamentary affairs has recommended holding the Budget session in two phases from January 31
Story first published: Thursday, January 9, 2020, 11:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X