For Quick Alerts
ALLOW NOTIFICATIONS  
For Daily Alerts

ಅಮೆರಿಕ ವೀಸಾ ನಿರ್ಬಂಧಕ್ಕೆ ನಡುಗಿದ ಭಾರತದ ಐ.ಟಿ. ವಲಯ

|

ಎಚ್ 1ಬಿ ಸೇರಿದಂತೆ ಎಲ್ಲ ಉದ್ಯೋಗ ವೀಸಾವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಅಧಿಕೃತ ಆದೇಶ ನೀಡಿದ್ದಾರೆ. ಇದರಿಂದ ಭಾರತದ ಮಾಹಿತಿ ತಂತ್ರಜ್ಞಾನ ಸೇವೆ (ಐ.ಟಿ. ಸರ್ವೀಸ್) ಒದಗಿಸುವ ಕಂಪೆನಿಗಳಿಗೆ ಭಾರೀ ಹಿನ್ನಡೆ ಆಗಿದೆ. ಏಕೆಂದರೆ ಕಂಪೆನಿಯಲ್ಲಿ ಹೆಚ್ಚಿನ ಕೌಶಲ ಹೊಂದಿರುವ ಉದ್ಯೋಗಿಗಳನ್ನು ಯು.ಎಸ್.ಗೆ ವರ್ಗಾವಣೆ ಮಾಡಲಾಗುತ್ತಿತ್ತು.

ವೀಸಾ ಅಮಾನತು ನಿರ್ಧಾರವನ್ನು ಭಾರತದ ಐಟಿ ಉದ್ಯಮದ ನಾಸ್ಕಾಂ ಟೀಕಿಸಿದೆ. ಇದು ದಾರಿ ತಪ್ಪಿಸುವ ಹಾಗೂ ಯು.ಎಸ್. ಆರ್ಥಿಕತೆಗೆ ಅಪಾಯಕಾರಿ. ಈ ನಿರ್ಬಂಧವನ್ನು 90 ದಿನಗಳಿಗೆ ನಿಗದಿ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ಇದರ ವಿಸ್ತರಣೆಯು ಯು.ಎಸ್. ಕಂಪೆನಿಗಳಿಗೆ ಹೊರೆ ಆಗಲಿವೆ. ಈಗಿನ್ನೂ ಅವುಗಳು ಕೊರೊನಾದ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುತ್ತಿವೆ ಎನ್ನಲಾಗಿದೆ.

ವಲಸಿಗರ ಉದ್ಯೋಗ ವೀಸಾ ಅಮಾನತು ಮಾಡಿದ ಟ್ರಂಪ್ ಕ್ರಮಕ್ಕೆ ಪಿಚೈ ಬೇಸರವಲಸಿಗರ ಉದ್ಯೋಗ ವೀಸಾ ಅಮಾನತು ಮಾಡಿದ ಟ್ರಂಪ್ ಕ್ರಮಕ್ಕೆ ಪಿಚೈ ಬೇಸರ

ಆಡಳಿತವು ಮತ್ತೊಮ್ಮೆ ಆಲೋಚಿಸಲಿ. ಇನ್ನಷ್ಟು ನಿರ್ಬಂಧ ಹೇರುವುದು, ವೀಸಾಗೆ ಹೆಚ್ಚಿನ ಶುಲ್ಕ ವಿಧಿಸುವುದು... ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳದಿರಲಿ. ಹಾಗೆ ಇನ್ನಷ್ಟು ಕ್ರಮಗಳನ್ನು ಕೈಗೊಂಡರೆ, ಈಗಾಗಲೇ ಆರ್ಥಿಕತೆಗೆ ಪೆಟ್ಟು ತಿಂದಿರುವ ಅಮೆರಿಕ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ ಎಂದು ಹೇಳಲಾಗಿದೆ.

ಅಮೆರಿಕ ವೀಸಾ ನಿರ್ಬಂಧಕ್ಕೆ ನಡುಗಿದ ಭಾರತದ ಐ.ಟಿ. ವಲಯ

ಈ ಹೊಸ ನಿರ್ಬಂಧದಿಂದ ಅರ್ಹ ಉದ್ಯೋಗಿಗಳು ಅಮೆರಿಕಕ್ಕೆ ಬರುವುದು ತಪ್ಪುತ್ತದೆ. ವಲಸಿಗ ನಿಯಮವೇ ಬದಲಾಗಿ, ಆರ್ಥಿಕ ಚಟುವಟಿಕೆಗಳು ವಿದೇಶಗಳಿಗೆ ಸ್ಥಳಾಂತರ ಆಗುತ್ತವೆ. ಪ್ರಗತಿಗೆ ಹಿನ್ನಡೆ ಆಗಿ, ಉದ್ಯೋಗ ಸೃಷ್ಟಿ ನಿಧಾನ ಆಗುತ್ತದೆ ಎಂದು ಯು.ಎಸ್. ವಾಣಿಜ್ಯ ಮಂಡಳಿ ಸಿಇಒ ಥಾಮಸ್ ಜೆ. ಡೊನೋ ಹೇಳಿಕೆ ನೀಡಿದ್ದಾರೆ.

ಗ್ರೀನ್ ಕಾರ್ಡ್ ವಿತರಣೆಯನ್ನು ಸಹ ಈ ವರ್ಷದ ಕೊನೆ ತನಕ ಟ್ರಂಪ್ ಅಮಾನತು ಮಾಡಿದ್ದಾರೆ. ಟ್ರಂಪ್ ಆದೇಶಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

English summary

US Work Visa Ban Setback For Indian IT Industry

Donald Trump ordered work visa ban till December 2020. This is a big blow for Indian I.T. service industry.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X