For Quick Alerts
ALLOW NOTIFICATIONS  
For Daily Alerts

1,13,18,400 ರುಪಾಯಿ- ಉತ್ತರಪ್ರದೇಶದಲ್ಲಿ ವಿದ್ಯುತ್ ಬಿಲ್ ನಿಂದ ಶಾಕ್

|

ಉತ್ತರಪ್ರದೇಶದ ಸೋನ್ ಭದ್ರಾ ಜಿಲ್ಲೆ ಈಗ ವರ್ಲ್ಡ್ ಫೇಮಸ್. ಅಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಮೇಲೆ ಆಗಿರುವ ಬೆಳವಣಿಗೆ ಇದು. ಆದರೆ ಇಲ್ಲಿನ ಸೋನ್ ಪಹಾರಿ ಸುತ್ತಮುತ್ತ ಬದುಕುವ ಬುಡಕಟ್ಟು ಜನಾಂಗದವರ ಜೀವನದಲ್ಲಿ ಫಳಫಳಿಸುವ ಬದಲಾವಣೆ ಏನೂ ಆಗಿಲ್ಲ. ಒಂದೇ ಒಂದು ಬಲ್ಬ್ ಕೂಡ ಉರಿಸದೆ 1 ಕೋಟಿ ರುಪಾಯಿ ವಿದ್ಯುತ್ ಬಿಲ್ ಬಂದಿದೆ.

 

ಇಲ್ಲಿನ ಜನರಿಗೆ 6 ಸಾವಿರ ರುಪಾಯಿಯಿಂದ 1 ಕೋಟಿ ರುಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಂದಿದೆ. ಆರಂಗ್ ಪಾಣಿ ಎಂಬ ಹಳ್ಳಿಯಲ್ಲಿರುವ ಬುಡಕಟ್ಟು ಸಮುದಾಯದ ಅಮರ್ ನಾಥ್ ಎಂಬುವವರಿಗೆ ಸೌಭಾಗ್ಯ ಪ್ರಧಾನ ಮಂತ್ರಿ ಸಹಜ್ ಬಿಜಲಿ ಘರ್ ಯೋಜನೆ ಅಡಿ ಮನೆಗೆ ವಿದ್ಯುತ್ ಸಂಪರ್ಕ ಇದೆ. ಸಂಪರ್ಕ ಪಡೆದ ಒಂದು ವರ್ಷದ ನಂತರ ಅವರಿಗೆ 1 ಕೋಟಿ ರುಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಂದಿದೆ.

 
1,13,18,400 ರುಪಾಯಿ- ಉತ್ತರಪ್ರದೇಶದಲ್ಲಿ ವಿದ್ಯುತ್ ಬಿಲ್ ನಿಂದ ಶಾಕ್

ಇಂಥ 156 ಬುಡಕಟ್ಟು ಕುಟುಂಬಗಳು ಇಲ್ಲಿದ್ದು, ದೊಡ್ಡ ಮೊತ್ತದ ವಿದ್ಯುತ್ ಬಿಲ್ ಗಳು ಹಲವರಿಗೆ ಬಂದಿವೆ. ಈ ಬಗ್ಗೆ ಅಮರ್ ನಾಥ್ ಸುದ್ದಿ ಮಾಧ್ಯಮದ ಜತೆ ಮಾತನಾಡಿದ್ದು, ನನಗೆ 1,13,18,400 ರುಪಾಯಿ ವಿದ್ಯುತ್ ಬಿಲ್ ಬಂದಿದೆ. ಈಗ ನಿರಂತರವಾಗಿ ಇಲಾಖೆ ಕಚೇರಿಗೆ ಅಲೆದಾಡುತ್ತಾ ಇದ್ದೀನಿ. ಆದರೆ ಯಾರೂ ನನ್ನ ಅಹವಾಲು ಕೇಳಿಸಿಕೊಳ್ಳುತ್ತಿಲ್ಲ. ಭಿಲ್ ಕಟ್ಟದಿದ್ದಲ್ಲಿ ನನ್ನ ಭೂಮಿ ಹರಾಜು ಹಾಕುವುದಾಗಿ ಅಧಿಕಾರಿಗಳು ಹೆದರಿಸುತ್ತಿದ್ದಾರೆ ಎಂದಿದ್ದಾರೆ.

English summary

Uttar Pradesh's Son Bhadra Man Gets More Than 1 Crore Electricity Bill

Uttar Pradesh's Sona Bhadra's resident gets more than 1 crore rupees electricity bill. Here is the complete details.
Story first published: Friday, February 28, 2020, 12:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X