For Quick Alerts
ALLOW NOTIFICATIONS  
For Daily Alerts

ಉನ್ನತ ಅಧಿಕಾರಿಗಳು ಸೇರಿ 50 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ವಾಲ್‌ಮಾರ್ಟ್

|

ಅಮೆರಿಕಾ ಮೂಲದ ರಿಟೇಲ್ ಬೃಹತ್ ಸಂಸ್ಥೆ ವಾಲ್‌ಮಾರ್ಟ್ ಭಾರತದಲ್ಲಿ ಸುಮಾರು 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ವಿವಿಧ ವಿಭಾಗದ ಉಪಾಧ್ಯಕ್ಷರು ಸೇರಿದಂತೆ 8 ಉನ್ನತ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

 

ಭಾರತದ ಸ್ಟಾರ್ಟ್ ಅಪ್ ಕಂಪನಿಯಾದ ಫ್ಲಿಪ್‌ಕಾರ್ಟ್‌ ಅನ್ನು ಈ ಹಿಂದೆ ವಾಲ್‌ಮಾರ್ಟ್ ಸ್ವಾಧೀನ ಪಡಿಸಿಕೊಂಡಿದೆ. ದೇಶದಲ್ಲಿ ವಾಲ್‌ಮಾರ್ಟ್‌ ಕಾರ್ಯನಿರ್ವಹಣಾ ರಚನೆಯ ಬದಲಾವಣೆ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

 
ಉನ್ನತ ಅಧಿಕಾರಿಗಳು ಸೇರಿ 50 ಉದ್ಯೋಗಿಗಳನ್ನು ತೆಗೆದ ವಾಲ್‌ಮಾರ್ಟ್‌

ದೇಶದಲ್ಲಿ ಸಗಟು ಮಾರಾಟ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಅಡೆತಡೆ ಎದುರಿಸುತ್ತಿದ್ದು, ಕಂಪನಿಯ ಕಾರ್ಯ ನಿರ್ವಹಣೆಯಲ್ಲಿ ಬದಲಾವಣೆ ತರಲು ಎಕ್ಸಿಕ್ಯೂಟಿವ್‌ಗಳನ್ನು ತೆಗೆದು ಹಾಕುವ ಕ್ರಮ ಕೈಗೊಂಡಿದೆ. ಪ್ರಸ್ತುತ 28 ಸಗಟು ಮಾರಾಟ ಮಳಿಗೆಗಳ ಮೂಲಕ ಚಿಕ್ಕ ಅಂಗಡಿಗಳ ವರ್ತಕರಿಗೆ ಸರಕು ಮಾರಾಟ ಮಾಡುತ್ತಿದೆ. ಆದರೆ ನೇರವಾಗಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿಲ್ಲ.

ಈಗ ಕೆಲಸದಿಂದ ವಜಾಗೊಂಡಿರುವ ಉದ್ಯೋಗಿಗಳಲ್ಲಿ ರಿಯಲ್ ಎಸ್ಟೇಟ್ ವಿಭಾಗದ ಬಹುತೇಕ ಎಕ್ಸಿಕ್ಯುಟಿವ್‌ಗಳು ನೌಕರಿ ಕಳೆದುಕೊಂಡಿದ್ದಾರೆ. ದೇಶದಲ್ಲಿ ಒಟ್ಟು 5,300 ಉದ್ಯೋಗಿಗಳನ್ನು ಹೊಂದಿರುವ ವಾಲ್‌ಮಾರ್ಟ್ ಮುಖ್ಯ ಕಚೇರಿಯಲ್ಲಿ 600 ಸಿಬ್ಬಂದಿ ಹೊಂದಿದೆ.

2018ರಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 77 ಪರ್ಸೆಂಟ್ ಬಂಡವಾಳವನ್ನು 1.07 ಲಕ್ಷ ಕೋಟಿ ಖರೀದಿಸುವುದಾಗಿ ವಾಲ್‌ಮಾರ್ಟ್ ಪ್ರಕಟಿಸಿತ್ತು.

English summary

Wallmart India Lets Go of 50 Employees

Walmart India is letting go of 50 of its employees as part of a restructuring exercise.
Story first published: Monday, January 13, 2020, 16:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X