For Quick Alerts
ALLOW NOTIFICATIONS  
For Daily Alerts

ಈ ದೇಶದಲ್ಲಿ ಪೆಟ್ರೋಲ್ ರೇಟ್‌ ಲೀಟರ್‌ಗೆ 71 ಪೈಸೆ

|

ಆಧುನಿಕತೆ ಬೆಳೆದಂತೆ ತಂತ್ರಜ್ಙಾನದ ಅಳವಡಿಕೆಯು ಹೆಚ್ಚುತ್ತಿದೆ. ಜಗತ್ತಿನ ದೊಡ್ಡಣ್ಣ ಅಮೆರಿಕಾ ಆದರೂ ತೈಲ ಸಂಪನ್ಮೂಲವನ್ನು ಯಥೇಚ್ಛವಾಗಿ ಹೊಂದಿರುವ ಅರಬ್ ರಾಷ್ಟ್ರಗಳ ಶ್ರೀಮಂತಿಕೆ ಮಾತ್ರ ಹೆಚ್ಚುತ್ತಲೇ ಸಾಗಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ತೈಲದ ಬೇಡಿಕೆ.

ಪೆಟ್ರೋಲ್, ಡೀಸೆಲ್, ಗ್ಯಾಸ್ ಜಗತ್ತಿನ ಮೂಲಭೂತ ಅಗತ್ಯತೆಗಳಾಗಿವೆ. ಈ ಸಂಪನ್ಮೂಲಗಳ ಮೇಲಿನ ಅವಲಂಭನೆಯು ಬೇಡಿಕೆಯನ್ನು ಸೃಷ್ಠಿಸಿದೆ. ದಿನನಿತ್ಯವೂ ತೈಲ ದರ ಏರಿಳಿಕೆಯು ಸಾಮಾನ್ಯ. ಭಾರತದಲ್ಲಂತೂ ಪೆಟ್ರೋಲ್, ಡೀಸೆಲ್ ಅವಲಂಭನೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ದರ ಬುಧವಾರ(ನವೆಂಬರ್ 27) ಪ್ರತಿ ಲೀಟರ್‌ಗೆ 77.32 ರುಪಾಯಿ, ಡೀಸೆಲ್ ದರವು ಪ್ರತಿ ಲೀಟರ್‌ಗೆ 67.97 ರುಪಾಯಿಗಳಾಗಿದೆ.

ಬೆರಳ ತುದಿಯಲ್ಲಿ ಪೆಟ್ರೋಲ್-ಡೀಸೆಲ್ ರೇಟ್‌ ತಿಳಿದುಕೊಳ್ಳಿಬೆರಳ ತುದಿಯಲ್ಲಿ ಪೆಟ್ರೋಲ್-ಡೀಸೆಲ್ ರೇಟ್‌ ತಿಳಿದುಕೊಳ್ಳಿ

ದೇಶದ ನಾನಾ ನಗರಗಳಲ್ಲಿ ತೈಲ ದರ ಏರಿಳಿತ ಕಾಣುವಂತೆ ವಿಶ್ವದಲ್ಲಿ ಪ್ರತಿ ರಾಷ್ಟ್ರವೂ ವಿಭಿನ್ನ ತೈಲ ದರ ಹೊಂದಿದೆ. ಹಲವು ರಾಷ್ಟ್ರಗಳಲ್ಲಿ ತೈಲ ದುಬಾರಿಯಾದ್ರೆ, ಕೆಲವು ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಮ್ಮಿ ಇದೆ. ಹಾಗಾದರೆ ಜಗತ್ತಿನಲ್ಲಿ ಅತಿ ಕಮ್ಮಿ ಪೆಟ್ರೋಲ್ ದರವನ್ನು ಹೊಂದಿರುವ ದೇಶಗಳು ಯಾವುದು ಎಂದು ಈ ಕೆಳಗಿನ ವಿವರಣೆ ಮೂಲಕ ತಿಳಿದುಕೊಳ್ಳಿ. ವಿಶೇಷ ಅಂದ್ರೆ ಈ ರಾಷ್ಟ್ರಗಳಲ್ಲಿ ಕುಡಿಯುವ ನೀರಿಗಿಂತಲೂ ಪೆಟ್ರೋಲ್ ರೇಟ್ ಕಮ್ಮಿ.

1. ವೆನಿಜುವೆಲಾ

1. ವೆನಿಜುವೆಲಾ

ದಕ್ಷಿಣ ಅಮೆರಿಕಾದ ವೆನಿಜುವೆಲಾ ವಿಶ್ವದಲ್ಲೇ ಅಗ್ಗದ ಪೆಟ್ರೋಲ್ ದರವನ್ನು ಹೊಂದಿದೆ. ವಿಶ್ವದ ಅತಿದೊಡ್ಡ ತೈಲ ನಿಕ್ಷೇಪವನ್ನು ಹೊಂದಿರುವ ಈ ರಾಷ್ಟ್ರದಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ದರ 0.001 ಅಮೆರಿಕನ್ ಡಾಲರ್‌ ಅಂದರೆ ಭಾರತದ ರುಪಾಯಿಗಳಲ್ಲಿ ಕೇವಲ 71 ಪೈಸೆ ಆಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ಅಗ್ಗದ ಪೆಟ್ರೋಲ್ ದರ ಹೊಂದಿರುವ ದೇಶ ಇದಾಗಿದೆ.

2. ಇರಾನ್

2. ಇರಾನ್

ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದನೆಯ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ಇಲ್ಲಿ ಪೆಟ್ರೋಲ್ ದರವು ಕುಡಿಯುವ ನೀರಿಗಿಂತ ಕಡಿಮೆಗೆ ದೊರಕುತ್ತದೆ. ಇದಕ್ಕೆ ಕಾರಣ ಪೆಟ್ರೋಲ್‌ಗೆ ಹೆಚ್ಚು ನೀಡಲಾಗುವ ಸಬ್ಸಿಡಿ.

ಅಂದರೆ ನೈಜ ವೆಚ್ಚದ ಐದನೇ ಒಂದು ಭಾಗಕ್ಕೆ ಇಲ್ಲಿ ಪೆಟ್ರೋಲ್ ಮಾರಾಟವಾಗುತ್ತದೆ. ಶೇಕಡಾ 70 ಪ್ರತಿದಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ. ಹೀಗಾಗಿ ಇರಾನ್ ವಿಶ್ವದಲ್ಲೇ ಅಗ್ಗದ ಪೆಟ್ರೋಲ್ ಮಾರಾಟ ಮಾಡುವ ರಾಷ್ಟ್ರವಾಗಿದ್ದು, ಇಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 0.123 ಅಮೆರಿಕನ್ ಡಾಲರ್ (8 ರುಪಾಯಿ 78 ಪೈಸೆ) ಆಗಿದೆ.

 

3. ಸುಡಾನ್

3. ಸುಡಾನ್

ಆರ್ಥಿಕ ಬಿಕ್ಕಟ್ಟಿನಿಂದ ಹೆಚ್ಚು ಪೆಟ್ಟು ತಿಂದಿರುವ ಸುಡಾನ್ ರಾಷ್ಟ್ರದಲ್ಲಿ ತೈಲದ ಮೇಲೆ ಅತಿ ಹೆಚ್ಚು ಸಬ್ಸಿಡಿಗಳನ್ನು ನೀಡಲಾಗಿದೆ. ಇಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 0.137 ಅಮೆರಿಕನ್ ಡಾಲರ್ (9 ರುಪಾಯಿ 78 ಪೈಸೆ) ಆಗಿದೆ. ಇಲ್ಲಿನ ಸರ್ಕಾರ ಕೆಲವು ಬಾರಿ ಇಂಧನ ಮೇಲಿನ ಸಬ್ಸಿಡಿಗಳನ್ನು ಹಿಂಪಡೆಯಲು ಮುಂದಾಗಲೆಲ್ಲಾ ಹಲವು ಪ್ರತಿಭಟನೆಗಳನ್ನು ಎದುರಿಸಿದೆ.

4. ಅಂಗೋಲಾ

4. ಅಂಗೋಲಾ

ವೈವಿಧ್ಯಮಯ ಭೂ ಪ್ರದೇಶವನ್ನು ಹೊಂದಿರುವ ಅಂಗೋಲ ದಕ್ಷಿಣ ಆಫ್ರಿಕಾದ ರಾಷ್ಟ್ರವಾಗಿದೆ. ಇಲ್ಲಿ ಕಡಿಮೆ ಗುಣಮಟ್ಟದ ಜೀವನದ ನಡುವೆ ಪೆಟ್ರೋಲ್ ದರವೂ ಕಡಿಮೆಯಿದೆ. ಪ್ರತಿ ಲೀಟರ್‌ನ ಪೆಟ್ರೋಲ್ ದರವು 0.337 ಅಮೆರಿಕನ್ ಡಾಲರ್ (24 ರುಪಾಯಿ 05 ಪೈಸೆ) ಆಗಿದೆ.

5.  ಅಲ್ಜೀರಿಯ

5. ಅಲ್ಜೀರಿಯ

ಅಲ್ಜೀರಿಯವು ಉತ್ತರ ಆಫ್ರಿಕಾದ ರಾಷ್ಟ್ರವಾಗಿದೆ. ಇಲ್ಲಿನ ಸರ್ಕಾರವು ಜನರಿಗೆ ಸಹಾಯ ಮಾಡಲೆಂದು ನೀಡಿರುವ ತೈಲದ ಮೇಲಿನ ಸಬ್ಸಿಡಿಯು ಹೊರೆಯಾಗಿ ಪರಿಣಮಿಸಿದೆ. ಇಲ್ಲಿನ ಪೆಟ್ರೋಲ್ ದರವು ಲೀಟರ್‌ಗೆ 0.349 ಅಮೆರಿಕನ್ ಡಾಲರ್ (24ರುಪಾಯಿ 92 ಪೈಸೆ)ನಷ್ಟಿದೆ.

6. ಕುವೈತ್‌

6. ಕುವೈತ್‌

ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಕುವೈತ್ ಕೂಡ ಅಗ್ಗದ ದರದಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತದೆ. ಜನರ ಅನುಕೂಲಕ್ಕಾಗಿ ಅನೇಕ ಸಬ್ಸಿಡಿಗಳನ್ನು ನೀಡಿರುವ ಕುವೈತ್‌ನಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 0.345 ಅಮೆರಿಕನ್ ಡಾಲರ್ (24 ರುಪಾಯಿ 63 ಪೈಸೆ)ನಷ್ಟಿದೆ.

7. ನೈಜೀರಿಯಾ

7. ನೈಜೀರಿಯಾ

ಆಫ್ರಿಕಾದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರ ನೈಜೀರಿಯಾ ಸರ್ಕಾರವೂ ಅಗ್ಗದ ದರದಲ್ಲಿ ಪೆಟ್ರೋಲ್‌ ವಿತರಿಸುತ್ತದೆ. ಇಲ್ಲಿನ ಪೆಟ್ರೋಲ್ ದರವು ಲೀಟರ್‌ಗೆ 0.401 ಅಮೆರಿಕನ್ ಡಾಲರ್ (28 ರುಪಾಯಿ 63 ಪೈಸೆ)ಆಗಿದೆ

8.ತುರ್ಕಮೆನಿಸ್ತಾನ್

8.ತುರ್ಕಮೆನಿಸ್ತಾನ್

ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಪೆಟ್ರೋಲ್ ಮಾರಾಟ ಮಾಡುವ 8ನೇ ರಾಷ್ಟ್ರ ತುರ್ಕಮೆನಿಸ್ತಾನ್. ಮಧ್ಯ ಏಷ್ಯಾದ ಈ ರಾಷ್ಟ್ರದಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 0.429 ಅಮೆರಿಕನ್ ಡಾಲರ್ (30 ರುಪಾಯಿ 63 ಪೈಸೆ)ಆಗಿದೆ

9. ಕಜಕಿಸ್ತಾನ

9. ಕಜಕಿಸ್ತಾನ

ಮಧ್ಯ ಏಷ್ಯಾದ ಮತ್ತೊಂದು ರಾಷ್ಟ್ರವಾದ ಕಜಕಿಸ್ತಾನವು ಅತ್ಯಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಮಾರಾಟ ಮಾಡುವ ರಾಷ್ಟ್ರವಾಗಿದೆ. ಇಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 0.450 ಅಮೆರಿಕನ್ ಡಾಲರ್ (32 ರುಪಾಯಿ 13 ಪೈಸೆ)ನಷ್ಟಿದೆ.

10. ಅಜೆರ್ಬೈಜಾನ್

10. ಅಜೆರ್ಬೈಜಾನ್

ಮಾಜಿ ಸೋವಿಯತ್ ರಿಪಬ್ಲಿಕ್ ರಾಷ್ಟ್ರವಾದ ಅಜೆರ್ಬೈಜಾನ್ ಅಧಿಕೃತವಾಗಿ ರಿಪಬ್ಲಿಕ್ ಆಫ್ ಅಜೆರ್ಬೈಜಾನ್ ಎಂದು ಕರೆಯಲಾಗುತ್ತದೆ. ಯುರೇಷಿಯಾದ ದಕ್ಷಿಣ ಕಾಕಸಸ್ ಪ್ರದೇಶದ ಒಂದು ದೇಶವಾದ ಅಜೆರ್ಬೈಜಾನ್ ನಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 0.471 ಅಮೆರಿಕನ್ ಡಾಲರ್ (33 ರುಪಾಯಿ 62 ಪೈಸೆ)ನಷ್ಟಿದೆ.

English summary

World Most Cheapest Countries To Buy Petrol In 2019

This is the world most cheapest petrol price country per liter price 72 paise only
Story first published: Wednesday, November 27, 2019, 15:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X