For Quick Alerts
ALLOW NOTIFICATIONS  
For Daily Alerts

ವಿಶ್ವದ ಟಾಪ್ ಟೆನ್ ಶ್ರೀಮಂತ ರಾಷ್ಟ್ರಗಳಿವು: ಭಾರತ ಎಷ್ಟರಲ್ಲಿದೆ?

|

ಜಾಗತಿಕವಾಗಿ ಲೆಕ್ಕ ಹಾಕಿದರೆ ಎಲ್ಲ ದೇಶಗಳನ್ನೂ ಸೇರಿಸಿ ಎಷ್ಟು ಹಣ ಇರಬಹುದು? ಹೀಗೊಂದು ಪ್ರಶ್ನೆ ನಿಮಗೆ ಬಂದಿದ್ದರೆ, ಅದಕ್ಕೆ ಹುಡುಕಿದರೂ ಉತ್ತರ ಸಿಗದಿದ್ದಲ್ಲಿ ಕ್ರೆಡಿಟ್ ಸುಸೆ 2019ರ ವರದಿ ಬಂದಿದೆ, ನೋಡಿಕೊಳ್ಳಿ. ಆ ವರದಿಯ ಪ್ರಕಾರ ಈ ವಿಶ್ವದಲ್ಲಿ ಇರುವ ಒಟ್ಟು ಹಣ 360.6 ಟ್ರಿಲಿಯನ್ ಅಮೆರಿಕನ್ ಡಾಲರ್.

ಒಂದು ಟ್ರಿಲಿಯನ್ ಅಂದರೆ ಲಕ್ಷ ಕೋಟಿ. 360.6 ಲಕ್ಷ ಕೋಟಿ ಡಾಲರ್. ಹಾಗಿದ್ದರೆ ರುಪಾಯಿಗಳಲ್ಲಿ ಎಷ್ಟಾಗಬಹುದು ಅಂದುಕೊಳ್ತೀರಾ? ಸೋಮವಾರದ (ಫೆಬ್ರವರಿ 24, 2020) ಲೆಕ್ಕಕ್ಕೆ ಒಂದು ಡಾಲರ್ ಗೆ 72 ರುಪಾಯಿ ಇದೆ. 360.6 ಲಕ್ಷ ಕೋಟಿಯನ್ನು 72ರಿಂದ ಗುಣಿಸಿದರೆ ಅಷ್ಟು ಮೊತ್ತದ ರುಪಾಯಿ ಆಗುತ್ತದೆ.

ಭಾರತದ 10 ಖ್ಯಾತ ಶ್ರೀಮಂತರು: ಯಾರಿಗೆ ಮೊದಲ ಸ್ಥಾನ?ಭಾರತದ 10 ಖ್ಯಾತ ಶ್ರೀಮಂತರು: ಯಾರಿಗೆ ಮೊದಲ ಸ್ಥಾನ?

ವಿಶ್ವದಲ್ಲಿ ಇರುವ ಇಷ್ಟು ಹಣದ ಪೈಕಿ ಹೆಚ್ಚು ಕಮ್ಮಿ ಶೇಕಡಾ 30ರಷ್ಟು ಅಮೆರಿಕದ ಬಳಿಯೇ ಇದೆ. ಇದನ್ನು ಕನ್ನಡದಲ್ಲಿ ನಿವ್ವಳ ಮೌಲ್ಯ ಹಾಗೂ ಇಂಗ್ಲಿಷ್ ನಲ್ಲಿ ನೆಟ್ ವರ್ಥ್ ಎಂದು ಕರೆಯಲಾಗುತ್ತದೆ. ಆ ದೇಶದ ಬಳಿ ಇರುವ ಎಲ್ಲ ಆರ್ಥಿಕ ಆಸ್ತಿ ಹಾಗೂ ಅದರಲ್ಲಿ ಸಾಲವನ್ನು ಕಳೆದರೆ ಉಳಿಯುವ ಮೊತ್ತವೇ ನೆಟ್ ವರ್ಥ್.

ವಿಶ್ವದ ಟಾಪ್ ಟೆನ್ ಶ್ರೀಮಂತ ರಾಷ್ಟ್ರಗಳಿವು: ಭಾರತ ಎಷ್ಟರಲ್ಲಿದೆ?

ವಿಶ್ವದ ಟಾಪ್ ಟೆನ್ ಶ್ರೀಮಂತ ರಾಷ್ಟ್ರಗಳ ಪಟ್ಟಿ ಇಂತಿದೆ.

* ಯುನೈಟೆಡ್ ಸ್ಟೇಟ್ಸ್- $ 106 ಟ್ರಿಲಿಯನ್

* ಚೀನಾ- $ 63.8 ಟ್ರಿಲಿಯನ್

* ಜಪಾನ್- $ 25 ಟ್ರಿಲಿಯನ್

* ಜರ್ಮನಿ- $ 14.7 ಟ್ರಿಲಿಯನ್

* ಯುನೈಟೆಡ್ ಕಿಂಗ್ ಡಮ್- $ 14.3 ಟ್ರಿಲಿಯನ್

* ಭಾರತ- $ 12.6 ಟ್ರಿಲಿಯನ್

* ಕೆನಡಾ- $ 8.6 ಟ್ರಿಲಿಯನ್

* ದಕ್ಷಿಣ ಕೊರಿಯಾ- $ 7.3 ಟ್ರಿಲಿಯನ್

* ಆಸ್ಟ್ರೇಲಿಯಾ- $ 7.2 ಟ್ರಿಲಿಯನ್

* ಸ್ವಿಟ್ಜರ್ಲೆಂಡ್- $ 3.9 ಟ್ರಿಲಿಯನ್

English summary

World's Top 10 Richest Countries, India In Which Spot?

Here is the list of top 10 richest countries and which spot India stands?
Story first published: Tuesday, February 25, 2020, 9:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X