For Quick Alerts
ALLOW NOTIFICATIONS  
For Daily Alerts

ಗೃಹಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸಗಳೇನು?

|

ಹಲವಾರು ಜನರಿಗೆ ಗೃಹಸಾಲ ಮತ್ತು ಪ್ರಾಪರ್ಟಿ(ಆಸ್ತಿ) ಸಾಲದ ನಡುವಿನ ವ್ಯತ್ಯಾಸದ ಬಗ್ಗೆ ಪ್ರಶ್ನೆ ಮೂಡಿರುತ್ತದೆ. ಆದರೆ ಅದಕ್ಕೆ ಸಮರ್ಪಕವಾದ ಉತ್ತರ ಸಿಕ್ಕಿರುವುದಿಲ್ಲ.

 

ಈ ಎರಡು ಸಾಲಗಳು ಒಂದಕ್ಕಿಂತ ಒಂದು ಭಿನ್ನವಾದವು. ಇವುಗಳ ಬಡ್ಡಿ ಆಕರಣೆ, ಪಡೆದುಕೊಳ್ಳುವ ರೀತಿ ಎಲ್ಲದರಲ್ಲೂ ವ್ಯತ್ಯಾಸವಿದೆ. ಅದೆಲ್ಲವನ್ನು ತಿಳಿದುಕೊಳ್ಳುವುದು ಮುಖ್ಯ.

ಗೃಹಸಾಲ ಮತ್ತು ಪ್ರಾಪರ್ಟಿ(ಆಸ್ತಿ) ಸಾಲದ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ
ಮನೆ ಕಟ್ಟಲು ಅಥವಾ ಖರೀದಿ ಮಾಡಲು ಪಡೆದುಕೊಳ್ಳುವ ಸಾಲ ಗೃಹ ಸಾಲ ಎಂದು ಕರೆಸಿಕೊಳ್ಳುತ್ತದೆ. ಅದು ನಿರ್ಮಾಣ ಹಂತದಲ್ಲಿರಬಹುದು ಅಥವಾ ಸಿದ್ಧವಾಗಿರುವ ಮನೆ ಖರೀದಿ ಮಾಡುವುದೇ ಆಗಿರಬಹುದು.[ಆಸ್ತಿ ಮೇಲೆ ಸಾಲ ಪಡೆಯುವಾಗ ಇವೆಲ್ಲ ಲೆಕ್ಕಕ್ಕೆ ಬರುತ್ತವೆ]

ಗೃಹಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸಗಳೇನು?

ಪ್ರಾಪರ್ಟಿ ಸಾಲವೆಂದರೆ ನಿಮ್ಮ ಬಳಿ ಇರುವ ಆಸ್ತಿಯನ್ನು ಅದು ಭೂಮಿ ಅಥವಾ ಮನೆ ಯಾವುದೇ ರೀತಿಯಲ್ಲಿದ್ದಿರಬಹುದಾಗಿರಬಹುದು. ಅದನ್ನು ಅಡವಿಟ್ಟು ಸಾಲ ಪಡೆದುಕೊಲ್ಳುವುದಾಗಿದೆ. ಅಂದರೆ ಇಲ್ಲಿ ನಿಮ್ಮ ಬಳಿ ಇರುವ ಆಸ್ತಿಯನ್ನು ಅಡಗವಿಟ್ಟುಕೊಂಡು ಸಾಲ ನೀಡಲಾಗಿರುತ್ತದೆ.

ಪ್ರಾಪರ್ಟಿ ಸಾಲಕ್ಕೆ ತೆರಿಗೆ ಲಾಭವಿಲ್ಲ
ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ಲಭ್ಯವಿದ್ದರೆ, ಪ್ರಾಪರ್ಟಿ ಸಾಲಕ್ಕೆ ತೆರಿಗೆ ಲಾಭವಿಲ್ಲ. ನಿರ್ದಿಷ್ಟ ಮೊತ್ತದ ಗೃಹ ಸಾಲವಿದ್ದರೆ ಕಾನೂನು ಬದ್ಧವಾಗಿ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಬಹುದು. ಉದ್ಯಮಿ ಪ್ರಾಪರ್ಟಿ ಸಾಲ ಹೊಂದಿದ್ದರೆ ಕೆಲವೊಂದು ಮಾರ್ಗದರ್ಶನದ ಅಡಿ ತೆರಿಗೆ ವಿನಾಯಿತಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಪ್ರಾಪರ್ಟಿ ಸಾಲವನ್ನು ಯಾವ ಉದ್ದೇಶಕ್ಕಾದರೂ ಬಳಸಿಕೊಳ್ಳಬಹುದು
ಪ್ರಾಪರ್ಟಿ ಸಾಲವನ್ನು ಯಾವ ಉದ್ದೇಶಕ್ಕಾದರೂ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಗೃಹ ಸಾಲವನ್ನು ಮನೆ ನಿರ್ಮಾಣಕ್ಕೆ ಮಾತ್ರ ಬಳಸಿಕೊಳ್ಳಬೇಕು. ಪ್ರಾಪರ್ಟಿ ಸಾಲವನ್ನು ಉನ್ನತ ಶಿಕ್ಷಣ ಪಡೆಯಲು, ಮದುವೆ, ವೈದ್ಯಕೀಯ ವೆಚ್ಚ ಹೀಗೆ ಎಲ್ಲಿ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

ಪ್ರಾಪರ್ಟಿ ಸಾಲ ನೇರವಾಗಿ ಅರ್ಜಿದಾರನ ಕೈ ಸೇರುತ್ತದೆ. ಆದರೆ ಗೃಹ ಸಾಲ ಬಿಲ್ಡರ್ ಅಥವಾ ಮಾರಾಟಗಾರನ ಕೈ ಸೇರುತ್ತದೆ. ಆದರೆ ಎರಡು ಸಂದರ್ಭದಲ್ಲಿಯೂ ಬ್ಯಾಂಕ್ ನಿಮ್ಮ ಎಲ್ಲ ವ್ಯವಹಾರದ ದಾಖಲೆಗಳನ್ನು ಪಡೆದುಕೊಳ್ಳುತ್ತದೆ.

 

ನಿಮ್ಮ ಆಸ್ತಿ ಮಾರಾಟ
ಎರಡು ಸಾಲದಲ್ಲಿ ಸಾಮ್ಯತೆಯೊಂದಿದೆ. ನೀವು ಸಾಲವನ್ನು ಸರಿಯಾಗಿ ಮರುಪಾವತಿ ಮಾಡಲು ವಿಫಲರಾದರೆ ಬ್ಯಾಂಕ್ ಮನೆಯನ್ನು ಅಥವಾ ಅಡವಿಟ್ಟ ಆಸ್ತಿಯನ್ನು ಮಾರಾಟ ಮಾಡಲು ಅಧಿಕಾರ ಪಡೆದುಕೊಳ್ಳುತ್ತದೆ.

ಬಡ್ಡಿ ದರ ವ್ಯತ್ಯಾಸ
ಗೃಹ ಸಾಲಕ್ಕಿಂತ ಪ್ರಾಪರ್ಟಿ ಸಾಲಕ್ಕೆ ಹೆಚ್ಚಿನ ಬಡ್ಡಿ ಆಕರಣೆ ಮಾಡಲಾಗುತ್ತದೆ. ಆದರೆ ಅನೇಕ ಸಂಸ್ಥೆಗಳು ಹೆಚ್ಚಿನ ಸಾಲ ನೀಡಿಕೆ ಭರವಸೆಯನ್ನು ನೀಡುತ್ತಿವೆ.

ಕೊನೆ ಮಾತು:
ಗೃಹ ಸಾಲ ಪಡೆದುಕೊಂಡು ಮನೆ ನಿರ್ಮಾಣ ಮಾಡಿದರೆ ಒಂದು ಆಸ್ತಿ ನಿಮ್ಮ ಹೆಸರಿನಲ್ಲಿ ಇದ್ದಂತೆ ಆಗುತ್ತದೆ. ಆದರೆ ಪ್ರಾಪರ್ಟಿ ಸಾಲ ನಿಮ್ಮ ಆಸ್ತಿಯನ್ನೇ ಅಡಮಾನಕ್ಕೆ ಇಡುತ್ತದೆ. ಪ್ರಾಪರ್ಟಿ ಸಾಲಕ್ಕೆ ಹೋಲಿಕೆ ಮಾಡಿದರೆ ಪರ್ಸನಲ್ ಲೋನ್ ಅಥವಾ ಚಿನ್ನದ ಸಾಲ ಪಡೆದುಕೊಳ್ಳುವುದೇ ಉತ್ತಮ.(ಗುಡ್ ರಿಟರ್ನ್ಸ್.ಇನ್)

English summary

What Is The Difference Between Home Loan And A Property Loan?

Many individuals often get confused with the difference between home loan and property loans. Sometimes, they are loosely used terms and interchanged conveniently. However, there is a big difference between the two.
Story first published: Monday, September 21, 2015, 13:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X