ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ಇವುಗಳಲ್ಲಿ ಹೂಡಿಕೆ ಮಾಡಿ.

By Siddu Thorat
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಪ್ರತಿ ತಿಂಗಳು ನಿರಂತರವಾಗಿ ಸಿಗುವ ಆದಾಯ ಯಾರಿಗೆ ಬೇಡ ಹೇಳಿ? ಸಂಬಳ ಪಡೆಯುವವರನ್ನು ಒಳಗೊಂಡಂತೆ ಎಲ್ಲರೂ ನಿರಂತರ ಆದಾಯಕ್ಕಾಗಿ ಹಂಬಲಿಸುತ್ತಾರೆ.

  ಅದರಲ್ಲೂ ಸಂಬಳ ಪಡೆಯದೇ ಇದ್ದವರಂತೂ ಕೆಲ ಸಂದರ್ಭಗಳಲ್ಲಿ, ಹಣಕಾಸಿನ ನಿರ್ವಹಣೆ ಸರಿಯಾಗಿ ಮಾಡದಿದ್ದಾಗ ಹಾಗೂ ತಿಂಗಳ ಅಂತ್ಯದಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ.

  ಖಾಸಗಿ ವಲಯದಲ್ಲಿ ಹೆಚ್ಚಿನ ಜನರು ಕೆಲಸ ಮಾಡುತ್ತಿರುತ್ತಾರೆ ಹಾಗೂ ಯುವ ಪಿಳೀಗೆಯವರು ಉತ್ತಮ ಕೆಲಸಕ್ಕಾಗಿ ಉದ್ಯೋಗ ಬದಲಾಯಿಸಲು ಇಷ್ಟ ಪಡುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹೆಚ್ಚಿನ ವ್ಯಕ್ತಿಗಳು ನಿವೃತ್ತಿ ನಂತರದ ಜೀವನಕ್ಕಾಗಿ ಅಥವಾ ಉಳಿತಾಯ ಮಾಡುವಲ್ಲಿ ಎಡವುತ್ತಾರೆ. (9 ಹಣಕಾಸು ಸಲಹೆ)

  ಹೀಗಾಗಿ ಈ ಕೆಳಗಿನ ಹೂಡಿಕೆಗಳು ನಿರಂತರವಾದ ಮತ್ತು ಸುರಕ್ಷಿತವಾದ ತಿಂಗಳ ಆದಾಯ ತಂದುಕೊಡಬಲ್ಲವು. (ಹೆಚ್ಚು ಲಾಭ ಕೊಡುವ 7 ಹೂಡಿಕೆ)

  ಮ್ಯೂಚುವಲ್ ಫಂಡ್ಸ್ MIS

  ಮ್ಯೂಚುವಲ್ ಫಂಡ್ ನಲ್ಲಿ ಅನೇಕ ತಿಂಗಳ ಆದಾಯ ಯೋಜನೆ (monthly income plans )ಗಳಿವೆ. ಯಾರು ಪ್ರತಿ ತಿಂಗಳೂ ಆದಾಯವನ್ನು ಬಯಸುತ್ತಾರೋ ಅಂತಹ ವ್ಯಕ್ತಿಗಳು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು. ಇದು ವಿಶೇಷವಾಗಿ ಹೂಡಿಕೆ ಮಾಡುವವರಿಗೆ ಹೆಚ್ಚು ಅನುಕೂಲಕಾರಿ. ರಿಟರ್ನ್ಸ್ ಮತ್ತು ಸುರಕ್ಷತೆಯ ಆಧಾರದ ಮೇಲೆ ಅನೇಕ ಸಾಲ ಫಂಡ್ಸ್, ಹೈಬ್ರಿಡ್ ಫಂಡ್ಸ್ ಲಭ್ಯ ಇರುತ್ತವೆ.

  ಹಿರಿಯ ನಾಗರಿಕರ ಉಳಿತಾಯ ಯೋಜನೆ

  ಇದು ವಿಶೇಷವಾಗಿ ಹಿರಿಯ ನಾಗರಿಕರನ್ನು ಕೇಂದ್ರಿಕೃತ ಯೋಜನೆಯಾಗಿದೆ. ಅಂಚೆ ಇಲಾಖೆ ಮತ್ತು ಕೆಲ ಬ್ಯಾಂಕುಗಳಲ್ಲಿ ಈ ಸ್ಕೀಮ್ ಮಾಡಬಹುದು. ಇದರ ಮೆಚುರಿಟಿ ಅವಧಿ ಐದು ವರ್ಷಗಳಾಗಿದ್ದು ವಾರ್ಷಿಕವಾಗಿ ಶೇ. 8.6ರಷ್ಟು ಬಡ್ಡಿದರ ಸಿಗುತ್ತದೆ. ಠೇವಣಿದಾರ ಒಂದಕ್ಕಿಂತಲೂ ಹೆಚ್ಚಿನ ಖಾತೆಗಳನ್ನು ತೆರೆಯಬಹುದಾಗಿದೆ. ಅಲ್ಲದೆ ಹೆಂಡತಿಯೊಂದಿಗೆ ಜಂಟಿ ಖಾತೆಯನ್ನು ತೆರೆಯಬಹುದು.

  ಬ್ಯಾಂಕು ಸ್ಥಿರ ಠೇವಣಿ

  ಯಾವುದೇ ಗಂಡಾಂತರವಿಲ್ಲದೆ ಹೆಚ್ಚಿನ ಬಡ್ಡಿದರಕ್ಕಾಗಿ ವ್ಯಕ್ತಿಗಳು ಸ್ಥಿರ ಠೇವಣಿಗಳ ಮೇಲೆ ಹೂಡಿಕೆ ಮಾಡಬಹುದು. ಜತೆಗೆ ಮಾಸಿಕ ಬಡ್ಡಿ ಪಡೆಯುವ ವಿಧಾನವನ್ನು ಆಯ್ಕೆ ಮಾಡಬಹುದು. ಅಲ್ಲದೆ ಮಾಸಿಕ, ತ್ರೈಮಾಸಿಕ ಅಥವಾ ಪುನರ್ ಹೂಡಿಕೆಯ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು.

  ಮ್ಯೂಚುವಲ್ ನಿಧಿ ವ್ಯವಸ್ಥಿತವಾಗಿ ಹಿಂತೆಗೆಯುವ ಯೋಜನೆ

  ವ್ಯವಸ್ಥಿತವಾಗಿ ಹಿಂತೆಗೆಯುವ ಯೋಜನೆ ಅಡಿಯಲ್ಲಿ ಹೂಡಿಕೆದಾರರು ಸ್ಥಿರ ಅಥವಾ ಬೇಕಾಗುವಷ್ಟು ಮೊತ್ತವನ್ನು ಮ್ಯೂಚುವಲ್ ನಿಧಿಯಿಂದ ತೆಗೆಯಬಹುದು. ಅವಶ್ಯಕತೆಗೆ ಅನುಗುಣವಾಗಿ ಹಣವನ್ನು ಮಾಸಿಕ, ತ್ರೈಮಾಸಿಕ ಅಥವಾ ವಾ‍ರ್ಷಿಕವಾಗಿ ಬಿಡಿಸಿಕೊಳ್ಳವು ಆಯ್ಕೆ ಇರುತ್ತದೆ.

  ಮ್ಯೂಚುವಲ್ ನಿಧಿ ಲಾಭಾಂಶಗಳು

  ಮ್ಯೂಚುವಲ್ ನಿಧಿಗಳಲ್ಲಿ ಹೂಡಿಕೆ ಮಾಡುವವರು ನಿಯಮಿತವಾಗಿ ಲಾಭಾಂಶ ಪಡೆಯುವವರೆಂಬುದಾಗಿ ಹೆಸರುವಾಸಿಯಾಗುತ್ತಾರೆ. ಇದರಲ್ಲಿ ಅನೇಕ ಈಕ್ವಿಟಿ ಲಾಭಾಂಶ ನಿಧಿಗಳು ನಿರಂತರವಾದ ಲಾಭಾಂಶವನ್ನು ವಾರ್ಷಿಕ ಆಧಾರದಲ್ಲಿ ನೀಡುತ್ತವೆ.

  ನೇರ ಈಕ್ವಿಟಿ

  ಯಾರು ಹೆಚ್ಚಿನ ಲಾಭ ಹುಡುಕುತ್ತಿರುತ್ತಾರೆ ಅಂತವರು ನೇರ ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆ. ಆದರೆ ಸ್ವಲ್ಪ ಮಟ್ಟಿಗೆ ರಿಸ್ಕ್ ಎದುರಿಸಲು ಸಿದ್ದರಾಗಿರಬೇಕಾಗುತ್ತದೆ. ಸಾಮಾನ್ಯವಾಗಿ ಈಕ್ವಿಟಿ ಲಾಭಾಂಶಗಳನ್ನು ವಾರ್ಷಿಕವಾಗಿ ಕೊಡಲಾಗುತ್ತದೆ. ಹಾಗೂ ನಿಯಮಿತ ಲಾಭಾಂಶ ಸಿಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

  ರಿಯಲ್ ಎಸ್ಟೇಟ್

  ನಿಮ್ಮ ಬಳಿ ಹೆಚ್ಚುವರಿ ಸ್ಥಳಾವಕಾಶ ಅಥವಾ ಭೂಮಿ ಇದ್ದರೆ ಬಾಡಿಗೆಗೆ ಕೊಡುವುದು ಉತ್ತಮ. ಇದರಿಂದಾಗಿ ನಿರಂತರವಾದ ಆದಾಯವನ್ನು ಗಳಿಸಬಹುದಾಗಿದೆ. ಬಾಡಿಗೆದಾರನಿಂದ ಭದ್ರತಾ ಒಕ್ಕಲು ಪಡೆದು ಸ್ಥಿರ ಠೇವಣಿ ರೂಪದಲ್ಲಿ ಹೂಡಿಕೆ ಮಾಡಬಹುದು.

  ಅಂಚೆ ಕಚೇರಿ MIS

  ಷೇರು ಒಳಗೊಂಡಂತೆ ಜಂಟಿ ಖಾತೆಯಲ್ಲಿ ರೂ. 4.5 ಲಕ್ಷಗಳವರೆಗೆ ತಿಂಗಳ ಆದಾಯ ಯೋಜನೆಯಲ್ಲಿ(MIS) ಹೂಡಿಕೆ ಮಾಡಬಹುದು.
  ವಾರ್ಷಿಕವಾಗಿ ಶೇ. 7.80ರಷ್ಟು ಬಡ್ಡಿದರ ಅನ್ವಯಿಸುತ್ತದೆ. ಅಲ್ಲದೇ ತಿಂಗಳಿಗೆ ಆದಾಯ ಪಡೆಯಬಹುದಾಗಿದೆ.

  English summary

  8 Best Investments To Get Regular Monthly Income In India

  Individuals other than salaried, most of the time bother about expenses and how to tackle them when their income is not regular. Such persons find it difficult to manage their finances. Even salaried individuals also at some point face a financial crunch if financial planning is not done
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more