For Quick Alerts
ALLOW NOTIFICATIONS  
For Daily Alerts

ಸರ್ಕಾರಗಳಿಂದ ಲಭ್ಯವಿರುವ ವಿವಿಧ ಸಾಲಗಳ ಸಂಪೂರ್ಣ ಮಾಹಿತಿ ಇಲ್ಲಿದೆ..

ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟು ಅಥವಾ ಉದ್ದಿಮೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ.

By Siddu
|

ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟು ಅಥವಾ ಉದ್ದಿಮೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ. ಏಕೆಂದರೆ ದೇಶದಲ್ಲಿ ಖಾಸಗಿ ವಲಯದ ಹೂಡಿಕೆಯಿಂದ ಸ್ಥಾಪಿತವಾಗಿರುವ ಸಂಸ್ಥೆಗಳು ಮತ್ತು ಉದ್ದಿಮೆಗಳಿಂದ ಸಣ್ಣ ಉದ್ದಿಮೆಗಳು ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿವೆ.

ಈ ಉದ್ದಿಮೆಗಳಿಗೆ ಸರ್ಕಾರದಿಂದ ದೊರಕುವ ಸಾಲ ಸೌಲಭ್ಯವೇ ಹೆಚ್ಚು ಸೂಕ್ತ. ಏಕೆಂದರೆ ಇವುಗಳ ಬಡ್ಡಿ ದರ ಸರ್ಕಾರದ ಯೋಜನೆಗಳಿಗನುಸಾರವಾಗಿ ಕಡಿಮೆ ಇರುತ್ತದೆ. ಈ ಸಾಲಗಳಿಂದ ಉದ್ದಿಮೆಯ ನಿತ್ಯದ ಹಣಕಾಸಿನ ಅಗತ್ಯತೆಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಸರ್ಕಾರದ ಯೋಜನೆಗಳಿಗೆ ಪೂರಕವಾದ ಸಾಲಗಳನ್ನು ಒದಗಿಸಲು ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳೂ ಇವೆ ಹಾಗೂ ಸರ್ಕಾರದ ಪ್ರೋತ್ಸಾಹಕರ ಯೋಜನಗೆಗಳ ಅನ್ವಯ ಇವು ಸಾಲವನ್ನು ವಿತರಿಸುತ್ತವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಆಗಿವೆ.

 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

ಸಣ್ಣ ಉದ್ದಿಮೆಗಳಿಗೆ ಲಭ್ಯವಿರುವ ಆರ್ಥಿಕ ನೆರವು
ಸಣ್ಣ ಉದ್ದಿಮೆಗಳು ಹಾಗೂ ಇದನ್ನು ಪ್ರಾರಂಭಿಸಿರುವ ಉದ್ಯಮಿಗಳಿಗೆ ಸಾಲ ಅಥವಾ ಆರ್ಥಿಕ ನೆರವನ್ನು ಒದಗಿಸಲು ಹಲವಾರು ಭಿನ್ನವಾದ ವ್ಯವಸ್ಥೆಗಳು ಇಂದು ಲಭ್ಯವಿವೆ. ಇವುಗಳಲ್ಲಿ ಜನಪ್ರಿಯವಾಗಿರುವ ಕೆಲವು ಯೋಜನೆಗಳು ಈ ಕೆಳಗಿನಂತಿವೆ..

ವಹಿವಾಟು ಬಂಡವಾಳ ಧನ (Working Capital Finance)

ವಹಿವಾಟು ಬಂಡವಾಳ ಧನ (Working Capital Finance)

ಈ ಮೊತ್ತವನ್ನು ನೇರ ಹೂಡಿಕೆಯ ರೂಪದಲ್ಲಿ ಅಥವಾ ಸಾಲಪತ್ರ (letter of credit) ಮುಖೇನವೂ ಪಡೆದುಕೊಳ್ಳಬಹುದು. ಈ ಬಗೆಯ ಹೂಡಿಕೆಯಿಂದ ಸಣ್ಣ ಉದ್ದಿಮೆ ಪ್ರಾರಂಭಿಸಲು ಅಗತ್ಯವಾಗಿರುವ ಆಸ್ತಿಗಳು ಅಥವಾ ಯಂತ್ರೋಪಕರಣಗಳನ್ನು ಕೊಳ್ಳಲು, ಅಥವಾ ಆರಂಭಕ್ಕೆ ಅಗತ್ಯವಿರುವ ದೊಡ್ಡ ಮೊತ್ತದ ಖರ್ಚುಗಳನ್ನು ಭರಿಸಲು ನೆರವಾಗುತ್ತದೆ.

ಕಾರ್ಪೋರೇಟ್ ಅವಧಿ ಸಾಲ (Corporate Term Loans)

ಕಾರ್ಪೋರೇಟ್ ಅವಧಿ ಸಾಲ (Corporate Term Loans)

ಹೊಸ ಉದ್ದಿಮೆಯೊಂದನ್ನು ಮೊದಲಾಗಿ ಪ್ರಾರಂಭಿಸಲು ಅಥವಾ ಈಗ ನಡೆಯುತ್ತಿರುವ ಉದ್ದಿಮೆಯೊಂದನ್ನು ಮುಂದುವರೆಸಿಕೊಂಡು ಹೋಗಲು ಅಥವಾ ಮಾರುಕಟ್ಟೆಯ ವಿಭಾಗದಲ್ಲಿ ಹೆಚ್ಚಿನ ವಿಸ್ತರಣೆಗೆ ಅನುವಾಗುವಂತೆ ವಹಿವಾಟನ್ನು ಹೆಚ್ಚಿಸಲು ಈ ಬಗೆಯ ಸಾಲವನ್ನು ಪಡೆಯಲಾಗುತ್ತದೆ.

ಅವಧಿ ಸಾಲ (Term Finance)

ಅವಧಿ ಸಾಲ (Term Finance)

ಈ ಸಾಲವನ್ನು ಉದ್ದಿಮೆಯ ಮೂಲ ಸ್ಥಿರ ಸೌಕರ್ಯಗಳಾದ ಕಟ್ಟಡ, ಯಂತ್ರೋಪಕರಣ ಮೊದಲಾದವುಗಳನ್ನು ಹೊಂದಲು ಬಳಸಲಾಗುತ್ತದೆ. ಕಾಲ ಕಾಲಕ್ಕೆ ನವೀಕರಣಗೊಳ್ಳುವ ಬಡ್ಡಿದರವನ್ನು ಹೊಂದಿರುವ ಈ ಸಾಲಗಳ ಮರು ಪಾವತಿಗಾಗಿ ಸುಮಾರು ಹತ್ತು ವರ್ಷಗಳ ಸಮಯಾವಕಾಶವಿರುತ್ತದೆ.

ಸಾರ್ವಜನಿಕ ವಲಯ ಬ್ಯಾಂಕ್ ಗಳಿಂದ ಲಭ್ಯವಿರುವ ನಿರ್ಧಿಷ್ಟ ಸಾಲಗಳು

ಸಾರ್ವಜನಿಕ ವಲಯ ಬ್ಯಾಂಕ್ ಗಳಿಂದ ಲಭ್ಯವಿರುವ ನಿರ್ಧಿಷ್ಟ ಸಾಲಗಳು

ಮೇಲೆ ತಿಳಿಸಿದ ಬ್ಯಾಂಕುಗಳಲ್ಲಿ ಕೆಲವಾರು ಯೋಜನೆಗಳಿಗೆ ಸಂಬಂಧಿಸಿದ ಸಾಲಗಳಿವೆ ಹಾಗೂ ಇವುಗಳು ಸಣ್ಣ ಉದ್ದಿಮೆಗಳಿಗೆ ಪೂರಕವಾಗಿವೆ. ಈ ನಿಟ್ಟಿನಲ್ಲಿ ದೊರಕುವ ಕೆಲವು ಬಗೆಯ ಸಾಲಗಳನ್ನು ಕೆಳಗೆ ವಿವರಿಸಲಾಗಿದೆ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸಾಮಾನ್ಯವಾಗಿ ಸಣ್ಣ ಉದ್ದಿಮೆಗಳಿಗೆ ಎಲ್ಲಾ ನೆರವು ನೀಡುವ ಮೂಲಕ ಅಂತಿಮ ಆಯ್ಕೆಯಾಗಿ ಪರಿಗಣಿಲಿಸಲ್ಪಡುವ ಈ ಬ್ಯಾಂಕ್ ಹಲವಾರು ಬಗೆಯ ಸಾಲಗಳನ್ನು ಪ್ರಸ್ತುತ ಪಡಿಸುತ್ತದೆ ಹಾಗೂ ಸಣ್ಣ ಉದ್ದಿಮೆಗೆ ಅಗತ್ಯವಿರುವ ಸಮಗ್ರ ಆರ್ಥಿಕ ನೆರವನ್ನು ನೀಡುತ್ತದೆ. ವಿಶೇಷವಾಗಿ ಕೃಷಿ ಯೋಜನೆಗಳಲ್ಲಿ ಅದರಲ್ಲೂ ಹಳ್ಳಿ ಮತ್ತು ಅರೆ ಪಟ್ಟಣದ ಭಾಗಗಳಲ್ಲಿ ಸ್ಥಾಪಿಸಲು ಹೆಚ್ಚಿನ ಉತ್ಸುಕತೆ ತೋರುವ ಉದ್ದಿಮೆಗಳಿಗೆ ವಿಶೇಷ ನೆರವನ್ನು ನೀಡುವ ಮೂಲಕ ಕೃಷಿಗೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದೆ. ಕೃಷಿ ಆಧಾರಿತ ಉದ್ದಿಮೆಗಳ ಸ್ಥಾಪನೆಯ ನಿಟ್ಟಿನಲ್ಲಿ ಬ್ಯಾಂಕ್ ನಲ್ಲಿ ಲಭ್ಯವಿರುವ ಯೋಜನೆಗಳಲ್ಲಿ ಪ್ರಮುಖವಾದುದೆಂದರೆ:

ಬೆಳೆ ಸಾಲ (Crop Loan)

ಬೆಳೆ ಸಾಲ (Crop Loan)

ತೋಟಗಾರಿಕಾ ಸಾಲ (Horticulture Financing)
ತೋಟದ ಯಾಂತ್ರೀಕರಣ ಸಾಲ (Farm Mechanisation Schemes)
ಭೂ ಅಭಿವೃದ್ದಿ ಯೋಜನೆ ಸಾಲ (Land Development Schemes)
ಸಣ್ಣ ನೀರಾವರಿ ಯೋಜನೆ (Minor Irrigation Projects)
ಕೃಷಿ ಅವಧಿ ಸಾಲ (Agricultural Term Loans)

ಕೃಷಿಗೆ ಹೊರತಾಗಿ ಬ್ಯಾಂಕ್ ಇತರ ಕ್ಷೇತ್ರಗಳಿಗೆ ನೀಡುವ ಸಾಲಗಳು ಹೀಗಿವೆ
ಕಾರ್ಯರೂಪಿ ಮೂಲ ಬಂಡವಾಳ (Working Capital Finance)
ಸಂಸ್ಥೆಯ ಅವಧಿ ಸಾಲ (Corporate Term Loans)
ಮರುಪಾವತಿ ಮುಂದೂಡುವ ಖಾತ್ರಿ ಯೋಜನೆ (Deferred Payment Guarantees)
ಯೋಜನೆಗಾಗಿ ಆರ್ಥಕ ನೆರವು (Project Finance)
ರಚನೆಯಾಧಾರಿತ ಆರ್ಥಿಕ ನೆರವು (Structured Finance)

ಬ್ಯಾಂಕ್ ಆಫ್ ಬರೋಡ

ಬ್ಯಾಂಕ್ ಆಫ್ ಬರೋಡ

ಈ ಬ್ಯಾಂಕ್ ಸಹಾ ಸಣ್ಣ ಉದ್ದಿಮೆ ಹಾಗೂ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವಲ್ಲಿ ಹಲವಾರು ಯೋಜನೆಗಳನ್ನು ಪ್ರಸ್ತುತ ಪಡಿಸಿದೆ. ಈ ಯೋಜನೆಗಳು ಹೆಚ್ಚು ಜನಪ್ರಿಯವೂ ಹೆಚ್ಚು ಕಾರ್ಯಗತಗೊಂಡ ಯೋಜನೆಗಳೂ ಆಗಿವೆ. ಈ ಬ್ಯಾಂಕ್ ಪ್ರಸ್ತುತ ಪಡಿಸುವ ಕೆಲವು ಯೋಜನೆಗಳು ಹೀಗಿವೆ.

ಕಾರ್ಯರೂಪಿ ಮೂಲ ಬಂಡವಾಳ (Working Capital Finance)
ಅವಧಿ ಸಾಲ (Term Finance)
ಸಣ್ಣ ಮತ್ತು ಮಧ್ಯಮಗಾತ್ರದ ಸಂಸ್ಥೆಗಳಿಗೆ ಸಾಲದ ಕಂತೆ (Small and Medium Enterprise Loan Pack)
ಸಣ್ಣ ಉದ್ದಿಮೆಯ ಸಾಲಗಾರರು (Small Business Borrowers)
ವ್ಯಾಪಾರಿಗಳ ಸಾಲ (Traders Loan)

ಆಂಧ್ರ ಬ್ಯಾಂಕ್

ಆಂಧ್ರ ಬ್ಯಾಂಕ್

ಈ ಬ್ಯಾಂಕ್ ಸಹ ವಿಶೇಷವಾಗಿ ಕೃಷಿ ಹಾಗೂ ಸಂಸ್ಥೆಗಳಿಗಾಗಿ ವಿವಿಧ ಬಗೆಯ ಯೋಜನೆಗಳನ್ನು ಪ್ರಸ್ತುತಪಡಿಸಿದೆ. ಸಣ್ಣ ಉದ್ದಿಮೆಗಳಿಗಾಗಿ ಇಲ್ಲಿ ಲಭ್ಯವಿರುವ ಸಾಲಗಳಲ್ಲಿ ಪ್ರಮುಖವಾದುವೆಂದರೆ:

ಕಾರ್ಯರೂಪಿ ಮೂಲ ಬಂಡವಾಳ (Working Capital Loans)
ಆಮದು ಮತ್ತು ರಫ್ತು ಬಂಡವಾಳ (Export and Import Finance)
ಶೇರುಗಳನ್ನು ಅಡವಿರಿಸಿ ಪಡೆಯುವ ಮುಂಗಡ (Advance against Shares)
ಅವಧಿ ಸಾಲ (Term Finance)
ಸಂಸ್ಥೆಗಳ ಸಾಲ(Corporate Loans)
ಯೋಜನಾ ನೆರವು ಸಾಲ (Project Finance)
ಮೂಲಸೌಕರ್ಯ ಯೋಜನೆ ನೆರವು (Infrastructure Project Finance)
ಕಿಸಾನ್ ವಿಕಾಸ್ ಕಾರ್ಡ್ (Kisan Vikas Card)
ಕಿಸಾನ್ ಸಂಪತ್ತಿ (Kisan Sampathi)
ಸ್ವಯಂಸೇವಾ ಗುಂಪುಗಳು - ಬ್ಯಾಂಕ್ ಸಹಯೋಜನೆ ಕಾರ್ಯಕ್ರಮ (Self Help Groups-Bank Linkage Programme)
ಕಿಸಾನ್ ಹಸಿರು ಕಾರ್ಡ್ (Kisan Green Card)

ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟ ಸಾಲ ಯೋಜನೆಗಳು ಮತ್ತು ಸೌಲಭ್ಯಗಳು

ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟ ಸಾಲ ಯೋಜನೆಗಳು ಮತ್ತು ಸೌಲಭ್ಯಗಳು

ಸಣ್ಣ ಉದ್ದಿಮೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಬ್ಯಾಂಕುಗಳ ಹೊರತಾಗಿ ಭಾರತ ಸರ್ಕಾರವೂ ಹಲವು ವಿಶೇಷ ಸಾಲ ಯೋಜನೆಗಳನ್ನು ನೀಡುತ್ತಿದೆ. ಈ ಮೂಲಕ ವಿವಿಧ ಸಂಘಟನೆಗಳು ಆರ್ಥಿಕ ನೆರವಿನ ಅಗತ್ಯವಿರುವ ಸಣ್ಣ ಉದ್ದಿಮೆಗಳಿಗೆ ನೆರವಾಗುವ ಮೂಲಕ ಸಾಲದ ಅಗತ್ಯತೆಯನ್ನೇ ಇಲ್ಲವಾಗಿಸುವ ಯೋಜನೆಗಳೂ ಇವೆ. ಇವುಗಳಲ್ಲಿ ಹೆಚ್ಚಿನ ಯೋಜನೆಗಳನ್ನು ಕೆಳಕಂಡ ಸಂಸ್ಥೆಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗಿದೆ.

ಸಣ್ಣ ಉದ್ದಿಮೆ ಅಭಿವೃದ್ದಿ ಸಂಸ್ಥೆ-ಸಿಡೋ (Small Industries Development Organisation- SIDO)

ಸಣ್ಣ ಉದ್ದಿಮೆ ಅಭಿವೃದ್ದಿ ಸಂಸ್ಥೆ-ಸಿಡೋ (Small Industries Development Organisation- SIDO)

ಹೆಸರೇ ಸೂಚಿಸುವಂತೆ ಈ ಸಂಸ್ಥೆ ಸಣ್ಣ ಉದ್ದಿಮೆಗಳ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಹಲವು ಬಗೆಯ ನೆರವನ್ನು ನೀಡುತ್ತಿದೆ. ಇದರ ಪ್ರಮುಖ ಕಾರ್ಯನಿರ್ವಹಣೆಗಳು ಇಂತಿವೆ:

* ಸಣ್ಣ ಉದ್ದಿಮೆಗಳ ನೆರವಿಗೆ ಪೂರಕವಾದ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಸಲಹೆಗಳನ್ನು ನೀಡುವುದು.
* ಸಣ್ಣ ಉದ್ದಿಮೆ ವಲಯದಲ್ಲಿ ಸರ್ವೇ ಕಾರ್ಯಗಳನ್ನು ನಡೆಸುವುದು.
* ಈ ಮೂಲಕ ಸಾಧಿಸಬಹುದಾದ ಅಭಿವೃದ್ದಿಗಳನ್ನು ಖಚಿತಪಡಿಸುವುದು.

ಕೇಂದ್ರ ಸಚಿವಾಲಯ, ಯೋಜನಾ ಆಯೋಗ, ರಾಜ್ಯ ಸರ್ಕಾರಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಸಣ್ಣ ಉದ್ದಿಮೆಗಳಿಗೆ ನೆರವು ನೀಡುವ ಇತರ ಸಂಸ್ಥೆಗಳ ಮೂಲಕ ಸಣ್ಣ ಉದ್ದಿಮೆಗಳನ್ನು ಮಧ್ಯಮ ಹಾಗೂ ದೊಡ್ಡ ಉದ್ದಿಮೆಗಳಿಗೆ ಸಹಕರಿಸುವಂತೆ ನೆರವಾಗುವುದು. ಸಿಬ್ಬಂದಿಗೆ ಅಗತ್ಯವಾದ ತರಬೇತಿ ಹಾಗೂ ಕೌಶಲ್ಯ ಅಭಿವೃದ್ದಿಗಳನ್ನು ಒದಗಿಸುವುದು ಮೊದಲಾದವು ಈ ಯೋಜನೆಯ ಕಾರ್ಯ ವಿಧಾನವಾಗಿವೆ.

ಸಿಡೋ ಯೋಜನೆಗಳು

ಸಿಡೋ ಯೋಜನೆಗಳು

ಮೇಲೆ ತಿಳಿಸಿದ ಕಾರ್ಯ ವಿಧಾನಗಳನ್ನು ಅನುಸರಿಸಿ ಸಿಡೋ ಪ್ರಾರಂಭಿಸಿದ ಕೆಲವು ಯೋಜನೆಗಳು ಇಂತಿವೆ:

ತಂತ್ರಜ್ಞಾನ ಅಭಿವೃದ್ದಿಗಾಗಿ ಪಡೆಯುವ ಸಾಲಕ್ಕೆ ಕೇಂದ್ರ ಸರ್ಕಾರದ ಸಬ್ಸಿಡಿಯ ನೆರವಿನ ಯೋಜನೆ (Credit Linked Capital Subsidy Scheme for Technology Upgradation)
ಸಾಲ ಖಾತರಿ ಯೋಜನೆ (Credit Guarantee Scheme)
ISO 9000/ISO 14001 ಗುಣಮಟ್ಟ ಸೇವಾ ಪ್ರಮಾಣ ಪತ್ರ ಪಡೆಯಲು ಪಡೆಯುವ ಸಾಲದ ವಾಪಸಾತಿ ಯೋಜನೆ (ISO 9000/ISO 14001 Certification Reimbursement Scheme)
ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿ (Integrated Infrastructure Development (IID Scheme)
ಮಾರುಕಟ್ಟೆ ಅಭಿವೃದ್ದಿ ನೆರವು ಯೋಜನೆ ( SSI Market Development Assistance Scheme)
ವಾಣಿಜ್ಯೋದ್ಯಮ ಅಭಿವೃದ್ಧಿ ನೆರವು ಶಿಕ್ಷಣ ಸಂಸ್ಥೆಗಳು (Assistance to Entrepreneurship Development Institutes)
ಅತಿ ಚಿಕ್ಕ ಆರ್ಥಿಕ ನೆರವು (Micro Finance Programme)

ರಾಷ್ಟ್ರೀಯ ಸಣ್ಣ ಉದ್ದಿಮೆ ನಿಗಮ ನಿಯಮಿತ (National Small Industries Corporation Limited

ರಾಷ್ಟ್ರೀಯ ಸಣ್ಣ ಉದ್ದಿಮೆ ನಿಗಮ ನಿಯಮಿತ (National Small Industries Corporation Limited

ಕೆಲವು ವಿಶಿಷ್ಟ ಯೋಜನೆಗಳನ್ನು ಪ್ರಾರಂಭಿಸಿದ್ದು, ಮಾರುಕಟ್ಟೆಗೆ ನೆರವು ನೀಡುವ ಪ್ರಾಯೋಜಕತ್ವ ಹಾಗೂ ಇತರ ಸಮಕಾಲೀನ ಮಾರುಕಟ್ಟೆ ವಿಧಾನಗಳಿಗೆ ಅಗತ್ಯವಾದ ಸಾಲವನ್ನು ನೀಡುವ ಯೋಜನೆಗಳು ಇಂತಿವೆ.

ಯಂತ್ರೋಪಕರಣ ಕೊಳ್ಳಲು ನೆರವಿನ ಸಾಲ (Equipment financing)
ಕಚ್ಚಾವಸ್ತುಗಳನ್ನು ಕೊಳ್ಳಲು ನೆರವಿನ ಸಾಲ (Raw material procurement financing)
ಮಾರುಕಟ್ಟೆ ಚಟುವಟಿಕೆಗಳಿಗೆ ಅಗತ್ಯವಾದ ನೆರವಿನ ಸಾಲ (Marketing activities financing)
ವಿವಿಧ ಬ್ಯಾಂಕುಗಳ ಸಹಯೋಗದೊಂದಿಗೆ ನೀಡುವ ನೆರವಿನ ಸಾಲ (Bank-syndication aided financing)
ಸಾಧನೆ ಹಾಗೂ ಸಾಲದ ಬೆಲೆ ಕಟ್ಟುವ ವ್ಯವಸ್ಥೆ (Performance and credit rating system)

ಕಚ್ಚಾ ವಸ್ತುಗಳನ್ನು ಪರೀಕ್ಷಿಸುವ ತಂತ್ರಜ್ಞಾನ ಅಭಿವೃದ್ದಿ, ಹೊಸ ತಂತ್ರಜ್ಞಾನದ ಅಳವಡಿಕೆ, ಶಕ್ತಿ ಹಾಗೂ ಪರ್ಯಾವರಣ ಯೋಜನೆಗಳು ಹಾಗೂ ತರಬೇತಿ ಸೌಲಭ್ಯಗಳನ್ನು ಒದಗಿಸುವುದು ಮೊದಲಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಭಾರತೀಯ ಸಣ್ಣ ಉದ್ದಿಮೆ ಅಭಿವೃದ್ದಿ ಬ್ಯಾಂಕ್-ಸಿಡ್ಬಿ (Small Industries Development Bank of India

ಭಾರತೀಯ ಸಣ್ಣ ಉದ್ದಿಮೆ ಅಭಿವೃದ್ದಿ ಬ್ಯಾಂಕ್-ಸಿಡ್ಬಿ (Small Industries Development Bank of India

1990ರಲ್ಲಿ ಪ್ರಾರಂಭವಾದ ಈ ಆರ್ಥಿಕ ಸಂಸ್ಥೆ ಇದುವರೆಗೆ ಸಣ್ಣ ಉದ್ದಿಮೆಗಳ ಬೆಳವಣಿಗೆಯ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿದೆ. ಸಿಡ್ಬಿ ಒದಗಿಸುವ ಯೋಜನೆಗಳಲ್ಲಿ ಪ್ರಮುಖವಾದುವು ಇಂತಿವೆ:

ಪ್ರತ್ಯಕ್ಷ ನೆರವು ಯೋಜನೆ (Direct Assistance Scheme)
ಪರೋಕ್ಷ ನೆರವು ಯೋಜನೆ (Indirect Assistance Scheme)
ಪ್ರಚಾರ ಮತ್ತು ಅಭಿವೃದ್ಧಿ ಚಟುವಟಿಕೆಗಳು (Promotional and Development Activities)
ರಾಷ್ಟ್ರೀಯ ಈಕ್ವಿಟಿ ನಿಧಿ ಯೋಜನೆ (National Equity Fund, Scheme)
ತಂತ್ರಜ್ಞಾನ ಅಭಿವೃದ್ದಿ ಹಾಗೂ ಆಧುನೀಕರಣ ಯೋಜನೆ (Technology Development and Modernization Fund Scheme)
ಏಕ ಗವಾಕ್ಷಿ ಯೋಜನೆ (Single Window Scheme)
ಮಹಿಳಾ ಉದ್ಯಮ ನಿಧಿ (Mahila Udyam Nidhi (MUN)Scheme)
ಯಂತ್ರೋಪಕರಣ ನೆರವು ಯೋಜನೆ (Equipment Finance Scheme)

 

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ - ನಬಾರ್ಡ್ (National Bank for Agriculture and Rural Development)

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ - ನಬಾರ್ಡ್ (National Bank for Agriculture and Rural Development)

ಈ ಬ್ಯಾಂಕ್ ಗ್ರಾಮೀಣ ಭಾಗದಲ್ಲಿ ಕೃಷಿಯಾಧಾರಿತ ಉದ್ದಿಮೆಗಳಿಗೆ ನೆರವು ನೀಡುವುದನ್ನೇ ಪ್ರಮುಖ ಉದ್ದೇಶವಾಗಿಸಿದೆ. ಗುಡಿ ಕೈಗಾರಿಕೆ ಹಾಗೂ ಗ್ರಾಮೋದ್ಯೋಗಳಿಗೆ ಈ ಬ್ಯಾಂಕ್ ಅಗತ್ಯ ನೆರವು ನೀಡುತ್ತದೆ.

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವು ನೀಡುವ ವಿಶ್ವಸಂಘ -ವಾಸ್ಮೆ (World Association for Small and Medium Enterprises)

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವು ನೀಡುವ ವಿಶ್ವಸಂಘ -ವಾಸ್ಮೆ (World Association for Small and Medium Enterprises)

ಭಾರತದಲ್ಲಿ ಸಣ್ಣ ಉದ್ದಿಮೆಗಳಿಗೆ ನೆರವು ನೀಡುವ ಏಕಮಾತ್ರ ವಿದೇಶಿ ಸಂಸ್ಥೆಯಾಗಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೆರವು ನೀಡುವ ಹೊರತಾಗಿ ಗುಡಿ ಕೈಗಾರಿಕೆಗಳಿಗೆ ಹಲವು ಯೋಜನೆಗಳ ಮೂಲಕ ಸಬ್ಸಿಡಿಯನ್ನೂ ನೀಡುವ ಮೂಲಕ ಪ್ರೋತ್ಸಾಹಿಸುವ ಸಂಸ್ಥೆಯಾಗಿದೆ.

ಕೊನೆ ಮಾತು

ಕೊನೆ ಮಾತು

ಮೇಲೆ ವಿವರಿಸಿರುವ ರಾಷ್ಟ್ರಿಯ ಮತ್ತು ಇತರ ಸಂಘಟನೆಗಳ ಯೋಜನೆಗಳ ಹೊರತಾಗಿ ಕೆಲವು ಪ್ರತ್ಯೇಕ ಸಂಘಟನೆಗಳು ಹಾಗೂ ಆಯಾ ರಾಜ್ಯ ಸರ್ಕಾರಗಳು ಸಣ್ಣ ಉದ್ದಿಮೆ ಹಾಗೂ ಆಯಾ ಪ್ರದೇಶಗಳಿಗೆ ಸೂಕ್ತವಾಗುವ ಯೋಜನೆಗಳಿಗೆ ನೆರವು ನೀಡಲು ತಮ್ಮದೇ ಆದ ಆರ್ಥಿಕ ಯೋಜನೆಗಳನ್ನು ಪ್ರಸ್ತುತಪಡಿಸಿವೆ. ಇವುಗಳಲ್ಲಿ ಹೆಚ್ಚಿನವು ಆಯಾ ರಾಜ್ಯ ಹಾಗೂ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿವೆ.

ಬ್ಯಾಂಕುಗಳಿಂದ ದೊರಕುವ ಯಾವುದೇ ಸೇವೆ ಹಾಗೂ ಉತ್ಪನ್ನಗಳ ಶುಲ್ಕದ ಮೇಲೆ 01ನೇ ಜುಲೈ 2017 ರಿಂದ 18% ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ವಯವಾಗುತ್ತದೆ.

English summary

Government Loans for Businesses: Here's the Complete Details

Small Scale Businesses or industries need better support and financial aid in order to have proper growth and flourish well in the face of stiff competition from companies or organisation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X