For Quick Alerts
ALLOW NOTIFICATIONS  
For Daily Alerts

ದೀರ್ಘಾವಧಿಯಲ್ಲಿ ಹಣ ಡಬಲ್ ಮಾಡಬಲ್ಲ ಟಾಪ್ 10 ಮ್ಯೂಚುವಲ್ ಫಂಡ್ಸ್

ಅಲ್ಪಾವಧಿಗೆ ಹೂಡಿಕೆ ಮಾಡುವುದು ನಿಮ್ಮ ಯೋಚನೆಯಾಗಿದ್ದರೆ ಉತ್ತಮ ಆದಾಯ ನೀಡಬಲ್ಲ ಇಕ್ವಿಟಿ ಆಧರಿತ ಫಂಡಗಳನ್ನು ಪರಿಗಣಿಸುವುದು ಸೂಕ್ತ.

|

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮ್ಯೂಚುವಲ್ ಫಂಡ್ ಯೋಜನೆಗಳು ಲಭ್ಯವಿವೆ. ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡುವ ಇಕ್ವಿಟಿ ಆಧರಿತ ಫಂಡ್ಸ್, ಡೆಬ್ಟ್ ಅಥವಾ ಬಾಂಡ್‌ಗಳಲ್ಲಿ ಹೂಡಿಕೆ ಯೋಜನೆಗಳು ಹಾಗೂ ಇಕ್ವಿಟಿ ಹಾಗೂ ಡೆಬ್ಟ್ ಎರಡರಲ್ಲೂ ಹೂಡಿಕೆ ಮಾಡುವ ಬ್ಯಾಲೆನ್ಸಡ್ ಫಂಡ್ ಇವು ಮ್ಯೂಚುವಲ್ ಫಂಡ್ಸ್‌ನ ಪ್ರಕಾರಗಳಾಗಿವೆ.

 

ಅಲ್ಪಾವಧಿಗೆ ಹೂಡಿಕೆ ಮಾಡುವುದು ನಿಮ್ಮ ಯೋಚನೆಯಾಗಿದ್ದರೆ ಉತ್ತಮ ಆದಾಯ ನೀಡಬಲ್ಲ ಇಕ್ವಿಟಿ ಆಧರಿತ ಫಂಡಗಳನ್ನು ಪರಿಗಣಿಸುವುದು ಸೂಕ್ತ. ಮುಂದಿನ ಕೆಲ ವರ್ಷಗಳವರೆಗೆ ಹೂಡಿಕೆಯನ್ನು ಜಾರಿಯಲ್ಲಿಟ್ಟು ಆದಾಯ ಪಡೆಯಲು ಬಯಸುವಿರಾದರೆ ಡೆಬ್ಟ್ ಅಥವಾ ಬ್ಯಾಲೆನ್ಸಡ್ ಫಂಡಗಳನ್ನು ಆರಿಸಿಕೊಳ್ಳುವುದು ಸೂಕ್ತ. ಯಾವಾಗ ಬೇಕೆಂದಾಗ ಹೂಡಿಕೆಯನ್ನು ಹಿಂಪಡೆದು ನಗದಾಗಿಸಿಕೊಳ್ಳುವುದು ಹಾಗೂ ನೇರವಾಗಿ ಯಾವುದೇ ಸ್ಟಾಕ್‌ನಲ್ಲಿ ಹೂಡಿಕೆ ಮಾಡದಿರುವುದು ಮ್ಯೂಚುವಲ್ ಫಂಡಗಳ ವೈಶಿಷ್ಟ್ಯತೆಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ರೀತಿಯ ಹೂಡಿಕೆ ಪ್ರಕಾರಗಳಿಂದ ಆದಾಯ ಗಳಿಸುವುದು ಮ್ಯೂಚುವಲ್ ಫಂಡಗಳಿಂದ ಸಾಧ್ಯವಿದೆ. ಸುಜನ್ ಯೋಜನೆಗೆ ಅರ್ಜಿ ಸಲ್ಲಿಸಿ, 10 ಲಕ್ಷ ಸಾಲ ಪಡೆಯಿರಿ..

ದೀರ್ಘಾವಧಿಯಲ್ಲಿ ಉತ್ತಮ ಪ್ರತಿಫಲ ನೀಡಬಲ್ಲ ಕೆಲ ಮ್ಯೂಚುವಲ್ ಫಂಡಗಳ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ಇವು ಕೆಲ ವರ್ಷಗಳಲ್ಲಿ ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಲಾರ್ಜ ಕ್ಯಾಪ್, ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್, ವಲಯವಾರು ಹಾಗೂ ಸಮತೋಲಿತ ವಿಭಾಗಗಳನ್ನು ಈ ಫಂಡಗಳು ಹೊಂದಿವೆ. ಈ ಹಿಂದೆ ಸರಾಸರಿಯಾಗಿ ಉತ್ತಮ ಆದಾಯ ನೀಡಿರುವ ಇವು ಅತ್ಯುತ್ತಮ ಫಂಡ್ ಮ್ಯಾನೇಜರ್‌ಗಳಿಂದ ನಿರ್ವಹಿಸಲ್ಪಡುತ್ತಿವೆ.

ಹೂಡಿಕೆಯನ್ನು ದ್ವಿಗುಣಗೊಳಿಸಬಲ್ಲ ಟಾಪ್ 10 ಮ್ಯೂಚುವಲ್ ಫಂಡ್ಸ್:

1. ಐಸಿಐಸಿಐ ಪ್ರುಡೆನ್ಷಿಯಲ್ ಮಲ್ಟಿಕ್ಯಾಪ್ ಫಂಡ್

1. ಐಸಿಐಸಿಐ ಪ್ರುಡೆನ್ಷಿಯಲ್ ಮಲ್ಟಿಕ್ಯಾಪ್ ಫಂಡ್

ಈ ಫಂಡನಲ್ಲಿ ಲಾರ್ಜ ಕ್ಯಾಪ್, ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಹೀಗೆ ಮೂರೂ ರೀತಿಯ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆ ಮಾರುಕಟ್ಟೆಯ ಬಂಡವಾಳ ಹಾಗೂ ವಿವಿಧ ಕ್ಷೇತ್ರಗಳನ್ನು ಆಧರಿಸಿ ಹೂಡಿಕೆದಾರನಿಗೆ ಉತ್ತಮ ಆದಾಯವನ್ನು ಈ ಫಂಡ ನೀಡುತ್ತದೆ. ಸುಸ್ಥಿರವಾದ ಲಾರ್ಜ ಕ್ಯಾಪ್‌ಗಳಲ್ಲಿ ಶೇ.40 ರಿಂದ 60 ರಷ್ಟು ಬಂಡವಾಳವನ್ನು ಹಾಗೂ ಇನ್ನುಳಿದ ಹಣವನ್ನು ಚುರುಕಾದ ಮಿಡ್ ಹಾಗೂ ಸ್ಮಾಲ್ ಕ್ಯಾಪ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆರ್ಥಿಕ ಸುಧಾರಣಾ ಕ್ರಮಗಳ ಲಾಭವನ್ನು ಪಡೆದುಕೊಳ್ಳುವ ರೀತಿಯಲ್ಲಿ ಸ್ಟಾಕ್‌ಗಳು ಹಾಗೂ ಕ್ಷೇತ್ರಗಳಲ್ಲಿ ಕ್ರಮಬದ್ಧವಾಗಿ ಹೂಡಿಕೆ ಮಾಡುವುದು ಈ ಫಂಡ್‌ನ ವಿಶಿಷ್ಟತೆಯಾಗಿದೆ.

2. ಎಲ್ ಆಂಡ್ ಟಿ ವ್ಯಾಲ್ಯು ಫಂಡ್

2. ಎಲ್ ಆಂಡ್ ಟಿ ವ್ಯಾಲ್ಯು ಫಂಡ್

ವಾಸ್ತವಕ್ಕಿಂತ ಕಡಿಮೆ ದರದಲ್ಲಿ ನಡೆಯುತ್ತಿರುವ ಸ್ಟಾಕ್ಸ್‌ಗಳಲ್ಲಿ ಈ ಫಂಡ್ ಪ್ರಧಾನವಾಗಿ ಹೂಡಿಕೆ ಮಾಡುತ್ತದೆ. ಯಾವುದೋ ಸಂದರ್ಭದಲ್ಲಿ ಕಂಪನಿಯೊಂದರ ಶೇರು ತಾತ್ಕಾಲಿಕವಾಗಿ ಕುಸಿತ ಕಂಡಾಗ ತಕ್ಷಣ ಅದರಲ್ಲಿ ಹೂಡಿಕೆ ಮಾಡುವುದು ಎಲ್ ಆಂಡ್ ಟಿ ವ್ಯಾಲ್ಯು ಫಂಡ್ ನ ವೈಶಿಷ್ಟ್ಯತೆಯಾಗಿದೆ. ಕೆಲವೊಮ್ಮೆ ಮಾರುಕಟ್ಟೆಯ ಪ್ರತಿಕೂಲ ಸ್ಥಿತಿಗಳಿಂದ ಕೆಲ ಕಂಪನಿಗಳ ಸ್ಟಾಕ್ ಬೆಲೆಗಳು ಕಡಿಮೆಯಾಗುತ್ತವೆ. ಕೆಲ ಅವಧಿಯ ನಂತರ ಇವು ಮತ್ತೆ ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಇಂಥ ಸಂದರ್ಭಗಳಲ್ಲಿ ಇವುಗಳಲ್ಲಿ ಹೂಡಿಕೆ ಮಾಡಿದಲ್ಲಿ ಹೂಡಿಕೆದಾರರಿಗೆ ಲಾಭ ಖಚಿತ.

 

3. ಎಡೆಲ್ವೇಸ್ ಬ್ಯಾಲೆನ್ಸಡ್ ಅಡ್ವಾಂಟೇಜ ಫಂಡ್
 

3. ಎಡೆಲ್ವೇಸ್ ಬ್ಯಾಲೆನ್ಸಡ್ ಅಡ್ವಾಂಟೇಜ ಫಂಡ್

ಕ್ರಿಯಾತ್ಮಕ ಬಂಡವಾಳ ಹಂಚಿಕೆ ಆಧಾರದಲ್ಲಿ ಕೆಲಸ ಮಾಡುವ ಈ ಫಂಡ್ ಅಲ್ಪಾವಧಿಯಲ್ಲಿ ನಕಾರಾತ್ಮಕ ಪ್ರತಿಫಲದ ಸಾಧ್ಯತೆಗಳನ್ನು ನಿವಾರಿಸಿ ಉತ್ತಮ ಆದಾಯ ಬರುವಂತೆ ಕಾರ್ಯನಿರ್ವಹಿಸುತ್ತದೆ. ಮಾರುಕಟ್ಟೆ ಸಾಗುತ್ತಿರುವ ದಿಕ್ಕು, ಏರಿಳಿತ ಮತ್ತು ಮಾರುಕಟ್ಟೆಯ ಮೂಲ ಅಂಶಗಳನ್ನು ತಿಳಿಸುವ ತನ್ನದೇ ಆದ ಎಡೆಲ್ವೇಸ್ ಇಕ್ವಿಟಿ ಹೆಲ್ಥ ಇಂಡೆಕ್ಸ್ (ಇಇಎಚ್‌ಐ) ಆಧರಿಸಿ ಈ ಫಂಡ್ ಕೆಲಸ ಮಾಡುತ್ತದೆ. ಆದಷ್ಟೂ ಲಾಭವನ್ನು ಹೆಚ್ಚಿಸಿ ನಷ್ಟವನ್ನು ಕಡಿಮೆ ಮಾಡುವ ರೀತಿಯಲ್ಲಿ ಹೂಡಿಕೆ ಮಾಡಲಾಗುತ್ತದೆ.

4. ಆದಿತ್ಯ ಬಿರ್ಲಾ ಸನ್ಲೈಫ್ ಫ್ರಂಟ್ ಲೈನ್ ಇಕ್ವಿಟಿ ಫಂಡ್

4. ಆದಿತ್ಯ ಬಿರ್ಲಾ ಸನ್ಲೈಫ್ ಫ್ರಂಟ್ ಲೈನ್ ಇಕ್ವಿಟಿ ಫಂಡ್

ಇದರಲ್ಲಿ ಬಂಡವಾಳದ ಶೇ.90 ರಷ್ಟನ್ನು ಇಕ್ವಿಟಿಗಳಲ್ಲಿ ಹಾಗೂ ಶೇ.10 ರಷ್ಟನ್ನು ಡೆಬ್ಟ್ ಹಾಗೂ ಮನಿ ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚು ಬಂಡವಾಳ ಹೊಂದಿರುವ ಲಾರ್ಜ ಕ್ಯಾಪ್‌ಗಳನ್ನು ಈ ಫಂಡ್ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಕಡಿಮೆ ಏರಿಳಿತ ಹೊಂದಿರುವ ಹಾಗೂ ಉತ್ತಮ ಆದಾಯ ತರಬಲ್ಲ ಇಂಥ ಲಾರ್ಜ ಕ್ಯಾಪ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಪ್ರತಿಫಲ ಗಳಿಸಬಹುದು.

5. ಡಿಎಸ್‌ಪಿ ಮಿಡ್ ಕ್ಯಾಪ್ ಫಂಡ್

5. ಡಿಎಸ್‌ಪಿ ಮಿಡ್ ಕ್ಯಾಪ್ ಫಂಡ್

ಮಿಡ್ ಕ್ಯಾಪ್ ಆಧರಿತ ಈ ಫಂಡ್ ಈ ಹಿಂದೆ ಯಾವಾಗಲೂ ಉತ್ತಮವಾದ ಆದಾಯವನ್ನೇ ನೀಡಿದೆ. ಅದರಲ್ಲೂ ದೀರ್ಘಾವಧಿಯಲ್ಲಿ ಇದರ ಕಾರ್ಯನಿರ್ವಹಣೆ ಅತ್ಯುತ್ತಮವಾಗಿದೆ. ಹಣಕಾಸು ವಲಯ, ರಾಸಾಯನಿಕ, ಆರೋಗ್ಯ, ಎಂಜಿನಿಯರಿಂಗ್ ಮುಂತಾದ ಪ್ರಮುಖ ಕ್ಷೇತ್ರಗಳ ಸ್ಟಾಕ್‌ಗಳಲ್ಲಿ ಈ ಫಂಡ್ ಹೂಡಿಕೆ ಮಾಡುತ್ತದೆ. ಎಕ್ಸೈಡ್ ಇಂಡಸ್ಟ್ರೀಸ್, ಆರ್‌ಬಿಎಲ್ ಬ್ಯಾಂಕ್ ಮತ್ತು ಸೋಲಾರ ಇಂಡಸ್ಟ್ರೀಸ್ ಇತ್ಯಾದಿ ಸ್ಟಾಕ್‌ಗಳಲ್ಲಿ ಪ್ರಮುಖವಾಗಿ ಹೂಡಿಕೆ ಮಾಡಲಾಗುತ್ತದೆ. ಹಿಂದಿನ ದಾಖಲೆಗಳ ಪ್ರಕಾರ ಈ ಫಂಡ್‌ನ ಸ್ಟಾಕ್ ಮ್ಯಾನೇಜರಗಳು ಹೂಡಿಕೆದಾರರಿಗೆ ಉತ್ತಮ ಆದಾಯವನ್ನೇ ತಂದುಕೊಟ್ಟಿದ್ದಾರೆ.

6. ಪ್ರಿನ್ಸಿಪಾಲ ಹೈಬ್ರಿಡ್ ಫಂಡ್

6. ಪ್ರಿನ್ಸಿಪಾಲ ಹೈಬ್ರಿಡ್ ಫಂಡ್

ಇಕ್ವಿಟಿ ಫಂಡಗಳಿಗೆ ಹೋಲಿಸಿದರೆ ಕಡಿಮೆ ರಿಸ್ಕ್ ಹಾಗೂ ಕಡಿಮೆ ಏರಿಳಿತಗಳೊಂದಿಗೆ ಉತ್ತಮ ಆದಾಯವನ್ನು ಪ್ರಿನ್ಸಿಪಾಲ ಹೈಬ್ರಿಡ್ ಫಂಡ್ ನೀಡುತ್ತದೆ. ಪ್ರಥಮ ಬಾರಿ ಹೂಡಿಕೆ ಮಾಡುವವರಿಗೆ ಈ ಫಂಡ್ ಪ್ರಶಸ್ತವಾಗಿದೆ. ಮುಖ್ಯವಾಗಿ ಲಾರ್ಜ ಕ್ಯಾಪ್ ಆಧರಿಸಿ ವ್ಯವಸ್ಥಿತವಾಗಿ ಮಿಡ್ ಹಾಗೂ ಸ್ಮಾಲ್ ಕ್ಯಾಪ್‌ಗಳಲ್ಲಿ ಬಂಡವಾಳ ಹೂಡುವುದು ಇದರ ವಿಶಿಷ್ಟತೆಯಾಗಿದೆ. ನಿರ್ದಿಷ್ಟ ಹೂಡಿಕೆ ಅವಧಿಯಲ್ಲಿ ನಿಶ್ಚಿತ ಆದಾಯ ತರುವಂತೆ ವ್ಯವಸ್ಥಿತವಾಗಿ ಈ ಫಂಡ್ ಅನ್ನು ನಿರ್ವಹಿಸಲಾಗುತ್ತದೆ.

7. ಟಾಟಾ ಇಕ್ವಿಟಿ ಪಿಇ ಫಂಡ್

7. ಟಾಟಾ ಇಕ್ವಿಟಿ ಪಿಇ ಫಂಡ್

ಬಿಎಸ್‌ಇ ಸೆನ್ಸೆಕ್ಸ್‌ಗೆ ಹೋಲಿಸಿದಲ್ಲಿ ಕಳೆದ 12 ತಿಂಗಳಲ್ಲಿ ಕಡಿಮೆ ಪಿಇ ಅನುಪಾತ (ಬೆಲೆ ಹಾಗೂ ಆದಾಯಗಳ ಅನುಪಾತ) ಹೊಂದಿರುವ ಇಕ್ವಿಟಿಗಳಲ್ಲಿ ಯೋಜನಾಬದ್ಧವಾಗಿ ಹೂಡಿಕೆ ಮಾಡುವುದು ಟಾಟಾ ಇಕ್ವಿಟಿ ಪಿಇ ಫಂಡ್ ವಿಶಿಷ್ಟತೆಯಾಗಿದೆ. ಪವರ್ ಗ್ರಿಡ್ ಕಾರ್ಪೊರೇಶನ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಮುಂತಾದುವುಗಳು ಟಾಟಾ ಇಕ್ವಿಟಿ ಪಿಇ ಫಂಡ್ ಹೂಡಿಕೆ ಮಾಡುವ ಪ್ರಮುಖ ಸ್ಟಾಕ್‌ಗಳಾಗಿವೆ.

8. ಪ್ರಿನ್ಸಿಪಾಲ ಡಿವಿಡೆಂಡ್ ಈಲ್ಡ್ ಫಂಡ್ (Principal Dividend Yield Fund)

8. ಪ್ರಿನ್ಸಿಪಾಲ ಡಿವಿಡೆಂಡ್ ಈಲ್ಡ್ ಫಂಡ್ (Principal Dividend Yield Fund)

ನಿಯಮಿತವಾಗಿ ಹಾಗೂ ಹೆಚ್ಚು ಪ್ರಮಾಣದ ಡಿವಿಡೆಂಡ್ ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡಿ ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುವುದು ಈ ಫಂಡ್‌ನ ಲಕ್ಷಣವಾಗಿದೆ. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಎಲ್ಲ ರೀತಿಯ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಇದರ ವಿಶಿಷ್ಟತೆಯಾಗಿದೆ. ಕಳೆದ 14 ವರ್ಷಗಳಿಂದ ಈ ಫಂಡ್ ಕಾರ್ಯಾಚರಣೆಯಲ್ಲಿದ್ದು, ಮಧ್ಯಮ ಪ್ರಮಾಣದ ರಿಸ್ಕ್ ತಡೆದುಕೊಳ್ಳಬಹುದಾದವರು ಇದರಲ್ಲಿ ಹೂಡಿಕೆ ಮಾಡಬಹುದು.

9. ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್

9. ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್

ಕಡಿಮೆ ಬಂಡವಾಳದ ಕಂಪನಿಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ ಉತ್ತಮವಾಗಿ ರಿಸ್ಕ್ ನಿಭಾಯಿಸಿ ಆದಾಯ ಪಡೆಯುವುದು ಈ ಫಂಡ್‌ನ ವೈಶಿಷ್ಟ್ಯತೆಯಾಗಿದೆ. ಬಂಡವಾಳ ಮಾರುಕಟ್ಟೆಯಲ್ಲಿನ ಟಾಪ್ 250 ಕಂಪನಿಗಳನ್ನು ಹೊರತುಪಡಿಸಿ ಇತರ ಕಂಪನಿಗಳನ್ನು ತನ್ನ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಾಗಿ ಈ ಫಂಡ್ ಆರಿಸಿಕೊಳ್ಳುತ್ತದೆ. ಪ್ರಸ್ತುತ ಸ್ಮಾಲ್ ಕ್ಯಾಪ್ ವಲಯದಲ್ಲಿರುವ ಸ್ಟಾಕ್‌ಗಳೇ ಭವಿಷ್ಯದ ಮಿಡ್ ಕ್ಯಾಪ್ ಸ್ಟಾಕ್‌ಗಳಾಗಿ ಬೆಳೆಯುತ್ತವೆ ಎಂಬ ತತ್ವದ ಆಧಾರದಲ್ಲಿ ಈ ಫಂಡ್ ಕಾರ್ಯನಿರ್ವಹಿಸುತ್ತದೆ. ಅಂದರೆ ಕಡಿಮೆ ಹೂಡಿಕೆಯಲ್ಲಿ ಉತ್ತಮ ಆದಾಯ ಹೀಗೆ ಎರಡು ರೀತಿಯ ಲಾಭಗಳನ್ನು ಇದರಿಂದ ಗಳಿಸಬಹುದಾಗಿದೆ.

10. ಮಹಿಂದ್ರಾ ಉನ್ನತಿ ಉದಯೋನ್ಮುಖ ವ್ಯವಹಾರ ಯೋಜನೆ (Mahindra Unnati Emerging Business Yojana)

10. ಮಹಿಂದ್ರಾ ಉನ್ನತಿ ಉದಯೋನ್ಮುಖ ವ್ಯವಹಾರ ಯೋಜನೆ (Mahindra Unnati Emerging Business Yojana)

ಕನಿಷ್ಠ ಶೇ.65 ರಷ್ಟು ಬಂಡವಾಳವನ್ನು ಮಿಡ್ ಕ್ಯಾಪ್‌ಗಳಲ್ಲಿ ಹೂಡಿಕೆ ಮಾಡುವ ಈ ಫಂಡ್ ಉತ್ತಮ ಮಿಡ್ ಕ್ಯಾಪ್ ಫಂಡ್ ಆಗಿದೆ. ಚಿಕ್ಕ ಪ್ರಮಾಣದ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಕಂಪನಿಗಳ ಮೇಲೆ ಗಮನ ಕೇಂದ್ರೀಕರಿಸುವುದು ಇದರ ವಿಶಿಷ್ಟತೆಯಾಗಿದೆ. ಗ್ರಾಹಕ ಸರಕುಗಳು, ಔದ್ಯಮಿಕ ತಯಾರಿಕಾ ವಲಯ, ಹಣಕಾಸು ಮುಂತಾದುವುಗಳಲ್ಲಿ ಪ್ರಮುಖವಾಗಿ ಹೂಡಿಕೆ ಮಾಡಲಾಗುತ್ತದೆ. ಸೆನ್ಸೆಕ್ಸ್ ಶೇ.30 ಕ್ಕಿಂತಲೂ ಕಡಿಮೆ ಆದಾಗ ಸಹ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವಂತೆ ಇದನ್ನು ನಿರ್ವಹಿಸಲಾಗುತ್ತದೆ. ಈ ಫಂಡ್ ಶೇ. -5.0 ರಷ್ಟು ಕಡಿಮೆ ಬೆಲೆಯಲ್ಲಿ ನಡೆಯುತ್ತಿದೆ. ದೀರ್ಘಾವಧಿ ಹೂಡಿಕೆ ಮಾಡುವುದಾದಲ್ಲಿ ಮಾತ್ರ ಈ ಫಂಡ್ ಆರಿಸಿಕೊಳ್ಳಬೇಕು.

 

ಕೊನೆ ಮಾತು

ಕೊನೆ ಮಾತು

ಮೇಲೆ ತಿಳಿಸಲಾದ ಮ್ಯೂಚುವಲ್ ಫಂಡ್‌ಗಳು ಉತ್ತಮ ಆದಾಯವನ್ನೇ ತರಬಲ್ಲವಾದರೂ ಹೂಡಿಕೆದಾರರು ತಮ್ಮ ರಿಸ್ಕ್ ತಡೆದುಕೊಳ್ಳುವ ಅಂಶವನ್ನು ಮೊದಲಿಗೆ ಪರಿಗಣಿಸಿ ನಂತರವೇ ನಿರ್ಧಾರ ಕೈಗೊಳ್ಳಬೇಕು. ದೀರ್ಘಾವಧಿಯವರೆಗೆ ಹೂಡಿಕೆಯನ್ನು ಕಾಯ್ದುಕೊಂಡಲ್ಲಿ ಈ ಮ್ಯೂಚುವಲ್ ಫಂಡ್‌ಗಳು ಉತ್ತಮ ಆದಾಯ ತರಬಲ್ಲವು. ಮುಂದಿನ ಕೆಲ ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸುವ ಸಾಮರ್ಥ್ಯವೂ ಈ ಫಂಡ್‌ಗಳಿಗಿದೆ. ಜೊತೆಗೆ ಇವುಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿವೃತ್ತಿ ಜೀವನಕ್ಕೂ ಹಣಕಾಸು ಭದ್ರತೆ ಪಡೆಯಬಹುದು.

English summary

Top 10 mutual funds which can double your wealth in long term

Following are some mutual funds which can create a good amount of money in the long term. In fact, they can even double your money in a few years’ time.
Story first published: Tuesday, November 13, 2018, 10:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X