For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಬಗ್ಗೆ ನಿಮಗೆಷ್ಟು ಗೊತ್ತು?

ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಕೇಂದ್ರ ಸರ್ಕಾರ ಪರಿಚಯಿಸಿರುವ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷ ರೂ. 5 ಲಕ್ಷ ವಿಮಾ ಸೌಲಭ್ಯ ಒದಗಿಸುತ್ತದೆ.

|

ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಕೇಂದ್ರ ಸರ್ಕಾರ ಪರಿಚಯಿಸಿರುವ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷ ರೂ. 5 ಲಕ್ಷ ವಿಮಾ ಸೌಲಭ್ಯ ಒದಗಿಸುತ್ತದೆ.

 

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಸುಮಾರು 10.74 ಕೋಟಿಗೂ ಹೆಚ್ಚು ದುರ್ಬಲ ಬಡ ಕುಟುಂಬಗಳಿಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಶ್ಲೆಸ್ ಮತ್ತು ಕಾಗದರಹಿತ ರೀತಿಯಲ್ಲಿ ಸೌಲಭ್ಯ ಒದಗಿಸುತ್ತದೆ ಎಂದು ನ್ಯಾಷನಲ್ ಹೆಲ್ತ್ ಏಜೆನ್ಸಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ) ತನ್ನ ವೆಬ್ಸೈಟ್, www.abnhpm.gov.in ನಲ್ಲಿ ತಿಳಿಸಿದೆ. ಆಯುಷ್ಮಾನ್ ಭಾರತ್ ಯೋಜನೆ: 5 ಲಕ್ಷ ವಿಮಾ ಸೌಲಭ್ಯ ಪಡೆಯೋದು ಹೇಗೆ?

ಯೋಜನಾ ಉದ್ದೇಶ

ಯೋಜನಾ ಉದ್ದೇಶ

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ. ಬಡ ಮತ್ತು ದುರ್ಬಲ ಕುಟುಂಬಗಳ ಮೇಲಿನ ಹಣಕಾಸು ಹೊರೆಯನ್ನು ಕಡಿಮೆ ಮಾಡಿ ಉತ್ತಮ ಆಸ್ಪತ್ರೆ ಸೌಲಭ್ಯ ಒದಗಿಸುವುದು.

ಅಯುಷ್ಮಾನ್ ಭಾರತ್

ಅಯುಷ್ಮಾನ್ ಭಾರತ್

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ:
- PMJAY ಯೋಜನೆಯು ದೇಶದಾದ್ಯಂತ 10.74 ಕೋಟಿ ಇರುವ ಬಡ ಮತ್ತು ದುರ್ಬಲ ಕುಟುಂಬಗಳಿಗೆ(ಅಂದಾಜು ೫೦ ಕೋಟಿ ಫಲಾನುಭವಿಗಳು)ವರ್ಷಕ್ಕೆ ರೂ. ೫ ಲಕ್ಷದವರೆಗೆ ಆರೋಗ್ಯ ವಿಮಾ ಒದಗಿಸಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳಿದೆ.
- PMJAY ಒಂದು ಅರ್ಹತೆ ಆಧಾರಿತ ಯೋಜನೆಯಾಗಿದ್ದು, ಔಪಚಾರಿಕ ನೋಂದಣಿ ಪ್ರಕ್ರಿಯೆ ಅಗತ್ಯವಿಲ್ಲ.
- ಎಲ್ಲಾ ಸಾರ್ವಜನಿಕ ಮತ್ತು ಎಂಪನೇಲ್ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ.
- ಎಲ್ಲಾ ಫಲಾನುಭವಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳಿಗೆ ನಗದುರಹಿತ ಮತ್ತು ಕಾಗದರಹಿತ ಪ್ರವೇಶವನ್ನು ಒದಗಿಸಲಾಗಿದೆ.

ಯಾವ ಕಾಯಿಲೆಗಳು
 

ಯಾವ ಕಾಯಿಲೆಗಳು

ಅರ್ಹ ಫಲಾನುಭವಿಗಳು ಶಸ್ತ್ರಚಿಕಿತ್ಸೆ, ವೈದ್ಯಕೀಯ ಮತ್ತು ದಿನದ ಆರೈಕೆ ಚಿಕಿತ್ಸೆಗಳು, ಔಷಧಗಳು ಮತ್ತು 1,350 ವೈದ್ಯಕೀಯ ಪ್ಯಾಕೇಜ್ ಗಳಿಗಾಗಿ ಭಾರತದಾದ್ಯಂತ ಸೇವೆಗಳನ್ನು ಪಡೆಯಬಹುದು. ಧೀರ್ಘಕಾಲಿನ ರೋಗಗಳು, ಹೃದಯದ ಬೈಪಾಸ್, ಸರ್ಜರಿ ಮಂಡಿ ಚಿಪ್ಪು ಅಳವಡಿಕೆ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ. ಪೂರ್ವಭಾವಿಯಾಗಿ ಇರುವ ಎಲ್ಲ ಕಾಯಿಲೆಗಳನ್ನು PMJAY ಯೋಜನೆ ಕೂಡ ಒಳಗೊಂಡಿದೆ.

ಅರ್ಹತೆ ಪರಿಶೀಲನೆ

ಅರ್ಹತೆ ಪರಿಶೀಲನೆ

ಈ ಯೋಜನೆಯ ಪ್ರಯೋಜನ ಪಡೆಯಲು ಇಚ್ಚಿಸುವವರು ಅರ್ಹತೆಯನ್ನು ಪರಿಶಿಲಿಸಲು, ಸಹಾಯವಾಣಿ ಸಂಖ್ಯೆ 14555/1800111565 ಸಂಪರ್ಕಿಸಬಹುದು. ಇಲ್ಲವೇ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್ಸಿ) ಭೇಟಿ ಮಾಡಿ ಅಥವಾ mera.pmjay.gov.in ವೆಬ್ಸೈಟ್ ಲಾಗ್ ಇನ್ ಆಗಬಹುದು. ಜೊತೆಗೆ ಎಂಪನೇಲ್ ಆಸ್ಪತ್ರೆಗಳಲ್ಲಿ ಸಹ ಪರಿಶೀಲಿಸಬಹುದು. ಆಯುಷ್ಮಾನ್ ಮಿತ್ರ ನೇಮಕಾತಿ: ಉದ್ಯೋಗ ಪಡೆಯಲು ಬೇಕಾದ ಅರ್ಹತೆ ಹಾಗು ಅರ್ಜಿ ಸಲ್ಲಿಸುವುದು ಹೇಗೆ?

English summary

Pradhan Mantri Jan Arogya Yojana (PMJAY): Do you know these things..

Ayushman Bharat-Pradhan Mantri Jan Arogya Yojana (PM-JAY) is a government-run health insurance scheme that offers a cover of up to Rs. 5 lakh per family per year.
Story first published: Tuesday, April 2, 2019, 13:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X