For Quick Alerts
ALLOW NOTIFICATIONS  
For Daily Alerts

ಅಗ್ಗ ಬಡ್ಡಿದರದಲ್ಲಿ ಚಿನ್ನದ ಸಾಲ ನೀಡುತ್ತೆ ಈ 6 ಬ್ಯಾಂಕುಗಳು

|

ನಮಗೆ ಕೆಲವೊಮ್ಮೆ ತುರ್ತಾಗಿ ಹಣ ಬೇಕಾಗಬಹುದು. ಆದರೆ ಅಷ್ಟು ಶೀಘ್ರವೇ ಹಣವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗಬಹುದು. ಈ ರೀತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯಕ್ಕಾಗಿ ಅನೇಕ ಪ್ರಮುಖ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಚಿನ್ನದ ಸಾಲವನ್ನು ನೀಡುತ್ತದೆ.

ನಮಗೆ ಸಾಮಾನ್ಯ ಸಾ ಲಕ್ಕಿಂತ ಚಿನ್ನದ ಸಾಲಗಳನ್ನು ಆಯ್ಕೆಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಸಾಲಗಳು ತ್ವರಿತವಾಗಿ ನಮಗೆ ಲಭ್ಯವಾಗಲಿದೆ. ಹಾಗೆಯೇ ಇತರೆ ಸಾಲಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ ದೊರೆಯುತ್ತದೆ. ಹಾಗಾಗಿ ನೀವು ತ್ವರಿತವಾಗಿ ಚಿನ್ನದ ಸಾಲ ಪಡೆದು ನಿಮ್ಮ ಅವಶ್ಯಕತೆ ಪೂರೈಕೆ ಮಾಡಬಹುದು.

ಚಿನ್ನದ ಸಾಲ ಎಂದರೇನು: ನೀವು ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕ್ ನಿಮ್ಮ ಚಿನ್ನಾಭರಣಗಳನ್ನು ಸಾಲದ ಅವಧಿಗೆ ಮೇಲಾಧಾರವಾಗಿ ತೆಗೆದುಕೊಳ್ಳುತ್ತದೆ. ಬ್ಯಾಂಕುಗಳು ಸಾಮಾನ್ಯವಾಗಿ ಬಡ್ಡಿದರವನ್ನು ವಿಧಿಸುತ್ತವೆ. ನೀವು ಚಿನ್ನವನ್ನು ಅಡವಿಟ್ಟು ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ ಬಳಿಕ ಬ್ಯಾಂಕು ನಿಮಗೆ ಚಿನ್ನವನ್ನು ಹಿಂದಿರುಗಿಸುತ್ತದೆ. ನೀವು ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಅಂಶಗಳನ್ನು ತಿಳಿದಿರಬೇಕು, ಆ ಅಂಶಗಳು ಯಾವುವು, ಹಾಗೆಯೇ ಯಾವ ಬ್ಯಾಂಕುಗಳು ಅಗ್ಗದ ಬಡ್ಡಿದರದಲ್ಲಿ ಚಿನ್ನದ ಸಾಲ ನೀಡುತ್ತದೆ ಎಂದು ತಿಳಿಯಲು ಮುಂದೆ ಓದಿ..

 ಯಾವೆಲ್ಲಾ ಚಿನ್ನವನ್ನು ಬ್ಯಾಂಕು ಸ್ವೀಕರಿಸುತ್ತೆ?

ಯಾವೆಲ್ಲಾ ಚಿನ್ನವನ್ನು ಬ್ಯಾಂಕು ಸ್ವೀಕರಿಸುತ್ತೆ?

ಹೆಚ್ಚಿನ ಬ್ಯಾಂಕ್‌ಗಳು ಚಿನ್ನದ ಆಭರಣಗಳನ್ನು ಮಾತ್ರ ಸ್ವೀಕರಿಸುತ್ತವೆ. ಅದಕ್ಕಾಗಿ ನಿಮ್ಮ ಚಿನ್ನದ ಶುದ್ಧತೆ 18 ಕ್ಯಾರೆಟ್‌ನಿಂದ 22 ಕ್ಯಾರೆಟ್‌ವರೆಗೆ ಇರಬೇಕು. ಹೆಚ್ಚಾಗಿ ಯಾವುದೇ ಬ್ಯಾಂಕುಗಳು ಚಿನ್ನದ ಗಟ್ಟಿ ಅಥವಾ ಚಿನ್ನದ ಬಾರ್‌ಗಳನ್ನು ಅಡವಿಟ್ಟು ಸಾಲವನ್ನು ನೀಡುವುದಿಲ್ಲ ಎಂಬುವುದು ಗಮನದಲ್ಲಿರಲಿ. ಹಾಗೆಯೇ ನೀವು ಚಿನ್ನದ ಆಭರಣ ಖರೀದಿ ಮಾಡುವ ಸಂದರ್ಭದಲ್ಲಿ ಚಿನ್ನದ ಶುದ್ಧತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಯಾಕೆಂದರೆ 18 ಕ್ಯಾರೆಟ್‌ನಿಂದ 22 ಕ್ಯಾರೆಟ್‌ವರೆಗೆ ಶುದ್ಧತೆ ಇರುವ ಚಿನ್ನಕ್ಕೆ ಮಾತ್ರ ಬ್ಯಾಂಕುಗಳು ಸಾಲವನ್ನು ನೀಡುತ್ತದೆ.

 ಗರಿಷ್ಠ ಸಾಲದ ಮೌಲ್ಯ ಎಷ್ಟು?

ಗರಿಷ್ಠ ಸಾಲದ ಮೌಲ್ಯ ಎಷ್ಟು?

ಹೆಚ್ಚಿನ ಬ್ಯಾಂಕುಗಳು ಹಳದಿ ಲೋಹದ ಅಸ್ತಿತ್ವದಲ್ಲಿರುವ ಮಾರುಕಟ್ಟೆ ಬೆಲೆಗಳ ಶೇಕಡ 75ರಷ್ಟು ಮೌಲ್ಯದ ಅನುಪಾತಕ್ಕೆ (ಎಲ್‌ಟಿವಿ) ಚಿನ್ನದ ಸಾಲಗಳನ್ನು ನೀಡುತ್ತವೆ. ನಾಗರಿಕರು ತಮ್ಮ ಹಣಕಾಸಿನ ತುರ್ತುಸ್ಥಿತಿಗಳನ್ನು ಪೂರೈಸಲು ಸಾಲ ಪಡೆಯುವ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಎಲ್‌ಟಿವಿಯನ್ನು ನಿಗದಿಪಡಿಸಲಾಗಿದೆ. ಆರ್‌ಬಿಐ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅಡಿಯಲ್ಲಿ, ಚಿನ್ನಾಭರಣ ಅಥವಾ ಆಭರಣಗಳ ಒತ್ತೆಯ ಮೇಲೆ ಬ್ಯಾಂಕ್‌ಗಳು ನೀಡುವ ಸಾಲಗಳು ಚಿನ್ನದ ಆಭರಣಗಳು ಅಥವಾ ಆಭರಣಗಳ ಮೌಲ್ಯದ ಶೇಕಡ 75ಕ್ಕಿಂತ ಹೆಚ್ಚಿರಬಾರದು. ಉದಾಹರಣೆಗೆ ನೀವು ರೂ 100,000 ಮೌಲ್ಯದ ಚಿನ್ನವನ್ನು ಅಡವಿಟ್ಟರೆ ನೀವು ಗರಿಷ್ಠ ರೂ 75,000 ಸಾಲಗನ್ನು ಪಡೆಯಬಹುದು.

 ಚಿನ್ನದ ಮೌಲ್ಯಮಾಪನ ಮತ್ತು ಸಾಲ ಮಂಜೂರಾತಿ

ಚಿನ್ನದ ಮೌಲ್ಯಮಾಪನ ಮತ್ತು ಸಾಲ ಮಂಜೂರಾತಿ

ಚಿನ್ನದ ಸಾಲ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಿರ್ಧರಿಸುವುದು ಮುಖ್ಯವಾಗಿದೆ. ಅದಕ್ಕಾಗಿ ನೀವು ಮೌಲ್ಯಮಾಪನ ಮತ್ತು ಮಂಜೂರಾತಿ ಕಾರ್ಯವಿಧಾನದ ಬಗ್ಗೆ ತಿಳಿದಿರಬೇಕು. ನೀವು ಅಡವಿಟ್ಟ ಚಿನ್ನದ ಮೌಲ್ಯಮಾಪನವನ್ನು ಬ್ಯಾಂಕ್ ನಿರ್ವಹಿಸುತ್ತದೆ. ನಂತರ ನೀವು ಪಡೆಯುವ ಗರಿಷ್ಠ ಸಾಲದ ಮೊತ್ತ ಮತ್ತು ಅದರ ಮೇಲೆ ವಿಧಿಸುವ ಬಡ್ಡಿ ದರವನ್ನು ನಿರ್ಧರಿಸುತ್ತದೆ. 6 ತಿಂಗಳಿಂದ 24 ತಿಂಗಳವರೆಗೆ ಸಾಲ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವ ಹಕ್ಕನ್ನು ನೀವು ಸಾಲಗಾರರಾಗಿ ಹೊಂದಿದ್ದೀರಿ.

 ಅತೀ ಅಗ್ಗದ ಚಿನ್ನದ ಸಾಲ ಬಡ್ಡಿದರ

ಅತೀ ಅಗ್ಗದ ಚಿನ್ನದ ಸಾಲ ಬಡ್ಡಿದರ

ಭಾರತದಲ್ಲಿ ವಿವಿಧ ಪ್ರಮುಖ ಬ್ಯಾಂಕ್‌ಗಳು ಅಗ್ಗದ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ: ಈ ಬ್ಯಾಂಕು ಶೇಕಡ 7 ಬಡ್ಡಿದರವನ್ನು ನೀಡುತ್ತದೆ. ಇಲ್ಲಿ ಪ್ರೋಸೆಸಿಂಗ್ ಫೀಸ್ ಜಿಎಸ್‌ಟಿ ಸೇರಿದಂತೆ ರೂ 500 ರಿಂದ 2000 ಆಗಿರುತ್ತದೆ.
ಕೆನರಾ ಬ್ಯಾಂಕ್: ಬ್ಯಾಂಕ್ ಪ್ರಸ್ತುತ 7.35 ಶೇಕಡ ಬಡ್ಡಿದರವನ್ನು ನೀಡುತ್ತಿದೆ. ಇಲ್ಲಿ ಪ್ರೋಸೆಸಿಂಗ್ ಫೀಸ್ 500 ರಿಂದ 5000 ರೂಪಾಯಿ ಆಗಿದೆ.
ಯೂನಿಯನ್ ಬ್ಯಾಂಕ್: ಪ್ರಮುಖ ಬ್ಯಾಂಕ್ ನಿಮಗೆ 7.25 ಶೇಕಡದಿಂದ 8.25 ಶೇಕಡದವರೆಗೆ ಬಡ್ಡಿದರವನ್ನು ನೀಡುತ್ತದೆ. ಇಲ್ಲಿ ಪ್ರೋಸೆಸಿಂಗ್ ಫೀಸ್ ನಿರ್ದಿಷ್ಟವಾಗಿಲ್ಲ.
ಪಂಜಾಬ್ & ಸಿಂಧ್ ಬ್ಯಾಂಕ್: ಬ್ಯಾಂಕ್ 7 ಶೇಕಡದಿಂದ 7.50 ಶೇಕಡದವರೆಗೆ ಬಡ್ಡಿದರವನ್ನು ನೀಡುತ್ತದೆ. ಪ್ರಕ್ರಿಯೆ ಶುಲ್ಕಗಳು ರೂ 500 ರಿಂದ ಗರಿಷ್ಠ ರೂ 10,000 ವರೆಗೆ ಇರುತ್ತದೆ.
ಪಿಎನ್‌ಬಿ: ಇದು ಚಿನ್ನದ ಸಾಲಗಳ ಮೇಲೆ 7 ಶೇಕಡದಿಂದ 7.50 ಶೇಕಡದವರೆಗೆ ಬಡ್ಡಿದರವನ್ನು ನೀಡುತ್ತದೆ.
ಎಸ್‌ಬಿಐ ಬ್ಯಾಂಕ್: ಈ ಬ್ಯಾಂಕ್ 50 ಲಕ್ಷದವರೆಗಿನ ಸಾಲದ ಮೊತ್ತದೊಂದಿಗೆ 3 ವರ್ಷಗಳ ಅವಧಿಗೆ 7.30 ಶೇಕಡ ಬಡ್ಡಿ ದರವನ್ನು ನೀಡುತ್ತದೆ. ಪ್ರಕ್ರಿಯೆ ಶುಲ್ಕವು ಜಿಎಸ್‌ಟಿ 500 ರೂ.ಗೆ ಶೇಕಡ 0.50ರಂತೆ ವಿಧಿಸಲಾಗುತ್ತದೆ.

English summary

6 Banks That Offer Cheapest Interest Rates On Gold Loans, Explained Here

6 Banks That Offer Cheapest Interest Rates On Gold Loans, Explained Here in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X