For Quick Alerts
ALLOW NOTIFICATIONS  
For Daily Alerts

ವರ್ಷಕ್ಕೆ 20 ಪರ್ಸೆಂಟ್ ರಿಟರ್ನ್ಸ್ ಪಡೆಯಬಹುದಾದ 7 ಮ್ಯೂಚ್ಯುವಲ್ ಫಂಡ್ಸ್ ಯೋಜನೆಗಳು

|

ಹೂಡಿಕೆದಾರರು ಯಾರೇ ಆಗಲಿ ಹಣ ಒಳ್ಳೆಯ ರಿಟರ್ನ್ಸ್ ಬರಬೇಕು ಎಂದು ಎದುರು ನೋಡುತ್ತಿರುತ್ತಾರೆ. ಇನ್ನು ಜನಸಾಮಾನ್ಯರು ಸುರಕ್ಷಿತ ಹೂಡಿಕೆಗಳಿಗೆ ಹೆಚ್ಚು ಮೊರೆ ಹೋಗುತ್ತಾರೆ. ಜಾಸ್ತಿ ರಿಸ್ಕ್ ತೆಗೆದುಕೊಳ್ಳದೆ ಹಣ ಹೂಡಿಕೆ ಮಾಡಿ ಆದಾಯಗಳಿಸುವ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.

 

ವರ್ಷದಲ್ಲಿ ಒಂದಿಷ್ಟು ಹಣ ಹೂಡಿಕೆ ಮಾಡಿ ಅತ್ಯುತ್ತಮ ರಿಟರ್ನ್ಸ್ ಕೊಡಬಲ್ಲಂತಹ ಮ್ಯೂಚ್ಯುವಲ್ ಫಂಡ್ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ನೀವು ಷೇರು ಮಾರುಕಟ್ಟೆಯಲ್ಲಿ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದಿದ್ದರೆ ಬೇರೊಬ್ಬರ ನೆರವು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುಖಾಂತರ ಲಾಭ ಪಡೆದುಕೊಳ್ಳಬಹುದು. ಹೂಡಿಕೆದಾರರಿಂದ ಹಣ ಸಂಗ್ರಹಣೆ ಮಾಡುವ ಕಂಪನಿಯೇ ಷೇರು ಖರೀದಿ ಮತ್ತು ಮಾರಾಟ ಮಾಡುತ್ತದೆ.

ಇಕ್ವಿಟಿ ಮ್ಯೂಚ್ಯುವಲ್ ಫಂಡ್ ಯೋಜನೆಗಳು ವಿಶೇಷವಾಗಿ ಲಾರ್ಜ್ ಕ್ಯಾಪ್ ಮ್ಯೂಚ್ಯುವಲ್ ಫಂಡ್ಸ್‌ಗಳು ಕಳೆದ 1 ವರ್ಷದಲ್ಲಿ ಚೆನ್ನಾಗಿ ವಹಿವಾಟು ನಡೆಸಿವೆ. ಈ ಹಲವಾರು ನಿಧಿಗಳು ಕಳೆದ 1 ವರ್ಷದಲ್ಲಿ 20 ಪರ್ಸೆಂಟ್‌ವರೆಗೂ ಆದಾಯ ತಂದುಕೊಟ್ಟಿವೆ. ಕಳೆದ 1 ವರ್ಷದಲ್ಲಿ ಸುಮಾರು 16 ರಿಂದ 20 ಪರ್ಸೆಂಟ್ ಆದಾಯವನ್ನು ನೀಡಿದ 7 ಮ್ಯೂಚ್ಯುವಲ್ ಫಂಡ್ಸ್ ಯೋಜನೆಗಳು ಈ ಕೆಳಗಿವೆ ನೋಡಿ.

1. ಆ್ಯಕ್ಸಿಸ್ ಬ್ಲ್ಯೂಚಿಪ್ ಫಂಡ್ - ಗ್ರೋಥ್

1. ಆ್ಯಕ್ಸಿಸ್ ಬ್ಲ್ಯೂಚಿಪ್ ಫಂಡ್ - ಗ್ರೋಥ್

ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಉತ್ತಮವಾದ ಆಯ್ಕೆ ಇದಾಗಿದ್ದು ಆ್ಯಕ್ಸಿಸ್ ಬ್ಲ್ಯೂಚಿಪ್ ಫಂಡ್ ಗೆ ಕ್ರಿಸಿಲ್ 5 ಸ್ಟಾರ್ ನೀಡಿದ್ದು, ವ್ಯಾಲ್ಯು ರಿಸರ್ಚ್‌ 5 ಸ್ಟಾರ್ ಎಂದು ರೇಟಿಂಗ್ ನೀಡಿದೆ. ಆಕ್ಸಿಸ್ ಬ್ಲ್ಯೂಚಿಪ್ ಫಂಡ್ 1 ವರ್ಷದಲ್ಲಿ 19.92 ಪರ್ಸೆಂಟ್ ರಿಟರ್ನ್ಸ್ ನೀಡಿದ್ದು ಸುಮಾರು 20 ಪರ್ಸೆಂಟ್ ವರೆಗೂ ರಿಟರ್ನ್ಸ ಬಂದಿದೆ. ಉತ್ತಮವಾದ ದೀರ್ಘಕಾಲಿಕ ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿದೆ.

ವಾಸ್ತವವಾಗಿ, ಆ್ಯಕ್ಸಿಸ್ ಬ್ಲ್ಯೂಚಿಪ್ ಫಂಡ್ ಯೋಜನೆಯನ್ನು ಖರೀದಿಸಲು ಬಯಸಿದರೆ, ಪ್ರಸ್ತುತ ನಿವ್ವಳ ಆಸ್ತಿ ಮೌಲ್ಯ 32.15 ರುಪಾಯಿಯಷ್ಟಿದೆ. ಈ ಫಂಡ್‌ನ ಬಳಿ ಇರುವುದು ಎಚ್‌ಡಿಎಫ್‌ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಬ್ ಫೈನಾನ್ಸ್ ಮತ್ತು ಅವೆನ್ಯೂ ಸೂಪರ್‌ ಮಾರ್ಕೆಟ್ ಕಂಪನಿ ಷೇರುಗಳು ಸೇರಿವೆ.

ಗ್ರೋಥ್ ಪ್ಲ್ಯಾನ್ ನಲ್ಲಿ ಸದ್ಯದ NAV 32.15 ರುಪಾಯಿ ಇದೆ. ಆದ್ದರಿಂದ ನೀವು ಹೂಡಿಕೆ ಮಾಡಬೇಕು ಅಂದರೆ 32.15 ರುಪಾಯಿ ಮಟ್ಟದಲ್ಲೇ ಹಣ ಹೂಡಬೇಕು.

 

2.ಆ್ಯಕ್ಸಿಸ್ ಮಲ್ಟಿಕ್ಯಾಪ್ ಫಂಡ್
 

2.ಆ್ಯಕ್ಸಿಸ್ ಮಲ್ಟಿಕ್ಯಾಪ್ ಫಂಡ್

ಈ ಮ್ಯೂಚ್ಯುವಲ್ ಫಂಡ್ ಯೋಜನೆಯು ಕಳೆದ ಒಂದು ವರ್ಷದಲ್ಲಿ 19.01 ಪರ್ಸೆಂಟ್‌ನಷ್ಟು ರಿಟರ್ನ್ಸ್ ತಂದುಕೊಟ್ಟ ಮ್ಯೂಚ್ಯುವಲ್ ಫಂಡ್ ಆಗಿದೆ. ಇದು ಮಲ್ಟಿ ಕ್ಯಾಪ್ ಫಂಡ್ ಆಗಿದ್ದು ಅಂದರೆ, ಇದು ದೊಡ್ಡ , ಸಣ್ಣ ಮತ್ತು ಮಧ್ಯಮ ಬಂಡವಾಳವನ್ನು ಹೊಂದಿರುವ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ.

ಕಳೆದ ಮೂರು ವರ್ಷಗಳಲ್ಲಿ ನೀವೇನಾದರು SIP ಮೂಲಕ ಈ ಫಂಡ್‌ನಲ್ಲಿ ಪ್ರತಿ ತಿಂಗಳು 10 ಸಾವಿರ ರುಪಾಯಿ ಹೂಡಿಕೆ ಮಾಡಿದ್ದರೆ, ಅದರ ಬೆಳವಣಿಗೆಯು 4.31 ಲಕ್ಷ ರುಪಾಯಿಗಳಷ್ಟಿರುತ್ತಿತ್ತು. ಈ ಫಂಡ್ ಉತ್ತಮ ಷೇರುಗಳನ್ನು ಹೊಂದಿದ್ದು ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಹೆಚ್‌ಡಿಎಫ್‌ಸಿ ಬ್ಯಾಂಕ್ಮ ಅವೆನ್ಯೂ ಸೂಪರ್ ಮಾರ್ಕೆಟ್, ಟಿಸಿಎಸ್, ರಿಲಯನ್ಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸೇರಿವೆ.

 

3. ಬಿಎನ್‌ಪಿ ಪರಿಬಾಸ್ ಲಾರ್ಜ್‌ಕ್ಯಾಪ್ ಫಂಡ್ - ಗ್ರೋಥ್

3. ಬಿಎನ್‌ಪಿ ಪರಿಬಾಸ್ ಲಾರ್ಜ್‌ಕ್ಯಾಪ್ ಫಂಡ್ - ಗ್ರೋಥ್

ಬಿಎನ್‌ಪಿ ಪರಿಬಾಸ್ ಲಾರ್ಜ್ ಕ್ಯಾಪ್ ಫಂಡ್ ಕೂಡ ದೀರ್ಘಾವಧಿ ಹೂಡಿಕೆಗೆ ಉತ್ತಮವಾದ ಆಯ್ಕೆಯಾಗಿದೆ. ಕಳೆದ 1 ವರ್ಷದಲ್ಲಿ 18.20 ಪರ್ಸೆಂಟ್ ರಿಟರ್ನ್ಸ್ ಬಂದಿದೆ. ಕಳೆದ ಒಂದು ವರ್ಷದ ಹಿಂದೆ ನೀವೇನಾದರೂ 1 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದರೆ ಈಗ ಅದು 1.18 ಲಕ್ಷ ರುಪಾಯಿಗಳಾಗಿರುತ್ತಿತ್ತು. ಈ ಮೂಲಕ ಉತ್ತಮ ಇಳುವರಿ ನಿಮ್ಮದಾಗಿರುತ್ತಿತ್ತು.

ಈ ಲಾರ್ಜ್‌ಕ್ಯಾಪ್ ಫಂಡ್‌ಗೆ ಕ್ರಿಸಿಲ್ 5 ಸ್ಟಾರ್ ರೇಟಿಂಗ್ ನೀಡಿದ್ದು, ಬಿಎನ್‌ಪಿ ಪರಿಬಾಸ್ ಲಾರ್ಜ್‌ಕ್ಯಾಪ್ ಫಂಡ್ - ಗ್ರೋಥ್ ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಷೇರುಗಳನ್ನು ಹೊಂದಿದೆ.

 

4. ಎಲ್‌ಐಸಿ ಎಂಎಫ್ ಲಾರ್ಜ್ ಕ್ಯಾಪ್ ಫಂಡ್ - ಗ್ರೋಥ್

4. ಎಲ್‌ಐಸಿ ಎಂಎಫ್ ಲಾರ್ಜ್ ಕ್ಯಾಪ್ ಫಂಡ್ - ಗ್ರೋಥ್

ಕಳೆದ ಒಂದು ವರ್ಷದಲ್ಲಿ ಅತ್ಯುತ್ತಮ ರಿಟರ್ನ್ಸ್ ತಂದುಕೊಂಡ ಮ್ಯೂಚ್ಯುವಲ್‌ ಫಂಡ್‌ಗಳಲ್ಲಿ ಇದು ಕೂಡ ಒಂದಾಗಿದೆ. ನಿರ್ವಹಣೆಯ ಅಡಿಯಲ್ಲಿ ಸ್ವತ್ತುಗಳು ತುಂಬಾ ದೊಡ್ಡದಲ್ಲದಿದ್ದರೂ ಆದಾಯವು ಉತ್ತಮವಾಗಿದೆ. ಕಳೆದ ಒಂದು ವರ್ಷದಲ್ಲಿ 17.54 ಪರ್ಸೆಂಟ್‌ನಷ್ಟು ಆದಾಯ ಆಗಿದೆ.

ಎಲ್‌ಐಸಿ ಎಂಎಫ್ ಲಾರ್ಜ್ ಕ್ಯಾಪ್ ಫಂಡ್ - ಗ್ರೋಥ್ ಮೂರು ವರ್ಷಗಳ ವಾರ್ಷಿಕ ಆದಾಯವು 13.32 ರಷ್ಟಿದ್ದು ಅದು ಕೂಡ ಉತ್ತಮವಾಗಿದೆ. ಪ್ರಸ್ತುತ ಇದರ ಮೌಲ್ಯವು 29.22 ರುಪಾಯಿಯಷ್ಟಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್‌ ಕಂಪನಿಯ ಷೇರುಗಳನ್ನು ಹೊಂದಿದೆ. ಸಣ್ಣ ಮತ್ತು ದೊಡ್ಡ ಕ್ಯಾಪ್ ಷೇರುಗಳಿಗೆ ಹೋಲಿಸಿದರೆ ಲಾರ್ಜ್ ಕ್ಯಾಪ್ ಷೇರುಗಳು ಸ್ವಲ್ಪ ಕಡಿಮೆ ರಿಸ್ಕ್‌ ಆಗಿವೆ. ಸ್ವಲ್ಪ ಕಡಿಮೆ ರಿಸ್ಕ್‌ ತೆಗೆದುಕೊಳ್ಳಲು ಬಯಸುವ ಹೂಡಿಕೆದಾರರಿಗೆ ಇದು ಉತ್ತಮ ಹೂಡಿಕೆಯಾಗಿದೆ.

 

5. ಹೆಚ್‌ಎಸ್‌ಬಿಸಿ ಲಾರ್ಜ್ ಕ್ಯಾಪ್ ಇಕ್ವಿಟಿ ಫಂಡ್

5. ಹೆಚ್‌ಎಸ್‌ಬಿಸಿ ಲಾರ್ಜ್ ಕ್ಯಾಪ್ ಇಕ್ವಿಟಿ ಫಂಡ್

ಹೆಚ್‌ಎಸ್‌ಬಿಸಿ ಲಾರ್ಜ್ ಕ್ಯಾಪ್ ಇಕ್ವಿಟಿ ಫಂಡ್‌ನ ಗಾತ್ರ ಸುಮಾರು 667 ಕೋಟಿ ರುಪಾಯಿಗಳಷ್ಟಿದ್ದು ಕಳೆದ ಒಂದು ವರ್ಷದಲ್ಲಿ ಆದಾಯವು 16.64 ಪರ್ಸೆಂಟ್‌ ನಷ್ಟಿದೆ. ಇದು ಕ್ರಿಸಿಲ್ 4 ಸ್ಟಾರ್ ರೇಟಿಂಗ್ ನೀಡಿರುವ ಯೋಜನೆಯಾಗಿದೆ. ಇದು ಕೆಲವು ಖ್ಯಾತ ಕಂಪನಿಯ ಷೇರುಗಳನ್ನು ಒಳಗೊಂಡಿದ್ದು ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಷೇರುಗಳನ್ನು ಹೊಂದಿದೆ.

6. ಬಿಎನ್‌ಪಿ ಪರಿಬಾಸ್ ಇಂಡಿಯಾ ಕನ್ಸಂಮ್ಷನ್ ಫಂಡ್

6. ಬಿಎನ್‌ಪಿ ಪರಿಬಾಸ್ ಇಂಡಿಯಾ ಕನ್ಸಂಮ್ಷನ್ ಫಂಡ್

ಈ ಮ್ಯುಚ್ಯುವಲ್ ಫಂಡ್ ಯೋಜನೆಯು ಕಳೆದ 1 ವರ್ಷದಲ್ಲಿ ಅತ್ತುತ್ತಮ ರಿಟರ್ನ್ಸ್ ಬಂದಿದ್ದು 19.52 ಪರ್ಸೆಂಟ್ ನಷ್ಟಿದೆ. ಸದ್ಯ ಇದರ ವ್ಯಾಲ್ಯೂ 13.02 ರುಪಾಯಿಯಷ್ಟಿದೆ. ಬಿಎನ್‌ಪಿ ಪರಿಬಾಸ್ ಇಂಡಿಯಾ ಕನ್ಸಂಮ್ಷನ್ ಫಂಡ್ ಒಟ್ಟಾರೆ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಹೊಂದಿದೆ. ಸುಮಾರು 50.1ರಷ್ಟು ದೊಡ್ಡ ಕ್ಯಾಪ್ ಷೇರುಗಳಲ್ಲಿ, 21 ಪರ್ಸೆಂಟ್ ಮಿಡ್ ಕ್ಯಾಪ್ ಷೇರುಗಳಲ್ಲಿ ಮತ್ತು 10 ಪರ್ಸೆಂಟ್ ಚಿಕ್ಕ ಸ್ಮಾಲ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡಿದೆ.

ಕಳೆದ ಒಂದು ವರ್ಷದ ಹಿಂದೆ ಪ್ರತಿ ತಿಂಗಳು 10 ಸಾವಿರ ರುಪಾಯಿಯನ್ನು SIP ಮೂಲಕ ಹೂಡಿಕೆ ಮಾಡಿದ್ದರೆ ಸದ್ಯ ಅದು 1.31 ಲಕ್ಷ ರುಪಾಯಿಗಳಷ್ಟಿರುತ್ತಿತ್ತು. ಇದು ಒಂದು ವರ್ಷದಲ್ಲಿ ಬ್ಯಾಂಕ್‌ ಡೆಪಾಸಿಟ್‌ಗಳಿಗಿಂತ ಪಡೆಯುವ ಅತ್ತುತ್ತಮ ರಿಟರ್ನ್ಸ್ ಆಗಿದೆ.

 

7. ಮಿರೇ ಅಸೆಟ್ ಎಮರ್ಜಿಂಗ್ ಬ್ಲ್ಯೂ ಚಿಪ್ ಫಂಡ್

7. ಮಿರೇ ಅಸೆಟ್ ಎಮರ್ಜಿಂಗ್ ಬ್ಲ್ಯೂ ಚಿಪ್ ಫಂಡ್

ವ್ಯಾಲ್ಯೂ ರೀಸರ್ಚ್ ಆನ್ ಲೈನ್ ನಿಂದ ಒಳ್ಳೆಯ ಸ್ಟಾರ್ ರೇಟಿಂಗ್ ಪಡೆದ ಮತ್ತೊಂದು ಫಂಡ್ ಇದು. 1 ವರ್ಷದಲ್ಲಿ ಈ ಫಂಡ್ ಮೂಲಕ 16.92 ಪರ್ಸೆಂಟ್ ರಿಟರ್ನ್ಸ್ ಬಂದಿದೆ. ಹೂಡಿಕೆದಾರರು 12 ತಿಂಗಳ ಹಿಂದೆ ಪ್ರತಿ ತಿಂಗಳು 1,000 ರುಪಾಯಿಯಂತೆ ಹೂಡಿಕೆ ಮಾಡುತ್ತಾ SIP ಪ್ರಾರಂಭಿಸಿ 12,000 ಹೂಡಿಕೆ ಮಾಡಿದ್ದರೆ. ಅವರ ಕಾರ್ಪಸ್ ಈಗ 13,346 ರುಪಾಯಿಗಳಾಗಿರುತ್ತಿತ್ತು. ಇದು ವಾರ್ಷಿಕ ಸುಮಾರು 22ಪರ್ಸೆಂಟ್ ನಷ್ಟು ಇಳುವರಿಯನ್ನು ನೀಡುತ್ತದೆ.

ಕಾರ್ಪಸ್ ವಿಷಯದಲ್ಲಿ ಇದು ದೊಡ್ಡ ಫಂಡ್ ಆಗಿದ್ದು, ಸುಮಾರು 9,500 ಕೋಟಿ ರುಪಾಯಿ ಫಂಡ್‌ನಿಂದ ಮೂರು ವರ್ಷಗಳ ವಾರ್ಷಿಕ ಆದಾಯವು 17 ಪರ್ಸೆಂಟ್‌ನಷ್ಟಿದೆ. ಅಂದರೆ ಇದು ಮಧ್ಯಮ ಅವಧಿಯಲ್ಲೂ ಉತ್ತಮ ಆದಾಯಗಳಿಸಿದೆ ಎಂದರ್ಥ.

ಹೆಚ್ಚು ದೀರ್ಘಾವಧಿಯಲ್ಲಿ ಹೂಡಿಕೆ ಮಾಡಲು ಸಿದ್ಧರಿರುವ ಹೂಡಿಕೆದಾರರಿಗೆ ಈ ಫಂಡ್ ಉತ್ತಮ ಹೂಡಿಕೆಯಾಗಬಹುದು.

 

English summary

7 Best Mutual Fund Schemes Gave Upto 20 Percent Returns In 1 Year

These are the 7 Best mutual fund schemes Gave Upto 20 Percent Returns In last 1 Year
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X