ಟಾಟಾ ಗ್ರೂಪ್ ಮಾಲೀಕತ್ವದ ಏರ್‌ಇಂಡಿಯಾ ಸಂಸ್ಥೆಯು ಜನವರಿ 19ರಿಂದ ಜನವರಿ 26ರವರೆಗೆ ಕೆಲವು ಸ್ಥಳೀಯ ವಿಮಾನಗಳನ್ನು ರದ್ದು ಮಾಡಿದ್ದರೆ, ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಅವಧಿಯನ್ನು ಮರುನಿಗದಿ ಮಾಡಿದೆ. ಪ್ರಮುಖವಾಗಿ ಗಣರಾಜ್ಯೋತ್ಸವದ ಹಿನ್ನೆಲೆಯಿಂದಾಗಿ ಏರ್‌ಇಂಡಿಯಾ ಈ ವಿಮಾನಗಳನ್ನು ರದ್ದು ಮತ್ತು ಮರುನಿಗದಿ ಮಾಡಿದೆ. ದೆಹಲಿ ಏರ್‌ಪೋರ್ಟ್ ಏರ್‌ಮೆನ್‌ನಲ್ಲಿ ಈ ವಿಮಾನಗಳನ್ನು ರದ್ದು ಮಾಡಲಾಗಿದೆ.
ಏರ್‌ಇಂಡಿಯಾ ಕೆಲವು ಸ್ಥಳೀಯ ವಿಮಾನಗಳ ಅವಧಿಯನ್ನು ಮರುನಿಗದಿ ಮಾಡಿದೆ. ಆದರೆ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿಲ್ಲ. ಆ ವಿಮಾನಗಳನ್ನು ಮರುನಿಗದಿ ಮಾಡಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕೆ ತೊಂದರೆ ಉಂಟಾಗದಂತೆ ವಿಮಾನ ಸಂಸ್ಥೆಯು ಕ್ರಮವನ್ನು ಕೈಗೊಂಡಿದೆ. ಸ್ಥಳೀಯ ವಿಮಾನಗಳನ್ನು ಮಾತ್ರ ರದ್ದು ಮಾಡಲಾಗಿದೆ.
ಪ್ರಮುಖವಾಗಿ ಗಣರಾಜ್ಯೋತ್ಸವದ ಹಿನ್ನೆಲೆ ಈ ವಿಮಾನಗಳನ್ನು ರದ್ದು ಮಾಡಲಾಗಿದೆ ಅಥವಾ ಮರುನಿಗದಿ ಮಾಡಲಾಗಿದೆ. ಗಣರಾಜ್ಯೋತ್ಸ ದಿನದಂದು (ಜನವರಿ 26) ಮತ್ತು ಗಣರಾಜ್ಯೋತ್ಸವ ನಡೆಯಲಿರುವ ದಿನದ ಒಂದು ವಾರ ಅವಧಿಯಲ್ಲಿ ಈ ವಿಮಾನಗಳನ್ನು ರದ್ದು ಮಾಡಲಾಗಿದೆ. ಪ್ರತಿ ದಿನ ಕಡಿಮೆ ಮೂರು ಗಂಟೆಗಳ ಕಾಲ ವಿಮಾನವನ್ನು ರದ್ದು ಮಾಡಲಾಗಿದೆ.

ವಿಮಾನಗಳ ಪ್ರಯಾಣ ಅತೀ ತಡವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಏರ್‌ಇಂಡಿಯಾವು ವಿಮಾನಗಳನ್ನು ರದ್ದು ಅಥವಾ ಮರುನಿಗದಿ ಮಾಡಿದೆ. ಈ ಬಗ್ಗೆ ಏರ್‌ಇಂಡಿಯಾ ಅಧಿಕೃತ ಹೇಳಿಕೆಯನ್ನು ಕೂಡಾ ನೀಡಿದೆ.
ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿರುವುದು ಏನು?
"ಗಣರಾಜ್ಯೋತ್ಸವದ ಹಿನ್ನೆಲೆ ಇಂಡಿಯನ್ ಏರ್‌ಫೋರ್ಸ್ ಕೆಲವೊಂದು ತಯಾರಿಗಳನ್ನು ನಡೆಸಲಿದೆ. 74ನೇ ಗಣರಾಜ್ಯೋತ್ಸವಕ್ಕೂ ಮುನ್ನ ಒಂದು ವಾರಗಳ ಮುನ್ನ ವಾಯುಮಾರ್ಗದಲ್ಲಿ ಕೆಲವೊಂದು ನಿರ್ಬಂಧಗಳು ಇರುತ್ತದೆ. ಆದ್ದರಿಂದಾಗಿ ಏರ್‌ಇಂಡಿಯಾ ವಿಮಾನವನ್ನು ರದ್ದು ಮಾಡುವ ಮತ್ತು ವಿಮಾಗಳನ್ನು ಮರುನಿಗದಿ ಮಾಡುವ ನಿರ್ಧಾರವನ್ನು ಮಾಡಿದೆ," ಎಂದು ತಿಳಿಸಿದೆ.
10:30 ಗಂಟೆಯಿಂದ 12:45 ಗಂಟೆವರೆಗೆ ಜನವರಿ 19-24ರವರೆಗೆ ಮತ್ತು ಜನವರಿ 26ರಂದು ವಿಮಾನ ಪ್ರಯಾಣ ಸಮಯ ವ್ಯತ್ಯಯವಾಗಲಿದೆ. 10:30 ಗಂಟೆಯಿಂದ 12:45 ಗಂಟೆವರೆಗಿನ ದೆಹಲಿಯಿಂದ ಬರುವ, ದೆಹಲಿಗೆ ತೆರಳುವ ಎಲ್ಲ ವಿಮಾನವನ್ನು ರದ್ದು ಮಾಡಲಾಗಿದೆ. ಈ ಸಮಯಕ್ಕೂ ಮುನ್ನ ಅಥವಾ ನಂತರ ಪ್ರಯಾಣ ಮಾಡುವ ವಿಮಾನಗಳ ಹಾರಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಇನ್ನು ಅಂತಾರಾಷ್ಟ್ರೀಯ ವಿಮಾನಗಳ ಅವಧಿ ವ್ಯತ್ಯಯವಾಗಲಿದೆ. ಎಲ್‌ಎಚ್‌ಆರ್ (ಲಂಡನ್), ಐಎಡಿ (ಡುಲ್ಲೆಸ್), ಇಡಬ್ಲ್ಯೂಆರ್ (ನೆವಾರ್ಕ್), ಕೆಟಿಎಂ (ಕಟ್‌ಮಂಡು), ಬಿಕೆಕೆ (ಬಾಂಕಾಂಗ್) ಅವಧಿಯು ವ್ಯತ್ಯಯವಾಗಲಿದೆ. ಈ ಬಗ್ಗೆ www.airindia.in ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿ ಲಭ್ಯವಾಗಲಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications