For Quick Alerts
ALLOW NOTIFICATIONS  
For Daily Alerts

2022ರಲ್ಲಿ ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?: ಇಲ್ಲಿದೆ ವಿವರ

|

ಚಿನ್ನ ವಿಶ್ವದಲ್ಲೇ ಅತೀ ಅಮೂಲ್ಯವಾದ ಹಾಗೂ ಅತೀ ವಿರಳವಾದ ಲೋಹವಾಗಿದೆ. ಭಾರತದಲ್ಲಿ ಮುಖ್ಯವಾಗಿ ಚಿನ್ನಕ್ಕೆ ಸಾಂಪ್ರದಾಯಿಕ, ಧಾರ್ಮಿಕ ಮೌಲ್ಯವಿದೆ. ಚಿನ್ನವು ಆಕರ್ಷಣೆಯ ಸೊತ್ತು ಆಗಿರುವುದು ಮಾತ್ರವಲ್ಲದೇ ಭಾರತದಲ್ಲಿ ಚಿನ್ನವು ಪವಿತ್ರವಾದ ಲೋಹವಾಗಿದೆ. ಹೂಡಿಕೆಗೂ ಕೂಡಾ ಚಿನ್ನವು ಅತೀ ಅಮೂಲ್ಯವಾದ ಲೋಹವಾಗಿದೆ.

ಭಾರತದಲ್ಲಿ ಜನರು ತಮ್ಮ ದೈನಂದಿಕ ಬಳಕೆಗಾಗಿ ಚಿನ್ನಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಾರೆ. ಹೆಚ್ಚಿನ ಭಾರತೀಯರು ಪ್ರತಿ ದಿನ ಚಿನ್ನದ ಆಭರಣಗಳನ್ನು ಧರಿಸಿರುತ್ತಾರೆ. ಯಾವುದೇ ಸಮಾರಂಭ, ಶುಭದಿನ ಇದ್ದರೂ ಕೂಡಾ ಜನರು ಚಿನ್ನವನ್ನು ಧರಿಸುತ್ತಾರೆ. ಇನ್ನು ಭಾರತದಲ್ಲಿ ಹಲವಾರು ಮಂದಿ ಶುಭದಿನವನ್ನು ನೋಡಿಕೊಂಡು ಚಿನ್ನವನ್ನು ಖರೀದಿ ಮಾಡುತ್ತಾರೆ. ಮುಖ್ಯವಾಗಿ ಹಬ್ಬಹರಿದಿನಗಳಲ್ಲಿ ಭಾರತೀಯರು ಚಿನ್ನವನ್ನು ಖರೀದಿ ಮಾಡುತ್ತಾರೆ.

ಚಿನ್ನದ ಬೆಲೆ ಕೊಂಚ ಏರಿಕೆ: ಜನವರಿ 04ರ ದರ ತಿಳಿದುಕೊಳ್ಳಿಚಿನ್ನದ ಬೆಲೆ ಕೊಂಚ ಏರಿಕೆ: ಜನವರಿ 04ರ ದರ ತಿಳಿದುಕೊಳ್ಳಿ

ಚಿನ್ನವನ್ನು ಖರೀದಿ ಮಾಡುವುದು ಎಲ್ಲಾ ಭಾರತೀಯರಿಗೆ ಘನತೆಯ ವಿಚಾರವಾಗಿದ್ದು, ಈ ಹಿನ್ನೆಲೆಯಿಂದಾಗಿ ಹೆಚ್ಚಾಗಿ ಮಂಗಳಕರ ದಿನದಲ್ಲಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಹೆಚ್ಚಾಗಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಖರೀದಿ ಅಧಿಕವಾಗುತ್ತದೆ. ಹಾಗೆಯೇ ಮದುವೆ ಸೀಸನ್‌ನಲ್ಲಿಯೂ ಚಿನ್ನದ ಖರೀದಿ ಅಧಿಕವಾಗುತ್ತದೆ. ಮಕರ ಸಂಕ್ರಾತಿ, ಅಕ್ಷಯ ತದಿಗೆ ಮೊದಲಾದ ದಿನಗಳಲ್ಲಿ ಚಿನ್ನದ ಖರೀದಿ ಅಧಿಕವಾಗುತ್ತದೆ. ಹಾಗಾದರೆ ಈ ಹೊಸ ವರ್ಷ 2022ರಲ್ಲಿ ಚಿನ್ನವನ್ನು ಖರೀದಿ ಮಾಡಲು ಯಾವುದು ಉತ್ತಮ ದಿನ ಎಂದು ತಿಳಿಯೋಣ, ಇಲ್ಲಿದೆ ಸಂಪೂರ್ಣ ವಿವರ ಮುಂದೆ ಓದಿ...

 2022ರಲ್ಲಿ ಚಿನ್ನವನ್ನು ಖರೀದಿಸಲು ಈ ದಿನಗಳು ಶುಭ

2022ರಲ್ಲಿ ಚಿನ್ನವನ್ನು ಖರೀದಿಸಲು ಈ ದಿನಗಳು ಶುಭ

ಪುಷ್ಯ ನಕ್ಷತ್ರ: ಜನವರಿ 18, ಫೆಬ್ರವರಿ 14 & 15, ಮಾರ್ಚ್ 14, ಎಪ್ರಿಲ್‌ 10, ಮೇ 7 & 8, ಜೂನ್‌ 4, ಜುಲೈ 1, 8 & 29, ಆಗಸ್ಟ್‌ 24 & 25, ಸೆಪ್ಟೆಂಬರ್‌ 21, ಅಕ್ಟೋಬರ್‌ 18, ನವೆಂಬರ್‌ 14 & 15, ಡಿಸೆಂಬರ್‌ 12
ಮಕರ ಸಂಕ್ರಾತಿ: ಜನವರಿ 14
ಯುಗಾದಿ ಹಾಗೂ ಗುಡಿ ಪಾಡ್ವಾ: ಎಪ್ರಿಲ್‌ 2
ಅಕ್ಷಯ ತೃತೀಯ: ಮೇ 2
ನವರಾತ್ರಿ: ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 4
ದಸರಾ: ಅಕ್ಟೋಬರ್‌ 5
ಧನತ್ರಯೋದಶಿ: ಅಕ್ಟೋಬರ್‌ 23
ಬಲಿಪ್ರತಿಪದ/ಬಲಿಪಾಡ್ಯಮಿ: ಅಕ್ಟೋಬರ್‌ 26

 ಪುಷ್ಯ ನಕ್ಷತ್ರದ ದಿನ ಚಿನ್ನ ಖರೀದಿ ಮಾಡಿ

ಪುಷ್ಯ ನಕ್ಷತ್ರದ ದಿನ ಚಿನ್ನ ಖರೀದಿ ಮಾಡಿ

ಪುಷ್ಯ ನಕ್ಷತ್ರದ ದಿನವನ್ನು ಪುಷ್ಯಮಿ, ಪುಷ್ಯ, ಪೂಸಮ್‌ ಹಾಗೂ ಪೂಯಮ್‌ ಎಂದು ಕೂಡಾ ಭಾರತದಲ್ಲಿ ಕರೆಯಲಾಗುತ್ತದೆ. ಇದು ಬಹಳ ಮಂಗಳಕರವಾದ ನಕ್ಷತ್ರವಾಗಿದೆ. ಈ ದಿನದಂದು ಯಾವುದೇ ಹಣಕಾಸು ವ್ಯವಹಾರ ನಡೆಸುವುದು, ಚಿನ್ನ, ಭೂಮಿ ಖರೀದಿ ಮಾಡುವುದು ಮಂಗಳಕರ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಮುಹೂರ್ತ ಎಂದು ಕರೆಯಲಾಗುತ್ತದೆ. ಹಿಂದೂಗಳ ಪ್ರಕಾರ ಈ ದಿನ ಮಂಗಳಕರವಾಗಿದೆ. ಜನವರಿ 18, ಫೆಬ್ರವರಿ 14 & 15, ಮಾರ್ಚ್ 14, ಎಪ್ರಿಲ್‌ 10, ಮೇ 7 & 8, ಜೂನ್‌ 4, ಜುಲೈ 1, 8 & 29, ಆಗಸ್ಟ್‌ 24 & 25, ಸೆಪ್ಟೆಂಬರ್‌ 21, ಅಕ್ಟೋಬರ್‌ 18, ನವೆಂಬರ್‌ 14 & 15, ಡಿಸೆಂಬರ್‌ 12 ದಿನಗಳು ಪುಷ್ಯ ನಕ್ಷತ್ರದ ದಿನವಾಗಿದೆ.

 ಮಕರ ಸಂಕ್ರಾಂತಿ: ಜನವರಿ 14

ಮಕರ ಸಂಕ್ರಾಂತಿ: ಜನವರಿ 14

ಮಕರ ಸಂಕ್ರಾಂತಿಯು ಚಿನ್ನವನ್ನು ಖರೀದಿ ಮಾಡಲು ಉತ್ತಮ ದಿನ, ಮಂಗಳಕರ ದಿನವಾಗಿದೆ. ಈ ದಿನವನ್ನು ಬಿಹು, ಪೊಂಗಲ್‌ ಎಂದು ಕೂಡಾ ಭಾರತದ ಬೇರೆ ಬೇರೆ ರಾಜ್ಯದಲ್ಲಿ ಕರೆಯಲಾಗುತ್ತದೆ. ಈ ಹಬ್ಬವನ್ನು ರಾಷ್ಟ್ರದಾದ್ಯಂತ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಜನವರಿ 14ರಂದೇ ಮಕರ ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ. ಇನ್ನು ಪಂಜಾಬ್‌ನಲ್ಲಿ ಜನವರಿ 13ರಂದು ಜನರು ಲೋಹ್ರಿ ಎಂದು ಆಚರಣೆ ಮಾಡುತ್ತಾರೆ. ಈ ದಿನ ಚಿನ್ನ ಖರೀದಿ ಉತ್ತಮ ಎಂದು ನಂಬಲಾಗಿದೆ. ಮಕರ ಸಂಕ್ರಾಂತಿಯಂದು ಚಿನ್ನವನ್ನು ಖರೀದಿ ಮಾಡಿದರೆ ಸಂಪತ್ತಿನ ಸಮೃದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ಜ್ಯುವೆಲ್ಲರಿಗಳು ಕೂಡಾ ಡಿಸ್ಕೌಂಟ್‌ಗಳನ್ನು ಆಫರ್‌ಗಳನ್ನು ನೀಡುತ್ತದೆ.

 ಯುಗಾದಿ ಹಾಗೂ ಗುಡಿ ಪಾಡ್ವಾ: ಎಪ್ರಿಲ್‌ 2

ಯುಗಾದಿ ಹಾಗೂ ಗುಡಿ ಪಾಡ್ವಾ: ಎಪ್ರಿಲ್‌ 2

ಹಿಂದೂ ಧರ್ಮದ ಪ್ರಕಾರ ಯುಗಾದಿಯು ಹೊಸ ವರ್ಷದ ಆರಂಭವಾಗಿದೆ. ಈ ದಿನವನ್ನು ಗುಡಿ ಪಾಡ್ವಾ, ಓನಮ್‌, ವೈಶಾಖಿ ಎಂದು ಕೂಡಾ ಕರೆಯಲಾಗುತ್ತದೆ. ಬೇರೆ ಬೇರೆ ರಾಜ್ಯದಲ್ಲಿ ಇದರ ಆಚರಣೆ ಬೇರೆ ಬೇರೆ ರೀತಿಯಾಗಿದೆ. ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಯುಗಾದಿಯನ್ನು ಆಚರಣೆ ಮಾಡಿದರೆ, ಈ ದಿನದಂದು ಕೇರಳದಲ್ಲಿ ಓನಮ್‌ ಅನ್ನು ಆಚರಣೆ ಮಾಡಲಾಗುತ್ತದೆ. ಇನ್ನು ಮಹಾರಾಷ್ಟ್ರದವರು ಗುಡಿ ಪಾಡ್ವಾವನ್ನು ಆಚರಣೆ ಮಾಡುತ್ತಾರೆ. ಪಂಜಾಬ್‌ನಲ್ಲಿ ವೈಶಾಖಿ ಎಂದು ಆಚರಣೆ ಮಾಡುತ್ತಾರೆ. ಈ ಹಬ್ಬದ ದಿನದಂದು ದೇಶದಲ್ಲಿ ಚಿನ್ನದ ಖರೀದಿಯು ಅಧಿಕವಾಗಿರುತ್ತದೆ. ಈ ದಿನದಂದು ಚಿನ್ನವನ್ನು ಖರೀದಿ ಮಾಡುವುದು ಮಂಗಳಕರ ಎಂಬ ಭಾವನೆ ಇದೆ. ಹಾಗೆಯೇ ಜ್ಯುವೆಲ್ಲರಿಗಳು ಕೂಡಾ ಆಫರ್‌ ನೀಡುತ್ತಾರೆ.

 ಅಕ್ಷಯ ತೃತೀಯ: ಮೇ 2

ಅಕ್ಷಯ ತೃತೀಯ: ಮೇ 2

2022ರಲ್ಲಿ ಚಿನ್ನ ಖರೀದಿಗೆ ಹಿಂದೂ ಧರ್ಮದ ಪ್ರಕಾರ ಅಕ್ಷಯ ತೃತೀಯ ಹಬ್ಬವು ಅತೀ ಮಂಗಳಕರವಾದ ದಿನವಾಗಿದೆ. ವಿಶಾಖ ತಿಂಗಳಿನ ಮೂರನೇ ದಿನ ಇದಾಗಿದೆ. ಈ ದಿನದಂದು ಜನರು ಸಂಪತ್ತಿನ ದೇವರಾದ ಕುಭೇರನ್ನು ಪೂಜಿಸಿ, ಲಕ್ಷ್ಮೀ ದೇವತೆಯನ್ನು ಪೂಜಿಸಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಹಾಗೆಯೇ ಈ ದಿನ ಖರೀದಿ ಮಾಡಿದ ಚಿನ್ನಕ್ಕೆ ಪೂಜೆಯನ್ನು ಕೂಡಾ ಮಾಡುತ್ತಾರೆ. ಈ ದಿನ ಚಿನ್ನವನ್ನು ಖರೀದಿ ಮಾಡಿದರೆ ಸಂಪತ್ತು ಇನ್ನಷ್ಟು ವೃದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಈ ದಿನ ಚಿನ್ನವನ್ನು ಖರೀದಿ ಮಾಡುವುದು ಅದೃಷ್ಟ ಎಂದು ಕೂಡಾ ನಂಬಲಾಗಿದೆ. ಇನ್ನು ಈ ದಿನ ಹೆಚ್ಚಿನ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.

 ನವರಾತ್ರಿ: ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 4

ನವರಾತ್ರಿ: ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 4

ನವರಾತ್ರಿ ಆಚರಣೆಯನ್ನು ದೇಶದಲ್ಲಿ ಒಂಬತ್ತು ದಿನಗಳ ಕಾಲ ಮಾಡಲಾಗುತ್ತದೆ. ಈ ಒಂಬತ್ತು ದಿನಗಳು ಕೂಡಾ ಯಾವುದೇ ಸಂಪತ್ತು ಖರೀದಿಗೆ ಉತ್ತಮ ದಿನ ಎಂದು ನಂಬಲಾಗಿದೆ. ಮಹಿಷಾಸುರನನ್ನು ದುರ್ಗಾ ಸಂಹಾರ ಮಾಡಿದ ದಿನ ಎಂಬ ನಂಬಿಕೆಯಲ್ಲಿ ಈ ದಿನವನ್ನು ಆಚರಣೆ ಮಾಡಲಾಗು‌ತ್ತದೆ. ಪಶ್ಚಿಮ ಬಂಗಾಳ ಹಾಗೂ ಗುಜರಾತ್‌ನಲ್ಲಿ ಈ ಹಬ್ಬವನ್ನು ಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ. ಇನ್ನು ಕರ್ನಾಟಕದಲ್ಲಿ ಮಂಗಳೂರು ಹಾಗೂ ಮೈಸೂರಿನಲ್ಲಿ ಹೆಚ್ಚು ಸಂಭ್ರಮದಿಂದ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಆದರೆ ದೇಶದಲ್ಲಿ ಒಂಬತ್ತು ದಿನಗಳ ಕಾಲವು ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಜನರು ಉಪವಾಸ, ವ್ರತವನ್ನು ಮಾಡುತ್ತಾರೆ. ಈ ನವರಾತ್ರಿಯಂದು ಚಿನ್ನವನ್ನು ಖರೀದಿ ಮಾಡುವುದು ಪವಿತ್ರ ಎಂದು ನಂಬಲಾಗಿದೆ. ಈ ಒಂಬತ್ತು ದಿನಗಳಲ್ಲಿ ದೇಶದಲ್ಲಿ ಚಿನ್ನ, ವಾಹನ ಖರೀದಿ ಹೆಚ್ಚಳವಾಗು‌ತ್ತದೆ.

 ದಸರಾ: ಅಕ್ಟೋಬರ್‌ 5

ದಸರಾ: ಅಕ್ಟೋಬರ್‌ 5

ನವರಾತ್ರಿಯ ದಿನದಂದು ಆಚರಣೆ ಮಾಡಲಾಗುವ ಪ್ರಮುಖ ಹಬ್ಬ ದಸರಾವಾಗಿದೆ. ದುಷ್ಟ ಶಕ್ತಿಗಳ ವಿರುದ್ಧ ಗೆಲುವು ಸಾಧಿಸಿದ ದಿನವಾಗಿ ಇದನ್ನು ಆಚರಣೆ ಮಾಡಲಾಗುತ್ತದೆ. ದುರ್ಗಾ ದೇವಿಯ ಮಹಿಷಾಸುರನನ್ನು ವಧೆ ಮಾಡಿದ ದಿನ ಇದಾಗಿದೆ. ಈ ದಿನವನ್ನು ಆಚರಣೆ ಮಾಡುವ ನಿಟ್ಟಿನಲ್ಲಿ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ದುಷ್ಟ ಸಂಹಾರವಾದ ಹಿನ್ನೆಲೆ ಈ ದಿನವನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇನ್ನು ಹಲವಾರು ಮಂದಿ ಈ ಸಂದರ್ಭದಲ್ಲಿ ಹೂಡಿಕೆಯನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ಬೆಲೆಯು ಏರಿಕೆ ಆಗುವ ಸಾಧ್ಯತೆ ಇದೆ. ಇನ್ನು ಕೆಲವು ಆಭರಣ ಮಳಿಗೆಗಳು ಕೆಲವು ಆಫರ್‌ಗಳನ್ನು ಈ ಸಂದರ್ಭದಲ್ಲಿ ನೀಡುತ್ತದೆ.

 ಧನತ್ರಯೋದಶಿ: ಅಕ್ಟೋಬರ್‌ 23

ಧನತ್ರಯೋದಶಿ: ಅಕ್ಟೋಬರ್‌ 23

ದೀಪಾವಳಿಗೂ ಎರಡು ದಿನಗಳ ಮುಂಚೆ ಈ ಧನತ್ರಯೋದಶಿ ಆರಂಭವಾಗುತ್ತದೆ. ಈ ದೀಪಾವಳಿ ಹಬ್ಬದಂದು ಲಕ್ಷ್ಮೀ ದೇವಿಯ ಆರಾಧನೆ ಮಾಡಲಾಗುತ್ತದೆ. ಈ ಧನತ್ರಯೋದಶಿ ಸಂದರ್ಭದಲ್ಲಿ ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ ಹಾಗೆಯೇ ಚಿನ್ನ, ಸಂಪತ್ತಿಗೆ ಪೂಜೆಯನ್ನು ಕೂಡಾ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷ್ಮಿ ದೇವಿ (ಹಣದ ದೇವತೆ) ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮದವರು ಯಾವುದಾದರೂ ಒಂದು ಹೊಸ ವಸ್ತುವನ್ನು ಖರೀದಿ ಮಾಡುತ್ತಾರೆ. ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿರುತ್ತದೆ.

 ಬಲಿಪ್ರತಿಪದ/ಬಲಿಪಾಡ್ಯಮಿ: ಅಕ್ಟೋಬರ್‌ 26

ಬಲಿಪ್ರತಿಪದ/ಬಲಿಪಾಡ್ಯಮಿ: ಅಕ್ಟೋಬರ್‌ 26

ಬಲಿಪ್ರತಿಪದ ಅಥವಾ ಬಲಿಪಾಡ್ಯಮಿ ದೀಪಾವಳಿಯ ಕೊನೆಯ ದಿನದಂದು ಆಚರಣೆ ಮಾಡಲಾಗುತ್ತದೆ. ದೀಪಾವಳಿ ನಾಲ್ಕನೇ ದಿನದಂದು ಇದನ್ನು ಆಚರಣೆ ಮಾಡಲಾಗುತ್ತದೆ. ಈ ದಿನವು ಚಿನ್ನವನ್ನು ಖರೀದಿ ಮಾಡಲು ಉತ್ತಮ ದಿನವಾಗಿದೆ. ಈ ದಿನದಂದು ಚಿನ್ನವನ್ನು ಖರೀದಿ ಮಾಡಿದರೆ ಮನೆಯಲ್ಲಿ ಸಮೃದ್ಧಿ ನೆಲೆಸಲಿದೆ ಎಂಬ ನಂಬಿಕೆ ಇದೆ. ಈ ಹಬ್ಬದ ಸಂದರ್ಭದಲ್ಲಿ ಆಫರ್‌ಗಳು ಇರುತ್ತದೆ.

English summary

Auspicious days and time to buy gold in 2022 in Kannada; Here is the List

Shubh Muhurat For Gold Purchase in 2022 : Here is the Complete list of Most auspicious days and time to buy gold in 2022 in Kannada. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X