For Quick Alerts
ALLOW NOTIFICATIONS  
For Daily Alerts

Auto Expo 20232ರ ಆಟೋ ಎಕ್ಸ್‌ಪೋ ದಿನಾಂಕ, ಸ್ಥಳ, ಟಿಕೆಟ್ ಮೊತ್ತ, ಇತರೆ ಮಾಹಿತಿ

|

ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಆಟೋ ಎಕ್ಸ್‌ಪೋ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಎರಡು ವರ್ಷಗಳಿಗೊಮ್ಮೆ ಆಯೋಜನೆ ಮಾಡಲಾಗುತ್ತದೆ. ಈ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶ್ವದ ಹಲವಾರು ಕಂಪನಿಗಳು ಉತ್ಸುಕರಾಗಿದ್ದಾರೆ.

 

ಈ ಹಿಂದೆ 2020ರಲ್ಲಿ ಆಟೋ ಎಕ್ಸ್‌ಪೋ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಮೇಲೆ ತಿಳಿಸಿದಂತೆ ಇದು ಎರಡು ವರ್ಷಗಳಿಗೊಮ್ಮೆ ಆಯೋಜನೆ ಮಾಡುವ ಕಾರ್ಯಕ್ರಮವಾಗಿದೆ. ಆದರೆ ಕಳೆದ ವರ್ಷ ಅಂದರೆ 2022ರಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವಿದ್ದ ಕಾರಣದಿಂದಾಗಿ ಕಾರ್ಯಕ್ರಮವನ್ನು ವಿಳಂಬ ಮಾಡಲಾಯಿತು.

Vehicle Scrappage Policy : ಹಳೆಯ ವಾಹನ ಗುಜರಿ ನೀತಿ; ಯಾರಿಗೆ ಲಾಭ, ಯಾರಿಗೆ ನಷ್ಟ?Vehicle Scrappage Policy : ಹಳೆಯ ವಾಹನ ಗುಜರಿ ನೀತಿ; ಯಾರಿಗೆ ಲಾಭ, ಯಾರಿಗೆ ನಷ್ಟ?

ಆದರೆ 2023ರ ಜನವರಿ ತಿಂಗಳಿನಲ್ಲೇ ಆಟೋ ಕಂಪನಿಗಳ ಬಹು ನಿರೀಕ್ಷಿತ ಆಟೋ ಎಕ್ಸ್‌ಪೋ 2023 ಆರಂಭವಾಗಲಿದೆ. 16ನೇ ಈ ಆಟೋ ಎಕ್ಸ್‌ಪೋ ಜನವರಿ 12ರಿಂದ ಜನವರಿ 18ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಒದಿ....

 ಆಟೋ ಎಕ್ಸ್‌ಪೋ 2023 ಕಾರ್ಯಕ್ರಮದ ಮಾಹಿತಿ

ಆಟೋ ಎಕ್ಸ್‌ಪೋ 2023 ಕಾರ್ಯಕ್ರಮದ ಮಾಹಿತಿ

ಈ ವರ್ಷದಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಆಟೋ ಎಕ್ಸ್‌ಪೋ 2023 ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾಜರಾಗಲು ಜನರು ಮೆಟ್ರೋವನ್ನು ಬಳಸಬಹುದು. ಮೆಟ್ರೋ ಮೂಲಕ ಬಂದರೆ ಈ ಸ್ಥಳಕ್ಕೆ ಅತೀ ಸುಲಭವಾಗಿ ತಲುಪಲು ಸಾಧ್ಯವಾಗಲಿದೆ.

 ದಿನಾಂಕ, ಸಮಯ, ಟಿಕೆಟ್ ವೆಚ್ಚ

ದಿನಾಂಕ, ಸಮಯ, ಟಿಕೆಟ್ ವೆಚ್ಚ

ಆಟೋ ಎಕ್ಸ್‌ಪೋ 2023 ಅನ್ನು ಜನವರಿ 12ರಂದು ಉದ್ಘಾಟನೆ ಮಾಡಲಾಗುತ್ತದೆ. ಮೊದಲ ದಿನ ಮಾಧ್ಯಮಗಳಿಗೆ ಹಾಗೂ ವಿಶೇಷ ಅತಿಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿರುತ್ತದೆ. 13ರಂದು ವ್ಯಾಪಾರಸ್ಥರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವಿದೆ. ಅದಾದ ಬಳಿಕ ಜನವರಿ 14ರಿಂದ ಜನವರಿ 18ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಆದರೆ ಅದಕ್ಕಾಗಿ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ. ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡಬಹುದು. ಪ್ರತಿ ಟಿಕೆಟ್‌ಗೆ 475 ರೂಪಾಯಿ ಇದೆ. ವಾರಾಂತ್ಯದಲ್ಲಿ 350 ರೂಪಾಯಿ ಇರಲಿದೆ. ಬೆಳ್ಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೋಟಾರು ಪ್ರದರ್ಶನವು ತೆರೆದಿರುತ್ತದೆ.

 ಯಾವೆಲ್ಲ ಸಂಸ್ಥೆಗಳು ಭಾಗಿಯಾಗುವ ನಿರೀಕ್ಷೆ?
 

ಯಾವೆಲ್ಲ ಸಂಸ್ಥೆಗಳು ಭಾಗಿಯಾಗುವ ನಿರೀಕ್ಷೆ?

ಈ ಹಿಂದಿನ ಮೋಟರು ಶೋಗಿಂತ ಈ ವರ್ಷದಲ್ಲಿ ಕಡಿಮೆ ಸಂಸ್ಥೆಗಳು ಭಾಗಿಯಾಗಬಹುದು. ಮುಖ್ಯವಾಗಿ ಮೋಟರು ಶೋ ಅನ್ನು 2022ರಿಂದ 2023ಕ್ಕೆ ಮುಂದೂಡಿಕೆ ಮಾಡಿದ ಕಾರಣದಿಂದಾಗಿ ಸಂಸ್ಥೆಗಳ ಹಾಜರಾತಿ ಕಡಿಮೆಯಾಗುವ ಸಾಧ್ಯತೆಯಿದೆ. ಕಾರುಗಳ ಸಂಸ್ಥೆಯಾದ ಬಿವೈಡಿ, ಹುಂಡೈ, ಕಿಯಾ, ಲೆಕ್ಸಾಸ್, ಮಾರುತಿ ಸುಝುಕಿ, ಎಂಜಿ, ಟಾಟಾ, ಟೊಯೊಟಾ, ಬೈಕ್-ಸ್ಕೂಟಿಗಳ ಸಂಸ್ಥೆಯಾದ ಟೋರ್ಕ್ ಮೋಟರ್ಸ್, ಬೆನ್ನೆಲ್ಲಿ, ಕೀವೇ, ಹಿರೋ ಎಲೆಕ್ಟ್ರಿಕ್, ಮ್ಯಾಟರ್ ಮೋಟರ್ ವರ್ಕ್ಸ್, ಓಕಿನವ ಆಟೋ ಟೆಕ್, ಹಾಪ್ ಎಲೆಕ್ಟ್ರಿಕ್ ಭಾಗಿಯಾಗುವ ಸಾಧ್ಯತೆಯಿದೆ.

 ಯಾವೆಲ್ಲ ಸಂಸ್ಥೆಗಳು ಭಾಗಿಯಾಗದಿರಬಹುದು?

ಯಾವೆಲ್ಲ ಸಂಸ್ಥೆಗಳು ಭಾಗಿಯಾಗದಿರಬಹುದು?

ಆಟೋ ಎಕ್ಸ್‌ಪೋ 2023ಕ್ಕೆ ಮಹೀಂದ್ರಾ, ವೋಲ್ಕ್‌ವ್ಯಾಗನ್, ಸ್ಕೋಡಾ, ಹೋಂಡಾ, ಜೀಪ್, ನಿಸ್ಸಾನ್, ರಿನಾಲ್ಟ್, ಆಡಿ, ಬಿಎಂಡಬ್ಲ್ಯೂ, ಮರ್ಸೆಡಿಯಸ್ ಬೆನ್ಝ್, ಜಾಗ್ವಾರ್ ಲ್ಯಾಂಡ್ ರೋವರ್, ವೋಲ್ವೋ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧಾರ ಮಾಡಿದೆ. ಇನ್ನು ದ್ವಿಚಕ್ರ ವಾಹನಗಳ ಸಂಸ್ಥೆಯಾದ ಹಿರೋ ಮೋಟೋಕಾರ್ಪ್, ಹೊಂಡಾ ಮೋಟರ್ ಸೈಕಲ್, ಸ್ಕೂಟರ್ ಇಂಡಿಯಾ, ಟಿವಿಎಸ್ ಮೋಟರ್ ಕಂಪನಿ, ಬಜಾಜ್ ಆಟೋ ಭಾಗಿಯಾಗದಿರಲು ತೀರ್ಮಾನಿಸಿದೆ.

English summary

Auto Expo 2023: Dates, Timings, Venue, Ticket Costs, Online Booking and Other Details in Kannada

Auto Expo 2023: The Auto Expo 2023 will take place at the India Expo Mart located in Greater Noida. Dates, Timings, Venue, Ticket Costs, Online Booking and Other Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X