For Quick Alerts
ALLOW NOTIFICATIONS  
For Daily Alerts

ಎಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ; ಠೇವಣಿ ದರ ಭಾರಿ ಏರಿಕೆ

|

ದೇಶದ ಬಹುತೇಕ ಬ್ಯಾಂಕುಗಳು ಈಗ ಗ್ರಾಹಕರಿಂದ ಬಂಡವಾಳ ಆಕರ್ಷಿಸುವ ಕಸರತ್ತಿನಲ್ಲಿವೆ. ಹಲವು ಬ್ಯಾಂಕುಗಳು ವಿವಿಧ ಠೇವಣಿಗಳಿಗೆ ಆಕರ್ಷಕ ಬಡ್ಡಿದರಗಳ ಆಫರ್ ಮಾಡಿವೆ. ಬ್ಯಾಂಕುಗಳ ಮಧ್ಯೆ ಹೆಚ್ಚು ಬಡ್ಡಿ ದರಕ್ಕೆ ಪೈಪೋಟಿ ನಡೆದಿದೆ. ಇದೀಗ ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲೊಂದಾದ ಎಕ್ಸಿಸ್ ಬ್ಯಾಂಕ್ ಕೂಡ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯನ್ನು ಭರ್ಜರಿಯಾಗಿ ಏರಿಸಿದೆ. ಎರಡು ಕೋಟಿ ರೂಪಾಯಿಯೊಳಗಿನ ಠೇವಣಿಗಳ ಮೇಲೆ ಬಡ್ಡಿಯನ್ನು 115 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

 

10 ವರ್ಷಗಳವರೆಗಿನ ಠೇವಣಿಗಳಿಗೆ ಬಡ್ಡಿ ದರ ಹೆಚ್ಚಿಸಲಾಗಿದೆ. ನಿನ್ನೆ, ನ. 5ರಿಂದಲೇ ಹೊಸ ಬಡ್ಡಿ ದರ ಚಾಲನೆಗೆ ಬಂದಿದೆ. ಶೇ. 7.25ರವರೆಗೆ ಬಡ್ಡಿ ದರ ಇದೆ. ಮೂರು ವರ್ಷಗಳಿಂದ 10 ವರ್ಷಗಳವರೆಗಿನ ಎಫ್‌ಡಿಗಳಿಗೆ ಅತ್ಯಧಿಕ ಬಡ್ಡಿ ಇದೆ.

 

ಬ್ಯಾಂಕ್ ಆಫ್ ಬರೋಡಾ ಹೊಸ ಎಫ್‌ಡಿ ಯೋಜನೆಗೆ ಶೇ.7.50ರಷ್ಟು ಬಡ್ಡಿದರ!ಬ್ಯಾಂಕ್ ಆಫ್ ಬರೋಡಾ ಹೊಸ ಎಫ್‌ಡಿ ಯೋಜನೆಗೆ ಶೇ.7.50ರಷ್ಟು ಬಡ್ಡಿದರ!

ಎಕ್ಸಿಸ್ ಬ್ಯಾಂಕ್‌ನ ಸಾಮಾನ್ಯ ಗ್ರಾಹಕರ ಎಫ್‌ಡಿಗಳಿಗೆ ಕೊಡಲಾಗುವ ಬಡ್ಡಿ ದರ ಶೇ. 3.50ರಿಂದ ಶೇ. 6.50ರವರೆಗೂ ಇದೆ. ಹಿರಿಯ ನಾಗರಿಕರಿಗೆ ನೀಡಲಾಗುವ ಬಡ್ಡಿ ದರ ಶೇ. 7.25ರವರೆಗೂ ಇದೆ. ಇವೆಲ್ಲವೂ ವಾರ್ಷಿಕ ಬಡ್ಡಿ ದರ ಆಗಿವೆ.

ಎಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ; ಠೇವಣಿ ದರ ಭಾರಿ ಏರಿಕೆ

ಏಳು ದಿನಗಳಿಂದ 45 ದಿನಗಳಲ್ಲಿ ಮೆಚ್ಯೂರ್ ಆಗುವ ನಿಶ್ಚಿತ ಠೇವಣಿಗಳಿಗೆ ಸಿಗುವ ಬಡ್ಡಿ ದರವನ್ನು ಶೇ. 3.50ರಲ್ಲೇ ಇದೆ. ಆದರೆ, 46ದಿನಗಳಿಂದ 60 ದಿನಗಳವರೆಗಿನ ಠೇವಣಿಗಳಿಗೆ ಸಿಗುವ ಬಡ್ಡಿಯನ್ನು ಶೇ. 3.50ರಿಂದ ಶೇ. 4ಕ್ಕೆ ಏರಿಸಲಾಗಿದೆ.

61ದಿನಗಳಿಂದ ಮೂರು ತಿಂಗಳ ಅವಧಿಯ ಠೇವಣಿಗಳಿಗೆ ಬಡ್ಡಿ ದರವನ್ನು ಶೇ.. 4ರಿಂದ ಶೇ. 4.50ಕ್ಕೆ ಏರಿಸಲಾಗಿದೆ. ಅಂದರೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿ ಏರಿಕೆಯಾಗಿದೆ. ಇನ್ನು, ಮೂರು ತಿಂಗಳಿಂದ ಆರು ತಿಂಗಳವರೆಗಿನ ಠೇವಣಿಗಳಿಗೆ ಬಡ್ಡಿ ಶೇ. 4.25ರಿಂದ ಶೇ. 4.5ಕ್ಕೆ ಏರಿಕೆ ಮಾಡಲಾಗಿದೆ.

ಆರು ತಿಂಗಳಿಂದ ಒಂಬತ್ತು ತಿಂಗಳವರೆಗಿನ ಠೇವಣಿಗಳಿಗೆ ಬಡ್ಡಿ ದರ ಶೇ. 5ರಿಂದ ಶೇ. 5.50ಕ್ಕೆ ಏರಿಸಲಾಗಿದೆ. 9ರಿಂದ 12 ತಿಂಗಳವರೆಗಿನ ಠೇವಣಿಗಗಳಿಗೆ ಬಡ್ಡಿ ದರ ಶೇ. 5.75 ಎಂದು ನಿಗದಿ ಮಾಡಲಾಗದಿದೆ.

ಎಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ; ಠೇವಣಿ ದರ ಭಾರಿ ಏರಿಕೆ

ಇನ್ನು, 12 ತಿಂಗಳಿಂದ (ಒಂದು ವರ್ಷ) 15 ತಿಂಗಳವರೆಗಿನ ಎಫ್‌ಡಿಗಳಿಗೆ ಎಕ್ಸಿಸ್ ಬ್ಯಾಂಕ್ ನೀಡುವ ಬಡ್ಡಿ ದರ ಬರೋಬ್ಬರಿ 90 ಬೇಸಿಸ್ ಪಾಯಿಂಟ್‌ನಷ್ಟು ಏರಿಕೆಯಾಗಿದೆ. ಶೇ. 6.10ರಷ್ಟಿದ್ದ ಬಡ್ಡಿ ದರವನ್ನು ಶೇ 7ಕ್ಕೆ ಏರಿಸಲಾಗಿದೆ. 15 ತಿಂಗಳಿಂದ 18 ತಿಂಗಳವರೆಗಿನ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ 85 ಮೂಲಾಂಕಗಳಷ್ಟು ಜಾಸ್ತಿಯಾಗಿದ್ದು, 6.15ರಷ್ಟಿದ್ದ ಬಡ್ಡಿ ದರ ಈಗ ಶೇ. 7ಕ್ಕೆ ಹೋಗಿ ಮುಟ್ಟಿದೆ.

ಹಾಗೆಯೇ, 18 ತಿಂಗಳಿಂದ 24 ತಿಂಗಳವರೆಗೆಗಿನ ನಿಶ್ಚಿತ ಠೇವಣಿಗಳಿಗೆ ಇರುವ ಬಡ್ಡಿ ದರ ಶೇ. 6.15ರಿಂದ ಶೇ. 7.05ಕ್ಕೆ ಏರಿಕೆ ಮಾಡಲಾಗಿದೆ. 2ರಿಂದ 3 ವರ್ಷದವರೆಗಿನ ಠೇವಣಿಗಳಿಗೆ ನೀಡುವ ಬಡ್ಡಿ ದರ ಕೂಡ ಶೇ. 7.05 ಆಗಿದೆ.

ಇನ್ನು ಹಿರಿಯ ನಾಗರಿಕರಿಗೆ ಎಕ್ಸಿಸ್ ಬ್ಯಾಂಕ್ ಹೆಚ್ಚು ಫಲ ಕೊಡುತ್ತದೆ. ಹಿರಿಯ ನಾಗರಿಕರು ಆರು ತಿಂಗಳಿಂದ ಹತ್ತು ವರ್ಷಗಳವರೆಗಿನ ಅವಧಿಗಳಿಗೆ ಇರಿಸುವ ಠೇವಣಿಗಳಿಗೆ ಶೇ. 5.50ರಿಂದ ಶೇ. 7.5ರಷ್ಟು ಬಡ್ಡಿ ದರವನ್ನು ಆಫರ್ ಮಾಡುತ್ತಿದೆ.

English summary

Axis Bank Raises FD Rates By Upto 115 Basis Points, Know The Revised Interest Rates

Axis Bank has increased Fixed deposit interest rates by up to 115 basis points for its various deposits. It gives annual interest of upto 7.25%.
Story first published: Sunday, November 6, 2022, 15:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X