For Quick Alerts
ALLOW NOTIFICATIONS  
For Daily Alerts

ಮತ್ತೆ ಎಫ್‌ಡಿ ಬಡ್ಡಿದರ ಹೆಚ್ಚಿಸಿದ ಬಜಾಜ್ ಫೈನಾನ್ಸ್, ನೂತನ ದರಪಟ್ಟಿ ನೋಡಿ!

|

ನಾವು ಪ್ರಸ್ತುತ ಅಧಿಕ ರಿಟರ್ನ್ ಪಡೆಯಲು ಹೂಡಿಕೆ ಮಾಡಲು ಮುಂದಾಗಿದ್ದರೆ, ನಮಗೆ ಸುರಕ್ಷಿತ ಹಾಗೂ ಅಧಿಕ ರಿಟರ್ನ್ ನೀಡುವ ಆಯ್ಕೆಯನ್ನ ಬಜಾಜ್ ಫೈನಾನ್ಸ್ ನೀಡುತ್ತದೆ. ಏಕೆಂದರೆ ಬಜಾಜ್ ಫೈನಾನ್ಸ್ ಮತ್ತೆ ತನ್ನ ಫಿಕ್ಸಿಡ್ ಡೆಪಾಸಿಟ್ ಅಥವಾ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಹೌದು ಎಫ್‌ಡಿ ಬಡ್ಡಿದರವನ್ನು ಬಜಾಜ್ ಫೈನಾನ್ಸ್ ಈ ತಿಂಗಳಲ್ಲಿ ಎರಡನೇ ಬಾರಿ ಹೆಚ್ಚಳ ಮಾಡಿದೆ.

 

ಬಜಾಜ್ ಫೈನಾನ್ಸ್ ಈಗ ಎಫ್‌ಡಿ ಬಡ್ಡಿದರವನ್ನು ಹತ್ತು ಮೂಲಾಂಕ ಹೆಚ್ಚಿಸಿದೆ. ಅದರಿಂದಾಗಿ ನೀವು ಈಗ ವಾರ್ಷಿಕವಾಗಿ ಸುಮಾರು ಶೇಕಡ 7.95ರವರೆಗೆ ಬಡ್ಡಿದರವನ್ನು ಪಡೆಯಬಹುದು. ಹಾಗೆಯೇ ನೀವು ದೀರ್ಘಾವಧಿಯ ಹೂಡಿಕೆಯನ್ನು ಮಾಡಿದರೆ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಈ ನೂತನ ಬಡ್ಡಿದರವು ನವೆಂಬರ್ 22, 2022ರಿಂದ ಚಾಲ್ತಿಗೆ ಬರಲಿದೆ.

ಬಜಾಜ್ ಫೈನಾನ್ಸ್ ತನ್ನ ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸಿದ ಬಳಿಕ ಎಫ್‌ಡಿ ಮೇಲೆ ಅತ್ಯಧಿಕ ಬಡ್ಡಿದರ ನೀಡುವ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ಗಳ ಪೈಕಿ ಒಂದಾಗಿದೆ. ಇನ್ನು ಬಜಾಜ್ ಫೈನಾನ್ಸ್‌ನಲ್ಲಿ ನಾವು ಡಿಜಿಟಲ್ ಸಹಾಯದ ಮೂಲಕವೂ ಎಫ್‌ಡಿ ಹೂಡಿಕೆ ಆರಂಭ ಮಾಡಲು ಸಾಧ್ಯವಾಗುತ್ತದೆ. ಹಾಗಾದರೆ ಬಜಾಜ್ ಫೈನಾನ್ಸ್‌ನ ನೂತನ ಎಫ್‌ಡಿ ಬಡ್ಡಿದರ ಎಷ್ಟಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ....

 ಅಧಿಕ ರಿಟರ್ನ್ ಪಡೆಯಲು ಬೆಸ್ಟ್ ಎಫ್‌ಡಿ

ಅಧಿಕ ರಿಟರ್ನ್ ಪಡೆಯಲು ಬೆಸ್ಟ್ ಎಫ್‌ಡಿ

ಬೇರೆ ಬೇರೆ ಅವಧಿಯ ಎಫ್‌ಡಿ ಅವಕಾಶ ಬಜಾಜ್ ಫೈನಾನ್ಸ್‌ನಲ್ಲಿ ಇದೆ. ಸ್ಪರ್ಧಾತ್ಪಕ ಎಫ್‌ಡಿ ಬಡ್ಡಿದರವಿದೆ. ನೀವು ಅಧಿಕ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ನೀವು ವಾರ್ಷಿಕವಾಗಿ ಶೇಕಡ 7.95ರಷ್ಟು ಬಡ್ಡಿದರದ ಎಫ್‌ಡಿ ಲಾಕಿನ್ ಮಾಡಬಹುದು. ಬಡ್ಡಿದರ ಅಧಿಕವಾಗಿದ್ದಾಗ ನೀವು ಲಾಕಿನ್ ಮಾಡಿಕೊಂಡರೆ ಬಡ್ಡಿದರ ಕಡಿಮೆಯಾದರೂ ನಿಮ್ಮ ಎಫ್‌ಡಿ ಮೇಲೆ ಅದು ಪರಿಣಾಮ ಬೀರಲಾರದು. ಈ ಬಡ್ಡಿದರದ ಮೂಲಕ ನೀವು ಅಧಿಕ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆ. ನೂತನ ಬಡ್ಡಿದರದ ಪಟ್ಟಿ ಈ ಕೆಳಗಿದೆ.

 ನೂತನ ಬಡ್ಡಿದರ ಪಟ್ಟಿ ಹೀಗಿದೆ

ನೂತನ ಬಡ್ಡಿದರ ಪಟ್ಟಿ ಹೀಗಿದೆ

24 ತಿಂಗಳು: ಸಾಮಾನ್ಯ ಜನರಿಗೆ ಶೇಕಡ 7.25, ಹಿರಿಯ ನಾಗರಿಕರಿಗೆ ಶೇಕಡ 7.50 ಬಡ್ಡಿದರ
39 ತಿಂಗಳು: ಸಾಮಾನ್ಯ ಜನರಿಗೆ ಶೇಕಡ 7.60, ಹಿರಿಯ ನಾಗರಿಕರಿಗೆ ಶೇಕಡ 7.85 ಬಡ್ಡಿದರ
44 ತಿಂಗಳು: ಸಾಮಾನ್ಯ ಜನರಿಗೆ ಶೇಕಡ 7.70, ಹಿರಿಯ ನಾಗರಿಕರಿಗೆ ಶೇಕಡ 7.95 ಬಡ್ಡಿದರ
60 ತಿಂಗಳು: ಸಾಮಾನ್ಯ ಜನರಿಗೆ ಶೇಕಡ 7.50, ಹಿರಿಯ ನಾಗರಿಕರಿಗೆ ಶೇಕಡ 7.75 ಬಡ್ಡಿದರ

 ಬಜಾಜ್ ಫೈನಾನ್ಸ್‌ನಲ್ಲಿ ಬೇರೆ ಬೇರೆ ಅವಧಿಯ ಹೂಡಿಕೆ
 

ಬಜಾಜ್ ಫೈನಾನ್ಸ್‌ನಲ್ಲಿ ಬೇರೆ ಬೇರೆ ಅವಧಿಯ ಹೂಡಿಕೆ

ಬಜಾಜ್ ಫೈನಾನ್ಸ್ ಫಿಕ್ಸಿಡ್ ಡೆಪಾಸಿಟ್‌ನಲ್ಲಿ ನೀವು ವಿವಿಧ ಅವಧಿಯ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಅಧಿಕ ರಿಟರ್ನ್ ಅನ್ನು ಪಡೆಯಬೇಕಾದರೆ 12ರಿಂದ 60 ತಿಂಗಳ ಅವಧಿಯ ಎಫ್‌ಡಿಯನ್ನು ಆಯ್ಕೆ ಮಾಡುವುದು ಉತ್ತಮ. ನೀವು ಕಡಿಮೆ ಅವಧಿಯ ಹೂಡಿಕೆ ಮಾಡಬೇಕಾದರೆ ಈ ಹೂಡಿಕೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಹಾಗೆಯೇ ಹಲವಾರು ವರ್ಷಗಳ ಹೂಡಿಕೆಯನ್ನು ಮಾಡಬೇಕಾದರೆ ಬಜಾಜ್ ಫೈನಾನ್ಸ್ ಉತ್ತಮ ಆಯ್ಕೆಯಾಗಿದೆ. ಇನ್ನು ವಿಶಿಷ್ಠ ಅವಧಿ ಆಯ್ಕೆಯು ಕೂಡಾ ಇದೆ. ನೀವು ಈ ವಿಶಿಷ್ಠ ಅವಧಿಯನ್ನು ಆಯ್ಕೆ ಮಾಡಿಕೊಂಡು ಅಧಿಕ ಬಡ್ಡಿದರವನ್ನು ಪಡೆಯಬಹುದು.

 ಡಿಜಿಟಲ್ ಹೂಡಿಕೆಯ ಆಯ್ಕೆಯೂ ಇದೆ

ಡಿಜಿಟಲ್ ಹೂಡಿಕೆಯ ಆಯ್ಕೆಯೂ ಇದೆ

ಡಿಜಿಟಲೈಸೇಷನ್ ಬಳಿಕ ನೀವು ಮಾಡಿದ ಹೂಡಿಕೆಯನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಡಿಜಿಟಲ್ ಫೀಚರ್ ನಿಮಗೆ ಹಲವಾರು ಅವಕಾಶಗಳನ್ನು ನೀಡುತ್ತದೆ. ನೀವು ಆನ್‌ಲೈನ್ ಮೂಲಕ ಶೀಘ್ರವಾಗಿ ಹೂಡಿಕೆಯನ್ನು ಮಾಡಬಹುದು. ನೀವು ಬ್ರಾಂಚ್‌ಗೆ ಭೇಟಿ ನೀಡದೆಯೇ ಹೂಡಿಕೆಯನ್ನು ಮಾಡುವ ಅವಕಾಶವನ್ನು ಡಿಜಿಟಲ್ ವ್ಯವಸ್ಥೆಯು ನಿಮಗೆ ನೀಡುತ್ತದೆ. ಬಳಿಕ ನೀವು ನಿಮ್ಮ ಹೂಡಿಕೆಗೆ ಎಷ್ಟು ಬಡ್ಡಿ ಜಮೆಯಾಗಿದೆ ಎಂಬುವುದನ್ನು ಟ್ರ್ಯಾಕ್ ಮಾಡಬಹುದು. ಎಫ್‌ಡಿ ಕ್ಯಾಲ್ಕುಲೇಟರ್ ಬಳಕೆ ಮಾಡಿಕೊಂಡು ಲೆಕ್ಕಾಚಾರ ಮಾಡಬಹುದು.

 ಸಣ್ಣ ಮಾಸಿಕ ಡೆಪಾಸಿಟ್ ಆಯ್ಕೆ

ಸಣ್ಣ ಮಾಸಿಕ ಡೆಪಾಸಿಟ್ ಆಯ್ಕೆ

ನೀವು ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಎಫ್‌ಡಿ ಹೂಡಿಕೆಯನ್ನು ಕೂಡಾ ಆರಂಭಿಸಬಹುದು. ಮಾಸಿಕವಾಗಿ 5 ಸಾವಿರ ರೂಪಾಯಿ ಹೂಡಿಕೆ ಮಾಡಿ ನೀವು ಸಣ್ಣ ಮಾಸಿಕ ಹೂಡಿಕೆಯನ್ನು ಮಾಡಬಹುದು. ನೀವು ಒಂದೇ ಬಾರಿಗೆ ಭಾರೀ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ಬಜಾಜ್ ಫೈನಾನ್ಸ್‌ನ ಈ ಮಾಸಿಕ ಹೂಡಿಕೆಯನ್ನು ಆಯ್ಕೆ ಮಾಡಬಹುದು.

English summary

Bajaj Finance Revises Interest Rates On FD, Hikes by 10 bps, Check New Rates

Bajaj Finance Limited, the lending and investment arm of Bajaj Finserv, has revised the interest rates on their fixed deposit (FD) scheme with effect from November 22, 2022.
Story first published: Wednesday, November 23, 2022, 17:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X