For Quick Alerts
ALLOW NOTIFICATIONS  
For Daily Alerts

ಎನ್‌ಆರ್‌ಐಗಳಿಗೆ 2021ರ ಉತ್ತಮ ಹೂಡಿಕೆ ಆಯ್ಕೆಗಳು, ಇಲ್ಲಿದೆ ಮಾಹಿತಿ

|

ಕಳೆದ ಕೆಲವು ದಶಕಗಳಿಂದ ಭಾರತವು ಅಧಿಕ ಬೆಳವಣಿಯನ್ನು ಹೊಂದುತ್ತಿದೆ. ಇದಕ್ಕೆ ಸರಿಯಾಗಿ ರಾಜಕಾರಣಿಗಳು ಭಾರತದಲ್ಲಿ ಉತ್ತಮ ಹೂಡಿಕೆ ಆಯ್ಕೆಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡು‌ತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕ ಸಂಖ್ಯೆಯಲ್ಲಿ ಎನ್‌ಆರ್‌ಐಗಳು ಭಾರತದ ಮೇಲಿ ಹೂಡಿಕೆಯನ್ನು ಮಾಡುತ್ತಿದ್ದಾರೆ.

 

ಎನ್‌ಆರ್‌ಐಗಳು ಭಾರತದ ಮೇಲೆ ಹೂಡಿಕೆಯನ್ನು ಮಾಡುವಾಗ ತಮ್ಮ ಸ್ವಯಂ ಲಾಭವನ್ನು ಪಡೆಯುವ ಉದ್ದೇಶವನ್ನು ಹೊಂದಿದ್ದರೂ ಕೂಡಾ ಇದರೊಂದಿಗೆ ದೇಶದ ಬೆಳವಣಿಗೆಯು ಕೂಡಾ ಎನ್‌ಆ‌ರ್‌ಐಗಳು ಕೊಡುಗೆಯನ್ನು ನೀಡುತ್ತಿದ್ದಾರೆ. ಎನ್‌ಆರ್‌ಐಗಳು ದೇಶದಲ್ಲಿ ಹೂಡಿಕೆ ಮಾಡಲು ಬಯಸಿದರೆ, ದೇಶದಲ್ಲಿ ಎನ್‌ಆರ್‌ಐಗಳಿಗೆ ಯಾವುದೆಲ್ಲಾ ಆಯ್ಕೆಗಳು ಇದೆ. ಈ ಬಗ್ಗೆ ನಾವು ಇಲ್ಲಿ ತಿಳಿಯೋಣ.

ನಿಮ್ಮ ಆಧಾರ್‌ ಮೂಲಕ ಎಷ್ಟು ಸಿಮ್‌ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?

ಎನ್‌ಆರ್‌ಐಗಳು ತಮ್ಮ ಹುಟ್ಟೂರು ಭಾರತದಲ್ಲಿ ಹೂಡಿಕೆ ಮಾಡಲು ವಿಸ್ತಾರವಾದ ಆಯ್ಕೆಯು ಇದೆ. ಆದರೆ ಕೆಲವು ಬ್ಯಾಂಕ್ ವ್ಯವಸ್ಥಾಪಕರಿಂದ ಎನ್‌ಆರ್‌ಐಗಳು ಪಡೆಯುವ ತಪ್ಪಾದ ಹಾಗೂ ಪರಿಣಾಮಕಾರಿಯಲ್ಲದ ಸಲಹೆಯಿಂದಾಗಿ ಎನ್‌ಆರ್‌ಐಗಳ ಗೊಂದಲವು ಮತ್ತಷ್ಟು ಹೆಚ್ಚಾಗುತ್ತದೆ. ಎನ್‌ಆರ್‌ಐಗಳು ಕೆಲವೊಮ್ಮೆ ತಾವು ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣವನ್ನು ಹೂಡಿಕೆ ಮಾಡಿ ತಾವು ಲಾಭ ಪಡೆಯುವುದಕ್ಕಿಂತ ಅಧಿಕವಾಗಿ ವಿತರಕರು ಲಾಭವನ್ನು ಪಡೆಯುತ್ತಾರೆ. ಹಾಗಿರುವಾಗ ಎನ್‌ಆರ್‌ಐಗಳಿಗೆ 2021ರ ಉತ್ತಮ ಹೂಡಿಕೆ ಆಯ್ಕೆಗಳು ಯಾವುದು? ತಿಳಿಯಲು ಮುಂದೆ ಓದಿ.

ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ?

 ಎನ್‌ಆರ್‌ಐಗಳಿಗೆ ಈಕ್ವಿಟಿ ಮ್ಯೂಚುವಲ್‌ ಫಂಡ್‌

ಎನ್‌ಆರ್‌ಐಗಳಿಗೆ ಈಕ್ವಿಟಿ ಮ್ಯೂಚುವಲ್‌ ಫಂಡ್‌

ಷೇರುಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ಗಳು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವ ಅಪಾಯವನ್ನು ಅಧಿಕ ಮಾಡುತ್ತದೆ. ಎಲ್ಲಾ ಮ್ಯೂಚುವಲ್ ಫಂಡ್ ಸಂಸ್ಥೆಗಳು ತಮ್ಮ ಯೋಜನೆಗಳಲ್ಲಿ ಹೂಡಿಕೆ ಮಾಡಲು ಎನ್‌ಆರ್‌ಐಗಳನ್ನು ಆಕರ್ಷಿಸುತ್ತದೆ. ಆದರೆ ವಿದೇಶಿ ಖಾತೆ ತೆರಿಗೆ ಅನುಸರಣೆ ಕಾಯಿದೆ ಪ್ರಕಾರ ಯುನೈಡೆಟ್‌ ಸ್ಟೇಟ್ಸ್‌ ಹಾಗೂ ಕೆನಡಾದಲ್ಲಿ ವಾಸವಿರುವ ಎನ್‌ಆರ್‌ಐಗಳು ಅಧಿಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆರ್‌ಬಿಐನ ಬಂಡವಾಳ ಹೂಡಿಕೆ ಯೋಜನೆಯ ಮೂಲಕ ಎನ್‌ಆರ್‌ಗಳು ನೇರವಾಗಿ ಭಾರತದ ಸ್ಟಾಕ್‌ ಮಾರುಕಟ್ಟೆಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಆದರೆ ಭಾರತದ ಸ್ಟಾಕ್‌ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲು ಎನ್‌ಆರ್‌ಐಗಳು ಎನ್‌ಆರ್‌ಇ ಅಥವಾ ಎನ್‌ಆರ್‌ಒ ಬ್ಯಾಂಕು ಖಾತೆಗಳನ್ನು ಹೊಂದಿರುವುದು ಅನಿವಾರ್ಯ. ಹಾಗೆಯೇ ಡಿಮ್ಯಾಟ್‌ ಖಾತೆ ಹಾಗೂ ವ್ಯಾಪಾರ ಖಾತೆಯನ್ನು ಕೂಡಾ ಹೊಂದಿರಬೇಕು. ಹೂಡಿಕೆಯನ್ನು ಖರೀದಿಸಿದ ಒಂದು ವರ್ಷದೊಳಗೆ ಮಾರಾಟ ಮಾಡಿದರೆ ತೆರಿಗೆ ದರ ಶೇಕಡ 15 ಆಗಿರುತ್ತದೆ. ಹಾಗೆಯೇ ಒಂದು ವರ್ಷದ ನಂತರ ಹೂಡಿಕೆಯನ್ನು ಮಾರಾಟ ಮಾಡಿದರೆ ಶೇಕಡ 10 ತೆರಿಗೆ ಇರುತ್ತದೆ. ಎನ್‌ಆರ್‌ಐ ವ್ಯಾಪಾರ ಖಾತೆಯನ್ನು ಕೂಡಾ ತೆರಯಬಹುದು. ಆದರೆ ಅವರಿಗೆ ಈಗಾಗಲೇ ಮಾರಾಟ ಮಾಡಲಾಗಿರುವ ಸ್ಟಾಕ್‌ ಅನ್ನು ಮಾತ್ರ ಮಾರಾಟ ಮಾಡಲು ನಿರ್ಬಂಧಿಸಲಾಗಿದೆ.

 ಎನ್‌ಆರ್‌ಐಗಳಿಗೆ ಫಿಕ್ಸಿಡ್‌ ಡೆಪಾಸಿಟ್‌
 

ಎನ್‌ಆರ್‌ಐಗಳಿಗೆ ಫಿಕ್ಸಿಡ್‌ ಡೆಪಾಸಿಟ್‌

ಎನ್‌ಆರ್‌ಐಗಳು ಭಾರತದಲ್ಲಿ ಫಿಕ್ಸಿಡ್‌ ಡೆಪಾಸಿಟ್‌ ಕೂಡಾ ಇಡಬಹುದಾಗಿದೆ. ಅನಿವಾಸಿ ಭಾರತೀಯರ ಬಾಹ್ಯ ಖಾತೆ (ಎ‌ನ್‌ಆರ್‌ಇ), ಅನಿವಾಸಿ ಸಾಮಾನ್ಯ ಖಾತೆ (ಎನ್‌ಆರ್‌ಒ), ಎಫ್‌ಸಿಎನ್‌ಆರ್‌ ಖಾತೆ ಹಾಗೂ ಇತರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮೂಲಕ ಎನ್‌ಆರ್‌ಐಗಳು ಭಾರತದಲ್ಲಿ ಫಿಕ್ಸಿಡ್‌ ಡೆಪಾಸಿಟ್‌ ತೆರಯಬಹುದು. ನೀವು ಯಾವ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಆ ಬ್ಯಾಂಕಿನಲ್ಲಿ ಫಿಕ್ಸಿಡ್‌ ಡೆಪಾಸಿಟ್‌ ಮೇಲೆ ಎಷ್ಟು ಬಡ್ಡಿದರ ಇದೆಯೋ ಅಷ್ಟೇ ಬಡ್ಡಿದರವು ಇರಲಿದೆ. ಭಾರತದಲ್ಲಿ ಎನ್‌ಆರ್‌ಐಗಳು ಎನ್‌ಆರ್‌ಇ ಹಾಗೂ ಎಫ್‌ಸಿಎನ್‌ಆರ್‌ ಮೂಲಕ ಪಡೆದ ಬಡ್ಡಿದರವು ತೆರಿಗೆ ರಹಿತವಾಗಿರುತ್ತದೆ. ಹಾಗೆಯೇ ಸಂಪೂರ್ಣವಾಗಿ ವಾಪಾಸ್‌ ದೊರಕುವಂತದ್ದು.

 ಎನ್‌ಆರ್‌ಐಗಳಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ

ಎನ್‌ಆರ್‌ಐಗಳಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ

ಎನ್‌ಆರ್‌ಐಗಳು ರಾಷ್ಟ್ರೀಯ ಪಿಂಚಣಿ ಯೋಜನೆ ಖಾತೆಯನ್ನು ಕೂಡಾ ತೆರಯಬಹುದು. ನಿಮ್ಮಲ್ಲಿ ಆಧಾರ್‌ ಕಾರ್ಡ್, ಪ್ಯಾನ್‌ ಕಾರ್ಡ್ ಇದ್ದರೆ ನೀವು ರಾಷ್ಟ್ರೀಯ ಪಿಂಚಣಿ ಯೋಜನೆ ಖಾತೆಗೂ ಕೂಡಾ ರಿಜಿಸ್ಟರ್‌ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಎನ್‌ಆರ್‌ಇ ಅಥವಾ ಎನ್‌ಆರ್‌ಒ ಖಾತೆಗಳ ಮೂಲಕ ಈ ರಾಷ್ಟ್ರೀಯ ಪಿಂಚಣಿ ಖಾತೆಯನ್ನು ಮಾಡಿಕೊಳ್ಳಬಹುದು. ನೀವು 18-60 ವಯಸ್ಸಿನ ಎ‌ನ್‌ಆರ್‌ಐ ಆಗಿದ್ದರೆ, ಭಾರತದಲ್ಲಿ ಪಾಯಿಂಟ್ ಆಫ್ ಪ್ರೆಸೆನ್ಸ್ ಎಂಬ ಬ್ಯಾಂಕ್ ನಲ್ಲಿ ನೀವು ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು. ಹಾಗೆಯೇ ನಿಮ್ಮ ಹಣದ ಮೇಲೆ ನೀವು ಸಂಪೂರ್ಣವಾದ ಹಿಡಿತವನ್ನು ಕೂಡಾ ಹೊಂದಿರುತ್ತೀರಿ.

 ಎನ್‌ಆರ್‌ಐಗಳಿಗೆ ರಿಯಲ್‌ ಎಸ್ಟೇಟ್‌

ಎನ್‌ಆರ್‌ಐಗಳಿಗೆ ರಿಯಲ್‌ ಎಸ್ಟೇಟ್‌

ದೆಹಲಿ, ಮುಂಬೈ, ಬೆಂಗಳೂರು, ಪುಣೆ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಕಳೆದ ಕೆಲವು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ವ್ಯಾಪಾರವು ಅಧಿಕವಾಗುತ್ತಿದೆ. ಹಲವಾರು ಎನ್‌ಆರ್‌ಐಗಳು ಭಾರತದಲ್ಲಿ ಮನೆಯನ್ನು ಖರೀದಿ ಮಾಡಿ ಅದನ್ನು ಬಾಡಿಗೆಗೆ ನೀಡಿ, ವಿದೇಶದಲ್ಲಿ ಕುಳಿತು ಬಾಡಿಗೆ ಹಣವನ್ನು ಪಡೆಯುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ಪ್ಲಾಟ್‌ಗಳು, ವಿಲ್ಲಾಗಳು ಮತ್ತು ಫ್ಲಾಟ್‌ಗಳು ಸೇರಿದಂತೆ ಹಲವಾರು ಮನೆಗಳನ್ನು ವಿದೇಶದಲ್ಲಿರುವ ಎನ್‌ಆರ್‌ಐಗಳು ಖರೀದಿ ಮಾಡಿಕೊಳ್ಳುತ್ತಾರೆ. ಇನ್ನು ರಿಯಲ್‌ ಎಸ್ಟೇಟ್‌ ಮೇಲೆ ನೀವು ಹೂಡಿಕೆ ಮಾಡುವುದಕ್ಕೂ ಮುನ್ನ ಈ ಬಗ್ಗೆ ಅಧಿಕ ಮಾಹಿತಿಯನ್ನು ತಿಳಿದಿರುವವರಿಂದು ಪಡೆಯುವುದು ಅತೀ ಮುಖ್ಯ.

 ಎನ್‌ಆರ್‌ಐಗಳಿಗಾಗಿ ಚಿನ್ನ ಹೂಡಿಕೆ

ಎನ್‌ಆರ್‌ಐಗಳಿಗಾಗಿ ಚಿನ್ನ ಹೂಡಿಕೆ

ಎನ್‌ಆರ್‌ಐಗಳಿಗೆ ಭಾರತದಲ್ಲಿ ಇರುವ ಇನ್ನೊಂದು ಹೂಡಿಕೆಯ ಆಯ್ಕೆಯೆಂದರೆ ಚಿನ್ನ. ಕಾಲಾನಂತರದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವುದನ್ನು ನೋಡಿದಾಗ, ಎನ್‌ಆರ್‌ಐಗಳು ಭಾರತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಫಿಸಿಕಲ್‌ ಗೋಲ್ಡ್‌, ಚಿನ್ನದ ವಿನಿಮಯ-ವ್ಯಾಪಾರ ನಿಧಿಗಳು (ಇಟಿಎಫ್), ಗೋಲ್ಡ್‌ ಬಾಂಡ್‌ಗಳು ಹಾಗೂ ಇತರೆ ಆಯ್ಕೆಗಳು ಎನ್‌ಆರ್‌ಐಗಳಿಗೆ ಲಭ್ಯವಿದೆ. ಆರ್ಥಿಕ ಬದಲಾವಣೆಯ ಸಂದರ್ಭದಲ್ಲಿ ಚಿನ್ನದ ಬೆಲೆಯು ಏರಿಕೆಯಾಗುತ್ತದೆ. ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ರೋಗ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತವು ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಯಿತು. ಈಗ ಚಿನ್ನದ ಬೆಲೆಯು ಏರಿಕೆಯಾಗುವ ಹಿನ್ನೆಲೆ ಚಿನ್ನದ ಮೇಲೆ ಎನ್‌ಆರ್‌ಐಗಳು ಈ ಸಂದರ್ಭದಲ್ಲಿ ಹೂಡಿಕೆ ಮಾಡಬಹುದು.

 ಎನ್‌ಆರ್‌ಐಗಳಿಗಾಗಿ ಬಾಂಡ್‌ಗಳು ಹಾಗೂ ಎನ್‌ಸಿಡಿಗಳು

ಎನ್‌ಆರ್‌ಐಗಳಿಗಾಗಿ ಬಾಂಡ್‌ಗಳು ಹಾಗೂ ಎನ್‌ಸಿಡಿಗಳು

ಬಾಂಡ್‌ಗಳು ಎನ್‌ಆರ್‌ಐಗಳಿಗೆ ಇರುವ ಮತ್ತೊಂದು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಎನ್‌ಆರ್‌ಐಗಳಿಗೆ ಇರುವ ಈ ಮುಕ್ತ ಹೂಡಿಕೆ ಆಯ್ಕೆಗೆ ಅಧಿಕ ಸಂಖ್ಯೆಯ ಎನ್‌ಆರ್‌ಐಗಳು ಮಾತ್ರ ಹೂಡಿಕೆ ಮಾಡಿದ್ದಾರೆ. ಈ ಹೂಡಿಕೆಯು ರಿಸ್ಕ್‌ ಕೂಡಾ ಹೌದು. ಆದರೆ ಇದು ಸಾಮಾನ್ಯವಾಗಿ ಇತರ ಆಯ್ಕೆಗಳಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ನೀವು ಮ್ಯೂಚುವಲ್ ಫಂಡ್‌ಗಳು ಮತ್ತು ಸ್ಟಾಕ್ ಮಾರುಕಟ್ಟೆಗೆ ಬದಲಾಗಿ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಬೇಕು ಎಂದು ಬಯಸಿದರೆ, ಈ ಆಯ್ಕೆ ಒಳ್ಳೆಯದು. ಆದರೆ ರಿಸ್ಕ್‌ ಕೂಡಾ ಇದೆ. ಇದು ದೀಘ್ರ ಕಾಲದ ಹೂಡಿಕೆಯಾಗಿದ್ದು, ಹೆಚ್ಚು ರಿಟರ್ನ್ ದೊರೆಯುತ್ತದೆ.

ಇನ್ನು ಯಾವುದೇ ಹೂಡಿಕೆಯ್ನನು ಮಾಡುವ ಹೂಡಿಕೆದಾರರು ಬಹಳ ಎಚ್ಚರದಿಂದ ಇರುವುದು ಅತೀ ಮುಖ್ಯ. ಹೂಡಿಕೆಯು ನಿಮ್ಮ ಆದಾಯಕ್ಕೆ ಅನುಗುಣವಾಗಿ ಇದ್ದರೆ ಅಪಾಯವನ್ನು ಕೊಂಚ ತಪ್ಪಿಸಬಹುದು.

(ಒನ್‌ ಇಂಡಿಯಾ ಸುದ್ದಿ)

English summary

Best NRI Investment Options To Consider In 2021, Explained in Kannada

Best NRI Investment Options To Consider In 2021, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X