For Quick Alerts
ALLOW NOTIFICATIONS  
For Daily Alerts

ಒಂದು ವರ್ಷದಲ್ಲಿ 30%ಗೂ ಹೆಚ್ಚು ರಿಟರ್ನ್ಸ್ ನೀಡಿದ ಗೋಲ್ಡ್ ಇಟಿಎಫ್ ಗಳು

|

ಹೂಡಿಕೆಗಾಗಿ ಚಿನ್ನ ಖರೀದಿ ಮಾಡುವುದು ಅಥವಾ ಚಿನ್ನದ ಇಟಿಎಫ್ ಖರೀದಿಸುವುದರ ಮಧ್ಯೆ ರಿಟರ್ನ್ಸ್ ನಲ್ಲಿ ದೊಡ್ಡ ವ್ಯತ್ಯಾಸ ಇಲ್ಲ. ಗೋಲ್ಡ್ ಇಟಿಎಫ್ ನಲ್ಲಿ ಹಣ ಹೂಡುವುದೆಂದರೆ ಎಲೆಕ್ಟ್ರಾನಿಕ್ ರೂಪದಲ್ಲಿ ಇರುವ ಚಿನ್ನದ ಮೇಲೆ ಹಣ ಹೂಡಿಕೆ ಮಾಡಿದಂತೆ. ಹೇಗೆ ಷೇರುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಖರೀದಿ ಮಾಡಲಾಗುತ್ತದೋ ಅದೇ ರೀತಿಯಲ್ಲಿ ಗೋಲ್ಡ್ ಇಟಿಎಫ್ ಮೇಲೆ ಹಣ ಹೂಡಲಾಗುತ್ತದೆ.

ಚಿನ್ನದ ಬೆಲೆ ಹೇಗೆ ಏರಿಳಿತ ಆಗುತ್ತದೋ ಅದನ್ನು ಅನುಸರಿಸಿಯೇ ಇವುಗಳ ಬೆಲೆಯಲ್ಲಿ ಏರಿಳಿತ ಆಗುತ್ತದೆ. ಇವುಗಳು ಎಲೆಕ್ಟ್ರಾನಿಕ್ ಫಾರ್ಮ್ ನಲ್ಲಿ ಇರುತ್ತದಾದ್ದರಿಂದ ಕಳ್ಳತನ ಆಗುತ್ತದೆ ಅಂತಲೋ ಅಥವಾ ಇವುಗಳನ್ನು ಇಡುವುದು ಎಲ್ಲಿ ಅಂತಲೋ ಚಿಂತೆ ಮಾಡುವ ಅಗತ್ಯ ಇಲ್ಲ. ಈ ಲೇಖನದಲ್ಲಿ ಮೂರು ಗೋಲ್ಡ್ ಇಟಿಎಫ್ ಗಳ ಬಗ್ಗೆ ತಿಳಿಸಲಾಗುತ್ತಿದೆ. ಇವು ಒಂದು ವರ್ಷದಲ್ಲಿ 30 ಪರ್ಸೆಂಟ್ ಗೂ ಹೆಚ್ಚು ರಿಟರ್ನ್ಸ್ ನೀಡಿವೆ.

ಎಚ್ ಡಿಎಫ್ ಸಿ ಗೋಲ್ಡ್ ಫಂಡ್

ಎಚ್ ಡಿಎಫ್ ಸಿ ಗೋಲ್ಡ್ ಫಂಡ್

ಈ ಫಂಡ್ ಕಳೆದ ಒಂದು ವರ್ಷದಲ್ಲಿ 34.79 ಪರ್ಸೆಂಟ್ ರಿಟರ್ನ್ಸ್ ನೀಡಿದೆ. ವಾರ್ಷಿಕ ಸರಾಸರಿ ಲೆಕ್ಕದಲ್ಲಿ ಮೂರು ವರ್ಷದ ರಿಟರ್ನ್ಸ್ 17.60 ಪರ್ಸೆಂಟ್ ಇದೆ. ಇನ್ನು ಐದು ವರ್ಷದ ಸರಾಸರಿ 13 ಪರ್ಸೆಂಟ್ ಇದೆ. ವ್ಯಾಲ್ಯೂ ರೀಸರ್ಚ್ ನಲ್ಲಿ ಇದಕ್ಕೆ 5 ಸ್ಟಾರ್ ರೇಟಿಂಗ್ ಇದೆ. ನೀವು ಒಂದು ವೇಳೆ ಫಿಸಿಕಲ್ ಚಿನ್ನದ ಮೇಲೆ ಹೂಡಿಕೆ ಮಾಡುವವರಾಗಿದ್ದಲ್ಲಿ ಅದರ ಬದಲಿಗೆ ಇಟಿಎಫ್ ಗಳ ಮೇಲೆ ಹಣ ಹಾಕಬಹುದು. ಏಕೆಂದರೆ, ಮಾರಾಟ ಕೂಡ ಸಲೀಸು. ಜತೆಗೆ ಷೇರುಗಳನ್ನು ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಖರೀದಿ ಮಾಡಿದಂತೆ ಇವುಗಳನ್ನೂ ಕೊಳ್ಳಬಹುದು. ಎಚ್ ಡಿಎಫ್ ಸಿ ಗೋಲ್ಡ್ ಫಂಡ್ ಅನ್ನು NAVಯಲ್ಲಿ ಖರೀದಿ ಮಾಡಬಹುದು. ಸದ್ಯಕ್ಕೆ 16.50 ರುಪಾಯಿ ಇದೆ.

ಕೊಟಕ್ ಗೋಲ್ಡ್ ಫಂಡ್

ಕೊಟಕ್ ಗೋಲ್ಡ್ ಫಂಡ್

ಕೊಟಕ್ ಗೋಲ್ಡ್ ಫಂಡ್ ಗೂ ವ್ಯಾಲ್ಯೂ ರೀಸರ್ಚ್ ನಿಂದ 5 ಸ್ಟಾರ್ ರೇಟಿಂಗ್ ಇದೆ. ಗ್ರೋಥ್ ಫಂಡ್ ಸ್ಕೀಮ್ NAV ರು. 21.43 ಇದೆ. ಕೊಟಕ್ ಗೋಲ್ಡ್ ಫಂಡ್ ಕಳೆದ ಒಂದು ವರ್ಷದಲ್ಲಿ 34.81 ಪರ್ಸೆಂಟ್ ರಿಟರ್ನ್ಸ್ ನೀಡಿದೆ. ಕಳೆದ ಮೂರು ವರ್ಷದ ವಾರ್ಷಿಕ ಸರಾಸರಿ 19% ಇದೆ. ಐದು ವರ್ಷಗಳ ವಾರ್ಷಿಕ ಸರಾಸರಿ 13.52 ಪರ್ಸೆಂಟ್ ಇದೆ. ಈ ಫಂಡ್ ನ ಅಸೆಟ್ ಮ್ಯಾನೇಜ್ ಮೆಂಟ್ ಕೂಡ ತೀರಾ ದೊಡ್ಡದಾಗೇನಿಲ್ಲ, 905 ಕೋಟಿ ರುಪಾಯಿ ಇದೆ. ಯಾರಿಗೆ ಚಿನ್ನದ ಬೆಲೆ ಇನ್ನೂ ಮೇಲೆ ಹೋಗಬಹುದು ಎಂಬ ನಿರೀಕ್ಷೆ ಇದೆಯೋ ಅಂಥವರು ಹೂಡಿಕೆ ಮಾಡಬಹುದು.

ಎಸ್ ಬಿಐ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಗೋಲ್ಶ್

ಎಸ್ ಬಿಐ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಗೋಲ್ಶ್

ಇದು ತುಂಬ ಒಳ್ಳೆ ರಿಟರ್ನ್ಸ್ ನೀಡುತ್ತಿರುವ ಮತ್ತೊಂದು ಫಂಡ್. ಕೊಟಕ್, ಎಚ್ ಡಿಎಫ್ ಸಿ ಗೋಲ್ಡ್ ಫಂಡ್ ಗೆ ಹೋಲಿಸಿದಲ್ಲಿ ಕಳೆದ ಒಂದು ವರ್ಷದಲ್ಲಿ ನೀಡಿದ ರಿಟರ್ನ್ಸ್ ಕಡಿಮೆ. ಎಸ್ ಬಿಐ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಗೋಲ್ಶ್ ಕಳೆದ ಒಂದು ವರ್ಷದಲ್ಲಿ 31.94% ರಿಟರ್ನ್ಸ್ ನೀಡಿದೆ. ಕಳೆದ ಮೂರು ವರ್ಷದಲ್ಲಿ ವಾರ್ಷಿಕ ಸರಾಸರಿ ರಿಟರ್ನ್ಸ್ 18.57% ರಿಟರ್ನ್ಸ್ ನೀಡಿದೆ. ಈ ಫಂಡ್ ಅಸೆಟ್ 1800 ಕೋಟಿ ರುಪಾಯಿ ಇದೆ. ಚಿನ್ನದ ಹೂಡಿಕೆಯನ್ನು ದೀರ್ಘಾವಧಿಗೆ ಮಾಡಬೇಕು ಎಂದುಕೊಳ್ಳುವವರು ಈ ಫಂಡ್ ಖರೀದಿ ಮಾಡಬಹುದು. ಕಳೆದ ಕೆಲ ವರ್ಷಗಳಲ್ಲಿ ಚಿನ್ನದ ದರದಲ್ಲಿ ಭರ್ಜರಿ ಏರಿಕೆ ಕಂಡಿದ್ದರಿಂದ ಈ ರಿಟರ್ನ್ಸ್ ಸಿಕ್ಕಿದೆ. ಭವಿಷ್ಯದಲ್ಲೂ ಇಷ್ಟೇ ರಿಟರ್ನ್ಸ್ ಸಿಗಬಹುದು ಎಂದು ಖಾತ್ರಿಯಾಗಿ ಹೇಳುವುದು ಸಾಧ್ಯವಿಲ್ಲ.

English summary

Here Are 3 Gold ETFs That Have Given 30 Percent Returns In 1 Year

Gold ETF investment: Here are 3 Gold ETFs that have given returns of more than 30 per cent in the last 1 year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X