For Quick Alerts
ALLOW NOTIFICATIONS  
For Daily Alerts

Best Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

|

Best Under A Billion ಎಂಬ ಫೋರ್ಬ್ಸ್ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಏಷ್ಯಾದಲ್ಲಿ ಉತ್ತಮವಾದ ಮಧ್ಯಮ ಬಂಡವಾಳದ ಸಂಸ್ಥೆಯನ್ನು ಯಾವ ರಾಷ್ಟ್ರಗಳು ಹೊಂದಿದೆ ಎಂಬ ಪಟ್ಟಿ ಇದಾಗಿದೆ. ಈ ಪಟ್ಟಿಯಲ್ಲಿ ಚೀನಾಕ್ಕಿಂತ ಮೇಲಿನ ಸ್ಥಾನದಲ್ಲಿದೆ.

ಫೋರ್ಬ್ಸ್ 2022ರ ಏಷ್ಯಾದಲ್ಲಿನ 200 ಮಧ್ಯಮ ಬಂಡವಾಳದ ಕಂಪನಿಗಳ ಪಟ್ಟಿಯನ್ನು ಕೊನೆಯ ವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯು ವಾರ್ಷಿಕವಾಗಿ ಒಂದು ಬಿಲಿಯನ್ ಡಾಲರ್‌ಗಿಂತ ಕಡಿಮೆ ಆದಾಯವನ್ನು ಹೊಂದಿರುವ ಸಂಸ್ಥೆಗಳ ಪಟ್ಟಿಯಾಗಿದೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಭಾರತದ 26 ಸಂಸ್ಥೆಗಳು ಇದ್ದವು, ಈ ವರ್ಷ 24 ಸಂಸ್ಥೆಗಳು ಇದೆ.

ಫೋರ್ಬ್ಸ್: ಉದ್ಯೋಗದಾತ ಪಟ್ಟಿಯಲ್ಲಿ ಭಾರತಕ್ಕೆ ರಿಲಯನ್ಸ್ ಪ್ರಥಮಫೋರ್ಬ್ಸ್: ಉದ್ಯೋಗದಾತ ಪಟ್ಟಿಯಲ್ಲಿ ಭಾರತಕ್ಕೆ ರಿಲಯನ್ಸ್ ಪ್ರಥಮ

ಭಾರತವು 24 ಸಂಸ್ಥೆಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಇದೆ. ಚೀನಾಕ್ಕಿಂತ ಒಂದು ಹೆಚ್ಚಿನ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಚೀನಾ 22 ಸಂಸ್ಥೆಗಳೊಂದಿಗೆ ಐದನೇ ಪಟ್ಟಿಯಲ್ಲಿದೆ. ಹಾಗಾದರೆ ಏನಿದು ಫೋರ್ಬ್ಸ್‌ನ ಬೆಸ್ಟ್ ಅಂಡರ್ ಬಿಲಿಯನ್ ಪಟ್ಟಿ, ಯಾವ ದೇಶ ಮೊದಲ ಸ್ಥಾನದಲ್ಲಿ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಯಾವ ದೇಶ ಮೊದಲ ಸ್ಥಾನದಲ್ಲಿ

ಯಾವ ದೇಶ ಮೊದಲ ಸ್ಥಾನದಲ್ಲಿ

ಫೋರ್ಬ್ಸ್‌ನ ಬೆಸ್ಟ್ ಅಂಡರ್ ಬಿಲಿಯನ್ ಪಟ್ಟಿಯಲ್ಲಿ ತೈವಾನ್ ದೇಶವು ಮೊದಲ ಸ್ಥಾನದಲ್ಲಿದೆ. ತೈವಾನ್ ದೇಶದ 30 ಸಂಸ್ಥೆಗಳು ಈ ಪಟ್ಟಿಯಲ್ಲಿ ಇದೆ. ಇನ್ನು ಜಪಾನ್ ಎರಡನೇ ಸ್ಥಾನದಲ್ಲಿದೆ. ಜಪಾನ್‌ನ 29 ಸಂಸ್ಥೆಗಳು ಈ ಪಟ್ಟಿಯಲ್ಲಿದೆ. 27 ಸಂಸ್ಥೆಗಳನ್ನು ಹೊಂದಿರುವ ದಕ್ಷಿಣ ಕೊರಿಯಾ ಮೂರನೇ ಸ್ಥಾನದಲ್ಲಿ ಇದೆ.

 ಏನಿದು ಫೋರ್ಬ್ಸ್‌ನ ಬೆಸ್ಟ್ ಅಂಡರ್ ಬಿಲಿಯನ್ ಪಟ್ಟಿ?

ಏನಿದು ಫೋರ್ಬ್ಸ್‌ನ ಬೆಸ್ಟ್ ಅಂಡರ್ ಬಿಲಿಯನ್ ಪಟ್ಟಿ?

ದೀರ್ಘಾವಧಿಯ ಕಾಲ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿರುವ ಸಂಸ್ಥೆಯನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಸಾಲ, ಮಾರಾಟ, ಆದಾಯದ ಬೆಳವಣಿಗೆ, ಒಂದು ಹಣಕಾಸು ವರ್ಷದ ಬೆಳವಣಿಗೆ, ಮೂರು ವರ್ಷದಲ್ಲಿ ಕಂಡ ಬೆಳವಣಿಗೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತದೆ. ಫೋರ್ಬ್ಸ್ ಪೂರ್ಣ ವರ್ಷದ ಫಲಿತಾಂಶವನ್ನು ಇಲ್ಲಿ ನೋಡಿಕೊಂಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದು ಮಾತ್ರವಲ್ಲದೇ ಗುಣಮಟ್ಟ, ಪರಿಮಾಣ ಮೊದಲಾದ ಅಂಶಗಳನ್ನು ಕೂಡಾ ನೋಡಲಾಗುತ್ತದೆ. ಇನ್ನು ಆಡಳಿತದ ವಿಚಾರದಲ್ಲಿ ಸಮಸ್ಯೆ, ಬಿಕ್ಕಟ್ಟು, ಕಾನೂನಾತ್ಮಕ ಸಮಸ್ಯೆಗಳು ಇದ್ದ ರಾಷ್ಟ್ರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

 ಈ ವರ್ಷದ ಹೈಲೆಟ್ ಏನು?

ಈ ವರ್ಷದ ಹೈಲೆಟ್ ಏನು?

ಈ ವರ್ಷ ಬೆಸ್ಟ್ ಅಂಡರ್ ಬಿಲಿಯನ್ ಪಟ್ಟಿಯಲ್ಲಿ ಪ್ರಮುಖವಾಗಿ ಆರೋಗ್ಯ ಕ್ಪೇತ್ರದ ಸಂಸ್ಥೆಗಳು ಕಂಡು ಬಂದಿದೆ. ಕೋವಿಡ್ ಕಾರಣದಿಂದಾಗಿ ಈ ರೀತಿಯ ಬದಲಾವಣೆ ಆಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಮಾಲ್ ಆಪರೇಟರ್‌ಗಳು, ರೆಸ್ಟೋರೆಂಟ್‌ಗಳು, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್, ಎಂಟರ್‌ಟೈನ್‌ಮೆಂಟ್ ಕಂಪನಿಗಳು, ಐಷಾರಾಮಿ ಬ್ರಾಂಡ್ ರಿಟೇಲರ್‌ಗಳಿಗೆ ಕೋವಿಡ್ ಬಳಿಕ ಲಾಭ ಉಂಟಾಗಿದೆ. ಈ ಹಿಂದಿನ ವರ್ಷದಲ್ಲಿ ಪಟ್ಟಿಯಲ್ಲಿದ್ದ 75 ಕಂಪನಿಗಳೇ ಈಗ ಪಟ್ಟಿಯಲ್ಲಿದೆ.

English summary

India Ranks 4th With 24 Firms in Forbes Asia Best Under A Billion

With 24 firms of Forbes latest list titled “Best Under A Billion”, India ranks fourth among Asian countries with best mid-sized companies in the Asia-Pacific region.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X