For Quick Alerts
ALLOW NOTIFICATIONS  
For Daily Alerts

India's First Gold ATM: ದೇಶದ ಮೊದಲ ಗೋಲ್ಡ್ ಎಟಿಎಂ: ಚಿನ್ನ ವಿತ್‌ಡ್ರಾ ಮಾಡಿ!

|

ಈ ಹಿಂದೆ ನಾವು ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ವಿತ್‌ಡ್ರಾ ಮಾಡಬೇಕಾದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗಿತ್ತು. ಆದರೆ ನಮಗೆ ಸಹಾಯವಾಗುವಂತೆ ಎಟಿಎಂ ವ್ಯವಸ್ಥೆಯನ್ನು ಆರಂಭ ಮಾಡಲಾಗಿದೆ. ನಾವು ಎಟಿಎಂ ಕಾರ್ಡ್ ಮೂಲಕ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ. ಈಗ ಯುಪಿಐ ವಹಿವಾಟನ್ನು ಇನ್ನಷ್ಟು ಸರಳಗೊಳಿಸಿದೆ. ಆದರೆ ಈ ನಡುವೆ ಚಿನ್ನ ವಿತ್‌ಡ್ರಾ ಮಾಡಿಕೊಳ್ಳಲು ಸಾಧ್ಯವಾಗುವ ಎಟಿಎಂ ದೇಶದಲ್ಲಿ ಆರಂಭವಾಗಿದೆ!

ಹೌದು ದೇಶದ ಮೊದಲ ಚಿನ್ನ ವಿತ್‌ಡ್ರಾ ಮಾಡಲು ಸಾಧ್ಯವಾಗುವಂತಹ ಗೋಲ್ಡ್ ಎಟಿಎಂ ಹೈದಾರಾಬಾದ್‌ನಲ್ಲಿ ಆರಂಭವಾಗಿದೆ. ಹೈದಾರಾಬಾದ್ ಮೂಲದ ಗೋಲ್ಡ್‌ಸಿಕ್ಕ ಪ್ರವೇಟ್ ಲಿಮಿಟೆಡ್ ಈ ಗೋಲ್ಡ್ ಎಟಿಎಂ ಅನ್ನು ಬಿಡುಗಡೆ ಮಾಡಿದೆ. ಇದನ್ನು ದೇಶದ ಮೊದಲ ಹಳದಿ ಲೋಹವನ್ನು ವಿತ್‌ಡ್ರಾ ಮಾಡಿಕೊಳ್ಳಲು ಸಾಧ್ಯವಾಗುವ ಮಿಷನ್ ಎಂದು ಪರಿಗಣಿಸಲಾಗಿದೆ.

Gold Rate Today: ಚಿನ್ನ, ಬೆಳ್ಳಿ ದುಬಾರಿ, ಡಿ.3ರಂದು ದರ ಎಷ್ಟು ಏರಿಕೆ?Gold Rate Today: ಚಿನ್ನ, ಬೆಳ್ಳಿ ದುಬಾರಿ, ಡಿ.3ರಂದು ದರ ಎಷ್ಟು ಏರಿಕೆ?

ಗ್ರಾಹಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಈ ಗೋಲ್ಡ್ ಎಟಿಎಂ ಮೂಲಕ ಚಿನ್ನದ ನಾಣ್ಯವನ್ನು ಪಡೆಯಬಹುದು. ಅಂದರೆ ಚಿನ್ನದ ನಾಣ್ಯ ನಮಗೆ ಬೇಕಾದರೆ ನಾವು ನಮ್ಮ ಎಟಿಎಂ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಇನ್ನೂ ಮೂರು ಗೋಲ್ಡ್‌ ಎಟಿಎಂ

ಇನ್ನೂ ಮೂರು ಗೋಲ್ಡ್‌ ಎಟಿಎಂ

ಗೋಲ್ಡ್‌ಸಿಕ್ಕ ಪ್ರವೇಟ್ ಲಿಮಿಟೆಡ್ ಈ ಎಟಿಎಂ ಅನ್ನು ಬೇಗಮ್‌ಪೇಟೆಯಲ್ಲಿ ಆರಂಭ ಮಾಡಿದೆ. ಓಪನ್‌ಕ್ಯೂಬ್‌ ಟೆಕ್ನಾಲಜೀಸ್ ಪ್ರವೇಟ್ ಲಿಮಿಟೆಡ್‌ನ ತ್ರಾಂತ್ರಿಕ ಸಹಾಯದ ಮೂಲಕ ಸಂಸ್ಥೆಯು ಗೋಲ್ಡ್ ಎಟಿಎಂ ಅನ್ನು ಆರಂಭ ಮಾಡಿದೆ. ಇನ್ನು ಓಪನ್‌ಕ್ಯೂಬ್‌ ಟೆಕ್ನಾಲಜೀಸ್ ಪ್ರವೇಟ್ ಲಿಮಿಟೆಡ್‌ ನಗರದ ಸ್ಟಾರ್ಟ್‌ಅಪ್ ಸಂಸ್ಥೆಯಾಗಿದೆ. ಇನ್ನು ಸಂಸ್ಥೆಯು ಹೈದಾರಾಬಾದ್‌ನಲ್ಲಿ ಮೂರು ಗೋಲ್ಡ್ ಎಟಿಎಂ ಅನ್ನು ಇನ್‌ಸ್ಟಾಲ್ ಮಾಡಲು ಮುಂದಾಗಿದೆ.

 ಹಣ ವಿತ್‌ಡ್ರಾ ಮಾಡಿದಂತೆ ಸರಳ, ಸುಲಭ

ಹಣ ವಿತ್‌ಡ್ರಾ ಮಾಡಿದಂತೆ ಸರಳ, ಸುಲಭ

ಈ ಬಗ್ಗೆ ಮಾಹಿತಿ ನೀಡಿದ ಗೋಲ್ಡ್‌ಸಿಕ್ಕ ಸಿಇಒ ಸಾಯ್ ತರೂಜ್, "ಈ ಗೋಲ್ಡ್ ಎಟಿಎಂ ಜನರು ಚಿನ್ನವನ್ನು ಖರೀದಿ ಮಾಡುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಜನರು ಈ ಎಟಿಎಂ ಮೂಲಕವೇ ಚಿನ್ನದ ನಾಣ್ಯ ಖರೀದಿ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಎಟಿಎಂಗಳಲ್ಲಿ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವುದು ಎಷ್ಟು ಸುಲಭ ಹಾಗೂ ಸರಳವೋ ಹಾಗೆಯೇ ಗೋಲ್ಡ್ ವಿತ್‌ಡ್ರಾ ಮಾಡಲು ಸಾಧ್ಯವಾಗುವ ಎಟಿಎಂ ಮೂಲಕ ಚಿನ್ನವನ್ನು ಖರೀದಿ ಮಾಡುವುದು ಅಥವಾ ವಿತ್‌ಡ್ರಾ ಮಾಡುವುದು ಸುಲಭ ಹಾಗೂ ಸರಳವಾಗಿದೆ.

 ಯಾವೆಲ್ಲ ಚಿನ್ನದ ನಾಣ್ಯಗಳು ಲಭ್ಯ

ಯಾವೆಲ್ಲ ಚಿನ್ನದ ನಾಣ್ಯಗಳು ಲಭ್ಯ

ಈ ಗೋಲ್ಡ್ ಎಟಿಎಂ ಮೂಲಕ ಜನರು ಬೇರೆ ಬೇರೆ ತೂಕದ ಚಿನ್ನದ ನಾಣ್ಯವನ್ನ ಖರೀದಿ ಮಾಡಲು ಸಾಧ್ಯವಾಗುತ್ತದೆ. ಈ ಎಟಿಎಂನಲ್ಲಿ 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ, 10 ಗ್ರಾಂ, 20 ಗ್ರಾಂ, 50 ಗ್ರಾಂ ಹಾಗೂ 100 ಗ್ರಾಂ ಚಿನ್ನದ ನಾಣ್ಯಗಳು ಲಭ್ಯವಾಗುತ್ತದೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನಲ್ಲಿ ಈ ಚಿನ್ನದ ಮೌಲ್ಯದಷ್ಟು ಮೊತ್ತ ಕಡಿತವಾಗಲಿದೆ. ನಿಮಗೆ ಚಿನ್ನದ ನಾಣ್ಯ ಲಭ್ಯವಾಗಲಿದೆ. ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತ ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂದು ಸ್ಕ್ರೀನ್‌ನಲ್ಲಿಯೇ ತೋರಿಸಲಾಗುತ್ತದೆ. ನೀವು ಎಷ್ಟು ತೂಕದ ಚಿನ್ನದ ನಾಣ್ಯವನ್ನು ಖರೀದಿ ಮಾಡುತ್ತೀರಿ ಎಂದು ಆಯ್ಕೆಮಾಡಿಕೊಳ್ಳಬಹುದು. ಚಿನ್ನವು 999 ಶುದ್ಧತೆಯನ್ನು ಹೊಂದಿರುತ್ತದೆ.

English summary

India's first gold ATM launched in Hyderabad; Know details in Kannada

India's first gold ATM launched. Hyderabad-based Goldsikka Pvt Ltd has set up a gold ATM here. Know details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X