For Quick Alerts
ALLOW NOTIFICATIONS  
For Daily Alerts

ಎನ್‌ಬಿಎಫ್‌ಸಿ ಎಫ್‌ಡಿ ಹೂಡಿಕೆ ಉತ್ತಮ ಯಾಕೆ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ತನ್ನ ರೆಪೋ ದರವನ್ನು ಏರಿಕೆ ಮಾಡಿದೆ. ಮೇ ತಿಂಗಳ ಬಳಿಕ ಆರ್‌ಬಿಐ ನಾಲ್ಕು ಬಾರಿ ರೆಪೋ ದರ ಹೆಚ್ಚಿಸಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸಿದೆ. ಖಾಸಗಿ, ಸಾರ್ವಜನಿಕ ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳು ಬಡ್ಡಿದರವನ್ನು ಹೆಚ್ಚಿಸಿದೆ. ಆದರೆ ಈ ನಡುವೆ ನಾನ್ ಬ್ಯಾಂಕಿಂಗ್ ಫೈನಾನ್ಶಿಯಲ್ ಕಾಪೋರೇಷನ್ಸ್‌ನಲ್ಲಿ (ಎನ್‌ಬಿಎಫ್‌ಸಿ) ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲೆ ಹೂಡಿಕೆ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳು ಆಕರ್ಷಕ ಹಾಗೂ ಸ್ಪರ್ಧಾತ್ಮಕ ಬಡ್ಡಿದರವನ್ನು ನೀಡುತ್ತಿದೆ. ನೀವು ಅಪಾಯವಿದ್ದಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ ಎಂದಾದರೆ ನಿಮಗೆ ಫಿಕ್ಸಿಡ್ ಡೆಪಾಸಿಟ್ ಹೂಡಿಕೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀವು ಅಧಿಕ ರಿಟರ್ನ್ ಪಡೆಯುವುದು ಮಾತ್ರವಲ್ಲ, ಆದರೆ ಹೂಡಿಕೆಯಲ್ಲಿ ಹೆಚ್ಚು ಅಪಾಯ ಇರುವುದಿಲ್ಲ.

ಪಿಎಂಸಿ ಬ್ಯಾಂಕ್‌ನ ಖಾತೆದಾರರಿಗೆ ಗುಡ್‌ನ್ಯೂಸ್‌: ಆರ್‌ಬಿಐನಿಂದ ಬ್ಯಾಂಕ್ ಸ್ವಾಧೀನಪಿಎಂಸಿ ಬ್ಯಾಂಕ್‌ನ ಖಾತೆದಾರರಿಗೆ ಗುಡ್‌ನ್ಯೂಸ್‌: ಆರ್‌ಬಿಐನಿಂದ ಬ್ಯಾಂಕ್ ಸ್ವಾಧೀನ

ಪ್ರಸ್ತುತ ಇರುವ ಹೂಡಿಕೆ ವಾತಾವರಣವನ್ನು ನೋಡಿದಾಗ ನಾವು ಎನ್‌ಬಿಎಫ್‌ಸಿಯ ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ನಂಬಲಾಗಿದೆ. ಈ ಬಗ್ಗೆ ತಜ್ಞರು ಸಲಹೆ ನೀಡುತ್ತಾರೆ. ನೀವು ಎನ್‌ಬಿಎಫ್‌ಸಿಯಲ್ಲಿ ಹೂಡಿಕೆ ಮಾಡಿದರೆ ಸಾಮಾನ್ಯ ಬ್ಯಾಂಕುಗಳಿಗಿಂತ ಅಧಿಕ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಹಾಗಾದರೆ ಏನೆಲ್ಲ ಲಾಭ ಇದೆ ಎಂದು ತಿಳಿಯೋಣ ಮುಂದೆ ಓದಿ....

Loan Moratorium: ಎರಡು ವರ್ಷದ ತನಕ ಮರುಪಾವತಿ ವಿನಾಯಿತಿ ಪಡೆಯುವುದು ಹೇಗೆ?Loan Moratorium: ಎರಡು ವರ್ಷದ ತನಕ ಮರುಪಾವತಿ ವಿನಾಯಿತಿ ಪಡೆಯುವುದು ಹೇಗೆ?

 ಆಕರ್ಷಕ ಬಡ್ಡಿದರ ನಿಮಗೆ ಲಭ್ಯ

ಆಕರ್ಷಕ ಬಡ್ಡಿದರ ನಿಮಗೆ ಲಭ್ಯ

ಸಾಮಾನ್ಯ, ಸಾಂಪ್ರಾದಾಯಿಕ ಬ್ಯಾಂಕುಗಳಿಗಿಂತ ಎನ್‌ಬಿಎಫ್‌ಸಿಗಳಲ್ಲಿ ಫಿಕ್ಸಿಡ್ ಡೆಪಾಸಿಟ್‌ ಮೇಲೆ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ. ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನಲ್ಲಿ ಶೇಕಡ 7.25ರಷ್ಟು ವಾರ್ಷಿಕ ಬಡ್ಡಿದರವನ್ನು ಗಳಿಸಲು ಸಾಧ್ಯವಿದೆ. ನೀವು ಹಿರಿಯ ನಾಗರಿಕರಾಗಿದ್ದರೆ, ನಿಮಗೆ ಶೇಕಡ 0.25ರಷ್ಟು ಅಧಿಕ ಬಡ್ಡಿದರ ಲಭ್ಯವಾಗುತ್ತದೆ. ಇನ್ನು ಬೇರೆ ಎನ್‌ಬಿಎಫ್‌ಸಿಗಳು ಕೂಡಾ ಇದೆ. ಬಜಾಜ್ ಫೈನಾನ್ಸ್‌ನಲ್ಲಿ ವಾರ್ಷಿಕವಾಗಿ ಎಫ್‌ಡಿ ಮೇಲೆ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ಅಧಿಕ ಬಡ್ಡಿದರ ಇರುವುದರಿಂದಾಗಿ ನೀವು ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ಅದು ಕೂಡಾ ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡಬಹುದು.

 ಸಂಪೂರ್ಣವಾಗಿ ಕಸ್ಟಮೈಸೇಬಲ್

ಸಂಪೂರ್ಣವಾಗಿ ಕಸ್ಟಮೈಸೇಬಲ್

ಆಕರ್ಷಕ ಎಫ್‌ಡಿ ಬಡ್ಡಿದರಗಳ ಹೊರತಾಗಿ, ಎನ್‌ಬಿಎಫ್‌ಸಿ ಎಫ್‌ಡಿ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಲವು ಪ್ರಯೋಜನಗಳು ಇದೆ. ಇಲ್ಲಿ ಸಂಪೂರ್ಣವಾಗಿ ಕಸ್ಟಮೈಸೇಬಲಿಟಿ ಇದೆ. ಅಂದರೆ ಉದಾಹರಣೆಗೆ, ನೀವು ನಿಮ್ಮ ಹಣಕಾಸಿನ ಗುರಿ ಹಾಗೂ ಉದ್ದೇಶಕ್ಕೆ ಅನುಗುಣವಾಗಿ ಹೂಡಿಕೆಯ ಅವಧಿಯನ್ನು ಬದಲಾವಣೆ ಮಾಡಿಕೊಳ್ಳಬಹುದು. ಹೆಚ್ಚಿನ ಎನ್‌ಬಿಎಫ್‌ಸಿಯಲ್ಲಿ 12 ತಿಂಗಳುಗಳಿಂದ ಎಫ್‌ಡಿ ಅವಧಿ ಆರಂಭವಾಗುತ್ತದೆ. 60 ತಿಂಗಳಗಳವರೆಗಿನ ಅವಧಿ ಇರುತ್ತದೆ. ನೀವು ಈ ನಡುವೆ ಯಾವ ಅವಧಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಬಡ್ಡಿದರವನ್ನು ಕೂಡಾ ಅವಧಿಗೆ ಆಧಾರವಾಗಿ ಪಡೆಯಬಹುದು. ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ಹಾಗೂ ವಾರ್ಷಿಕವಾಗಿ ನೀವು ಬಡ್ಡಿದರವನ್ನು ಪಡೆಯಬಹುದು.

 ಅಕಾಲಿಕ ವಾಪಸಾತಿ ಸೌಲಭ್ಯ

ಅಕಾಲಿಕ ವಾಪಸಾತಿ ಸೌಲಭ್ಯ

ಎನ್‌ಬಿಎಫ್‌ಸಿ ಫಿಕ್ಸಿಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮಗೆ ಮತ್ತೊಂದು ಪ್ರಯೋಜನ ಲಭ್ಯವಾಗಲಿದೆ. ಅದುವೇ ಹೂಡಿಕೆಯನ್ನು ಅವಧಿಗೆ ಮುಂಚಿತವಾಗಿ ಹಿಂದಕ್ಕೆ ಪಡೆಯಬಹುದು. ನೀವು ಎನ್‌ಬಿಎಫ್‌ಸಿ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ ಕೆಲವು ತಿಂಗಳ ನಂತರ, ನಿಮಗೆ ತುರ್ತು ಹಣದ ಅವಶ್ಯಕತೆಯಿದೆ ಇದ್ದಾಗ ನೀವು ಎಫ್‌ಡಿಯನ್ನು ಅಕಾಲಿಕವಾಗಿ ಮುಚ್ಚಿ ಹಣವನ್ನು ಪಡೆಯಬಹುದು. ಆದರೆ ಇಲ್ಲಿ ನೀವು ತಿಳಿಯಬೇಕಾದ ಬೇರೆ ಅಗತ್ಯ ಮಾಹಿತಿ ಇದೆ. ಹೆಚ್ಚಿನ NBFC ಗಳು ಸಾಮಾನ್ಯವಾಗಿ ಮೂರು ತಿಂಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ. ಲಾಕ್-ಇನ್ ಅವಧಿಯ ನಂತರ ಮಾತ್ರ ನಿಮ್ಮ ಹೂಡಿಕೆಯನ್ನು ಹಿಂಪಡೆಯುವ ಅವಕಾಶವಿದ. ಆದ್ದರಿಂದ ನೀವು ನಿಮ್ಮ ಎಫ್‌ಡಿಯನ್ನು ಅಕಾಲಿಕವಾಗಿ ಹಿಂಪಡೆಯಲು ಯೋಚಿಸುತ್ತಿದ್ದರೆ ಇದು ನೆನಪಿನಲ್ಲಿ ಇರಲಿ.

 ಎಫ್‌ಡಿ ಮೇಲೆ ಸಾಲ ಸೌಲಭ್ಯ

ಎಫ್‌ಡಿ ಮೇಲೆ ಸಾಲ ಸೌಲಭ್ಯ

ಇನ್ನು ನಿಮಗೆ ತೀರಾ ಹಣದ ಅಗತ್ಯವಿದ್ದಲ್ಲಿ, ಆದರೆ ಎಫ್‌ಡಿಯನ್ನು ಅಕಾಲಿಕವಾಗಿ ಪಡೆಯಲು ಬಯಸದಿದ್ದರೆ ಏನು ಮಾಡುವುದು?. ಅದೃಷ್ಟವಶಾತ್, ಅದಕ್ಕೂ ಒಂದು ಪರಿಹಾರವಿದೆ. ನಿಮಗೆ ಎನ್‌ಬಿಎಫ್‌ಸಿಗಳು 'Loan Against FD'ಸೌಲಭ್ಯವನ್ನು ನೀಡುತ್ತದೆ. ನೀವು ಎಫ್‌ಡಿ ಮೇಲೆ ಸಾಲವನ್ನು ಪಡೆಯಬಹುದು. ತುರ್ತು ನಿಧಿಗಳನ್ನು ನೀವು ಪಡೆಯಬೇಕಾದರೆ ಈ ಸಾಲವನ್ನು ಪಡೆಯಬಹುದು. ಈ ಸೌಲಭ್ಯವನ್ನು ಆರಿಸಿಕೊಂಡರೆ, ನಿಮ್ಮ ಎಫ್‌ಡಿ ಮೇಲಾಧಾರವಾಗಿ ಸಣ್ಣ ಸಾಲವನ್ನು ಪಡೆಯಬಹುದು. ಈ ಸೌಲಭ್ಯವನ್ನು ಬಳಸಿಕೊಂಡು ನೀವು ಎಷ್ಟು ಗರಿಷ್ಠ ಸಾಲವನ್ನು ಪಡೆಯಬಹುದು ಎಂಬುವುದಕ್ಕೆ ಮಿತಿ ಇದೆ. ಸಾಮಾನ್ಯವಾಗಿ, ಎನ್‌ಬಿಎಫ್‌ಸಿಗಳು ಎಫ್‌ಡಿ ಮೇಲೆ ಶೇಕಡ 60ರಿಂದ 80ರಷ್ಟು ಸಾಲವನ್ನು ನೀಡುತ್ತದೆ.

 ಸುರಕ್ಷತೆ ಮತ್ತು ಭದ್ರತೆ

ಸುರಕ್ಷತೆ ಮತ್ತು ಭದ್ರತೆ

ಎನ್‌ಬಿಎಫ್‌ಸಿ ಫಿಕ್ಸಿಡ್ ಡೆಪಾಸಿಟ್ ಅನ್ನು ಉಳಿತಾಯ ಸಾಧನವಾಗಿ ನೀವು ಪರಿಗಣಿಸುವಾಗ, ಅಪಾಯದ ಬಗ್ಗೆ ನಿಮಗೆ ಕಾಳಜಿ ಇರುತ್ತದೆ. ಏಕೆಂದರೆ ಎನ್‌ಬಿಎಫ್‌ಸಿ ಎಫ್‌ಡಿ ಡೆಪಾಸಿಟ್ ಮೇಲೆ ನೀವು ವಿಮೆ ಇಲ್ಲ ಎಂಬುವುದು ಮುಖ್ಯ ಕಾರಣವಾಗಿದೆ. ಆದರೆ ನೀವು ಮಾಡಿದ ಹೂಡಿಕೆಯನ್ನು ನೀವು ಸುರಕ್ಷಿತವಾಗಿರಿಸಲು ಬಯಸಿದರೆ, ಬಲವಾದ ಆರ್ಥಿಕ ಹಿನ್ನೆಲೆ ಇರುವುದು ಎನ್‌ಬಿಎಫ್‌ಸಿಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡಲಾಗುತ್ತದೆ. ಕ್ರಿಸಿಲ್, ಕೇರ್ ಮತ್ತು ಐಸಿಆರ್‌ಎಯಂತಹ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಂದ ನೀಡಲಾಗುವ ರೇಟಿಂಗ್ ಅನ್ನು ನೋಡಿಕೊಂಡು ಎಫ್‌ಡಿ ಮಾಡಬಹುದು. ಹೆಚ್ಚಿನ ಕ್ರೆಡಿಟ್ ರೇಟಿಂಗ್, ಹೂಡಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

English summary

Investing in an NBFC Fixed Deposit a Good Option, Why, Here's Details

After the recent hike in the repo rate by the Reserve Bank of India, FD interest rates have increased quite significantly. Investing in an NBFC Fixed Deposit a Good Option, Why, Here's Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X