For Quick Alerts
ALLOW NOTIFICATIONS  
For Daily Alerts

ಹೊಸ ಸವರನ್ ಗೋಲ್ಡ್ ಬಾಂಡ್ ಯೋಜನೆ: ನೀವು ತಿಳಿಯಬೇಕಾದ 10 ಅಂಶ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಸವರನ್ ಗೋಲ್ಡ್ ಬಾಂಡ್ಸ್ ಅನ್ನು ಬಿಡುಗಡೆ ಮಾಡಿದ್ದು, ಇದು 2022ರ ಆಗಸ್ಟ್ 22ರಿಂದ ಚಂದಾದಾರಿಕೆಗೆ ತೆರೆದುಕೊಳ್ಳಲಿದೆ. ಇದು 2022-23 ಹಣಕಾಸು ವರ್ಷದಲ್ಲಿ ಎರಡನೇ ಬಾರಿಗೆ ಬಿಡುಗಡೆ ಆಗುತ್ತಿರುವ ಸವರನ್ ಗೋಲ್ಡ್ ಬಾಂಡ್ ಯೋಜನೆಯಾಗಿದೆ. ಮೊದಲ ಸರಣಿ ಜೂನ್‌ನಲ್ಲಿ ನಡೆದಿದೆ.

ಈ ಚಿನ್ನದ ಬಾಂಡ್ ಇಂದಿನಿಂದಲೇ (ಆಗಸ್ಟ್ 22) ಖರೀದಿಗೆ ಲಭ್ಯವಿದೆ. ಆಗಸ್ಟ್ 26ರವರೆಗೆ ನಮಗೆ ಖರೀದಿ ಮಾಡುವ ಅವಕಾಶ ಇರಲಿದೆ. ಈ ಹಣಕಾಸು ವರ್ಷದ ಎರಡನೇ ಸರಣಿಯಾದ ಇದರಲ್ಲಿ ಒಂದು ಗ್ರಾಂ ಚಿನ್ನಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 5,197 ರೂಪಾಯಿ ನಿಗದಿಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್‌ಬಿಐ, "ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬೇಡಿ. ಸವರನ್ ಗೋಲ್ಡ್ ಬಾಂಡ್‌ನ ಎರಡನೇ ಸರಣಿ ಆಗಸ್ಟ್ 22ರಿಂದ 26ರವರೆಗೆ ತೆರೆದಿರಲಿದೆ," ಎಂದು ಹೇಳಿದೆ.

ಅ.25ರಿಂದ ಸವರನ್ ಗೋಲ್ಡ್ ಬಾಂಡ್‌ ಚಂದಾದಾರಿಕೆ ಆರಂಭಅ.25ರಿಂದ ಸವರನ್ ಗೋಲ್ಡ್ ಬಾಂಡ್‌ ಚಂದಾದಾರಿಕೆ ಆರಂಭ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಗೆ ಅವಕಾಶ ನೀಡಿದೆ. ಇನ್ನು ಡಿಮ್ಯಾಟ್ ಖಾತೆ ಇರುವವರು ತಮ್ಮ ಖಾತೆಗೆ ಬಾಂಡ್ ಅನ್ನು ಜಮಾ ಮಾಡಿಕೊಳ್ಳಬಹುದು. ಹಾಗೆಯೇ ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿ ಮಾಡುವವರಿಗೆ 50 ರೂಪಾಯಿ ರಿಯಾಯಿತಿ ಲಭ್ಯವಾಗಲಿದೆ. ಈ ಸವರನ್ ಗೋಲ್ಡ್ ಬಾಂಡ್ ಬಗ್ಗೆ ಅಗತ್ಯ ಹತ್ತು ಅಂಶಗಳನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

 ಬಾಂಡ್‌ನ ಬೆಲೆ, ಮಾರಾಟ ಅವಕಾಶವಧಿ

ಬಾಂಡ್‌ನ ಬೆಲೆ, ಮಾರಾಟ ಅವಕಾಶವಧಿ

1. ಈ ಬಾಂಡ್‌ಗಳ ಪ್ರಿಮೆಚ್ಯೂರ್ ಅವಧಿ 8 ವರ್ಷಗಳ ಆಗಿದೆ. ಐದು ವರ್ಷದ ನಂತರ ಮಾರಾಟಕ್ಕೆ ಅವಕಾಶವಿದೆ. ಆದರೆ ಬಡ್ಡಿ ಪಾವತಿ ದಿನಾಂಕದಂದು ಮಾತ್ರ ಈ ಬಾಂಡ್ ಅನ್ನು ಮಾರಾಟ ಮಾಡುವ ಅವಕಾಶವಿರಲಿದೆ.

2. ಒಂದು ಗ್ರಾಂ ಚಿನ್ನಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 5,197 ರೂಪಾಯಿ ನಿಗದಿಪಡಿಸಿದೆ.

ಚಿನ್ನದ ಹೂಡಿಕೆ ಯೋಜನೆ ಮತ್ತೆ ಆರಂಭ, ಈ 4 ದಿನಗಳನ್ನು ನೆನಪಿಡಿ!ಚಿನ್ನದ ಹೂಡಿಕೆ ಯೋಜನೆ ಮತ್ತೆ ಆರಂಭ, ಈ 4 ದಿನಗಳನ್ನು ನೆನಪಿಡಿ!

 ಬಾಂಡ್ ಎಲ್ಲಿ ಖರೀದಿ ಮಾಡುವುದು?

ಬಾಂಡ್ ಎಲ್ಲಿ ಖರೀದಿ ಮಾಡುವುದು?

3. ಆನ್‌ಲೈನ್ ಮೂಲಕ ಮತ್ತು ಡಿಜಿಟಲ್ ವ್ಯವಸ್ಥೆಯ ಮೂಲಕ ಈ ಬಾಂಡ್ ಅನ್ನು ಖರೀದಿ ಮಾಡುವವರು ಅಥವಾ ಬಾಂಡ್‌ನಲ್ಲಿ ಹೂಡಿಕೆ ಮಾಡುವವರಿಗೆ ಮೂಲ ಬೆಲೆಗಿಂತ ರೂಪಾಯಿ 50ರಷ್ಟು ರಿಯಾಯಿತಿಯನ್ನು ನೀಡಲು ಸರ್ಕಾರದ ಸಲಹೆಯ ಮೇರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಧಾರ ಮಾಡಿದೆ.

4. ಹೂಡಿಕೆದಾರರು ವಾಣಿಜ್ಯ ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಸಿಐಎಲ್), ನಿಗದಿತ ಅಂಚೆ ಕಚೇರಿ ಅಧಿಕಾರಿಗಳು, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್, ನೇರವಾಗಿ ಅಥವಾ ಏಜೆಂಟ್‌ಗಳ ಮೂಲಕ ಹೂಡಿಕೆದಾರರು ಈ ಬಾಂಡ್ ಅನ್ನು ಖರೀದಿ ಮಾಡಬಹುದು.

 ಹಣ ಪಾವತಿ ವಿಧಾನ, ತೆರಿಗೆ ಹೇಗೆ?

ಹಣ ಪಾವತಿ ವಿಧಾನ, ತೆರಿಗೆ ಹೇಗೆ?

5. ಸವರನ್ ಗೋಲ್ಡ್ ಬಾಂಡ್‌ನ ಖರೀದಿ ಬಳಿಕ ಹಣ ಪಾವತಿಯನ್ನು ನಗದು ರೂಪದಲ್ಲಿ (ಗರಿಷ್ಠ 20 ಸಾವಿರ ರೂಪಾಯಿ), ಡಿಮ್ಯಾಂಡ್ ಡ್ರಾಫ್ಟ್ ಮೂಲಕ, ಚೆಕ್ ಮೂಲಕ ಅಥವಾ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮೂಲಕ ಮಾಡುವ ಅವಕಾಶವಿದೆ. ನೀವು ಆನ್‌ಲೈನ್ ಮೂಲಕ ಸವರನ್ ಗೋಲ್ಡ್ ಬಾಂಡ್‌ ಖರೀದಿ ಹಣ ಪಾವತಿಯನ್ನು ಮಾಡಿದರೆ ರೂಪಾಯಿ 50 ರಿಯಾಯಿತಿ ಲಭ್ಯವಾಗಲಿದೆ.

6. 1961 ಆದಾಯ ತೆರಿಗೆ ಕಾಯ್ದೆ ಪ್ರಕಾರ ಸವರನ್ ಗೋಲ್ಡ್ ಬಾಂಡ್ ತೆರಿಗೆಗೆ ಒಳಪಡುತ್ತದೆ.

 ಎಷ್ಟು ಬಾಂಡ್ ಖರೀದಿ ಮಾಡಬಹುದು?

ಎಷ್ಟು ಬಾಂಡ್ ಖರೀದಿ ಮಾಡಬಹುದು?

7. ಕನಿಷ್ಠ ಖರೀದಿ ಮೌಲ್ಯ 1 ಗ್ರಾಮ್ ಚಿನ್ನ ಅಂದರೆ ಒಂದು ಬಾಂಡ್ ಆಗಿದೆ. ಗರಿಷ್ಠ ಚಿನ್ನ ಖರೀದಿಗೂ ಮಿತಿ ಇದೆ. ಒಬ್ಬ ವ್ಯಕ್ತಿ ಮತ್ತು ಒಂದು ಅವಿಭಕ್ತ ಕುಟುಂಬಕ್ಕೆ 4 ಕೆಜಿ ಖರೀದಿಯ ಮಿತಿ ಇದೆ. ಟ್ರಸ್ಟ್ ಮತ್ತು ಅದೇ ರೀತಿಯ ಇತರ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ 20 ಕೆಜಿಯಷ್ಟು ಚಿನ್ನದ ಬಾಂಡ್ ಖರೀದಿ ಮಾಡುವ ಅವಕಾಶವಿದೆ.

8. ವಾರ್ಷಿಕವಾಗಿ ಶೇಕಡ 2.5ರಷ್ಟು ಬಡ್ಡಿಯನ್ನು ಪಾವತಿ ಮಾಡಲಾಗುತ್ತದೆ.

 ಸಾಲಕ್ಕೆ ಮೇಲಾಧಾರವಾಗಿ ಪರಿಗಣನೆ

ಸಾಲಕ್ಕೆ ಮೇಲಾಧಾರವಾಗಿ ಪರಿಗಣನೆ

9. ಸವರನ್ ಗೋಲ್ಡ್ ಬಾಂಡ್ ಅನ್ನು ಸಾಲ ಪಡೆಯುವ ಸಂದರ್ಭದಲ್ಲಿ ಮೇಲಾಧಾರವಾಗಿ ಪರಿಗಣಿಸಲಾಗುತ್ತದೆ. ಆಯಾ ಸಮಯಕ್ಕೆ ಸರಿಯಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿನ್ನದ ಮೇಲೆ ಎಷ್ಟು ಸಾಲ ನೀಡಲಾಗುತ್ತದೆ ಎಂದು ನಿರ್ಧಾರ ಮಾಡುತ್ತದೆಯೇ ಅಷ್ಟೇ ಮೌಲ್ಯವನ್ನು ಸವರನ್ ಗೋಲ್ಡ್ ಬಾಂಡ್‌ಗೆ ಇರಲಿದೆ.

10. ನಾವು ಸಾಮಾನ್ಯವಾಗಿ ಚಿನ್ನವನ್ನು ಖರೀದಿ ಮಾಡುವಾಗ ಹೇಗೆ ಕೆವೈಸಿ ಮಾಡಲಾಗುತ್ತದೆಯೋ ಅದೇ ರೀತಿ ಬಾಂಡ್ ಕೆವೈಸಿ ನಡೆಯಲಿದೆ. ಮತದಾನದ ಐಡಿ, ಆಧಾರ್ ಕಾರ್ಡ್/ಪ್ಯಾನ್ ಅಥವಾ ಟ್ಯಾನ್/ ಪಾಸ್‌ಪೋರ್ಟ್ ಬೇಕಾಗುತ್ತದೆ. ಆಧಾಯ ತೆರಿಗೆ ಇಲಾಖೆ ನೀಡಿರುವ ಪ್ಯಾನ್ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.

English summary

New Issue of Sovereign Gold Bond Scheme Opens On August 22, Here's Details

New Issue of Sovereign Gold Bond Scheme will open for public subscription on August 22, Monday. Here's details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X