For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ RD: ಉತ್ತಮ ರಿಟರ್ನ್ ಮೂಲಕ ಮಿಲಿಯನೇರ್‌ ಆಗುವುದು ಹೇಗೆ?

|

ಬ್ಯಾಂಕ್‌ಗಳ ರೀತಿಯಲ್ಲೇ ಅಂಚೆ ಕಚೇರಿ ಉಳಿತಾಯ ಯೋಜನೆಗಳನ್ನು ನಾವು ಕಾಣಬಹುದು. ಇವುಗಳಲ್ಲಿ ಹಣವನ್ನ ಠೇವಣಿ ಮಾಡುವ ಮೂಲಕ ಉತ್ತಮ ಬಡ್ಡಿಯನ್ನ ಗಳಿಸಬಹುದು. ಜೊತೆಗೆ ದೊಡ್ಡ ಮಟ್ಟಿಗೆ ರಿಟರ್ನ್ ಪಡೆಯಬಹುದು.

ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಒಂದನ್ನು ಸರಿಯಾಗಿ ಬಳಸಿಕೊಂಡರೆ ಮಿಲಿಯನೇರ್ ಕೂಡ ಆಗಬಹುದು. ಅಂಚೆ ಕಚೇರಿಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ದೇಶದಲ್ಲಿ ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಏಕೆಂದರೆ ಭಾರತ ಸರ್ಕಾರವು ಅಂಚೆ ಕಚೇರಿಯಲ್ಲಿ ಠೇವಣಿ ಇಟ್ಟಿರುವ ಹಣದ ಭದ್ರತೆಯನ್ನು ಖಾತರಿಪಡಿಸುತ್ತದೆ. ಅಂದಹಾಗೆ, ಬ್ಯಾಂಕುಗಳಲ್ಲಿನ ಠೇವಣಿಗಳು ಕೇವಲ 5 ಲಕ್ಷದವರೆಗೆ ಮಾತ್ರ ಸುರಕ್ಷಿತವಾಗಿರುತ್ತವೆ.

ಅಂಚೆ ಕಚೇರಿ ಆರ್‌ಡಿ ಯೋಜನೆ

ಅಂಚೆ ಕಚೇರಿ ಆರ್‌ಡಿ ಯೋಜನೆ

ಪೋಸ್ಟ್ ಆಫೀಸ್‌ನ ಆರ್‌ಡಿ ಯೋಜನೆಗಳಿಗೆ ಶೇಕಡಾ 5.8ರ ಬಡ್ಡಿಯನ್ನು ನೀಡಲಾಗುತ್ತಿದೆ. ಒಂದು ಸಮಯದಲ್ಲಿ 5 ವರ್ಷಗಳವರೆಗೆ ಹಣವನ್ನು RD ಯಲ್ಲಿ ಜಮಾ ಮಾಡಬೇಕು. ಅಂಚೆ ಕಚೇರಿಯಲ್ಲಿ RD ಬೇಸಿಕ್ ಅವಧಿ 5 ವರ್ಷಗಳು ಮಾತ್ರ, ಆದರೆ ನಂತರ ಅದನ್ನು ಯಾವುದೇ ವರ್ಷಗಳವರೆಗೆ ವಿಸ್ತರಿಸಬಹುದು.

LIC ಪ್ರೀಮಿಯಂ ಪಾವತಿಸುವ ಮೂಲಕ ಪ್ರತಿ ತಿಂಗಳು 6,859 ರೂ. ಪಡೆಯಿರಿLIC ಪ್ರೀಮಿಯಂ ಪಾವತಿಸುವ ಮೂಲಕ ಪ್ರತಿ ತಿಂಗಳು 6,859 ರೂ. ಪಡೆಯಿರಿ

RD ಯಲ್ಲಿ ಹಣವನ್ನು ಠೇವಣಿ ಮಾಡುವ ಮೂಲಕ ಮಿಲಿಯನೇರ್ ಆಗುವುದು ಹೇಗೆ ?

RD ಯಲ್ಲಿ ಹಣವನ್ನು ಠೇವಣಿ ಮಾಡುವ ಮೂಲಕ ಮಿಲಿಯನೇರ್ ಆಗುವುದು ಹೇಗೆ ?

ಪೋಸ್ಟ್ ಆಫೀಸಿನಲ್ಲಿ RD ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಲು ಆರಂಭಿಸುವ ಮೂಲಕ 30 ವರ್ಷಗಳಲ್ಲಿ ಒಬ್ಬ ಮಿಲಿಯನೇರ್ ಆಗಬಹುದು. ಪ್ರಸ್ತುತ, ಅಂಚೆ ಕಚೇರಿ ಆರ್‌ಡಿ ಮೇಲೆ ಶೇಕಡಾ 5.8ರ ಬಡ್ಡಿಯನ್ನು ನೀಡಲಾಗುತ್ತಿದೆ. ಅಂಚೆ ಕಚೇರಿಯ RD ನಲ್ಲಿ 30 ವರ್ಷಗಳವರೆಗೆ ಪ್ರತಿ ತಿಂಗಳು 10,000 ರೂ.ಗಳನ್ನು ಠೇವಣಿ ಮಾಡಿದರೆ, ಅದು 97,16,072 ರೂ. ಆಗುತ್ತದೆ.

ಹೀಗಾಗಿ ಸುಮಾರು 1 ಕೋಟಿ ರೂ.ಗಳ ನಿಧಿಯನ್ನು ಆರ್‌ಡಿ ಮೂಲಕ ರಚಿಸಬಹುದು. ಅದೇ ಸಮಯದಲ್ಲಿ, ಈ 30 ವರ್ಷಗಳಲ್ಲಿ, ಜನರ ಹೂಡಿಕೆಯು 36 ಲಕ್ಷವಾಗಿರುತ್ತದೆ. ಬಡ್ಡಿಯೇ ಸುಮಾರು 61,16,072 ರೂಪಾಯಿ ಆಗಿರುತ್ತದೆ.

  ಎಫ್‌ಡಿ ಮೇಲೆ ಶೇ 6.75 ಗರಿಷ್ಠ ಬಡ್ಡಿದರ ನೀಡುವ ಟಾಪ್ 5 ಬ್ಯಾಂಕುಗಳ ಪಟ್ಟಿ  ಎಫ್‌ಡಿ ಮೇಲೆ ಶೇ 6.75 ಗರಿಷ್ಠ ಬಡ್ಡಿದರ ನೀಡುವ ಟಾಪ್ 5 ಬ್ಯಾಂಕುಗಳ ಪಟ್ಟಿ

ಐದು ವರ್ಷಕ್ಕೆ ಎಷ್ಟು ಹಣ ಸಿಗಲಿದೆ?

ಐದು ವರ್ಷಕ್ಕೆ ಎಷ್ಟು ಹಣ ಸಿಗಲಿದೆ?

ಆರ್‌ಡಿಯಿಂದ 5 ವರ್ಷಗಳಲ್ಲಿ ಎಷ್ಟು ನಿಧಿ ಸಿದ್ಧವಾಗಲಿದೆ ಎಂಬುದಕ್ಕೆ ಉದಾಹರಣೆ ತಿಳಿಸಲಾಗಿದೆ. ಪೋಸ್ಟ್ ಆಫೀಸ್ RD ನಲ್ಲಿ ತಿಂಗಳಿಗೆ 10,000 ರೂ.ಗಳ ಹೂಡಿಕೆಯನ್ನು ಆರಂಭಿಸಿದರೆ, 5 ವರ್ಷಗಳ ನಂತರ 6,97,481 ರೂ.ಗಳ ನಿಧಿಯು ಸಿದ್ಧವಾಗುತ್ತದೆ. ಇದರಲ್ಲಿ 6 ಲಕ್ಷವು ನೀವು ಪಾವತಿಸಿದ ಹಣವಾಗಿದ್ದು, ಉಳಿದ 97,481 ರೂಪಾಯಿ ಬಡ್ಡಿ ಸಿಗಲಿದೆ.

10 ವರ್ಷಕ್ಕೆ ಎಷ್ಟು ಆರ್‌ಡಿ ಹಣ ಸಿಗಲಿದೆ?

10 ವರ್ಷಕ್ಕೆ ಎಷ್ಟು ಆರ್‌ಡಿ ಹಣ ಸಿಗಲಿದೆ?

10 ವರ್ಷಗಳಲ್ಲಿ RD ಯಿಂದ 10,000 ಹಣ ಪಾವತಿ ಮಾಡಿದ್ರೆ, ಇದರಲ್ಲಿ 12 ಲಕ್ಷ ಠೇವಣಿ ಇಡಲಾಗುವುದು, ಉಳಿದ 4,28,963 ರೂಪಾಯಿಗಳಿಗೆ ಬಡ್ಡಿ ಸಿಗುತ್ತದೆ.

15 ವರ್ಷಗಳಲ್ಲಿ ಎಷ್ಟು ನಿಧಿ ಸಿದ್ಧವಾಗಲಿದೆ ?

15 ವರ್ಷಗಳಲ್ಲಿ ಎಷ್ಟು ನಿಧಿ ಸಿದ್ಧವಾಗಲಿದೆ ?

ಅಂಚೆ ಕಚೇರಿಯಲ್ಲಿ ತಿಂಗಳಿಗೆ 10,000 ರೂ.ಗಳ ಆರ್‌ಡಿ ಪ್ರಾರಂಭಿಸಿದರೆ, 15 ವರ್ಷಗಳ ನಂತರ 28,72,951 ರೂಗಳ ನಿಧಿ ಸಿದ್ಧವಾಗುತ್ತದೆ. ಇದರಲ್ಲಿ, 18 ಲಕ್ಷ ರೂ.ಗಳನ್ನು ಸ್ವತಃ ಜಮೆ ಮಾಡಲಾಗುತ್ತದೆ, ಉಳಿದ 10,72,951 ಬಡ್ಡಿ ಮೂಲಕ ಸಿಗಲಿದೆ.

20 ವರ್ಷಗಳಲ್ಲಿ ಎಷ್ಟು ಹಣ ಠೇವಣಿಯಾಗುತ್ತೆ?

20 ವರ್ಷಗಳಲ್ಲಿ ಎಷ್ಟು ಹಣ ಠೇವಣಿಯಾಗುತ್ತೆ?

ತಿಂಗಳಿಗೆ 10,000 ರೂ.ಗಳ ಹಣವನ್ನು ಠೇವಣಿ ಮಾಡಲು ಆರಂಭಿಸಿದ್ರೆ, ಇದರಲ್ಲಿ, 24 ಲಕ್ಷಗಳನ್ನು ಸ್ವಯಂ-ಠೇವಣಿ ಮಾಡಲಾಗುತ್ತದೆ, ಉಳಿದ 21,34,290 ರೂ.ಗಳು ಬಡ್ಡಿಯಾಗಿ ಲಭ್ಯವಿರುತ್ತವೆ.

25 ವರ್ಷಗಳಲ್ಲಿ ಎಷ್ಟು ಹಣ ಸಿಗಲಿದೆ?

25 ವರ್ಷಗಳಲ್ಲಿ ಎಷ್ಟು ಹಣ ಸಿಗಲಿದೆ?

ಪೋಸ್ಟ್ ಆಫೀಸ್‌ನಲ್ಲಿ ತಿಂಗಳಿಗೆ 10,000 ರೂ.ಗಳ ಆರ್‌ಡಿ ಆರಂಭಿಸಿದರೆ, 25 ವರ್ಷಗಳ ನಂತರ 67,52,999 ರೂಗಳ ನಿಧಿ ಸಿದ್ಧವಾಗುತ್ತದೆ. 30 ಲಕ್ಷ ಸ್ವಯಂ ಠೇವಣಿ, ಉಳಿದ ರೂ 37,52,999 ಬಡ್ಡಿಯಾಗಿ ಲಭ್ಯವಿರುತ್ತದೆ.

English summary

Post Office RD: How To Become A Millionaire By Investing Monthly

Here the details of how you can be a millionaire by investing in Post office RD
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X