For Quick Alerts
ALLOW NOTIFICATIONS  
For Daily Alerts

ಬಡ್ಡಿದರ ಏರಿಕೆ ನಡುವೆ ಎಫ್‌ಡಿ ನಿಯಮ ಬದಲಾಯಿಸಿದ ಆರ್‌ಬಿಐ

|

ಸಾಮಾನ್ಯ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿದರಗಳನ್ನು ಪಡೆಯಲು ಅನೇಕ ಜನರು ಫಿಕ್ಸಿಡ್ ಡೆಪಾಸಿಟ್‌ಗಳನ್ನು ಬಳಕೆ ಮಾಡುತ್ತಾರೆ. ನೀವು ಕೂಡಾ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಹೊಂದಿದ್ದರೆ ಈ ಸುದ್ದಿಯನ್ನು ಓದಿ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಫ್‌ಡಿಗೆ ಸಂಬಂಧಿಸಿ ನಿಯಮವನ್ನು ಬದಲಾವಣೆ ಮಾಡಿದೆ. ಈ ಬಗ್ಗೆ ಇಲ್ಲಿ ಮಾಹಿತಿ ಇದೆ.

 

ಆರ್‌ಬಿಐ ಇತ್ತೀಚೆಗೆ ರೆಪೋ ದರವನ್ನು ಏರಿಕೆ ಮಾಡಿದೆ. 40 ಮೂಲಾಂಕಗಳಷ್ಟು ಏರಿಕೆ ಮಾಡಿದೆ. ಸಾಮಾನ್ಯವಾಗಿ ರೆಪೋ ದರ ಏರಿಕೆಯು ಬ್ಯಾಂಕ್‌ನ ಗೃಹ ಸಾಲದ ಮೇಲೆ ಹಾಗೂ ಎಫ್‌ಡಿ ಮೇಲೆ ಪ್ರಭಾವ ಬೀರುತ್ತದೆ. ಈ ರೆಪೋ ದರ ಏರಿಕೆ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು ಬಡ್ಡಿದರ ಏರಿಕೆ ಮಾಡಿದೆ.

 

ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿ

ಇತ್ತೀಚೆಗೆ, ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈಗ ಆರ್‌ಬಿಐ ಎಫ್‌ಡಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ. ನೀವು ಎಫ್‌ಡಿ ರೂಪದಲ್ಲಿ ಯಾವುದೇ ಹೂಡಿಕೆಗಳನ್ನು ಮಾಡಲು ಯೋಜಿಸುತ್ತಿದ್ದರೆ, ಮೊದಲು ಈ ಹೊಸ ನಿಯಮವನ್ನು ಪರಿಶೀಲನೆ ಮಾಡುವುದು ಉತ್ತಮ.

ಬಡ್ಡಿದರ ಏರಿಕೆ ನಡುವೆ ಎಫ್‌ಡಿ ನಿಯಮ ಬದಲಾಯಿಸಿದ ಆರ್‌ಬಿಐ

ಎಫ್‌ಡಿ ಸಂಬಂಧಿಸಿ ಆರ್‌ಬಿಐ ಯಾವ ಬದಲಾವಣೆ?

ಎಫ್‌ಡಿ ಸಂಬಂಧಿಸಿ ಆರ್‌ಬಿಐ ಮಾಡಿದ ಇತ್ತೀಚಿನ ಬದಲಾವಣೆಗಳ ಪ್ರಕಾರ, ನೀವು ಎಫ್‌ಡಿಯ ಮುಕ್ತಾಯ ದಿನಾಂಕದ ನಂತರ ನಿಮ್ಮ ಮೊತ್ತವನ್ನು ಕ್ಲೈಮ್ ಮಾಡದಿದ್ದರೆ ಎಫ್‌ಡಿ ಮೇಲೆ ಕಡಿಮೆ ಬಡ್ಡಿದರ ಲಭಿಸಲಿದೆ. ಈ ಸಂದರ್ಭದಲ್ಲಿ, ನೀವು ಫಿಕ್ಸಿಡ್ ಡೆಪಾಸಿಟ್‌ಗೆ ನಿಜವಾದ ಬಡ್ಡಿದರ ಎಷ್ಟಿದೆ ಅಷ್ಟು ಬಡ್ಡಿದರವನ್ನು ಪಡೆಯುವುದಿಲ್ಲ. ಆದರೆ ಉಳಿತಾಯ ಖಾತೆಯಲ್ಲಿ ಸ್ವೀಕರಿಸಬೇಕಾದ ಬಡ್ಡಿದರ ಲಭಿಸಲ್ಲ.

ಇಲ್ಲಿಯವರೆಗೆ, ಹೆಚ್ಚಿನ ಬ್ಯಾಂಕುಗಳು 5 ರಿಂದ 10 ವರ್ಷಗಳವರೆಗೆ ಮಾಡಿದ ಎಫ್‌ಡಿಗಳಿಗೆ ಶೇಕಡಾ ಐದಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಅದೇ ಅವಧಿಯಲ್ಲಿ ಉಳಿತಾಯ ಖಾತೆಯಲ್ಲಿನ ಬಡ್ಡಿ ದರವು ಸುಮಾರು 3 ರಿಂದ 4 ಪ್ರತಿಶತ ಆಗಿರಲಿದೆ. ಅಂದರೆ ನೀವು ಎಫ್‌ಡಿಯ ಮೆಚ್ಯೂರಿಟಿ ದಿನಾಂಕದ ಬಳಿಕವೂ ಎಫ್‌ಡಿ ಹಣವನ್ನು ಕ್ಲೈಮ್ ಮಾಡದಿದ್ದರೆ, ಉಳಿತಾಯ ಖಾತೆ ಅಥವಾ ಎಫ್‌ಡಿಯಲ್ಲಿ ಯಾವುದು ಕಡಿಮೆಯೋ ಆ ಬಡ್ಡಿದರವನ್ನು ವಿಧಿಸಲಾಗುತ್ತದೆ.

ಗಮನಾರ್ಹವಾಗಿ, ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸ್ಥಳೀಯ ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿದ ಠೇವಣಿಗಳಿಗೆ ಹೊಸ ನಿಯಮಗಳು ಅನ್ವಯಿಸುತ್ತವೆ.

ಎಫ್‌ಡಿ ಮೇಲಿನ ಹಳೆಯ ನಿಯಮ ಯಾವುದು?

ಹಳೆಯ ನಿಯಮದ ಪ್ರಕಾರ, ನೀವು ಮೆಚ್ಯೂರಿಟಿಯಲ್ಲಿ ನಿಮ್ಮ ಎಫ್‌ಡಿಯನ್ನು ಹಿಂತೆಗೆದುಕೊಳ್ಳದಿದ್ದರೆ ಅಥವಾ ಕ್ಲೈಮ್ ಮಾಡದಿದ್ದರೆ, ಮೆಚ್ಯೂರಿಟಿಯನ್ನು ನೋಡುವ ಸಮಯದಲ್ಲಿ ನೀವು ಆಯ್ಕೆ ಮಾಡಿದ ಅದೇ ಅವಧಿಗೆ ಬ್ಯಾಂಕ್ ಅದನ್ನು ವಿಸ್ತರಿಸುತ್ತದೆ. ಉದಾಹರಣೆಗೆ, 5 ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮಾಡಿದವರು ಯಾವುದೇ ಕಾರಣದಿಂದ ಅದನ್ನು ಹಿಂತೆಗೆದುಕೊಳ್ಳದಿದ್ದರೆ ನೀವು ಉಳಿತಾಯ ಅಥವಾ ಎಫ್‌ಡಿಯಲ್ಲಿ ಯಾವುದು ಕಡಿಮೆ ಬಡ್ಡಿದರವೋ ಅದನ್ನು ಪಡೆಯುತ್ತೀರಿ.

English summary

RBI has Changed Fixed Deposit Rules, Here's a Details

After banks increased interest rates, RBI has changed fixed deposit rules. Here's a Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X