For Quick Alerts
ALLOW NOTIFICATIONS  
For Daily Alerts

RBI Repo Rate : ಎಫ್‌ಡಿ ಹೊಂದಿರುವವರಿಗೆ ಸಿಹಿಸುದ್ದಿ: ರೆಪೋ ಏರಿಕೆ, ಹೂಡಿಕೆಗೆ ಸಕಾಲವೇ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ಆರ್‌ಬಿಐ ರೆಪೋ ದರವನ್ನು 35 ಮೂಲಾಂಕ ಏರಿಕೆ ಮಾಡಿದ್ದು, ಪ್ರಸ್ತುತ ದರ ಶೇಕಡ 6.25ಕ್ಕೆ ತಲುಪಿದೆ. ಈ ಬೆನ್ನಲ್ಲೇ ಬ್ಯಾಂಕ್‌ಗಳು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಹೆಚ್ಚಳ ಮಾಡುವ ಮೂಲಕ ಹೂಡಿಕೆದಾರರಿಗೆ ಸಿಹಿಸುದ್ದಿಯನ್ನು ನೀಡುವ ಸಾಧ್ಯತೆ ಇದೆ.

ಆರ್‌ಬಿಐ ಒಟ್ಟಾಗಿ ಈವರೆಗೆ ಐದು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ 40 ಮೂಲಾಂಕ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಅದಾದ ಬಳಿಕ ಮೂರು ಬಾರಿ ರೆಪೋ ದರ ಹೆಚ್ಚಿಸಲಾಗಿದೆ.

ಎಫ್‌ಡಿ ಬಡ್ಡಿದರ ಏರಿಸಿದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ನೂತನ ದರ ಇಲ್ಲಿದೆಎಫ್‌ಡಿ ಬಡ್ಡಿದರ ಏರಿಸಿದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ನೂತನ ದರ ಇಲ್ಲಿದೆ

ಸಾಮಾನ್ಯವಾಗಿ ರೆಪೋ ದರ ಪರಿಷ್ಕರಣೆ ಮಾಡಿದರೆ, ಅದು ಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರುತ್ತದೆ. ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುತ್ತದೆ. ಗೃಹ ಸಾಲದ ಬಡ್ಡಿದರ ಅಧಿಕವಾಗುವುದರಿಂದ ನಿಮ್ಮ ಮಾಸಿಕ ಇಎಂಐ ಅಧಿಕವಾಗಲಿದೆ. ಆದರೆ ಎಫ್‌ಡಿ ಹೊಂದಿರುವವರಿಗೆ ಲಾಭ ಅಧಿಕವಾಗಲಿದೆ. ಹೂಡಿಕೆಗೆ ಇದು ಸಕಾಲವೇ, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಎಫ್‌ಡಿ ಬಡ್ಡಿದರ ಎಷ್ಟು ಹೆಚ್ಚಳ ಸಾಧ್ಯತೆ?

ಎಫ್‌ಡಿ ಬಡ್ಡಿದರ ಎಷ್ಟು ಹೆಚ್ಚಳ ಸಾಧ್ಯತೆ?

ಈ ಹಿಂದೆ ಎಫ್‌ಡಿ ಮೇಲೆ ಅತೀ ಕಡಿಮೆ ಬಡ್ಡಿದರ ಲಭ್ಯವಾಗುತ್ತಿತ್ತು. ಆದರೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದ ಬಳಿಕ ಬ್ಯಾಂಕ್‌ಗಳು ನಾಲ್ಕು ಬಾರಿಯೂ ಎಫ್‌ಡಿ ಬಡ್ಡಿದರವನ್ನು ಅಧಿಕ ಮಾಡಿದೆ. ಇದರಿಂದಾಗಿ ಎಫ್‌ಡಿ ಹೊಂದಿರುವವರಿಗೆ ಲಾಭವಾಗಿದೆ. ಇಂದು ರೆಪೋ ದರವನ್ನು ಹೆಚ್ಚಳ ಮಾಡಿದ ಕಾರಣದಿಂದಾಗಿ ಎಫ್‌ಡಿ ಬಡ್ಡಿದರವು ಕೂಡಾ ಹೆಚ್ಚಳವಾಗಲಿದೆ. ಇದರಿಂದಾಗಿ ಎಫ್‌ಡಿ ಬಡ್ಡಿದರವು ಶೇಕಡ 5.5ರಿಂದ ಶೇಕಡ 7.5ರ ಸುಮಾರಿಗೆ ಏರಿಕೆಯಾಗುವ ಸಾಧ್ಯತೆಯಿದೆ.

 ಬ್ಯಾಂಕ್‌ಗಳಿಗೆ ಎಷ್ಟಿದೆ ಬಡ್ಡಿದರ?

ಬ್ಯಾಂಕ್‌ಗಳಿಗೆ ಎಷ್ಟಿದೆ ಬಡ್ಡಿದರ?

ಸರ್ಕಾರಿ ಬ್ಯಾಂಕ್‌ಗಳಾದ ಯೂನಿಯನ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7ರಿಂದ 7.5ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಇನ್ನೊಂದೆಡೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶೇಕಡ 5ರಿಂದ ಶೇಕಡ 6.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಕೆಲವು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಸುಮಾರು ಶೇಕಡ 8ರಿಂದ ಶೇಕಡ 8.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಆರ್‌ಬಿಐ ಈಗ ರೆಪೋ ದರ ಹೆಚ್ಚಿಸಿರುವ ಕಾರಣದಿಂದಾಗಿ ಬ್ಯಾಂಕ್‌ಗಳು 25 ಮೂಲಾಂಕ ದರ ಅಧಿಕ ಮಾಡುವ ಸಾಧ್ಯತೆ ಇದೆ.

 ಹೂಡಿಕೆಗೆ ಸಕಾಲವೇ?

ಹೂಡಿಕೆಗೆ ಸಕಾಲವೇ?

ಬ್ಯಾಂಕ್‌ಗಳಲ್ಲಿ ಫಿಕ್ಸಿಡ್ ಡೆಪಾಸಿಟ್‌ ಹೂಡಿಕೆ ಎಂದಿಗೂ ಕೂಡಾ ಲಾಭದಾಯಕವಾಗಿದೆ. ಹೂಡಿಕೆದಾರರು 3ರಿಂದ 5 ವರ್ಷದ ಅವಧಿಯ ಡೆಪಾಸಿಟ್ ಅನ್ನು ಮಾಡುವುದು ಉತ್ತಮ. ಅದಕ್ಕೂ ಅಧಿಕ ಅವಧಿಯಲ್ಲಿ ನೀವು ಹೂಡಿಕೆ ಮಾಡಿದರೆ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ. ಅದರಿಂದ ನಮಗೆ ನಷ್ಟವಾಗಬಹುದು. ಆದ್ದರಿಂದ ನಾವು ಕಡಿಮೆ ಅವಧಿಯ ಹೂಡಿಕೆ ಮಾಡಿದರೆ ಅಧಿಕ ಲಾಭವನ್ನೇ ಪಡೆಯಬಹುದು. ನೀವು ಎಫ್‌ಡಿ ಬಡ್ಡಿದರ ಮತ್ತೆ ಇಳಿಕೆಯಾಗುವುದಕ್ಕಿಂತ ಮುನ್ನ 3ರಿಂದ 6 ತಿಂಗಳ ಅವಧಿಯ ಮೇಲೆ ಹೂಡಿಕೆ ಮಾಡಿ.

English summary

RBI’s Repo Rate Hike: Fixed Deposit Holders Can Cheer Again, Why?

The last few monetary policy announcements have largely been helpful for fixed deposit holders who were getting very poor interest rates. Fixed Deposit Holders Can Cheer Again, Why?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X