For Quick Alerts
ALLOW NOTIFICATIONS  
For Daily Alerts

Rules Change From 1 August 2022 : ಆಗಸ್ಟ್‌ 1ರಿಂದ ಯಾವೆಲ್ಲಾ ಹಣಕಾಸು ನಿಯಮ ಬದಲಾವಣೆ ತಿಳಿಯಿರಿ

|

ಜುಲೈ ತಿಂಗಳು ಕೊನೆಯಾಗುತ್ತಿದ್ದು ಆಗಸ್ಟ್ ತಿಂಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಆಗಸ್ಟ್ ತಿಂಗಳಿನಲ್ಲಿ ಎಲ್‌ಪಿಜಿ ದರ ಸೇರಿದಂತೆ ಹಲವಾರು ಹಣಕಾಸು ಸಂಬಂಧಿತ ಬದಲಾವಣೆಗಳು ಆಗಲಿದೆ. ಹೊಸ ತಿಂಗಳಿನಲ್ಲಿ ಆಗುವ ಈ ಬದಲಾವಣೆಗಳು ಕಂಡಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡಲಿದೆ.

 

ನಮ್ಮ ಜೀವನವನ್ನು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಸಾಗಲು ನಮಗೆ ವೈಯಕ್ತಿಕ ಹಣಕಾಸು ಮುಖ್ಯವಾಗಿದೆ. ನಮ್ಮ ಸುತ್ತಮುತ್ತಲೂ ಆಗುವ ಎಲ್ಲಾ ಬದಲಾವಣೆಗಳು ಕೂಡಾ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಕೆಲವು ನಿಯಮ ಬದಲಾವಣೆಯು ನಮಗೆ ಲಾಭವನ್ನು ಉಂಟು ಮಾಡಿದರೆ, ಇನ್ನು ಕೆಲವು ನಿಯಮ ಬದಲಾವಣೆಯು ನಮಗೆ ನಷ್ಟವನ್ನು ಉಂಟು ಮಾಡಬಹುದು. ನಮ್ಮ ಮಾಸಿಕ ಬಜೆಟ್ ಅನ್ನು ಬುಡಮೇಲು ಮಾಡಬಹುದು.

ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟುಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು

ಆಗಸ್ಟ್‌ ಒಂದರಿಂದ ನಮ್ಮ ವೈಯಕ್ತಿಕ ಹಣಕಾಸು ಮೇಲೆ ಪ್ರಭಾವ ಬೀರುವ ಬ್ಯಾಂಕಿಂಗ್ ಸಂಬಂಧಿತ ನಿಯಮಗಳು ಬದಲಾವಣೆಯಾಗಲಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ನಿಯಮ ಬದಲಾವಣೆಯಾಗಲಿದೆ. ಕೆಲವು ಬ್ಯಾಂಕ್‌ಗಳು ಶುಲ್ಕವನ್ನು ಕೂಡಾ ಹೆಚ್ಚಳ ಮಾಡಿದೆ. ಆಗಸ್ಟ್‌ನಿಂದ ಯಾವೆಲ್ಲಾ ಹಣಕಾಸು ನಿಯಮಗಳು ಬದಲಾವಣೆಯಾಗಲಿದೆ ಎಂದು ತಿಳಿಯೋಣ ಮುಂದೆ ಓದಿ....

 ಎಲ್‌ಪಿಜಿ ದರ ಏರಿಕೆ ಸಾಧ್ಯತೆ

ಎಲ್‌ಪಿಜಿ ದರ ಏರಿಕೆ ಸಾಧ್ಯತೆ

ಈ ತಿಂಗಳ ಒಂದನೇ ತಾರೀಖಿನಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದ್ದರೆ, ಒಂದು ವಾರ ಕಳೆಯುತ್ತಿದ್ದಂತೆ ಗೃಹ ಬಳಕೆ ಸಿಲಿಂಡರ್ ದರವು ಏರಿಕೆಯಾಗಿದೆ. ಇದರಂತೆಯೇ ಈ ತಿಂಗಳಿನಲ್ಲಿಯೂ ಗೃಹ ಬಳಕೆ ಸಿಲಿಂಡರ್ ದರವು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ತಿಂಗಳಿನಲ್ಲಿ ಗೃಹ ಬಳಕೆಯ ಸಿಲಿಂಡರ್‌ನ ಬೆಲೆಯಲ್ಲಿ ಸುಮಾರು ಐವತ್ತು ರೂಪಾಯಿ ಏರಿಕೆ ಮಾಡಲಾಗಿದೆ. ಈ ಬಾರಿ ಕನಿಷ್ಠ 20ರಿಂದ 30 ರೂಪಾಯಿವರೆಗೆ ಅಡುಗೆ ಅನಿಲ ಬೆಲೆಯಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ. ಜುಲೈ 6ರಂದು ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು 1,053 ರೂಪಾಯಿ ಆಗಿದೆ.

LPG Cylinder Price: ಜನರ ಜೇಬಿಗೆ ಮತ್ತೆ ಕತ್ತರಿ, ಎಲ್‌ಪಿಜಿ ಇನ್ನಷ್ಟು ದುಬಾರಿ!LPG Cylinder Price: ಜನರ ಜೇಬಿಗೆ ಮತ್ತೆ ಕತ್ತರಿ, ಎಲ್‌ಪಿಜಿ ಇನ್ನಷ್ಟು ದುಬಾರಿ!

 ಬ್ಯಾಂಕ್ ಆಫ್ ಬರೋಡಾ ಗ್ರಾಹಕರೇ ಗಮನಿಸಿ
 

ಬ್ಯಾಂಕ್ ಆಫ್ ಬರೋಡಾ ಗ್ರಾಹಕರೇ ಗಮನಿಸಿ

ಚೆಕ್ ಕ್ಲಿಯರೆನ್ಸ್ ಸಂಬಂಧಿಸಿದಂತೆ ಆರ್‌ಬಿಐನ ಮಾರ್ಗಸೂಚಿಯನ್ನು ಅನುಸರಿಸಿ ತನ್ನ ಚೆಕ್ ಪಾವತಿ ನಿಯಮದಲ್ಲಿ ಬ್ಯಾಂಕ್ ಆಫ್ ಬರೋಡಾ ಕೆಲವು ಬದಲಾವಣೆಗಳನ್ನು ಮಾಡಿದೆ. ಪಾಸಿಟಿವ್ ಪೇ ಸಿಸ್ಟಮ್‌ ಅನ್ನು ಕಡ್ಡಾಯಗೊಳಿಸಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಆಗಸ್ಟ್ 1ರಿಂದ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳನ್ನು ಪಾವತಿಸಲು ಪಾಸಿಟಿವ್ ಪೇ ಸಿಸ್ಟಮ್‌ ಕಡ್ಡಾಯ ಎಂದು ಹೇಳಿದೆ. ಇಲ್ಲವಾದರೆ ಚೆಕ್‌ ಪಾವತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗದು ಎಂದು ಕೂಡಾ ಬ್ಯಾಂಕ್ ಮಾಹಿತಿ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2020ರಲ್ಲಿ ಚೆಕ್‌ಗಳಿಗೆ ಪಾಸಿಟಿವ್ ಪೇ ಸಿಸ್ಟಮ್‌ ಅನ್ನು ಪರಿಚಯಿಸಿದೆ. ಈ ವ್ಯವಸ್ಥೆಯಲ್ಲಿ ಐವತ್ತು ಸಾವಿರಕ್ಕಿಂತ ಅಧಿಕ ಮೊತ್ತದ ಚೆಕ್ ಸಂದರ್ಭದಲ್ಲಿ ಎಲ್ಲಾ ವಿವರಗಳನ್ನು ಪರಿಶೀಲನೆ ಮಾಡಲಾಗುತ್ತದೆ.

 13  ದಿನ ಬ್ಯಾಂಕ್ ರಜೆ

13 ದಿನ ಬ್ಯಾಂಕ್ ರಜೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್‌ನ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐನ ಈ ಪಟ್ಟಿ ಪ್ರಕಾರ, ಆಗಸ್ಟ್‌ 2022 ರಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ. ಬ್ಯಾಂಕ್ ರಜೆಗಳು ಕೂಡಾ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಬೀರಳಿದೆ. ನಾವು ಬ್ಯಾಂಕ್ ರಜೆ ಇರುವ ದಿನವೇ ಯಾವುದಾದರೂ ಅಗತ್ಯ ವಹಿವಾಟು ಮಾಡಲು ಇದ್ದರೆ ಕೊನೆಯ ಕ್ಷಣದಲ್ಲಿ ಕಷ್ಟ ಪಡುವ ಬದಲು ಈಗಲೇ ರಜೆ ಯಾವೆಲ್ಲಾ ದಿನ ಇರಲಿದೆ ಎಂದು ತಿಳಿಯುವುದು ಉತ್ತಮ. ಇದಕ್ಕಾಗಿ ನೀವು ಈ ಲಿಂಕ್ ಕ್ಲಿಕ್ ಮಾಡಿ.

English summary

Rules that Can Impact your Personal Finance to Change from August 2022

ATM charges, salary, EMI payments: Rules that can impact your personal finance to change from August.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X