For Quick Alerts
ALLOW NOTIFICATIONS  
For Daily Alerts

Changes from February 2023 : ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?

|

ಜನವರಿ ತಿಂಗಳು ಕೊನೆಯಾಗುತ್ತಿದ್ದು ಫೆಬ್ರವರಿ ತಿಂಗಳು ಆರಂಭವಾಗಲು ಇನ್ನು ಎರಡೇ ದಿನಗಳ ಬಾಕಿ ಉಳಿದಿದೆ. ಈ ವರ್ಷದ ಮೊದಲ ತಿಂಗಳು ಕೊನೆಯಾಗುತ್ತಿದ್ದು ನಾವು ಹೊಸ ತಿಂಗಳು ಆರಂಭಕ್ಕೆ ಕಾಯುತ್ತಿದ್ದೇವೆ. ಈ ತಿಂಗಳಲ್ಲಿ ಎಲ್‌ಪಿಜಿ ದರ ಸೇರಿದಂತೆ ಹಲವಾರು ಹಣಕಾಸು ಸಂಬಂಧಿತ ಬದಲಾವಣೆಗಳು ಆಗಲಿದೆ. ಹೊಸ ತಿಂಗಳಿನಲ್ಲಿ ಆಗುವ ಈ ಬದಲಾವಣೆಗಳು ಖಚಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡಲಿದೆ.

ಪ್ರಮುಖವಾಗಿ ಹೊಸ ತಿಂಗಳ ಮೊದಲ ದಿನವೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮಂಡನೆ ಪ್ರಮುಖವಾಗಿ ನಿಮ್ಮ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುವ ನಿರೀಕ್ಷೆಯಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಬರುವ, ಮೋದಿ ಸರ್ಕಾರದ ಈ ಆಡಳಿತಾವಧಿ ಕೊನೆಯ ಬಜೆಟ್ ಇದಾದ ಕಾರಣ ಜನರು ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ.

ಜ.31ರಂದು ಆರ್ಥಿಕ ಸಮೀಕ್ಷೆ ಮಂಡನೆ, ಏನಿದು, ಏನಿರುತ್ತದೆ ಇಲ್ಲಿದೆ ಮಾಹಿತಿಜ.31ರಂದು ಆರ್ಥಿಕ ಸಮೀಕ್ಷೆ ಮಂಡನೆ, ಏನಿದು, ಏನಿರುತ್ತದೆ ಇಲ್ಲಿದೆ ಮಾಹಿತಿ

ಬಜೆಟ್‌ ವೇಳೆ ಮಾಡುವ ಎಲ್ಲ ಘೋಷಣೆಗಳು ಮುಂದಿನ ಹಣಕಾಸು ವರ್ಷ ಅಂದರೆ ಏಪ್ರಿಲ್ 1ರಿಂದ ಪ್ರಭಾವ ಬೀರಲಿದೆ. ಹಾಗೆಯೇ ಫೆಬ್ರವರಿ ತಿಂಗಳಿನಲ್ಲೂ ಕೆಲವೊಂದು ಬದಲಾವಣೆ ಉಂಟು ಮಾಡುವ ನಿರೀಕ್ಷೆಯಿದೆ. ಬಜೆಟ್‌ನಿಂದ ಜನರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದರೆ ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ಹಲವಾರು ಬದಲಾವಣೆಗಳು ಉಂಟಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಬಿಒಬಿ ಕ್ರೆಡಿಟ್ ಕಾರ್ಡ್ ಶುಲ್ಕ

ಬಿಒಬಿ ಕ್ರೆಡಿಟ್ ಕಾರ್ಡ್ ಶುಲ್ಕ

ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಕ್ರೆಡಿಟ್ ಕಾರ್ಡ್‌ದಾರರು ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ ವಹಿವಾಟನ್ನು ನಡೆಸಿದರೆ ಶೇಕಡ 1ರಷ್ಟು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಈ ನೂತನ ನಿಯಮವು ಫೆಬ್ರವರಿ 1, 2023ರಿಂದ ಜಾರಿಗೆ ಬರುತ್ತದೆ. ವ್ಯಕ್ತಿಯು ಬಿಒಬಿ ಕ್ರೆಡಿಟ್ ಕಾರ್ಡ ಬಳಸಿ 10,500 ರೂಪಾಯಿ ಬಾಡಿಗೆಯನ್ನು ಪಾವತಿ ಮಾಡಿದರೆ, ಶೇಕಡ 1ರಷ್ಟು ಅಂದರೆ 105 ರೂಪಾಯಿಯನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

 ಎಲ್‌ಪಿಜಿ ದರ ಪರಿಷ್ಕರಣೆ

ಎಲ್‌ಪಿಜಿ ದರ ಪರಿಷ್ಕರಣೆ

ಪ್ರತಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ತಿಂಗಳ ಮೊದಲ ದಿನ ತೈಲಾ ಕಂಪನಿಗಳು ಎಲ್‌ಪಿಜಿ ದರವನ್ನು ಏರಿಸುತ್ತದೆ ಅಥವಾ ಇಳಿಸುತ್ತದೆ. ಪ್ರಸ್ತುತ ಎಲ್‌ಪಿಜಿ ದರವು ಭಾರೀ ಪ್ರಮಾಣದಲ್ಲಿ ಅಧಿಕವಾಗಿದೆ. ಆದ್ದರಿಂದ ತೈಲಾ ಕಂಪನಿಗಳು ಎಲ್‌ಪಿಜಿ ದರ ಇಳಿಕೆ ಮಾಡಬಹುದು ಎಂಬ ನಿರೀಕ್ಷೆಯಿದೆ.

 ಟಾಟಾ ಕಾರು ದರ ಏರಿಕೆ

ಟಾಟಾ ಕಾರು ದರ ಏರಿಕೆ

ಟಾಟಾ ಮೋಟರ್ಸ್ ತನ್ನ ಕಾರುಗಳ ದರವನ್ನು ಮುಂದಿನ ತಿಂಗಳಿನಿಂದ ಶೇಕಡ 1.2ರಷ್ಟು ಹೆಚ್ಚಳ ಮಾಡಲಿದೆ ಎಂದು ಹೇಳಿದೆ. ಸಂಸ್ಥೆಯು ರೆಗ್ಯೂಲಾರಿಟಿ ಬದಲಾವಣೆ, ವೆಚ್ಚ ಏರಿಕೆಯಾದ ಕಾರಣದಿಂದಾಗಿ ಕಾರುಗಳ ಬೆಲೆ ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ ಎಂದು ಹೇಳಿಕೊಂಡಿದೆ. ಫೆಬ್ರವರಿ 1, 2023ರಿಂದ ಟಾಟಾ ಮೋಟರ್ಸ್ ಕಾರುಗಳ ಬೆಲೆಯು ಶೇಕಡ 1.2ರಷ್ಟು ಅಧಿಕವಾಗಲಿದೆ.

 ಕೇಂದ್ರ ಬಜೆಟ್‌ 2023

ಕೇಂದ್ರ ಬಜೆಟ್‌ 2023

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಲಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಮಂಡನೆಯಾಗುವ ಬಜೆಟ್ ಇದಾಗಿದೆ. ಹಾಗೆಯೇ ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾಗಿದೆ. ಆದರಿಂದಾಗಿ ಜನರು ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಸಾಮಾನ್ಯ ಜನರಿಗೆ ರಿಲೀಫ್ ನೀಡುವ ಹಲವಾರು ಘೋಷಣೆಗಳನ್ನು ಸರ್ಕಾರ ಮಾಡುವ ನಿರೀಕ್ಷೆಯಿದೆ.

English summary

Rules that Can Impact your Personal Finance to Change from February 1, 2023

LPG prices, increase in Tata cars price, Union Budget: Rules that can impact your personal finance to change from February 1, 2023.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X