For Quick Alerts
ALLOW NOTIFICATIONS  
For Daily Alerts

ಜನವರಿ ಒಂದರಿಂದ ಬದಲಾಗಲಿದೆ ಬ್ಯಾಂಕ್ ಲಾಕರ್ ನಿಯಮಾವಳಿ!

By ಶಾರ್ವರಿ
|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ ) ಆಗಸ್ಟ್ 18, 2021ರಂದು ಹೊರಡಿಸಿರುವ ಅಧಿಸೂಚನೆ ಅನ್ವಯ ಜನವರಿ 1 ರಿಂದ ಚಾಲ್ತಿಗೆ ಬರುವಂತೆ ಸುರಕ್ಷಿತ ಠೇವಣಿ ಲಾಕರ್‌ಗೆ ಸಂಬಂಧಪಟ್ಟಂತೆ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸುತ್ತಿದೆ. ಈ ನಿಯಮಾವಳಿಯ ಪ್ರಕಾರ, ಬ್ಯಾಂಕ್ ಹಾಗೂ ಲಾಕರ್ ಸೇವೆಯನ್ನು ಪಡೆದುಕೊಳ್ಳುವ ಗ್ರಾಹಕರು ಅನುಸರಿಸಬೇಕಾದ ಕ್ರಮಗಳನ್ನು ಸವಿವರವಾಗಿ ಹೇಳಲಾಗಿದೆ. ಹೊಸ ನಿಯಮಾವಳಿಯಂತೆ ಲಾಕರ್‌ಗಳ ಸುರಕ್ಷತೆಯ ಸಂಪೂರ್ಣ ಹೊಣೆ ಸೇವೆ ನೀಡುವ ಬ್ಯಾಂಕ್‌ಗಳದ್ದಾಗಿರುತ್ತದೆ.

ಬೆಂಕಿ ಅನಾಹುತ, ಕಳ್ಳತನ, ದರೋಡೆ, ಕಟ್ಟಡ ಹಾನಿ ಮುಂತಾದ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಇನ್ಮುಂದೆ ಬ್ಯಾಂಕ್‌ಗಳು ಇಂತಹ ಅನಾಹುತಗಳಿಂದ ಗ್ರಾಹಕರಿಗೆ ನಷ್ಟವಾದಾಗ ಅಥವಾ ಬ್ಯಾಂಕ್ ಸಿಬ್ಬಂದಿಗಳ ಅಜಾಗರೂಕತೆಯಿಂದ ವಂಚನೆಗೆ ಒಳಗಾದಾಗ ಅದರ ಸಂಪೂರ್ಣ ಹೊಣೆ ಬ್ಯಾಂಕ್ ಹೊರಬೇಕಾಗುತ್ತದೆ.

ಜನವರಿ ಒಂದರಿಂದ ಬದಲಾಗಲಿದೆ ಬ್ಯಾಂಕ್ ಲಾಕರ್ ನಿಯಮಾವಳಿ!

ಬ್ಯಾಂಕ್‌ಗಳ ಬೇಜವಾಬ್ದಾರಿಯಿಂದ ನಷ್ಟ ಸಂಭವಿಸಿದರೆ ಗ್ರಾಹಕರಿಗೆ ಸಿಗುವ ಪರಿಹಾರ ಲಾಕರ್‌ನ ವಾರ್ಷಿಕ ಬಾಡಿಗೆ ಮೊತ್ತದ ನೂರು ಪಟ್ಟಿಗೆ ಸಮನಾದ ಪರಿಹಾರ ಪಡೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಲಾಕರ್ ಸೇವೆಗಳನ್ನು ನೀಡುವ ಹಾಗೂ ಪಡೆದುಕೊಳ್ಳುವ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಅನ್ವಯ ನವೀಕೃತ ಕಾರ್ಯಸೂಚಿಗಳನ್ನು ಪ್ರಕಟಿಸಲು ಸೂಚಿಸಲಾಗಿದೆ.

ಅಲ್ಲದೆ, ಲಾಕರ್ ಸೇವೆ ಪಡೆದುಕೊಳ್ಳಲು ಗ್ರಾಹಕರಿಗೆ ಲಾಕರ್‌ನಲ್ಲಿ ಇಡಲಾಗುವ ಯಾವುದೇ ಬೆಲೆಬಾಳುವ ವಸ್ತುಗಳಿಗೂ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಒತ್ತಡ ಹೇರದಂತೆ ಸೂಚಿಸಲಾಗಿದೆ. ಅಲ್ಲದೆ, ಸುರಕ್ಷಿತ ಠೇವಣಿ ಲಾಕರ್‌ಗೆ ಸಂಬಂಧಿಸಿದಂತೆ ಬದಲಾದ ನಿಯಮಾವಳಿಗನ್ನು ಜನವರಿ, 1, 2022ರಿಂದ ಜಾರಿಗೆ ತರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary

Safe Deposit Locker Rules To Change From January 1, 2022

In its notification dated August 18, 2021, the RBI came up with detailed guidelines on the operation of the locker and the liability of both the locker owner and the bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X