For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಗೃಹ ಸಾಲದ ಬಡ್ಡಿದರ ಹೆಚ್ಚಳ, ಇಎಂಐ ಎಷ್ಟು ಏರಿಕೆ?

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲ ಹಾಗೂ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಮತ್ತೆ ಏರಿಕೆ ಮಾಡಿದೆ. ಇತ್ತೀಚೆಗೆ ಅಂದರೆ ಡಿಸೆಂಬರ್ 7ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು 35 ಬಿಪಿಎಸ್‌ ಏರಿಸಿದ್ದು ಪ್ರಸ್ತುತ ದರ ಶೇಕಡ 6.25ಕ್ಕೆ ತಲುಪಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಎಫ್‌ಡಿ ಹಾಗೂ ಸಾಲದ ಬಡ್ಡಿದರವನ್ನು ಏರಿಸುತ್ತಿದೆ.

 

ಈಗ ಎಸ್‌ಬಿಐ ಗೃಹ ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಎರಡನ್ನೂ ಹೆಚ್ಚಿಸಿದೆ. ಈ ನೂತನ ಬಡ್ಡಿದರವು ಇಂದಿನಿಂದ ಅಂದರೆ 2022ರ ಡಿಸೆಂಬರ್ 15ರಿಂದ ಜಾರಿಗೆ ಬರಲಿದೆ. ಇನ್ನು ಆರ್‌ಬಿಐ ಹಣದುಬ್ಬರವನ್ನು ಹತೋಟಿ ಮಾಡುವ ನಿಟ್ಟಿನಲ್ಲಿ ರೆಪೋ ದರವನ್ನು ಮೇ ತಿಂಗಳಿನಿಂದ ಸತತ ಐದು ಬಾರಿ ಏರಿಸಿದೆ. ಸಾಮಾನ್ಯವಾಗಿ ರೆಪೋ ದರ ಪರಿಷ್ಕರಣೆ ಬ್ಯಾಂಕ್ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ಬ್ಯಾಂಕ್‌ಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರ ಏರಿಸಿದೆ.

ರೆಪೋ ಏರಿಕೆ: ಮತ್ತೆ ಇಎಂಐ ಹೆಚ್ಚಳ ಸಾಧ್ಯತೆ, ನೀವೇನು ಮಾಡಬೇಕು?ರೆಪೋ ಏರಿಕೆ: ಮತ್ತೆ ಇಎಂಐ ಹೆಚ್ಚಳ ಸಾಧ್ಯತೆ, ನೀವೇನು ಮಾಡಬೇಕು?

ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಒಂದು ತಿಂಗಳು ಮತ್ತು ಮೂರು ತಿಂಗಳ ಎಂಸಿಎಲ್‌ಆರ್ ಅನ್ನು ಶೇಕಡ 7.75ರಿಂದ ಶೇಕಡ 8ಕ್ಕೆ ಹೆಚ್ಚಿಸಲಾಗಿದೆ. ಇನ್ನು ಆರು ತಿಂಗಳಿನಿಂದ ಒಂದು ವರ್ಷದ ಎಂಸಿಎಲ್‌ಆರ್ ಅನ್ನು ಶೇಕಡ 8.05ರಿಂದ ಶೇಕಡ 8.30ರಷ್ಟು ಹೆಚ್ಚಿಸಿದೆ. ಆಟೋ, ಗೃಹ ಸಾಲಗಳ ಮೇಲೆ ಈ ಎಂಸಿಎಲ್‌ಆರ್ ಪ್ರಭಾವ ಬೀರುತ್ತದೆ. ಎರಡು ವರ್ಷದ ಎಂಸಿಎಲ್‌ಆರ್ ಶೇಕಡ 8.25ರಿಂದ ಶೇಕಡ 8.50ಕ್ಕೆ ಹೆಚ್ಚಿಸಲಾಗಿದೆ. ಮೂರು ವರ್ಷದ ಎಂಸಿಎಲ್‌ಆರ್ ಶೇಕಡ 8.35ರಿಂದ ಶೇಕಡ 8.60ಕ್ಕೆ ಹೆಚ್ಚಿಸಲಾಗಿದೆ. ಗೃಹ ಸಾಲದ ಮೇಲೆ ಹೇಗೆ ಪರಿಣಾಮ, ಇಎಂಐ ಎಷ್ಟು ಹೆಚ್ಚಾಗಲಿದೆ ನೋಡೋಣ ಮುಂದೆ ಓದಿ...

 ಎಸ್‌ಬಿಐ ಗೃಹ ಸಾಲ ಹೇಗಿದೆ?

ಎಸ್‌ಬಿಐ ಗೃಹ ಸಾಲ ಹೇಗಿದೆ?

ಎಸ್‌ಬಿಐ ವೆಬ್‌ಸೈಟ್ ಪ್ರಕಾರ ಸಾಮಾನ್ಯ ಗೃಹ ಸಾಲವು 800 ಅಥವಾ ಅದಕ್ಕಿಂತ ಅಧಿಕ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವವರಿಗೆ ಕನಿಷ್ಠ ಬಡ್ಡಿದರ ಶೇಕಡ 8.90ರಷ್ಟರಲ್ಲಿ (EBR+0 % 8.90%) ದೊರೆಯಲಿದೆ. ಇಲ್ಲಿ ಯಾವುದೇ ರಿಸ್ಕ್ ಪ್ರೀಮಿಯಂ ಇರುವುದಿಲ್ಲ. ನಮಗೆ ಎಷ್ಟು ಕ್ರೆಡಿಟ್ ಸ್ಕೋರ್ ಇರುತ್ತದೆಯೋ ಅದರ ಮೇಲೆ ಈ ಗೃಹ ಸಾಲದ ಬಡ್ಡಿದರ ಆಧಾರಿತವಾಗಿರುತ್ತದೆ. ರಿಸ್ಕ್ ಪ್ರೀಮಿಯಂ ಕ್ರೆಡಿಟ್ ಸ್ಕೋರ್ ಮೇಲೆ ಆಧರಿತವಾಗಿರುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೆ ರಿಸ್ಕ್ ಪ್ರೀಮಿಯಂ ಅಧಿಕವಾಗಿರುತ್ತದೆ. ಕ್ರೆಡಿಟ್ ಸ್ಕೋರ್ 750ರಿಂದ 799ರ ನಡುವೆ ಇದ್ದರೆ ಬಡ್ಡಿದರ ಶೇಕಡ 9 ಆಗಿರುತ್ತದೆ. ರಿಸ್ಕ್ ಪ್ರೀಮಿಯಂ 10 ಮೂಲಾಂಕವಾಗಿದೆ. (EBR+0.10%). 700-750 ಕ್ರೆಡಿಟ್ ಸ್ಕೋರ್ ಇದ್ದರೆ, ಬಡ್ಡಿದರ ಶೇಕಡ 9.10ರಷ್ಟಾಗಿದೆ. ರಿಸ್ಕ್ ಪ್ರೀಮಿಯಂ 20 ಮೂಲಾಂಕವಾಗಿರುತ್ತದೆ (EBR+0.20%). 650ರಿಂದ 699ರ ನಡುವಿನ ಕ್ರೆಡಿಟ್ ಸ್ಕೋರ್ ಇರುವವರಿಗೆ ಬಡ್ಡಿದರವು ಶೇಕಡ 9.20 ಆಗಿದೆ. ರಿಸ್ಕ್ ಪ್ರೀಮಿಯಂ 30 ಮೂಲಾಂಕವಾಗಿರುತ್ತದೆ (EBR+0.30%). ಇನ್ನು ಮಹಿಳೆಯರಿಗೆ ಗೃಹ ಸಾಲ ಬಡ್ಡಿದರವು ಶೇಕಡ 0.05ರಷ್ಟು ವಿನಾಯಿತಿ ಅಥವಾ ಕಡಿಮೆಗೆ ಲಭ್ಯವಾಗಲಿದೆ.

 ಇಎಂಐ ಲೆಕ್ಕಾಚಾರ ಹೇಗಿದೆ ನೋಡಿ..
 

ಇಎಂಐ ಲೆಕ್ಕಾಚಾರ ಹೇಗಿದೆ ನೋಡಿ..

ಮೊತ್ತ: 35,00,000 ರೂಪಾಯಿ (35 ಲಕ್ಷ ರೂಪಾಯಿ)
ಅವಧಿ: 20 ವರ್ಷ
ಈ ಹಿಂದಿನ ಬಡ್ಡಿದರ: ಶೇಕಡ 8.55
ಈ ಹಿಂದಿನ ಇಎಂಐ: 30,485
ನೂತನ ಬಡ್ಡಿದರ: ಶೇಕಡ 8.90
ಹೊಸ ಇಎಂಐ: 31,266 ರೂಪಾಯಿ
ಗೃಹ ಸಾಲದ ಮಾಸಿಕ ಇಎಂಐನಲಲ್ಲಿ 781 ರೂಪಾಯಿ ಏರಿಕೆ

ಆದರೆ ಎಸ್‌ಬಿಐನಲ್ಲಿ ಸದ್ಯ ಫೆಸ್ಟಿವ್‌ ಆಫರ್ ನಡೆಯುತ್ತಿದೆ. ಈ ಆಫರ್ 2023ರ ಜನವರಿ 31ರವರೆಗೆ ಇರಲಿದೆ. ಈ ಫೆಸ್ಟಿವ್ ಆಫರ್‌ ಮೂಲಕ ಸಾಲದ ಬಡ್ಡಿದರ ಇಳಿಕೆಯಾಗಬಹುದು.

 ಇಎಂಐ ಹೊರೆ ತಗ್ಗಿಸಲು ಏನು ಮಾಡುವುದು?

ಇಎಂಐ ಹೊರೆ ತಗ್ಗಿಸಲು ಏನು ಮಾಡುವುದು?

ಗೃಹ ಸಾಲ ಪಡೆದವರು ಯಾವುದೇ ಸಂದರ್ಭದಲ್ಲಿ ಇಎಂಐ ಹೊರೆ ಅಧಿಕವಾಗುವ ಹಣಕಾಸು ನಿರ್ವಹಣೆ ಮಾಡಲು ಸಿದ್ಧರಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಇನ್ನೂ ಕೂಡಾ ಕೇಂದ್ರ ಬ್ಯಾಂಕ್ ದರ ಹೆಚ್ಚಿಸಬಹುದು ಎಂದು ಅಭಿಪ್ರಾಯಿಸಿದ್ದಾರೆ. ಇಎಂಐ ಹೊರೆಯನ್ನು ಕಡಿಮೆ ಮಾಡಬೇಕಾದರೆ ಸಾಲ ಪಡೆದವರು ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು. ಇದಕ್ಕಾಗಿ ನೀವು ಬ್ಯಾಂಕ್‌ಗೆ ಹೋಗಿ ಮನವಿ ಅರ್ಜಿ ಸಲ್ಲಿಸಬೇಕಾಗಬಹುದು. ಹಾಗೆಯೇ ನಿಮ್ಮಲ್ಲಿ ಬೇರೆ ಅಧಿಕ ಮೊತ್ತವಿದ್ದರೆ ಆ ಮೊತ್ತವನ್ನು ಪಾವತಿಸಿ ಸಾಲದ ಹೊರೆಯನ್ನು ಕೊಂಚ ತಗ್ಗಿಸುವು ಉತ್ತಮ. ಇದರಿಂದಾಗಿ ಸಾಲವು ಕೂಡಾ ಕಡಿಮೆಯಾದಂತೆ ಆಗುತ್ತದೆ.

English summary

SBI Home Loan Interest Rates Increased from December 15, Know How Much Loan EMIs Increased

The State Bank of India has increased its MCLR on home loans, Know How Much Your Loan EMIs Increased. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X