For Quick Alerts
ALLOW NOTIFICATIONS  
For Daily Alerts

ಷೇರು ಮಾಯಾಬಜಾರ್; 1 ಲಕ್ಷ ಹತ್ತು ವರ್ಷದಲ್ಲಿ 3.43 ಕೋಟಿ ರುಪಾಯಿ

|

ಷೇರು ಮಾರುಕಟ್ಟೆ ಬಗ್ಗೆ ವಿಪರೀತ ಹೆದರುವವರು, ಅದರಲ್ಲೇನು ಲಾಭ ಮಾಡಲು ಸಾಧ್ಯ ಇದೆಯೇನ್ರಿ ಎಂದು ಅನುಮಾನ ಪಡುವವರು ಈ ಲೇಖನವನ್ನು ಓದಲೇಬೇಕು. ಏಕೆಂದರೆ ಹತ್ತು ವರ್ಷದ ಅವಧಿಯಲ್ಲಿ ಇಲ್ಲಿ ನೀಡಿರುವ ಪಟ್ಟಿಯಲ್ಲಿ ಇರುವ ಷೇರುಗಳು ಅದ್ಯಾವ ಪರಿಯ ಏರಿಕೆ ದಾಖಲಿಸಿದೆ ಅಂದರೆ, ಮುಲಾಜಿಲ್ಲದೆ ಹೇಳಬಹುದು: ಇದು ಪವಾಡ.

ಸಂಸ್ಕರಿಸಿದ ಆಹಾರಗಳು, ಫಾರ್ಮಾಸ್ಯುಟಿಕಲ್ಸ್, ಎನ್ ಬಿಎಫ್ ಸಿ, ಗ್ರಾಹಕ ಬಳಕೆ ವಸ್ತುಗಳು, ಕೀಟನಾಶಕ, ಪ್ಲಾಸ್ಟಿಕ್ ಉತ್ಪನ್ನಗಳು, ಪಾದರಕ್ಷೆ ಹೀಗೆ ನಾನಾ ವ್ಯವಹಾರದಲ್ಲಿ ತೊಡಗಿಕೊಂಡ ಕಂಪೆನಿಗಳ ಷೇರುಗಳು ಅದ್ಭುತ ಏರಿಕೆ ಕಂಡಿವೆ. ಒಂದು ಕಂಪೆನಿಯ ಷೇರಂತೂ 34,000 ಪರ್ಸೆಂಟ್ ಏರಿಕೆ ಕಂಡಿದೆ.

34,200 ಪರ್ಸೆಂಟ್ ಏರಿಕೆ

34,200 ಪರ್ಸೆಂಟ್ ಏರಿಕೆ

ಅವಂತಿ ಫೀಡ್ಸ್ ಕಂಪೆನಿ ಷೇರು 34,200 ಪರ್ಸೆಂಟ್ ಏರಿಕೆ ಕಂಡಿದೆ. ಡಿಸೆಂಬರ್ 31, 2009ರಲ್ಲಿ ಒಂದು ಷೇರಿಗೆ ರು. 1.65 ಇದ್ದದ್ದು, ಡಿಸೆಂಬರ್ 30, 2019ರಲ್ಲಿ ಒಂದು ಷೇರಿನ ಬೆಲೆ ರು. 569.30 ಇತ್ತು. ಯಾರಾದರೂ ಹತ್ತು ವರ್ಷದ ಹಿಂದೆ 1,00,000 ರುಪಾಯಿ ಹೂಡಿದ್ದರೆ, ಆ ಷೇರುಗಳನ್ನು ಮಾರಾಟ ಮಾಡದೆ ಇರಿಸಿಕೊಂಡಿದ್ದರೆ ಅದರ ಬೆಲೆ 3.43 ಕೋಟಿ ರುಪಾಯಿ. ಅದೇ ರೀತಿ ಕ್ಯಾಪ್ಲಿನ್ ಪಾಯಿಂಟ್ ಲ್ಯಾಬೊರೇಟರೀಸ್ ಮೇಲೆ 1 ಲಕ್ಷ ರುಪಾಯಿ ಹೂಡಿದ್ದರೆ, ಅದರ ಮೌಲ್ಯ ಈಗ 1.85 ಕೋಟಿ ರುಪಾಯಿ. ಇಷ್ಟೇ ಅಲ್ಲ, ಕಳೆದ ಹತ್ತು ವರ್ಷದಲ್ಲಿ ಹೀಗೆ ಪವಾಡದಂಥ ಲಾಭ ತಂದುಕೊಟ್ಟ ಟಾಪ್ ಷೇರುಗಳ ವಿವರ ಹೀಗಿದೆ.

ಹೂಡಿಕೆದಾರರ ಹಣ ಐವತ್ತು ಪಟ್ಟು ಹೆಚ್ಚಳವಾಗಿದೆ

ಹೂಡಿಕೆದಾರರ ಹಣ ಐವತ್ತು ಪಟ್ಟು ಹೆಚ್ಚಳವಾಗಿದೆ

ಬಜಾಜ್ ಫೈನಾನ್ಸ್, ಸಿಂಫೋನಿ, ಅಜಂತಾ ಫಾರ್ಮಾ, ಐಷರ್ ಮೋಟಾರ್ಸ್, ವಿ ಗಾರ್ಡ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಸರ್ವೀಸಸ್, ಪೇಜ್ ಇಂಡಸ್ಟ್ರೀಸ್, ಬಾಟಾ ಇಂಡಿಯಾ, ಬ್ರಿಟಾನಿಯಾ ಇಂಡಸ್ಟ್ರೀಸ್, ಕಜಾರಿಯಾ ಸೆರಾಮಿಕ್ಸ್, ಬರ್ಜರ್ ಪೇಂಟ್ಸ್, ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ಸ್ ಲಿಮಿಟೆಡ್, ಕ್ಯಾನ್ ಫಿನ್ ಹೋಮ್ಸ್ ಹೀಗೆ ಹಲವು ಷೇರುಗಳು ಕನಿಷ್ಠ 1650 ಪರ್ಸೆಂಟ್ ನಷ್ಟು ಏರಿಕೆ ಕಂಡಿವೆ. ಕೆಲವು ಷೇರುಗಳಲ್ಲಿ ಮಾಡಿದ ಹೂಡಿಕೆ ಹತ್ತು ವರ್ಷದ ಅವಧಿಯಲ್ಲಿ ಹೂಡಿಕೆದಾರರ ಹಣವು ಐವತ್ತು ಪಟ್ಟು ಹೆಚ್ಚಳವಾಗಿದೆ. ಆದರೆ ಸರಿಯಾದ ಕ್ಷೇತ್ರದಿಂದ ಅತ್ಯುತ್ತಮವಾದ ಷೇರುಗಳನ್ನು ಆಯ್ಕೆ ಮಾಡಿಕೊಳ್ಳುವುದು ಯಶಸ್ಸಿನ ಸೂತ್ರ.

ಎಲ್ಲಿ ಹೂಡಿಕೆ ಮಾಡಬಹುದು?

ಎಲ್ಲಿ ಹೂಡಿಕೆ ಮಾಡಬಹುದು?

ತಜ್ಞರು ಹೇಳುವ ಪ್ರಕಾರ, ಫಾರ್ಮಾಸ್ಯುಟಿಕಲ್ ಷೇರುಗಳು ಬೆಲೆಯಲ್ಲಿ ಇಳಿಕೆಯಾಗಿದೆ. ಆಯ್ದ ಕಂಪೆನಿಗಳ ಷೇರುಗಳು ಖರೀದಿಗೆ ಅವಕಾಶ ಮಾಡಿಕೊಡುತ್ತಿವೆ. ಗ್ರಾಹಕ ವಸ್ತುಗಳ ಕ್ಷೇತ್ರದಲ್ಲಿ ಇರುವ ಕಂಪೆನಿಗಳ ಷೇರಿನ ಮೌಲ್ಯ ಹೆಚ್ಚು ಅಂತನ್ನಿಸಬಹುದು. ಆದರೆ ದೀರ್ಘಾವಧಿ ಹೂಡಿಕೆ ಮಾಡುವವರಿಗೆ ಅವಕಾಶಗಳು ಇದ್ದೇ ಇವೆ. ಇನ್ನು ಇಂಟರ್ ನೆಟ್ ಆಧಾರಿತವಾದ ಕಂಪೆನಿಗಳನ್ನು ಸಹ ಸದ್ಯದ ಸ್ಥಿತಿಯಲ್ಲಿ ಖರೀದಿ ಮಾಡಬಹುದು. ಹತ್ತು ವರ್ಷಗಳ ಹಿಂದೆ ಆ ಷೇರುಗಳು ಮಾರುಕಟ್ಟೆಯಲ್ಲಿ ಇರಲಿಲ್ಲ. ಹೌಸಿಂಗ್ ಫೈನಾನ್ಸ್, ದೊಡ್ದ ಮಟ್ಟದ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳ ಮೇಲೂ ಹೂಡಿಕೆ ಮಾಡಬಹುದು ಎಂದು ಮಾರುಕಟ್ಟೆ ತಜ್ಞರು ಸಲಹೆ ಮಾಡುತ್ತಾರೆ.

ಸಂಪತ್ತು ನಿಮ್ಮಲ್ಲಿ ಸೇರುತ್ತದೆ

ಸಂಪತ್ತು ನಿಮ್ಮಲ್ಲಿ ಸೇರುತ್ತದೆ

ಕಂಪೆನಿಯ ಮ್ಯಾನೇಜ್ ಮೆಂಟ್ ಹೇಗಿದೆ ಅನ್ನೋದನ್ನು ಗಮನಿಸಬೇಕು. ಬಹಳ ಸಲ ಕೆಟ್ಟ ಬಿಜಿನೆಸ್ ನಲ್ಲಿ ಒಳ್ಳೆ ಮ್ಯಾನೇಜರ್ ಇರುವುದಕ್ಕಿಂತ ಒಳ್ಳೆ ಬಿಜಿನೆಸ್ ನಲ್ಲಿ ಕೆಟ್ಟ ಮ್ಯಾನೇಜರ್ ಇರುವುದೇ ಉತ್ತಮವಾಗಿರುತ್ತದೆ. ಹೂಡಿಕೆದಾರರು ಹೂಡಿಕೆಯ ಹಿಂದೆ ಇರುವ ಕಥೆಗಳನ್ನು ಬೆನ್ನಟ್ಟಿ ಹೋಗಬೇಕೇ ವಿನಾ ದುಡ್ಡನ್ನು ಅಲ್ಲ. ದುಡ್ಡು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಆದರೆ ಹೂಡಿಕೆಯ ಹಿಂದಿನ ಕಥೆಗಳು ನಿಮ್ಮಲ್ಲಿ ಕರಗದ ಸಂಪತ್ತು ಸೇರುವಂತೆ ಮಾಡುತ್ತದೆ ಎಂದು ಮುಂಬೈ ಮೂಲದ ಯಶಸ್ವಿ ಹೂಡಿಕೆದಾರರೊಬ್ಬರು ಸಲಹೆ ಮಾಡುತ್ತಾರೆ.

English summary

Stock News; Investors 1 Lakh Become 3 Crore In This Share

Avanti Feeds share earn 34,200 percent profit to investors in 10 years. Here is the complete details.
Story first published: Friday, January 3, 2020, 13:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X