ತೆರಿಗೆ ಉಳಿಸುವ ಎಫ್‌ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
ನವದೆಹಲಿ, ಜನವರಿ 23: ತೆರಿಗೆಯು ಬಹುತೇಕ ಜನರ ಮೇಲೆ ಹೊರೆಯಾಗಿದೆ. ಆದರೆ, ತುಂಬಾ ಜನರು ತೆರಿಗೆ ಉಳಿಸುವ ಯೋಜನೆಯನ್ನು ಸರಿಯಾಗಿ ರೂಪಿಸಿಕೊಳ್ಳಲು ವಿಫಲರಾಗಿರುತ್ತಾರೆ. ತೆರಿಗೆ ಉಳಿಸುವಿಕೆಯು ನಿಮ್ಮ ಹಣಕಾಸು ಯೋಜನೆಯ ಪ್ರಮುಖ ಭಾಗವಾಗಿದೆ. ನೀವು ನಿಮ್ಮ ತೆರಿಗೆ ಯೋಜನೆಯ ಬಗ್ಗೆ ಈ ಕೂಡಲೇ ಯೋಚಿಸುವುದು ಒಳಿತು. ಕಾರಣ, ಇದು ಕೇವಲ ಹಣಕಾಸು ವರ್ಷ ಪೂರ್ಣಗೊಳ್ಳುವ ಸಮಯದಲ್ಲಿ ಮಾಡುವುದಲ್ಲ. ನಿಮ್ಮ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ ಬುದ್ಧಿವಂತಿಕೆಯಿಂದ ಹಣವನ್ನು ಹೂಡಿಕೆ ಮಾಡಲು ನೀವು ತಯಾರಾಗಿ. ಕಡಿಮೆ ತೆರಿಗೆ ಕಟ್ಟುವವರು ಜನರು ತೆರಿಗೆ ಉಳಿಸುವ ಸ್ಥಿರ ಠೇವಣಿಗಳನ್ನು (Fixed Depoits) ಇಡಲು ಮುಂದಾಗಿ. 2022 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಐದು ಸತತ ರೆಪೋ ದರ ಹೆಚ್ಚಸಿದೆ. ಆ ನಂತರ ಹಲವಾರು ದೇಶದಲ್ಲಿನ ಹಲವಾರು ಬ್ಯಾಂಕುಗಳು ತೆರಿಗೆ ಉಳಿತಾಯ ಮಾಡುವ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚು ಮಾಡಿವೆ. ದೇಶದ ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ನೂತನ ಖಾಸಗಿ ವಲಯದ ಬ್ಯಾಂಕುಗಳು ಈಗ ತೆರಿಗೆ ಉಳಿತಾಯದ ಮೇಲೆ ಶೇ 7.6 ರ ವರೆಗೆ ಬಡ್ಡಿ ದರಗಳನ್ನು ನೀಡುತ್ತವೆ. ಹಿರಿಯ ನಾಗರಿಕರಿಗೆ ಶೇ 8.6ರ ವರೆಗೆ ಬಡ್ಡಿ ದರಗಳನ್ನು ನೀಡುತ್ತಿವೆ. ಬ್ಯಾಂಕ್ ಬಜಾರ್‌ನಿಂದ ಸಂಗ್ರಹಿಸಲಾದ ಮಾಹಿತಿಗಳನ್ನು ನೀವು ಇಲ್ಲಿ ಪಡೆಯಬಹುದು.
ಭಾರತದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ವರೆಗಿನ ಹೂಡಿಕೆಗಳನ್ನು ತೆರಿಗೆ ವಿನಾಯಿತಿಗಾಗಿ ಕ್ಲೈಮ್ ಮಾಡಬಹುದು. ಆದಾಯ ತೆರಿಗೆ ಉಳಿಸುವ ಎಫ್‌ಡಿಗಳು 5 ವರ್ಷಗಳ ಲಾಕ್-ಇನ್ ಅವಧಿ ಹೊಂದಿರುತ್ತವ. ಇವುಗಳನ್ನು ಅಕಾಲಿಕವಾಗಿ ಹಿಂಪಡೆಯುವಂತಿಲ್ಲ.

ತೆರಿಗೆ-ಉಳಿತಾಯ ಠೇವಣಿಗಳ ಮೇಲೆ 7.6 ಪ್ರತಿಶತದವರೆಗೆ ಬಡ್ಡಿದರಗಳನ್ನು DCB ಬ್ಯಾಂಕ್ ನೀಡುತ್ತದೆ. ಖಾಸಗಿ ಬ್ಯಾಂಕುಗಳಲ್ಲಿ, DCB ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ ಎಂದು ವರದಿಯಾಗಿದೆ. ಹೂಡಿಕೆ ಮಾಡಿದ 1.5 ಲಕ್ಷ ರೂಪಾಯಿ ಮೊತ್ತವು 5 ವರ್ಷಗಳಲ್ಲಿ ₹2.19 ಲಕ್ಷದಷ್ಟು ಬೆಳೆದಿರುತ್ತದೆ.

ತೆರಿಗೆ-ಉಳಿತಾಯ ಠೇವಣಿಗಳ ಮೇಲೆ ಶೇ 7.20ರ ವರೆಗೆ ಬಡ್ಡಿದರಗಳನ್ನು Ujjivan Small Finance Bank and AU Small Finance Bank ಗಳು ನೀಡುತ್ತವೆ. ದೇಶದ ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ, ಈ ಎರಡೂ ಬ್ಯಾಂಕುಗಳು ಉತ್ತಮ ಬಡ್ಡಿದರಗಳನ್ನು ನೀಡುತ್ತವೆ. ಹೂಡಿಕೆ ಮಾಡಿದ 1.5 ಲಕ್ಷ ರೂಪಾಯಿ ಮೊತ್ತವು ಐದು ವರ್ಷಗಳಲ್ಲಿ 2.14 ಲಕ್ಷ ರೂಪಾಯಿಗಳಷ್ಟಾಗಿರುತ್ತವೆ.

ತೆರಿಗೆ-ಉಳಿತಾಯ ಠೇವಣಿಗಳ ಮೇಲೆ ಶೇ 7ರ ವರೆಗೆ ಬಡ್ಡಿದರಗಳನ್ನು Deutsche Bank ನೀಡುತ್ತದೆ. ವಿದೇಶಿ ಬ್ಯಾಂಕುಗಳಲ್ಲಿ, ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು Deutsche Bank ನೀಡುತ್ತದೆ. ಹೂಡಿಕೆ ಮಾಡಿದ ₹ 1.5 ಲಕ್ಷ ಮೊತ್ತವು ಐದು ವರ್ಷಗಳಲ್ಲಿ ₹ 2.12 ಲಕ್ಷದಷ್ಟು ಬೆಳೆದಿರುತ್ತದೆ.

ತೆರಿಗೆ-ಉಳಿತಾಯ ಠೇವಣಿಗಳ ಮೇಲೆ ಶೇಕಡಾ 7 ರಷ್ಟು ಬಡ್ಡಿದರಗಳನ್ನು Yes Bank, City Union Bank, RBL Bank, IDFC First Bank, HDFC Bank, Axis Bank and ICICI Bank ಸೇರಿದಂತೆ ಹಲವಾರು ಬ್ಯಾಂಕ್‌ಗಳು ನೀಡುತ್ತವೆ. ಹೂಡಿಕೆ ಮಾಡಿದ 1.5 ಲಕ್ಷ ರೂಪಾಯಿ ಮೊತ್ತವು ಐದು ವರ್ಷಗಳಲ್ಲಿ 2.12 ರೂಪಾಯಿಯಷ್ಟಾಗುತ್ತವೆ.

ತೆರಿಗೆ-ಉಳಿತಾಯ ಠೇವಣಿಗಳ ಮೇಲೆ ಶೇ 6.75 ಪ್ರತಿಶತದವರೆಗೆ ಬಡ್ಡಿದರಗಳನ್ನು IndusInd Bank and Suryoday Small Finance Bank ನೀಡುತ್ತದೆ. ಹೂಡಿಕೆ ಮಾಡಿದ ₹ 1.5 ಲಕ್ಷ ರೂಪಾಯಿ ಮೊತ್ತವು ಐದು ವರ್ಷಗಳಲ್ಲಿ ₹ 2.10 ರೂಪಾಯಿಯಷ್ಟಾಗುತ್ತವೆ.

ದೇಶದ ಸಣ್ಣ ಖಾಸಗಿ ಬ್ಯಾಂಕ್‌ಗಳು ಹಾಗೂ ಸಣ್ಣ ಹಣಕಾಸು ಬ್ಯಾಂಕ್‌ಗಳು ಠೇವಣಿಗಳನ್ನು ಪಡೆಯಲು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿರುವುದು ಉತ್ತಮ ಸಂಕೇತವಾಗಿದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ), ಆರ್‌ಬಿಐನ ಅಂಗಸಂಸ್ಥೆಯಾಗಿದೆ. 5 ಲಕ್ಷ ರೂಪಾಯಿವರೆಗಿನ ಎಫ್‌ಡಿಗಳ ಹೂಡಿಕೆಗೆ ಖಾತರಿ ನೀಡುತ್ತದೆ.
ಎಲ್ಲ ಬ್ಯಾಂಕ್‌ಗಳ ವೆಬ್‌ಸೈಟ್‌ನಿಂದ ಜನವರಿ 17, 2023 ರಂತೆ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ. ಬ್ಯಾಂಕ್ ಬಜಾರ್ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ವಿದೇಶಿ, ಖಾಸಗಿ, ಸಣ್ಣ ಹಣಕಾಸು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮಾತ್ರ ಸಂಬಂಧಿಸಿದ ಎಫ್‌ಡಿಗಳಿಗೆ ಖಾತೆಯನ್ನು ಹೊಂದಿದೆ. ಆಯಾ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಲಭ್ಯವಿಲ್ಲದ ಉಳಿದ ಬ್ಯಾಂಕ್‌ಗಳನ್ನು ಪರಿಗಣಿಸಲಾಗಿಲ್ಲ.