For Quick Alerts
ALLOW NOTIFICATIONS  
For Daily Alerts

ಸಂಪತ್ತನ್ನು ಹೆಚ್ಚಿಸುವವರಲ್ಲಿ ಇರುವ 4 ಪ್ರಮುಖ ವಿಚಾರಗಳು

|

ಪ್ರತಿಯೊಬ್ಬರು ಹಣ ಸಂಪಾದಿಸಬೇಕು.. ಹೆಚ್ಚು ಹಣ ಸಂಪಾದಿಸಬೇಕು ಎಂದು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಉತ್ತಮ ಆದಾಯ ಬರುವಂತಹ ಕೆಲಸ, ಬಿಜಿನೆಸ್‌ ಕಡೆಗೆ ಒಲವು ತೋರುತ್ತಾರೆ. ಕೆಲವರು ಮಾತ್ರ ಹಣ ಎಷ್ಟಾದ್ರೂ ಬರಲಿ ಆತ್ಮತೃಪ್ತಿ ಸಾಕು ಎಂದು ಇರುವವರು ಇದ್ದಾರೆ.

ಈ ಹೆಚ್ಚು ಹಣ ಎಂಬುದಕ್ಕೆ ಯಾವುದೇ ಫುಲ್‌ಸ್ಟಾಪ್ ಇರೋದಿಲ್ಲ. ಎಷ್ಟು ಸಂಪಾದನೆ ಮಾಡಿದರೂ ಮತ್ತಷ್ಟು ಬೇಕು ಎಂಬ ಬಯಕೆ ಹೆಚ್ಚುತ್ತಲೇ ಇರುತ್ತದೆ. ಆದರೆ ಈ ಹೆಚ್ಚು ಹಣ ಸಂಪಾದಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಕೆಲವರು ಮಾತ್ರ ತಮ್ಮ ಆದಾಯವನ್ನು ದ್ವಿಗುಣಗೊಳಿಸುತ್ತಲೇ ಇರುತ್ತಾರೆ.

ಹಾಗಿದ್ದರೆ ಸಂಪತ್ತನ್ನು ಹೆಚ್ಚಿಸುವುದು ಹೇಗೆ? ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುವವರಲ್ಲಿ ಇರುವ ಸಾಮ್ಯತೆಗಳೇನು? ಬಹುತೇಕ ಒಂದೇ ರೀತಿಯ ಯಾವ ವಿಚಾರಗಳನ್ನು ಅನುಸರಿಸುತ್ತಾರೆ ಎಂಬ ಕುರಿತಾಗಿ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿ

1. ಕಡಿಮೆ ಖರ್ಚು ಮಾಡಿ ಹೆಚ್ಚು ಸಂಪಾದಿಸುವುದು

1. ಕಡಿಮೆ ಖರ್ಚು ಮಾಡಿ ಹೆಚ್ಚು ಸಂಪಾದಿಸುವುದು

ಹೆಚ್ಚು ಸಂಪತ್ತನ್ನು ಗಳಿಸುತ್ತಾ ಸಾಗುವವರು ಕೇವಲ ಹೆಚ್ಚು ಹಣ ಮಾಡುವುದರ ಕಡೆಗಷ್ಟೇ ಗಮನ ನೀಡುವುದಿಲ್ಲ. ಅವರಲ್ಲಿ ಬಹುದೊಡ್ಡ ಬಂಗಲೆಯು ಇರುವುದಿಲ್ಲ ಅಥವಾ ದುಬಾರಿ ಕಾರುಗಳು, ಹೊಸ ಬಗೆಯ ಕಾರು ಅಥವಾ ಹೊಸ ಲೇಟೆಸ್ಟ್ ಡಿಸೈನ್ ಹೊಂದಿರುವ ಬಟ್ಟೆಯನ್ನು ಧರಿಸುವುದಿಲ್ಲ. ಆದಾಗ್ಯೂ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಬಹುತೇಕರು ಬರುವ ಆದಾಯಕ್ಕಿಂತ ತುಂಬಾ ಕಡಿಮೆ ಖರ್ಚು ಮಾಡುತ್ತಾರೆ. ಮತ್ತು ಹಾಗೆಯೇ ಬದುಕುತ್ತಿರುತ್ತಾರೆ.

ಬಹುತೇಕ ಜನರಿಗೆ ಗೊತ್ತು ಎಷ್ಟು ಹಣವನ್ನು ಸಂಪಾದಿಸುತ್ತಿದ್ದೇವೆ ಎಂದು, ಆದರೆ ದುರಾದೃಷ್ಟದ ವಿಚಾರ ಅಂದ್ರೆ ಹೆಚ್ಚು ಜನರಿಗೆ ತಿಳಿಯೋದೆ ಇಲ್ಲ ತಾವು ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎಂದು. ಈ ಕುರಿತು ಅವರಲ್ಲಿ ಕೇಳಿದರೆ ಬಹುತೇಕ 80 ರಿಂದ 90 ಪರ್ಸೆಂಟ್‌ನಷ್ಟು ಜನರಿಗೆ ತಾವು ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎಂದು ಗೊತ್ತೇ ಇರುವುದಿಲ್ಲ.

ನೀವು ಜೀವನದಲ್ಲಿ ಸಕ್ಸಸ್ ಕಾಣಬೇಕು ಅಂತಿದ್ದರೆ ಮೊದಲು ನೀವು ಎಷ್ಟು ಹಣವನ್ನು ಮತ್ತು ಎಲ್ಲಿಗೆ ಖರ್ಚು ಮಾಡಬೇಕು ಎಂಬುದರ ಬಗ್ಗೆ ಅರಿವಿರಬೇಕು. ಒಂದು ಬಾರಿ ನೀವು ಹಣವನ್ನು ಎಲ್ಲಿ ಖರ್ಚು ಮಾಡುತ್ತಿದ್ದೀರಿ ಎಂದು ತಿಳಿದ ತಕ್ಷಣ ಅದರಲ್ಲಿ ಏನು ಬದಲಾವಣೆ ತರಬಹುದು ಎಂದು ತಿಳಿಯುತ್ತದೆ. ಮತ್ತು ಖರ್ಚುಗಳಲ್ಲಿ ಕಡಿಮೆ ಅಥವಾ ತಗ್ಗಿಸುವಲ್ಲ ಸಾಧ್ಯವಾಗಿ ನಿಮ್ಮ ಹಣಕಾಸಿನ ಗುರಿಗಳನ್ನು ತಲುಪಲು ಸಾಧ್ಯ.

 

2. ಕಡಿಮೆ ಸಾಲ ಅಥವಾ ಸಾಲವನ್ನೇ ಇಟ್ಟುಕೊಳ್ಳದಿರುವುದು

2. ಕಡಿಮೆ ಸಾಲ ಅಥವಾ ಸಾಲವನ್ನೇ ಇಟ್ಟುಕೊಳ್ಳದಿರುವುದು

ನಿಮ್ಮ ಹಣಕ್ಕೆ ಬಡ್ಡಿಯನ್ನು ಪಡೆಯಲು ಇಲ್ಲವೇ ನೀವು ಪಡೆದ ಸಾಲಕ್ಕೆ ಬಡ್ಡಿ ಕಟ್ಟುವ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಯಾವುದೇ ಪದವಿ ಹೊಂದಿರಬೇಕಾದ ಅಗತ್ಯವಿಲ್ಲ. ನಾವು ಎಲ್ಲಾ ಸಾಲವು ಕೆಟ್ಟದ್ದು ಎಂದು ಹೇಳುತ್ತಿಲ್ಲ, ಇದು ನಮ್ಮ ಅಭಿಪ್ರಾಯವಷ್ಟೆ.

ಈ ಕೆಳಗಿನ ಕೆಲವು ಆಯ್ಕೆಗಳು ಮಾತ್ರ ನೀವು ಸಾಲ ತೆಗೆದುಕೊಳ್ಳಲು ಯೋಗ್ಯವಾದ ವಿಚಾರಗಳಾಗಿವೆ. ಅದರಲ್ಲಿನ ರಿಸ್ಕ್ ಬಗ್ಗೆ ಅರಿತಿದ್ದರೆ ಮಾತ್ರ.
ವಿದ್ಯಾಭ್ಯಾಸ: ನೀವು ನಿಮ್ಮ ಮೇಲೆ ಹೂಡಿಕೆ ಮಾಡುವ ಬೆಸ್ಟ್ ಮಾರ್ಗವೆಂದರೆ ವಿದ್ಯಾಭ್ಯಾಸವಾಗಿದೆ. ನೀವು ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲ ಮಾಡುವುದು ಮುಂದಿನ ದಿನಗಳಲ್ಲಿ ನೂರು ಪಟ್ಟು ವಾಪಸ್ ಗಳಿಸಬಹುದು.

ಮನೆ ಮಾಡಲು ಸಾಲ: ನೀವು ಸ್ವಂತಕ್ಕಾಗಿ ಅಥವಾ ಮನೆ ಬಾಡಿಗೆ ಕೊಡಲು ಖರೀದಿಸಲು ಸಾಲ ಪಡೆಯುವುದು ಯೋಗ್ಯವಾದ ವಿಧಾನವಾಗಿದೆ.

ಬಿಜಿನೆಸ್ ಆರಂಭಿಸಲು: ನೀವು ಹಣ ಹೂಡಿಕೆ ಮಾಡಬೇಕು ಅಂದುಕೊಂಡ ಬಿಜಿನೆಸ್ ಕುರಿತು ಸಂಪೂರ್ಣವಾಗಿ ಅಧ್ಯಯನ ಮತ್ತು ರಿಸರ್ಚ್ ಮಾಡಿದ ಬಳಿಕವಷ್ಟೇ ಬಿಜಿನೆಸ್ ಗಾಗಿ ಸಾಲ ಪಡೆಯವುದು ಒಳ್ಳೆಯದೇ ಆಗಿದೆ. ನೀವು ಸರಿಯಾಗಿ ತಿಳಿದುಕೊಳ್ಳದೇ ಸಾಲ ಮಾಡಿ ಹಣ ಹೂಡಿದರೆ ಮತ್ತಷ್ಟು ಹಣಕಾಸಿನ ಹೊರೆ ಗ್ಯಾರೆಂಟಿ. ಹೀಗಾಗಿ ತುಂಬಾ ಆಲೋಚನೆ, ಅಧ್ಯಯನ, ಸಂಶೋಧನೆ ಬಹಳ ಮುಖ್ಯ.

 

ನಿಮ್ಮ ವಯಸ್ಸು 30ರೊಳಗಿದೆಯೇ? ನೀವು ತೆಗೆದುಕೊಳ್ಳಲೇಬೇಕಾದ 5 ಹಣಕಾಸಿನ ನಿರ್ಧಾರಗಳು ಇಲ್ಲಿವೆನಿಮ್ಮ ವಯಸ್ಸು 30ರೊಳಗಿದೆಯೇ? ನೀವು ತೆಗೆದುಕೊಳ್ಳಲೇಬೇಕಾದ 5 ಹಣಕಾಸಿನ ನಿರ್ಧಾರಗಳು ಇಲ್ಲಿವೆ

 

3. ಅವರು ಒಳ್ಳೆಯ ಉಳಿತಾಯಗಾರರು

3. ಅವರು ಒಳ್ಳೆಯ ಉಳಿತಾಯಗಾರರು

ಸಂಪತ್ತನ್ನು ಹೆಚ್ಚಿಸುತ್ತಾ ಹೋಗುವವರು ಬಹುತೇಕವಾಗಿ ಒಳ್ಳೆಯ ಉಳಿತಾಯಗಾರರಾಗಿರುತ್ತಾರೆ. ಅಲ್ಲದೆ ಹಣ ಹೂಡಿಕೆಯಲ್ಲೂ ಬಹಳ ಎಚ್ಚರಿಕೆ ವಹಿಸುತ್ತಾರೆ. ಇವರಲ್ಲಿ ಬಹುಪಾಲು ಜನರು ಖರ್ಚಿಗಾಗಿ ಒಂದು, ಉಳಿತಾಯಕ್ಕಾಗಿ ಮತ್ತೊಂದು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ.ಇದರರ್ಥ ಅವರ ಬಳಿ ಹೆಚ್ಚು ಹಣ ಇದೆ ಎಂದಲ್ಲ. ಬದಲಾಗಿ ಹಣ ಒಂದೇ ಕಡೆ ಇದ್ದರೆ ಖರ್ಚು ಮಾಡುವ ಮನಸ್ಸಾಗುವುದು ಎಂದು. ಹೀಗಾಗಿ ಉಳಿತಾಯವನ್ನು ಬೇರೆ ಇಡುವುದರಿಂದ ಸುಖಾಸುಮ್ಮನೆ ಖರ್ಚು ಮಾಡುವುದನ್ನು ತಪ್ಪಿಸುತ್ತಾರೆ.

 

ನೀವು ಕನಿಷ್ಠ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಈ 8 ಲಾಭಗಳು ಸಿಗಲಿವೆನೀವು ಕನಿಷ್ಠ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಈ 8 ಲಾಭಗಳು ಸಿಗಲಿವೆ

4. ತಮ್ಮ ಭಾವನೆಗಳನ್ನು ಹಣಕಾಸಿನ ಮೇಲೆ ಪ್ರಭಾವ ಬೀರಲು ಬಿಡುವುದಿಲ್ಲ

4. ತಮ್ಮ ಭಾವನೆಗಳನ್ನು ಹಣಕಾಸಿನ ಮೇಲೆ ಪ್ರಭಾವ ಬೀರಲು ಬಿಡುವುದಿಲ್ಲ

ಭಾವನೆಗಳು ತುಂಬಾನೆ ಟ್ರಿಕ್ಕಿ, ಈ ಭಾವನೆಗಳನ್ನು ನಿಯಂತ್ರಿಸಲು ಗೊತ್ತಿರದೇ ಇದ್ದಾಗ ಎಡವಟ್ಟುಗಳು ಹೆಚ್ಚು. ಅದರಲ್ಲೂ ವಿಶೇಷವಾಗಿ ಹಣದ ವಿಚಾರವಾಗಿ ಪರಿಣಾಮ ಬೀರುತ್ತವೆ. ಬೇಸರದಿಂದ, ಕೋಪದಿಂದ ಮತ್ತು ತುಂಬಾ ಆಶಾವಾದಿಗಳಾಗಿದ್ದಾಗ ಹಣವನ್ನು ಖರ್ಚು ಮಾಡುವ ಕೆಲವರು ಇದ್ದಾರೆ.

ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಜನರು ಹಣವನ್ನು ಖರ್ಚು ಮಾಡುವ ವಿಚಾರದಲ್ಲಿ ಭಾವನೆಗಳು ಎಂಟ್ರಿ ಆಗದಂತೆ ನೋಡಿಕೊಳ್ಳುತ್ತಾರೆ. ದೀರ್ಘಾವಧಿ ಉಳಿತಾಯ ವಿಚಾರಗಳು ಬಂದರೆ ಹಣ ಹೂಡಿಕೆಯ ಸಂದರ್ಭ ಅಥವಾ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನೆಗಳು ಪ್ರಭಾವ ಬೀರಲು ಬಿಡುವುದಿಲ್ಲ. ಹೀಗಾಗಿ ಸಂಪತ್ತನ್ನು ಹೆಚ್ಚಿಸಬೇಕು ಎಂದುಕೊಳ್ಳುವವರು ಹಣಕಾಸಿನ ನಿರ್ಧಾರಗಳಲ್ಲಿ ಭಾವನೆಗಳ ಪ್ರಭಾವ ಇರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಈ ಮೇಲಿನ ನಾಲ್ಕು ಅಂಶಗಳು ಸಂಪತ್ತನ್ನು ಬೆಳೆಸುತ್ತಾ ಹೋಗುವ ಜನರಲ್ಲಿ ಇರುವ ಸಾಮ್ಯತೆಯ ಅಂಶಗಳಾಗಿವೆ.

 

ನಿಮ್ಮ ಆದಾಯ ಹೆಚ್ಚಾಗಬೇಕಾ? ಹಾಗಿದ್ರೆ ಈ 5 ಹಣದ ಸೂತ್ರಗಳನ್ನು ಪಾಲಿಸಿನಿಮ್ಮ ಆದಾಯ ಹೆಚ್ಚಾಗಬೇಕಾ? ಹಾಗಿದ್ರೆ ಈ 5 ಹಣದ ಸೂತ್ರಗಳನ್ನು ಪಾಲಿಸಿ

English summary

These 4 Things In Common Between Who Build Wealth Successfully

In this article explained who build wealth most successfully have 4 things in common
Story first published: Thursday, February 6, 2020, 17:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X