For Quick Alerts
ALLOW NOTIFICATIONS  
For Daily Alerts

ಹೂಡಿಕೆಗೆ ಸವರನ್ ಗೋಲ್ಡ್ ಬಾಂಡ್ ಚಿನ್ನಕ್ಕಿಂತ ಉತ್ತಮ: 5 ಕಾರಣ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ಸವರನ್ ಗೋಲ್ಡ್ ಬಾಂಡ್ಸ್ ಅನ್ನು ಬಿಡುಗಡೆ ಮಾಡಿದ್ದು, 2022ರ ಆಗಸ್ಟ್ 22ರಿಂದ ಚಂದಾದಾರಿಕೆಗೆ ತೆರೆದುಕೊಂಡಿದೆ. ಇದು 2022-23 ಹಣಕಾಸು ವರ್ಷದಲ್ಲಿ ಎರಡನೇ ಬಾರಿಗೆ ಬಿಡುಗಡೆ ಆಗುತ್ತಿರುವ ಸವರನ್ ಗೋಲ್ಡ್ ಬಾಂಡ್ ಯೋಜನೆಯಾಗಿದೆ. ಆಗಸ್ಟ್ 26ರವರೆಗೆ ನಮಗೆ ಖರೀದಿ ಮಾಡುವ ಅವಕಾಶ ಇರಲಿದೆ.

 

ಈ ಹಣಕಾಸು ವರ್ಷದ ಎರಡನೇ ಸರಣಿಯಾದ ಇದರಲ್ಲಿ ಒಂದು ಗ್ರಾಂ ಚಿನ್ನಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 5,197 ರೂಪಾಯಿ ನಿಗದಿಪಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಗೆ ಅವಕಾಶ ನೀಡಿದೆ. ಇನ್ನು ಡಿಮ್ಯಾಟ್ ಖಾತೆ ಇರುವವರು ತಮ್ಮ ಖಾತೆಗೆ ಬಾಂಡ್ ಅನ್ನು ಜಮಾ ಮಾಡಿಕೊಳ್ಳಬಹುದು. ಹಾಗೆಯೇ ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿ ಮಾಡುವವರಿಗೆ 50 ರೂಪಾಯಿ ರಿಯಾಯಿತಿ ಲಭ್ಯವಾಗಲಿದೆ.

ಹೊಸ ಸವರನ್ ಗೋಲ್ಡ್ ಬಾಂಡ್ ಯೋಜನೆ: ನೀವು ತಿಳಿಯಬೇಕಾದ 10 ಅಂಶಹೊಸ ಸವರನ್ ಗೋಲ್ಡ್ ಬಾಂಡ್ ಯೋಜನೆ: ನೀವು ತಿಳಿಯಬೇಕಾದ 10 ಅಂಶ

ಹೂಡಿಕೆದಾರರು ವಾಣಿಜ್ಯ ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಸಿಐಎಲ್), ನಿಗದಿತ ಅಂಚೆ ಕಚೇರಿ ಅಧಿಕಾರಿಗಳು, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್, ನೇರವಾಗಿ ಅಥವಾ ಏಜೆಂಟ್‌ಗಳ ಮೂಲಕ ಹೂಡಿಕೆದಾರರು ಈ ಬಾಂಡ್ ಅನ್ನು ಖರೀದಿ ಮಾಡಬಹುದು. ಚಿನ್ನದ ಮೇಲೆ ನಾವು ಹೂಡಿಕೆ ಮಾಡುವುದಕ್ಕಿಂತ ಈ ಸವರನ್ ಗೋಲ್ಡ್ ಮೇಲೆ ಹೂಡಿಕೆ ಮಾಡುವುದು ಏಕೆ ಉತ್ತಮ ಎಂಬುವುದಕ್ಕೆ ನಾವಿಲ್ಲಿ ಐದು ಕಾರಣವನ್ನು ವಿವರಿಸಿದ್ದೇವೆ ಮುಂದೆ ಓದಿ...

 ಕಳವು ಮಾಡಲಾಗದ ಚಿನ್ನ

ಕಳವು ಮಾಡಲಾಗದ ಚಿನ್ನ

ಚಿನ್ನ ದುಬಾರಿ ಮಾತ್ರವಲ್ಲ ಇದು ಕಳವು ಆಗುವ ಅಪಾಯ ಕೂಡಾ ಇರುತ್ತದೆ. ನಾವು ಅಧಿಕ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿಯಾಗಿದೆ. ನೀವು ಅದಕ್ಕಾಗಿ ಹಣ ಪಾವತಿ ಮಾಡಿ ಬ್ಯಾಂಕ್‌ ಲಾಕರ್‌ನಲ್ಲಿ ಇಡಬಹುದು. ಇನ್ನು ಚಿನ್ನದ ಸುರಕ್ಷತೆಗೆ ಆದ್ಯತೆ ನೀಡುವುದಾದರೆ ಚಿನ್ನಕ್ಕೂ ಕೂಡಾ ವಿಮೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಈ ಚಿನ್ನದ ಬಾಂಡ್ ಅನ್ನು ಖರೀದಿ ಮಾಡಿದರೆ ಅದು ಕಳವು ಆಗುವ ಅಪಾಯವೇ ಇಲ್ಲ. ನಾವು ಅದರ ಸುರಕ್ಷತೆಯನ್ನು ನೋಡಬೇಕಾಗಿಲ್ಲ. ಸರ್ಕಾರವೇ ಬಾಂಡ್ ಅನ್ನು ಸುರಕ್ಷಿತವಾಗಿರಿಸುತ್ತದೆ.

Gold Rate Today: ಚಿನ್ನದ ಬೆಲೆ ಇಳಿಕೆ: ಆಗಸ್ಟ್ 22ರ ದರ ಎಷ್ಟಿದೆ ನೋಡಿGold Rate Today: ಚಿನ್ನದ ಬೆಲೆ ಇಳಿಕೆ: ಆಗಸ್ಟ್ 22ರ ದರ ಎಷ್ಟಿದೆ ನೋಡಿ

 ಬಡ್ಡಿ ಮೊತ್ತ ಸಂಪಾದಿಸುವ ಚಿನ್ನ

ಬಡ್ಡಿ ಮೊತ್ತ ಸಂಪಾದಿಸುವ ಚಿನ್ನ

ನಾವು ಸಾಮಾನ್ಯವಾಗಿ ಚಿನ್ನದ ಮೇಲೆ ಯಾವುದೇ ಬಡ್ಡಿಯನ್ನು ಪಡೆಯುವುದಿಲ್ಲ. ಈ ಸವರನ್ ಗೋಲ್ಡ್ ಬಾಂಡ್‌ನಲ್ಲಿ ನಾವು ಹೂಡಿಕೆಯನ್ನು ಮಾಡಿದರೆ ನಮಗೆ ಬಡ್ಡಿದರ ಲಭ್ಯವಾಗಲಿದೆ. ನಮಗೆ ಚಿನ್ನ ಸುರಕ್ಷಿತವಾಗಿರುವುದು ಮಾತ್ರವಲ್ಲದೆ ವಾರ್ಷಿಕವಾಗಿ ಶೇಕಡ 2.5ರಷ್ಟು ಬಡ್ಡಿದರ ಲಭ್ಯವಾಗಲಿದೆ. ಆದರೆ ಇದು ವರ್ಷಕ್ಕೆ ಎರಡು ಬಾರಿ ಪಾವತಿಯಾಗಲಿದೆ. ಎಂಟು ವರ್ಷಗಳ ಕಾಲದ ಅವಧಿಗೆ ಪ್ರತಿ ವರ್ಷ ಶೇಕಡ 2.5ರಷ್ಟು ಬಡ್ಡಿದರ ಇರಲಿದೆ.

 ಸವರನ್ ಗ್ಯಾರಂಟಿ
 

ಸವರನ್ ಗ್ಯಾರಂಟಿ

ಈ ಚಿನ್ನದ ಗುಣಮಟ್ಟ, ಸುರಕ್ಷತೆ, ಬಡ್ಡಿದರ ಪಾವತಿ ಹಾಗೂ ಮೆಚ್ಯೂರಿಟಿ ಸಂದರ್ಭದಲ್ಲಿ ಹೂಡಿಕೆ ಮೇಲೆ ರಿಟರ್ನ್ ಬಗ್ಗೆ ಕೇಂದ್ರ ಸರ್ಕಾರವು ಗ್ಯಾರಂಟಿಯನ್ನು ನೀಡುತ್ತದೆ. ಆದ್ದರಿಂದಾಗಿ ನಾವು ಸವರನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡುವುದರಲ್ಲಿ ಯಾವುದೇ ಅಪಾಯವಿಲ್ಲ.

 ಗೋಲ್ಡ್-ಲಿಂಕ್ಡ್ ರಿಟರ್ನ್

ಗೋಲ್ಡ್-ಲಿಂಕ್ಡ್ ರಿಟರ್ನ್

ಮೆಚ್ಯೂರಿಟಿ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಚಿನ್ನದ ದರವು ನಿಮಗೆ ಲಭ್ಯವಾಗಲಿದೆ. ಇದು ಮೆಚ್ಯೂರಿಟಿಗಿಂತ ಮೊದಲು ಮೂರು ದಿನಗಳ ದರದ ಲೆಕ್ಕಾಚಾರದ ಮೇಲೆ 999 ಪ್ಯೂರಿಟಿ ಚಿನ್ನದ ಹಣವು ಲಭ್ಯವಾಗಲಿದೆ.

 ತೆರಿಗೆ ಇದೆಯೇ?

ತೆರಿಗೆ ಇದೆಯೇ?

ಇನ್ನು ಸವರನ್ ಗೋಲ್ಡ್ ಬಾಂಡ್‌ನ ಹೂಡಿಕೆ ಮೇಲೆ ತೆರಿಗೆ ವಿಧಿಸಲಾಗುತ್ತದೆಯೇ ಎಂಬ ಸಂಶಯ ಹಲವಾರು ಮಂದಿಗೆ ಇದೆ. ಆದರೆ ಈ ಹೂಡಿಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಲಭ್ಯವಾದ ಲಾಭದ ಮೇಲೆ ತೆರಿಗೆ ವಿನಾಯಿತಿ ಇದೆ. ಮೆಚ್ಯೂರಿಟಿಗೂ ಮುನ್ನ ಸವರನ್ ಗೋಲ್ಡ್ ಬಾಂಡ್ ಅನ್ನು ವರ್ಗಾವಣೆ ಮಾಡಿದರೆ, ದೀರ್ಘಾವಧಿಯ ಲಾಭದ ಮೇಲೆ ತೆರಿಗೆ ಮಿತಿ ಇರಲಿದೆ.

English summary

Why Sovereign Gold Bond is Better Way to Invest, Explained in Kannada

Sovereign Gold Bond – Series II: Why Sovereign Gold Bond is Better Way to Invest, 5 reasons Explained in Kannada, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X