For Quick Alerts
ALLOW NOTIFICATIONS  
For Daily Alerts

ಯುಪಿಐ ಸೌಲಭ್ಯ ಹೊರ ತಂದ ಮಾಡಿದ XPay.Life

|

ಬೆಂಗಳೂರು, ಜೂನ್ 10: ಎಕ್ಸ್‌ಪೇ ಲೈಫ್ (XPay.Life) ಭಾರತದ ಮೊದಲ ಬ್ಲಾಕ್‌ಚೈನ್-ಆಧಾರಿತ ವಹಿವಾಟು ವೇದಿಕೆಯು ಯುಪಿಐ (UPI) ಸೇವೆಗಳನ್ನು ಪ್ರಾರಂಭಿಸುವ ಮೂಲಕ ತನ್ನ 3ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಎಕ್ಸ್‌ಪೇ ಲೈಫ್ ಸಂಸ್ಥಾಪಕ ಮತ್ತು ಸಿಇಒ ರೋಹಿತ್ ಕುಮಾರ್, ಸಿಒಒ ದೀಪಕ್ ಅನಂತ್ ಮತ್ತು ಸಿಎಸ್‌ಒ ಕಾರ್ತಿಕ್ ಕಲಾಧರ್ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs) ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳ (DCCBs) ಜೊತೆಗೆ ಎಕ್ಸ್‌ಪೇ ಲೈಫ್ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಸುರಕ್ಷತೆಗೆ ಯಾವುದೇ ಅಡ್ಡಿಯಿಲ್ಲದೆ, ಉತ್ತಮ ಬ್ಯಾಂಕಿಂಗ್ ಸೇವೆಯ ಮೂಲಕ ಗ್ರಾಮೀಣ ಜನತೆಗೆ ನಿಜವಾದ ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸಲು ಇದರಿಂದ ಅನುಕೂಲವಾಗುತ್ತದೆ. ಆರ್ಥಿಕ ಬೆಂಬಲ ಅಗತ್ಯವಿರುವ ಗ್ರಾಮೀಣರಿಗೆ ಹಣಕಾಸಿನ ಸೌಲಭ್ಯಗಳು ಲಭ್ಯವಾಗುವಂತೆ ಮಾಡುವಲ್ಲಿ ಎಕ್ಸ್‌ಪೇ ಲೈಫ್ ಪ್ರವರ್ತಕವಾಗಿದೆ. ಈಗ ತನ್ನ ಯುಪಿಐ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಎಕ್ಸ್‌ಪೇ ಲೈಫ್ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ 4 ಮಿಲಿಯನ್ ಗ್ರಾಹಕರು, 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಣಕಾಸು ಸೌಲಭ್ಯದ ಅವಕಾಶಗಳನ್ನು ವೃದ್ಧಿಸುತ್ತಿದೆ.

ಅತ್ಯುತ್ತಮ ಟರ್ಮ್ ಲೈಫ್ ಇನ್ಶುರೆನ್ಸ್ ಆಯ್ಕೆ ಮಾಡುವುದು ಹೇಗೆ?ಅತ್ಯುತ್ತಮ ಟರ್ಮ್ ಲೈಫ್ ಇನ್ಶುರೆನ್ಸ್ ಆಯ್ಕೆ ಮಾಡುವುದು ಹೇಗೆ?

ಮೂರು ಮಾದರಿಯಲ್ಲಿ ಹಣಕಾಸಿನ ಸೇವೆ

ಮೂರು ಮಾದರಿಯಲ್ಲಿ ಹಣಕಾಸಿನ ಸೇವೆ

ತನ್ನ ವಿಸ್ತಾರವಾದ ಗ್ರಾಹಕ ಸಮೂಹವನ್ನು ತಲುಪಿ, ಅವರಿಗೆ ಹಣಕಾಸಿನ ಸೇವೆಗಳನ್ನು ಒದಗಿಸಲು, ಎಕ್ಸ್‌ಪೇ ಲೈಫ್ ಮೂರು ಮಾದರಿಗಳಲ್ಲಿ ಕಾರ್ಯನಿರ್ವಹಿಸುತ್ತದೆ - SaaS (ಸೇವೆಯ ರೂಪದಲ್ಲಿ ಸಾಫ್ಟ್ವೇರ್) ಇದು ಮೊಬೈಲ್ ಅಪ್ಲಿಕೇಶನ್ ಆಗಿದೆ, PaaS (ಸೇವೆಯ ರೂಪದಲ್ಲಿ ಪ್ಲಾಟ್‌ಫಾರ್ಮ್) ಡೈನಾಮಿಕ್ ಸ್ವಭಾವದ ವೆಬ್‌ಸೈಟ್ ಆಗಿದೆ. ಹಾಗೆಯೇ IaaS (ಸೇವೆಯ ರೂಪದಲ್ಲಿ ಮೂಲಸೌಕರ್ಯ). ಇದು ಮೊಬೈಲ್ ವ್ಯಾನ್‌ಗಳನ್ನು ಒಳಗೊಂಡಿದೆ.

ಎಕ್ಸ್‌ಪೇ ಲೈಫ್ ವಿತರಿಸುತ್ತಿರುವ ಮತ್ತು ಕಲ್ಪಿಸುತ್ತಿರುವ ಬೇಡಿಕೆಯ ಸೇವೆಗಳೊಂದಿಗೆ ಗ್ರಾಮೀಣ ಮೂಲಸೌಕರ್ಯವನ್ನು ಪ್ರಗತಿಗೆ ಸಾಕ್ಷಿಯಾಗುವಂತೆ ಮಾಡುವುದು ಗುರಿಯಾಗಿದೆ.

ಸಂಕಷ್ಟದ ಸ್ಥಿತಿಯಲ್ಲಿ ಆರಂಭವಾದ ಎಕ್ಸ್‌ಪೇ ಲೈಫ್

ಸಂಕಷ್ಟದ ಸ್ಥಿತಿಯಲ್ಲಿ ಆರಂಭವಾದ ಎಕ್ಸ್‌ಪೇ ಲೈಫ್

ಎಕ್ಸ್‌ಪೇ ಲೈಫ್ ಭವಿಷ್ಯದಲ್ಲಿ ಗ್ರಾಮೀಣ ಜನತೆಗೆ ಇಂತಹ ಹಲವು ಸುಧಾರಿತ ಸೇವೆಗಳನ್ನು ತಂದು, ಭಾರತದ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ. ನಬಾರ್ಡ್, ಎನ್‌ಪಿಸಿಐ ಮತ್ತು ರಾಜ್ಯ ಸರ್ಕಾರದೊಂದಿಗೆ ಫಿನ್‌ಟೆಕ್ ಕಂಪನಿಯು ಆರ್‌ಆರ್‌ಬಿಗಳು ಮತ್ತು ಡಿಸಿಸಿಬಿಗಳ ಎಲ್ಲ ಲಿಂಕ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಬ್ಯಾಂಕ್‌ಗಳನ್ನು ಬಲಪಡಿಸುವ ಮತ್ತು ಪಾವತಿಗಳನ್ನು ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸುವ ಕೆಲಸ ಮಾಡುತ್ತಿದೆ.

ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಆರಂಭವಾದ ಎಕ್ಸ್‌ಪೇ ಲೈಫ್, ಲಾಭದಾಯಕ ಉದ್ಯಮವಾಗಿ ಬೆಳೆದಿರುವುದು, ಅದರೊಂದಿಗೆ ತನ್ನ ಪ್ರತಿಭೆಗಳನ್ನೂ ಯಶಸ್ವಿಯಾಗಿ ಉಳಿಸಿಕೊಂಡಿದ್ದು ವಿಶೇಷ ಸಾಧನೆ ಎನ್ನಿಸಿದೆ. ಈ ಮೂಲಕ ಹಾಲಿ ಹಾಗೂ ಸಂಭಾವ್ಯ ಉದ್ಯೋಗಿಗಳಿಗೆ ಆಯ್ಕೆಯ ಉದ್ಯೋಗದಾತನಾಗಿ ವಿಕಸನಗೊಂಡಿದೆ,

ಎಕ್ಸ್‌ಪೇ ಲೈಫ್ ಸ್ಥಾಪಕ ಮತ್ತು ಸಿಇಒ ರೋಹಿತ್ ಕುಮಾರ್

ಎಕ್ಸ್‌ಪೇ ಲೈಫ್ ಸ್ಥಾಪಕ ಮತ್ತು ಸಿಇಒ ರೋಹಿತ್ ಕುಮಾರ್

ಎಕ್ಸ್‌ಪೇ ಲೈಫ್ ಸ್ಥಾಪಕ ಮತ್ತು ಸಿಇಒ ರೋಹಿತ್ ಕುಮಾರ್ ಮಾತನಾಡಿ, ''ನಾವು ದೇಶದ ಅತ್ಯಂತ ಉದ್ಯಮಶೀಲ ಫಿನ್‌ಟೆಕ್ ಸ್ಟಾರ್ಟ್-ಅಪ್‌ಗಳಲ್ಲಿ ಒಂದಾಗಿದ್ದೇವೆ. ಸುರಕ್ಷಿತ ವಹಿವಾಟುಗಳು ಮತ್ತು ನಾವೀನ್ಯಗಳೊಂದಿಗೆ ಜೀವನವನ್ನು ಸರಳಗೊಳಿಸುವುದು ನಮ್ಮ ಗುರಿ. ನಮ್ಮ ಯುಪಿಐ ಸೇವೆಗಳೊಂದಿಗೆ ನಾವು ದೇಶಾದ್ಯಂತ ಮತ್ತು ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಆರ್ಥಿಕ ಅರಿವು ಮೂಡಿಸಿ, ಜನರನ್ನು ಸಮರ್ಥರನ್ನಾಗಿ ಮಾಡಲು, ವಿವಿಧ ರಾಜ್ಯಗಳ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ಬ್ಯಾಂಕ್‌ಗಳನ್ನು ಬಲಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ಡಿಜಿಟಲ್ ಇಂಡಿಯಾವನ್ನು ಆರ್ಥಿಕವಾಗಿ ಬೆಂಬಲಿಸುವ ನಮ್ಮ ಉಪಕ್ರಮಗಳ ಪ್ರಾರಂಭವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕೊಡುಗೆಗಳನ್ನು ಪರಿಚಯಿಸಲಿದ್ದೇವೆ'' ಎಂದರು.

ಹಣಕಾಸು ಕ್ಷೇತ್ರವನ್ನು ಬಲಪಡಿಸುತ್ತೇವೆ

ಎಕ್ಸ್ಪೇ-ಲೈಫ್ ಮುಖ್ಯ ಮಾರಾಟ ಅಧಿಕಾರಿ ಕಾರ್ತಿಕ್ ಕಲಾಧರ್ ಅವರು, "ನಮ್ಮ ಯುಪಿಐ ಸೇವೆಗಳ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಪಾವತಿಗಳನ್ನು ಸಫಲಗೊಳಿಸುವ, ಜನಸಾಮಾನ್ಯರಿಗೆ ಹಣಕಾಸಿನ ವಹಿವಾಟುಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಪಾಲುದಾರರು ಮತ್ತು ತಂತ್ರಜ್ಞಾನದ ಜೊತೆಗೆ ನಾವು ವಿವಿಧ ಹಣಕಾಸು ಕೊಡುಗೆಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ. ಭಾರತೀಯ, ವಿಶೇಷವಾಗಿ ಗ್ರಾಮೀಣ ಭಾರತದ, ಹಣಕಾಸು ಕ್ಷೇತ್ರವನ್ನು ಬಲಪಡಿಸುತ್ತೇವೆ" ಎಂದು ವಿವರಿಸಿದರು.

English summary

XPay.Life commemorates its 3rd Anniversary with the launch of its UPI services

XPay.Life, India's first blockchain - enabled transaction framework commemorated its 3rd anniversary by launching its UPI services. The event took place in Bengaluru in presence of the Founder & CEO of XPay.Life, Mr. Rohit Kumar, COO, Mr. Deepak Ananth and CSO, Mr. Karthik Kaladhar.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X