For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆ ಪತರುಗುಟ್ಟುವಾಗ ಇಲ್ಲಿವೆ 5 ಪರ್ಯಾಯ ಹೂಡಿಕೆ

|

"ನನ್ನ ಹತ್ತಿರ ಇರುವ ಒಂದಿಷ್ಟು ದುಡ್ಡನ್ನು ಷೇರುಗಳ ಮೇಲೆ ಹಾಕಿ, ತಿಂಗಳಿಗೆ ಒಂದಿಷ್ಟು ಲಾಭ ಕಾಣಬೇಕು ಅಂತಿದೆ. ಆದರೆ ಷೇರು ಮಾರುಕಟ್ಟೆ ಹೇಗೆ ಬೀಳುತ್ತೆ ಅಂದರೆ, ಅದರಲ್ಲಿ ಹಣ ಹಾಕುವುದಕ್ಕೆ ದಿಗಿಲಾಗುತ್ತದೆ" - ಈ ಅರ್ಥದ ಅಥವಾ ಇಂಥದ್ದೇ ಮಾತನ್ನು ಕೇಳಿಸಿಕೊಂಡಿದ್ದೀರಾ? ಬೀಳುತ್ತಿರುವ ಷೇರುಗಳ ಬದಲಿಗೆ ಪರ್ಯಾಯ ಹುಡುಕುತ್ತಿದ್ದೀರಾ?

ಹಾಗಿದ್ದರೆ ಸೆನ್ಸೆಕ್ಸ್, ನಿಫ್ಟಿ ದೊಪ್ ಅಂತ ಬೀಳುವ- ಬೀಳುತ್ತಿರುವ ಹೊತ್ತಿನಲ್ಲಿ ಐದು ಆಯ್ಕೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇವುಗಳ ಪೈಕಿ ಯಾವುದಾದರೂ ಒಂದನ್ನು ಅಥವಾ ಪೋರ್ಟ್ ಫೋಲಿಯೋ ರೀತಿ ವಿವಿಧ ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಷೇರು ಮಾರುಕಟ್ಟೆಗೆ ಪರ್ಯಾಯವಾಗಿ ಅತ್ಯುತ್ತಮವಾದ ಐದು ಹೂಡಿಕೆಗಳು ಈ ಕೆಳಕಂಡಂತೆ ಇವೆ.

ಎಸ್ ಬಿಐ ಗೋಲ್ಡ್ ಇಟಿಎಫ್

ಎಸ್ ಬಿಐ ಗೋಲ್ಡ್ ಇಟಿಎಫ್

ಎಸ್ ಬಿಐ ಗೋಲ್ಡ್ ಇಟಿಎಫ್ ಕಳೆದ ಒಂದು ವರ್ಷದಲ್ಲಿ 27.58 ಪರ್ಸೆಂಟ್ ರಿಟರ್ನ್ಸ್ ಕೊಟ್ಟಿದೆ. ಉಳಿದ ಯಾವುದೇ ಅಸೆಟ್ ಕ್ಲಾಸ್ ಗೆ ಹೋಲಿಸಿದರೆ ಇದು ಅತ್ಯುತ್ತಮ ರಿಟರ್ನ್. ಬಹಳ ಸವಾಲಿನ ಸಮಯದಲ್ಲಿ ನಾವು ಶಿಫಾರಸು ಮಾಡುವುದು ಗೋಲ್ಡ್ ಇಟಿಎಫ್ ಗಳನ್ನೇ. ಅದರಲ್ಲೂ ಭೌಗೋಳಿಕ- ರಾಜಕೀಯ ಉದ್ವಿಗ್ನ ಪರಿಸ್ಥಿತಿಯಲ್ಲಿ ಇದು ಅತ್ಯುತ್ತಮ ಆಯ್ಕೆ ಆಗಲಿದೆ. ಹೇಗೆ ಷೇರುಗಳನ್ನು ಖರೀದಿ ಮಾಡುತ್ತೇವೋ ಅದೇ ರೀತಿಯಲ್ಲಿ ಗೋಲ್ಡ್ ಇಟಿಎಫ್ ಗಳನ್ನು ಖರೀದಿ ಮಾಡಬಹುದು. ಷೇರು ಖರೀದಿ- ಮಾರಾಟಕ್ಕೆ ಬೇಕಾದಂತೆ ಡಿಮ್ಯಾಟ್ ಖಾತೆ ಇದ್ದರೆ ಆಯಿತು. ಯಾವಾಗೆಲ್ಲ ಚಿನ್ನದ ಬೆಲೆ ಮೇಲೇರುತ್ತದೋ ಆಗೆಲ್ಲ ಗೋಲ್ಡ್ ಇಟಿಎಫ್ ಕೂಡ ಏರುತ್ತದೆ. ಅವು ಎಲೆಕ್ಟ್ರಾನಿಕ್ ರೂಪದಲ್ಲಿ ಇರುವುದರಿಂದ ಖರೀದಿ ಮತ್ತು ಮಾರಾಟ ಬಲು ಸಲೀಸು.

ಯುಟಿಐ ಗೋಲ್ಡ್ ಇಟಿಎಫ್

ಯುಟಿಐ ಗೋಲ್ಡ್ ಇಟಿಎಫ್

ಹೂಡಿಕೆಗೆ ಮತ್ತೊಂದು ಅತ್ಯುತ್ತಮ ಆಯ್ಕೆ ಯುಟಿಎಫ್ ಗೋಲ್ಡ್ ಇಟಿಎಫ್. ಕಳೆದ ಒಂದು ವರ್ಷದಲ್ಲಿ ಇದು ಇಪ್ಪತ್ತಾರು ಪರ್ಸೆಂಟ್ ರಿಟರ್ನ್ ನೀಡಿದೆ. ಕನಿಷ್ಠ ಹತ್ತು ಪರ್ಸೆಂಟ್ ನಷ್ಟು ಹೂಡಿಕೆ ಮಾಡಬಹುದಾದ ಹಣವನ್ನು ಚಿನ್ನದ ಮೇಲೆ ಹಾಕುವುದು ಸ್ವೀಕರಿಸಬಹುದಾದ ಸಲಹೆ. ಚಿನ್ನವು ಎಲೆಕ್ಟ್ರಾನಿಕ್ ರೂಪದಲ್ಲಿ ಇರುತ್ತದೆಯಾದ್ದರಿಂದ ಕಳುವು ಆಗುತ್ತದೆ ಎಂದು ಹೆದರುವ ಅಗತ್ಯವೂ ಇಲ್ಲ. ಕಳೆದ ಒಂದು ವರ್ಷದ ರಿಟರ್ನ್, ಈ ವರ್ಷದ ಆರಂಭದಿಂದ ಇಲ್ಲಿಯವರೆಗಿನ ರಿಟರ್ನ್ ಅದ್ಭುತವಾಗಿದೆ. ಆದರೆ ಇದೇ ರೀತಿಯ ರಿಟರ್ನ್ಸ್ ಮುಂದುವರಿಯಬಹುದು ಎಂಬುದು ಖಾತ್ರಿ ಇಲ್ಲ.

ಬಜಾಜ್ ಫೈನಾನ್ಸ್ ಮತ್ತು ಮಹೀಂದ್ರಾ ಫೈನಾನ್ಸ್ ನಂಥ ಸುರಕ್ಷಿತ ಎನ್ ಬಿಎಫ್ ಸಿ ಎಫ್ ಡಿ

ಬಜಾಜ್ ಫೈನಾನ್ಸ್ ಮತ್ತು ಮಹೀಂದ್ರಾ ಫೈನಾನ್ಸ್ ನಂಥ ಸುರಕ್ಷಿತ ಎನ್ ಬಿಎಫ್ ಸಿ ಎಫ್ ಡಿ

ಬಹಳ ಸುರಕ್ಷಿತವಾದ ಎನ್ ಬಿಎಫ್ ಸಿ (ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿ) ಎಫ್ ಡಿಗಳ ಮೇಲೆ ಕೂಡ ಹಣ ಹೂಡಬಹುದು. ಉದಾಹರಣೆಗೆ ಬಜಾಜ್ ಫೈನಾನ್ಸ್ ಮತ್ತು ಮಹೀಂದ್ರಾ ಫೈನಾನ್ಸ್. ಇವುಗಳು ವಾರ್ಷಿಕ 8.30 ಪರ್ಸೆಂಟ್ ಬಡ್ಡಿ ದರ ನೀಡುತ್ತವೆ. ಈ ಎರಡು ಎನ್ ಬಿಎಫ್ ಸಿಗಳ ಎಫ್. ಡಿ. ಗಳಿಗೆ AAA ರೇಟಿಂಗ್ ಇದೆ. ಉಳಿದ ಬ್ಯಾಂಕ್ ಡೆಪಾಸಿಟ್ ಗಳಿಗೆ ಹೋಲಿಸಿದರೆ ಒಳ್ಳೆ ರಿಟರ್ನ್ಸ್ ಇದೆ. ಪ್ರವರ್ತಕರು ಒಳ್ಳೆ ಹಿನ್ನೆಲೆಯವರಾದ್ದರಿಂದ ಹಾಗೂ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದರಿಂದ ಅವು ತುಂಬ ಸುರಕ್ಷಿತವೂ ಹೌದು.

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ಸ್

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ಸ್

ಪೋಸ್ಟ್ ಆಫೀಸ್ ನ ಟೈಮ್ ಡೆಪಾಸಿಟ್ಸ್ ಆಯ್ಕೆಯನ್ನು ತೆಗೆದುಹಾಕಲು ಸಾಧ್ಯವಿಲ್ಲ. ಟೈಮ್ ಡೆಪಾಸಿಟ್ಸ್ ಗೆ ವಾರ್ಷಿಕ 7.7 ಪರ್ಸೆಂಟ್ ಬಡ್ಡಿ ದರ ದೊರೆಯುತ್ತದೆ. ಬ್ಯಾಂಕ್ ಡೆಪಾಸಿಟ್ಸ್ ಗಳಿಗಿಂತ ಈ ಬಡ್ಡಿ ದರ ಹೆಚ್ಚಾಗಿದೆ. ಜತೆಗೆ ಸುರಕ್ಷಿತವೂ ಹೌದು. ಏಕೆಂದರೆ ಇದಕ್ಕೆ ಸರ್ಕಾರದ ಬೆಂಬಲ ಇದೆ. ಷೇರು ಮಾರುಕಟ್ಟೆ ಅನಿಶ್ಚಿತತೆಯಲ್ಲಿ ಇದ್ದಾಗ ಇದು ಉತ್ತಮ ಆಯ್ಕೆಗಳಲ್ಲಿ ಒಂದು.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್ ಎಸ್ ಸಿ)

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್ ಎಸ್ ಸಿ)

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಐದು ವರ್ಷದ ಸ್ಕೀಮ್. ಇದಕ್ಕೆ ವಾರ್ಷಿಕ 7.9 ಪರ್ಸೆಂಟ್ ಬಡ್ಡಿ ದರ ದೊರೆಯುತ್ತದೆ. ಎನ್ ಎಸ್ ಸಿಯಲ್ಲಿ 100 ರುಪಾಯಿ ಹೂಡಿಕೆ ಮಾಡಿದರೆ 5 ವರ್ಷದಲ್ಲಿ 146.25 ರುಪಾಯಿ ಆಗುತ್ತದೆ. ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ಕೂಡ ಸಿಗುತ್ತದೆ.

English summary

5 Alternative Options When Stock Market Crashing

Here is the best 5 alternative options for investment when stock market crashing.
Story first published: Wednesday, January 8, 2020, 19:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X