For Quick Alerts
ALLOW NOTIFICATIONS  
For Daily Alerts

How To Withdraw PF Online : ಆನ್‌ಲೈನ್‌ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸರಳ ಹಂತ

|

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ಹೊಂದಿರುವ ಉದ್ಯೋಗಿಗಳು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಹಾಗೂ ತಮಗೆ ಬೇಕಾದಾಗ ವಿತ್ ಡ್ರಾ ಮಾಡಿಕೊಳ್ಳುವ ಆಯ್ಕೆ ಇದೆ.

ಈ ಹಿಂದೆ ಚಂದಾದಾರರು ಪಿಎಫ್ ಹಣ ಬಿಡಿಸಿಕೊಳ್ಳಲು ತಮ್ಮ ಕಚೇರಿಯಿಂದ ಪಿಎಫ್ ಕಚೇರಿಗೆ ಅಲೆದಾಡಬೇಕಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ನಿಮ್ಮ ಪಿಎಫ್ ಹಣವನ್ನು ಹಿಂಪಡೆಯಲು ಆನ್‌ಲೈನ್‌ ವಿಧಾನವನ್ನು ಪಾಲಿಸಬಹುದು. ಅದರಲ್ಲೂ ಈಗ ಸರಳವಾಗಿ ಆನ್‌ಲೈನ್‌ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ.

 ಇಪಿಎಫ್‌ ಖಾತೆಯಿಂದ 2 ಬಾರಿ ಹಣ ಹಿಂಪಡೆಯುವುದು ಹೇಗೆ?: ಇಲ್ಲಿದೆ ಹಂತಗಳು ಇಪಿಎಫ್‌ ಖಾತೆಯಿಂದ 2 ಬಾರಿ ಹಣ ಹಿಂಪಡೆಯುವುದು ಹೇಗೆ?: ಇಲ್ಲಿದೆ ಹಂತಗಳು

ಆದರೆ ಖಾತೆದಾರರು ತನ್ನ ಭವಿಷ್ಯ ನಿಧಿ (ಪಿಎಫ್) ಖಾತೆಯನ್ನು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಹಣವನ್ನು ಹಿಂಪಡೆಯಬಹುದು. ಭಾಗಶಃ ಮುಂಗಡವಾಗಿ ಹಣಬನ್ನು ಹಿಂಪಡೆಯಬಹುದು ಅಥವಾ ಸಂಪೂರ್ಣವಾಗಿ ಎಲ್ಲಾ ಹಣವನ್ನು ಹಿಂಪಡೆಯಬಹುದು. ಆನ್‌ಲೈನ್‌ ಮೂಲಕ ಹಣವನ್ನು ಹಿಂಪಡೆಯಲು ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯ e-SEWA ಪೋರ್ಟಲ್ ಅನ್ನು ಬಳಕೆ ಮಾಡಬಹುದು.

ಆನ್‌ಲೈನ್‌ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸರಳ ಹಂತ

ಇಪಿಎಫ್ನಿಂದ ಹಣವನ್ನು ಹಿಂಪಡೆಯಲು ಈ ಷರತ್ತುಗಳು ಅನ್ವಯ

ಪಿಎಫ್ ಖಾತೆಗೆ ಹಣವನ್ನು ಜಮಾ ಮಾಡಲು, ಆಧಾರ್ ಕಾರ್ಡ್ ಅನ್ನು ಯುಎಎನ್ ಗೆ ಲಿಂಕ್ ಮಾಡಬೇಕು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ವೆಬ್‌ಪುಟ ಅಥವಾ ಉಮಾಂಗ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಲಿಂಕ್ ಅನ್ನು ಆನ್‌ಲೈನ್‌ನಲ್ಲಿ ಮಾಡಬಹುದು.

ಉದ್ಯೋಗದ ಮೊದಲ ಐದು ವರ್ಷಗಳಲ್ಲಿ ಹಣವನ್ನು ಹಿಂತೆಗೆದುಕೊಳ್ಳುವ ಅಗತ್ಯವೆಂಬ ನಿಯಮ ಸರ್ಕಾರ ಮಾಡಿದೆ. ಕೆವೈಸಿಗೆ ಪ್ಯಾನ್‌ ಕಾರ್ಡ್‌ನ ಬಳಕೆಯ ಅಗತ್ಯವಿದೆ. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಪಿಪಿಎಫ್ಒ ಖಾತೆಯ ಸ್ಥಿತಿಯನ್ನು "ದೃಢೀಕರಿಸಲಾಗಿದೆ" ಎಂದು ಮಾರ್ಪಡಿಸಲಾಗುತ್ತದೆ.

ಆನ್‌ಲೈನ್‌ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸರಳ ಹಂತ

ಭವಿಷ್ಯ ನಿಧಿಯನ್ನು ಹಿಂತೆಗೆದುಕೊಳ್ಳುವ ವಿಧಾನ ಹೀಗಿದೆ:

* ಹಂತ 1: ಯುಎಎನ್ ಪೋರ್ಟಲ್ ಗೆ ಭೇಟಿ ನೀಡಿ unifiedportal-mem.epfindia.gov.in/memberinterface/

* ಹಂತ 2: ನಿಮ್ಮ ಯುಎಎನ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾವನ್ನು ಬಳಸಿಕೊಂಡು ಇ-ಸೇವಾ ಪೋರ್ಟಲ್ ಗೆ ಲಾಗ್ ಇನ್ ಮಾಡಿ.

* ಹಂತ 3: "ಆನ್‌ಲೈನ್ ಸೇವೆಗಳು" (Online Services) ಕ್ಲಿಕ್ ಮಾಡಿ ಮತ್ತು "ಕ್ಲೈಮ್" (Claim) ಆಯ್ಕೆಯನ್ನು ಆರಿಸಿ

* ಹಂತ 4: ಆ ಬಳಿಕ ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ನಮೂದಿಸಿ.

* ಹಂತ 5: ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ.

* ಹಂತ 6: "Proceed for Online Claim" ಮೇಲೆ ಕ್ಲಿಕ್ ಮಾಡಿ

* ಹಂತ 7: ಬಳಿಕ, ಕ್ಲೈಮ್ ಫಾರ್ಮ್‌ನಲ್ಲಿ, ಡ್ರಾಪ್‌ಡೌನ್ ಬಾಕ್ಸ್‌ನಿಂದ ಹಣವನ್ನು ಹಿಂತೆಗೆದುಕೊಳ್ಳಲು ಕಾರಣವನ್ನು ಆಯ್ಕೆಮಾಡಿ.

* ಹಂತ 8: ಅಗತ್ಯ ವಿವರಗಳು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.

* ಹಂತ 9: ಮತ್ತೊಮ್ಮೆ, ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ.

* ಹಂತ 10: ಒಟಿಪಿಗಾಗಿ ವಿನಂತಿ ಸಲ್ಲಿಸಿ

* ಹಂತ 11: ಒಟಿಪಿ ಅನ್ನು ನಮೂದಿಸಿ ಮತ್ತು ಕ್ಲೈಮ್ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ಇಲ್ಲಿಗೆ ಎಲ್ಲಾ ಹಂತ ಪೂರ್ಣವಾಗಲಿದೆ.

English summary

Follow These Simple Steps To Withdraw Your PF Online, Explained in Kannada

Follow These Simple Steps To Withdraw Your PF Online, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X