ಅಕ್ಟೋಬರ್ 1ರಿಂದ ಡೆಬಿಟ್ ಕಾರ್ಡ್ ಟೋಕನೈಜೇಶನ್, ಆರ್‌ಬಿಐ ಹೊಸ ನಿಯಮವೇನು?
ಆನ್‌ಲೈನ್ ಶಾಂಪಿಂಗ್ ವ್ಯವಸ್ಥೆಯನ್ನು ಸುಲಭ ಹಾಗೂ ಸರಳ ಮಾಡುವ ವ್ಯವಸ್ಥೆಯಾದ ಟೋಕನೈಜೇಶನ್ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ಮೂಲಕ ಆನ್‌ಲೈನ್ ಶಾಂಪಿಂಗ್ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ನ ಹೊಸ ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ.
ನಿಮ್ಮ ನೆಚ್ಚಿನ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಾದ ಅಮೆಜಾನ್, ಮಿಂತ್ರಾ, ಫ್ಲಿಫ್‌ಕಾರ್ಟ್, ಬಿಗ್ ಬಾಸ್ಕೆಟ್‌ನಲ್ಲಿ ಸುಲಭವಾಗಿ ಶಾಪಿಂಗ್ ಮಾಡುವ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಆರ್‌ಬಿಐ ಹೊಸ ನಿಯಮವನ್ನು ಜಾರಿ ಮಾಡಿದೆ. ಈ ಹೊಸ ವಿಧಾನವು ನಿಮ್ಮ ಆನ್‌ಲೈನ್ ಶಾಪಿಂಗ್ ವ್ಯವಸ್ಥೆಯನ್ನು ಸುಲಭ ಮಾಡುವುದು ಮಾತ್ರವಲ್ಲದೆ ನಿಮ್ಮ ಗುಪ್ತ ಮಾಹಿತಿಯನ್ನು ಕೂಡಾ ಸುರಕ್ಷಿತವಾಗಿರಿಸುತ್ತದೆ.
ಭವಿಷ್ಯದ ಪಾವತಿಗಳಿಗಾಗಿ ವ್ಯಾಪಾರಿಗಳ ವೆಬ್‌ಸೈಟ್‌ನಲ್ಲಿ ತಮ್ಮ ಕಾರ್ಡ್ ಡೇಟಾವನ್ನು ಸಂಗ್ರಹಿಸಿರುವುದರಿಂದ ಸೈಬರ್ ವಂಚನೆಗಳಿಂದ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಜನರು ಮೋಸ ಹೋಗಿದ್ದರಿಂದ RBI ನಿಂದ ಈ ಕ್ರಮವು ಬಂದಿದೆ.

ಕಾರ್ಡ್ ಟೋಕನೈಜೇಶನ್ ಅರ್ಥವೇನು?
ಸರಳವಾಗಿ ಹೇಳುವುದಾದರೆ, ಟೋಕನೈಸೇಶನ್ ಕ್ರೆಡಿಟ್ ಕಾರ್ಡ್ ವಿವರಗಳಾದ 16-ಅಂಕಿಯ ಸಂಖ್ಯೆ, ಕಾರ್ಡ್ ಹೋಲ್ಡರ್ ಹೆಸರು, ಮುಕ್ತಾಯ ದಿನಾಂಕ ಮತ್ತು ಭವಿಷ್ಯದ ಪಾವತಿಗಳಿಗಾಗಿ ಉಳಿಸಲಾದ ಕೋಡ್‌ಗಳನ್ನು "ಟೋಕನ್" ನೊಂದಿಗೆ ಬದಲಾಯಿಸುತ್ತದೆ. ಮುಂದಿನ ದಿನಗಳಲ್ಲಿ, ಈ ಟೋಕನ್‌ಗಳನ್ನು ವ್ಯಾಪಾರಿ ವೆಬ್‌ಸೈಟ್‌ಗಳು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಬದಲಿಗೆ ವಹಿವಾಟುಗಳಿಗಾಗಿ ಬಳಸುತ್ತವೆ.

ಕಾರ್ಡ್ ದುರುಪಯೋಗದ ದೂರುಗಳ ಕಾರಣ
ಕಾರ್ಡ್ ದುರುಪಯೋಗದ ದೂರುಗಳ ಕಾರಣದಿಂದಾಗಿ, ಭವಿಷ್ಯದ ಪಾವತಿಗಳಿಗಾಗಿ ವ್ಯಾಪಾರಿ ವೆಬ್‌ಸೈಟ್‌ಗಳಲ್ಲಿ ಕಾರ್ಡ್ ವಿವರಗಳನ್ನು ಉಳಿಸುವ ಆನ್‌ಲೈನ್ ವಹಿವಾಟುಗಳನ್ನು ಸುರಕ್ಷಿತಗೊಳಿಸಲು ಕಾರ್ಡ್-ಆನ್-ಫೈಲ್ ಟೋಕನೈಸೇಶನ್ ಮಾನದಂಡಗಳನ್ನು ಕೇಂದ್ರ ಬ್ಯಾಂಕ್ ತರುತ್ತದೆ. ಆರ್‌ಬಿಐ ಈ ಹಿಂದೆ ಕಾರ್ಡ್ ಟೋಕನೈಸೇಶನ್ ಗಡುವನ್ನು ಸೆಪ್ಟೆಂಬರ್ 30, 2022 ರವರೆಗೆ ವಿಸ್ತರಿಸಿತ್ತು.
ಗ್ರಾಹಕರು ತಮ್ಮ ಕಾರ್ಡ್‌ಗಳನ್ನು ಟೋಕನೈಸ್ ಮಾಡಿದ ನಂತರ ಅವರು ಕಾರ್ಡ್‌ಗಳ ಕೊನೆಯ 4 ನಾಲ್ಕು ಅಂಕಿಗಳನ್ನು ಬಳಸಿಕೊಂಡು ವ್ಯಾಪಾರಿಗಳ ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ಗುರುತಿಸಲು ಸಾಧ್ಯವಾಗುತ್ತದೆ, ಇದು ವ್ಯಾಪಾರಿಗಳು ತಮ್ಮ ಪೋರ್ಟಲ್‌ನಲ್ಲಿ ಉಳಿಸಲು ಸಾಧ್ಯವಾಗುವ ಏಕೈಕ ಡೇಟಾ. ಮತ್ತಷ್ಟು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ತಮ್ಮ ಟೋಕನೈಸ್ ಮಾಡಿದ ಕಾರ್ಡ್‌ಗಳನ್ನು ವೀಕ್ಷಿಸಲು ಅಥವಾ ನಿರ್ವಹಿಸಲು ಪೋರ್ಟಲ್ ಅನ್ನು ಒದಗಿಸುತ್ತವೆ.

ಟೋಕನೈಜ್ ಮಾಡಿದ ಕಾರ್ಡ್‌ಗಳನ್ನು ನಿರ್ವಹಣೆ
ಟೋಕನೈಜ್ ಮಾಡಿದ ಕಾರ್ಡ್‌ಗಳನ್ನು ನಿರ್ವಹಣೆ ಮಾಡಲು ಬ್ಯಾಂಕ್‌ಗಳು ಪ್ರತ್ಯೇಕ ಇಂಟರ್ಫೇಸ್ ಅನ್ನು (ಅದರ ವೆಬ್‌ಸೈಟ್‌ನಲ್ಲಿ) ನೀಡುತ್ತದೆ. ಇನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ದಾರರು ಯಾವುದೇ ಸಮಯದಲ್ಲಿ ತಮ್ಮ ಟೋಕನ್ ಆಯ್ಕೆಯನ್ನು ರದ್ದು ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಟೋಕನೈಜೇಶನ್ ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗುತ್ತದೆ. ಜನರು ತಮ್ಮ ಎಷ್ಟೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನುಟೋಕನೈಜೇಶನ್ ಮಾಡಬಹುದು. ಆದರೆ ಡೊಮೆಸ್ಟಿಕ್ ಕಾರ್ಡ್‌ಗಳಿಗೆ ಮಾತ್ರ ಕೆಲವು ನಿಯಮಗಳು ಇದೆ. ಓವರ್‌ಸೀಸ್ ಕಾರ್ಡ್‌ಗಳಿಗೆ ಟೋಕನೈಜೇಶನ್ ವಿಧಾನ ಅನ್ವಯ ಆಗುವುದಿಲ್ಲ. ನೀವು ಟೋಕನೈಜೇಶನ್ ಮಾಡಲು ಬಯಸಿದರೆ, ಮೊದಲು ತಮ್ಮ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ವೆಬ್‌ಸೈಟ್ ಮೂಲಕ ಯಾವುದೇ ಶಾಪಿಂಗ್ ಮಾಡುವ ಸಂದರ್ಭದಲ್ಲಿ ನೀವು ಟೋಕನೈಜೇಶನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

ಟೋಕನ್ ಜನರೇಟ್ ಮಾಡುವುದು ಹೇಗೆ?
ಟೋಕನ್ ಜನರೇಟ್ ಮಾಡುವುದು ಹೇಗೆ?
ಹಂತ 1: ಯಾವುದೇ ಇಕಾಮರ್ಸ್ ವೆಬ್‌ಸೈಟ್ ಅಥವಾ ಆಪ್ ತೆರೆಯಿರಿ
ಹಂತ 2: ಕಾರ್ಡ್ ಆಯ್ಕೆ ಮಾಡಿ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಹಾಕಿ, ಇತರೆ ಮಾಹಿತಿ ಕೂಡಾ ನಮೂದಿಸಿ
ಹಂತ 3: secure your card as per RBI guidelines ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಕಾರ್ಡ್ ಸುರಕ್ಷಿತವಾಗಿಸಿ
ಹಂತ 4: ಟೋಕನ್ ಕ್ರಿಯೇಷನ್ ಅಧಿಕೃತ ಮಾಡಿ. ಅದಕ್ಕಾಗಿ ಮೊಬೈಲ್‌ಗೆ ಅಥವಾ ಇಮೇಲ್ ಬಂದ ಒಟಿಪಿಯನ್ನು ನಮೂದಿಸಿ
ಹಂತ 5: ಟೋಕನ್ ಕ್ರಿಯೇಟ್ ಮಾಡಿ. ನಿಮ್ಮ ಕಾರ್ಡ್ ಮಾಹಿತಿ ಟೋಕನ್ ಆಗಿ ಬದಲಾಗಲಿದೆ.
ಹಂತ 6: ನೀವು ಅದೇ ಆಪ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಿಮ್ಮ ಕಾರ್ಡ್‌ನ ಕೊನೆಯ ನಾಲ್ಕು ಡಿಜಿಟ್ ಕಾಣಲಿದೆ.
ಹಂತ 7: ಹಾಗಾದಾಗ ನಿಮ್ಮ ಕಾರ್ಡ್ ಟೋಕನೈಜ್ ಆಗಿದೆ ಎಂದು ಅರ್ಥ