For Quick Alerts
ALLOW NOTIFICATIONS  
For Daily Alerts

ತಪ್ಪಾಗಿ ಬೇರೆ ಯುಪಿಐ ಅಡ್ರೆಸ್‌ಗೆ ಹಣ ಕಳಿಸಿದ್ರೆ, ವಾಪಸ್ ಪಡೆಯೋದು ಹೇಗೆ?

|

ಕೋವಿಡ್ ಸಾಂಕ್ರಾಮಿಕ ರೋಗ ಬಂದ ಬಳಿಕ, ಕಳೆದ ಎರಡು ವರ್ಷದಲ್ಲಿ ಭಾರತದ ಹಣ ಚಲಾವಣೆಯಲ್ಲಿ ಅಕ್ಷರಶಃ ಡಿಜಿಟಲ್ ಕ್ರಾಂತಿಯಾಗಿದೆ. ಯುಪಿಐ ವ್ಯವಸ್ಥೆಯು ಡಿಜಿಟಲ್ ಹಣದ ವಹಿವಾಟನ್ನು ಬಹಳ ಸುಲಭಗೊಳಿಸಿದೆ. ಬಹಳ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಇವುಗಳ ಉಪಯೋಗವಾಗುತ್ತಿದೆ.

ಯುಪಿಐ ವ್ಯವಸ್ಥೆಯ ಜೊತೆಗೆ, ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು, ಕಡಿಮೆ ಬೆಲೆಗೆ ಡಾಟಾ ಪ್ಯಾಕೇಜ್‌ಗಳು ಸಿಗುತ್ತಿದ್ದುದು ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಇಂಬು ಕೊಟ್ಟಿದೆ. ಬಹುತೇಕ ಪ್ರತಿಯೊಬ್ಬರೂ ಕೂಡ ಹಣದ ವಹಿವಾಟಿಗೆ ಯುಪಿಐ ಅನ್ನು ಬಳಕೆ ಮಾಡಿಯೇ ಮಾಡುತ್ತಾರೆ.

ಭಾರತದ ಇ-ರುಪೀ ಹೇಗಿರುತ್ತೆ? ಡಿಜಿಟಲ್ ಹಣದ ಚಲಾವಣೆ ಹೇಗೆ?ಭಾರತದ ಇ-ರುಪೀ ಹೇಗಿರುತ್ತೆ? ಡಿಜಿಟಲ್ ಹಣದ ಚಲಾವಣೆ ಹೇಗೆ?

ಇಲ್ಲಿ ಸಂಪರ್ಕಿಸಿ ನಿಮ್ಮ ದೂರು ಸಲ್ಲಿಸಬಹುದು.

ಇಂಥ ಸಂದರ್ಭದಲ್ಲಿ ಯುಪಿಐ ವಿಳಾಸವನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡು ಹಣ ಕಳುಹಿಸುವ ಸಂಭಾವ್ಯತೆ ಇರುತ್ತದೆ. ಇಂಥ ಹಲವು ಪ್ರಕರಣಗಳು ನಡೆದಿವೆ. ತಪ್ಪಾಗಿ ಬ್ಯಾಂಕ್ ಅಕೌಂಟ್ ನಂಬರ್ ಬರೆದು ಹಣ ಕಳುಹಿಸುವಂತೆ ತಪ್ಪಾಗಿ ಯುಪಿಐ ವಿಳಾಸ ನಮೂದಿಸಿ ಹಣ ಕಳುಹಿಸಿದವರು ಹಲವರು. ಇಂಥ ಸಂದರ್ಭದಲ್ಲಿ ಏನು ಮಾಡಬೇಕು? ನಾವು ಕಳುಹಿಸಿದ ಹಣ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಒಂದಷ್ಟು ಅವಕಾಶಗಳು.

ಹಣ ರವಾನೆಯಾದವರನ್ನು ಸಂಪರ್ಕಿಸಿ

ಹಣ ರವಾನೆಯಾದವರನ್ನು ಸಂಪರ್ಕಿಸಿ

ಬ್ಯಾಂಕ್‌ನವರು ಅಕಸ್ಮಾತ್ ತಪ್ಪಾಗಿ ಬೇರೆ ಅಕೌಂಟ್‌ಗೆ ಹಣ ರವಾನೆ ಮಾಡಿದರೆ ಅದನ್ನು ಕೂಡಲೇ ಹಿಂಪಡೆಯುತ್ತಾರೆ. ಆದರೆ, ಯುಪಿಐ ಟ್ರಾನ್ಸಾಕ್ಷನ್ ವೇಳೆ ನಾವು ತಪ್ಪಾಗಿ ರವಾನೆ ಮಾಡುವ ಹಣವನ್ನು ವಾಪಸ್ ಹಾಗೆಯೇ ವಾಪಸ್ ಪಡೆಯುವುದು ಸಾಧ್ಯವಿಲ್ಲ. ಹೀಗಾಗಿ, ಯುಪಿಐ ವಿಳಾಸವನ್ನು ಆಯ್ದುಕೊಂಡಾಗ ಬೆನಿಫಿಷಿಯರಿಯ ಹೆಸರನ್ನು ಖಚಿತಪಡಿಸಿಕೊಳ್ಳಿ. ಮೊಬೈಲ್ ನಂಬರ್ ಹಾಕುವಾಗ ಕೆಲವೊಮ್ಮೆ ತಪ್ಪಾಗಿ ನಂಬರ್ ಒತ್ತುವುದುಂಟು. ಆ ಸಂದರ್ಭದಲ್ಲೂ ಬೆನಿಫಿಷಿಯರಿ ಹೆಸರು ಸರಿ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಹಾಗೂ ಒಂದು ವೇಳೆ ತಪ್ಪಾದ ವ್ಯಕ್ತಿಗೆ ನೀವು ಹಣ ರವಾನೆ ಮಾಡಿದ್ದಲ್ಲಿ ಆ ವ್ಯಕ್ತಿಯನ್ನೇ ಸಂಪರ್ಕಿಸಿ ಹಣ ವಾಪಸಾತಿಗೆ ಮನವಿ ಮಾಡಬಹುದು. ವ್ಯಾಲಟ್ ಆ್ಯಪ್‌ಗಳಲ್ಲಿ ಮೊಬೈಲ್ ನಂಬರೇ ಒಬ್ಬ ವ್ಯಕ್ತಿಯ ಯುಪಿಐ ವಿಳಾಸವಾಗಿರುತ್ತದೆ. ಆ ನಂಬರ್ ಅನ್ನು ಬಳಸಿ ವ್ಯಕ್ತಿಯ ಸಂಪರ್ಕ ಮಾಡಬಹುದು.

 

ನಿಮ್ಮ ಬ್ಯಾಂಕ್ ಮೂಲಕ ಸಾಧ್ಯ

ನಿಮ್ಮ ಬ್ಯಾಂಕ್ ಮೂಲಕ ಸಾಧ್ಯ

ವ್ಯಕ್ತಿಯ ಸಂಪರ್ಕ ಸಾಧ್ಯವಾಗದಿದ್ದಲ್ಲಿ, ಅಥವಾ ಆ ವ್ಯಕ್ತಿ ಸ್ಪಂದಿಸದಿದ್ದಲ್ಲಿ ನೀವು ನಿಮ್ಮ ಬ್ಯಾಂಕ್ ಅನ್ನು ಆದಷ್ಟು ಬೇಗ ಸಂಪರ್ಕ ಮಾಡಬೇಕು. ವಹಿವಾಟು ನಡೆದ ಸ್ಕ್ರೀನ್‌ಶಾಟ್ ಇಟ್ಟುಕೊಂಡು ಫೋನ್ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು. ಬ್ರ್ಯಾಂಚ್ ಮ್ಯಾನೇಜರ್ ಭೇಟಿ ಮಾಡಬಹುದು. ಅವರು ನಿಮಗೆ ಮಾರ್ಗೋಪಾಯ ತಿಳಿಸಬಹುದು.

ಆ್ಯಪ್‌ನ ಸಹಾಯ ವಿಭಾಗ

ಆ್ಯಪ್‌ನ ಸಹಾಯ ವಿಭಾಗ

ತಪ್ಪಾಗಿ ವಹಿವಾಟಾದ ಆ್ಯಪ್‌ನಲ್ಲಿರುವ ಸಪೋರ್ಟ್ ಸೆಕ್ಷನ್‌ಗೆ ಹೋಗಿ ಅಲ್ಲಿ ನಿಮ್ಮ ಮನವಿ ಸಲ್ಲಿಸಬಹುದು. ಪೇಟಿಎಂ, ಫೋನ್‌ಪೆ, ಗೂಗಲ್ ಪೇ ಇತ್ಯಾದಿ ಎಲ್ಲಾ ಯುಪಿಐ ಆ್ಯಪ್‌ಗಳಲ್ಲೂ ಗ್ರಾಹಕರ ದೂರುಗಳನ್ನು ಆಲಿಸಲು ಮತ್ತು ಅವರ ಸಮಸ್ಯೆ ಬಗೆಹರಿಸಲು ವ್ಯವಸ್ಥೆ ಮಾಡಲಾಗಿರುತ್ತದೆ.

ಸಹಾಯವಾಣಿ

ಸಹಾಯವಾಣಿ

18001201740 - ಇದು ಭೀಮ್ (BHIM) ಸಹಾಯವಾಣಿ ನಂಬರ್. ಭಾರತದಲ್ಲಿ ಜಾರಿ ಮಾಡಲಾದ ಯುಪಿಐ ವ್ಯವಸ್ಥೆಯೇ ಭೀಮ್. ಇದರ ಆಧಾರದ ಮೇಲೆ ಮೊಬೈಲ್ ವ್ಯಾಲೆಟ್‌ಗಳು, ಬ್ಯಾಂಕಿಂಗ್ ಆ್ಯಪ್‌ಗಳು ಡಿಜಿಟಲ್ ಆಗಿ ಹಣದ ವಹಿವಾಟು ಮಾಡುತ್ತವೆ. ನೀವು ತಪ್ಪಾಗಿ ಯುಪಿಐ ವಿಳಾಸಕ್ಕೆ ಹಣ ಕಳುಹಿಸಿರುವುದು ಸೇರಿ ಯಾವುದೇ ಸಮಸ್ಯೆ ಎದುರಿಸುತ್ತಿದ್ದಲ್ಲಿ, ಭೀಮ್‌ನ ಈ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ಪ್ರಸ್ತಾಪಿಸಬಹುದು. ಅಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡಿ ಸಮಸ್ಯೆಗೆ ಪರಿಹಾರ ಹುಡುಕಬಹುದು.

ಕೊನೆಯ ಅಸ್ತ್ರ

ಕೊನೆಯ ಅಸ್ತ್ರ

ಈ ಮೇಲಿನ ಯಾವುದೂ ಕೂಡ ನಿಮಗೆ ವರ್ಕೌಟ್ ಆಗುತ್ತಿಲ್ಲ ಎಂದನಿಸಿದರೆ ಭೀಮ್ ವ್ಯವಸ್ಥೆಯ ನಿರ್ಮಾತೃವಾಗಿರುವ ಎನ್‌ಪಿಸಿಐ ಅನ್ನು ಸಂಪರ್ಕಿಸಬಹುದು. ಎನ್‌ಪಿಸಿಐನ ಯುಪಿಐ ಸಮಸ್ಯೆ ಇತ್ಯರ್ಥ ವ್ಯವಸ್ಥೆ ಇದ್ದು ಅದರ ವಿಲಾಸ ಈ ಕೆಳಕಾಣಿಸಿದಂತೆ.

https://www.npci.org.in/what-we-do/upi/dispute-redssal-mechanism
ಇಲ್ಲಿ ಸಂಪರ್ಕಿಸಿ ನಿಮ್ಮ ದೂರು ಸಲ್ಲಿಸಬಹುದು.

ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?

English summary

What If Money Sent To Wrong UPI Address, Know How To Recover

Money is often transferred to the wrong UPI address. Sometimes this happens in banking fraud as well. In this case, you can get this money back.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X