For Quick Alerts
ALLOW NOTIFICATIONS  
For Daily Alerts

ಪಿಎಲ್‌ಐ ಯೋಜನೆ ಎಂದರೇನು, ಏನಿದೆ ಪ್ರಯೋಜನ?

|

ಭಾರತದಲ್ಲಿ ಉತ್ಪಾದನೆ ಮತ್ತು ಪ್ರೊಡೆಕ್ಟಿವಿಟಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಪ್ರಮುಖ ಯೋಜನೆಯಾಗಿದೆ ಸರ್ಕಾರದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆ. ಈ ಯೋಜನೆಯನ್ನು ಮೊದಲು 1 ಆಗಸ್ಟ್ 2020 ರಲ್ಲಿ ಆರಂಭ ಮಾಡಲಾಗಿದೆ.

 

ಆರಂಭದಲ್ಲಿ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯಕ್ಕೆ ಮಾತ್ರ ಈ ಪಿಎಲ್‌ಐ ಯೋಜನೆಯನ್ನು ಪರಿಚಯ ಮಾಡಲಾಯಿತು. ಬಳಿಕ 2020 ರ ಅಂತ್ಯದ ತಿಂಗಳುಗಳಲ್ಲಿ ಈ ಯೋಜನೆಯನ್ನು ರಾಷ್ಟ್ರವ್ಯಾಪಿ 10 ಕ್ಕೂ ಹೆಚ್ಚು ವಲಯಗಳಲ್ಲಿ ಪರಿಚಯಿಸಲಾಗಿದೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್, ಅಥವಾ ಪಿಎಲ್‌ಐ ದೇಶೀಯವಾಗಿ ಉತ್ಪಾದಿಸಿದ ಸರಕುಗಳ ಹೆಚ್ಚಾಗಿ ಮಾರಾಟ ಮಾಡಲು ಪ್ರೋತ್ಸಾಹ ನೀಡುತ್ತದೆ.

PMJDY:1,73,954 ಕೋಟಿಗೂ ಅಧಿಕ ಬ್ಯಾಂಕ್ ವ್ಯವಹಾರ ದಾಖಲೆ

ಹಾಗೆಯೇ ವಿದೇಶಿ ಸಂಸ್ಥೆಗಳು ಭಾರತದಲ್ಲಿ ಕಚೇರಿಗಳನ್ನು ತೆರೆಯಲು ಈ ಯೋಜನೆ ಮೂಲಕ ಆಹ್ವಾನ ನೀಡಲಾಗುತ್ತದೆ. ಇದು ತಮ್ಮ ಉತ್ಪಾದನಾ ಸೌಲಭ್ಯಗಳನ್ನು ತೆರೆಯಲು ಅಥವಾ ವಿಸ್ತರಿಸಲು, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯ ವ್ಯವಹಾರಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

 ಪಿಎಲ್‌ಐ ಯೋಜನೆಯ ಪ್ರಯೋಜನಗಳು

ಪಿಎಲ್‌ಐ ಯೋಜನೆಯ ಪ್ರಯೋಜನಗಳು

1. ಪಿಎಲ್‌ಐ ಯೋಜನೆಯ ಮೂಲಕ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಕಟ್ಟಡ ವ್ಯವಸ್ಥೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರಮುಖವಾಗಿ ಮಾನವ ಶಕ್ತಿ ಹಾಗೂ ಮಾನವನಿಂದಾಗುವ ಸೃಷ್ಟಿಗೆ ಹೆಚ್ಚು ಗಮನವನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ.
2. ದೇಶದಲ್ಲಿ ಹೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡುವುದು ಹಾಗೂ ಆಮದನ್ನು ಕಡಿಮೆ ಮಾಡಲು ಪಿಎಲ್‌ಐ ಯೋಜನೆ ಉತ್ತೇಜನ ನೀಡುತ್ತದೆ.
3. ಪಿಎಲ್‌ಐ ಯೋಜನೆಯು ಪುರಾತನ ಉತ್ಪನ್ನ ವಿಧಾನವನ್ನು ಪುನರುಜ್ಜೀವನಗೊಳಿಸಲು ಸಹಕಾರಿಯಾಗಿದೆ. ವೈವಿಧ್ಯತೆಯನ್ನು ಹೆಚ್ಚಿಸುತ್ತದೆ.
4. ಹೆಚ್ಚುತ್ತಿರುವ ಉತ್ಪಾದಕತೆಯನ್ನು ಪುರಸ್ಕರಿಸಲು ಈ ಯೋಜನೆಯನ್ನು ಆರಂಭ ಮಾಡಲಾಗಿದೆ.
5. ಪಿಎಲ್‌ಐ ಯೋಜನೆಯು ದೇಶದ ಬೆಳವಣಿಗೆಯೊಂದಿಗೆ ವ್ಯವಹಾರಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

 ಪಿಎಲ್‌ಐ ಯೋಜನೆಯಲ್ಲಿ ಒಳಗೊಂಡಿರುವ ವಲಯಗಳು
 

ಪಿಎಲ್‌ಐ ಯೋಜನೆಯಲ್ಲಿ ಒಳಗೊಂಡಿರುವ ವಲಯಗಳು

ಇಲ್ಲಿ ನಾವು ಪಿಎಲ್‌ಐ ಯೋಜನೆಯಲ್ಲಿ ಒಳಗೊಂಡಿರುವ ವಲಯಗಳು ಮತ್ತು ಸರ್ಕಾರ ಈ ವಲಯಕ್ಕೆ ಎಷ್ಟು ಹಣಕಾಸು ವೆಚ್ಚಕ್ಕೆ ಅನುಮೋದನೆ ನೀಡಿದೆ ಎಂಬ ಬಗ್ಗೆ ವಿವರಿಸಲಾಗಿದೆ.

ಎಲೆಕ್ಟ್ರಾನಿಕ್/ತಂತ್ರಜ್ಞಾನ ಉತ್ಪನ್ನಗಳು: 5000 ಕೋಟಿ ರೂಪಾಯಿ
ಫಾರ್ಮಾ ವಲಯ: 15,000 ಕೋಟಿ ರೂಪಾಯಿ
ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು: 12,195 ಕೋಟಿ ರೂಪಾಯಿ
ಜವಳಿ ಉತ್ಪನ್ನಗಳು: ಎಂಎಂಎಫ್ ವಿಭಾಗ ಮತ್ತು ತಾಂತ್ರಿಕ ಜವಳಿ: 10,683 ಕೋಟಿ ರೂಪಾಯಿ
ಹೈ ಎಫಿಶಿಯನ್ಸಿ ಸೋಲರ್ ಪಿವಿ ಮಾಡ್ಯೂಲ್ಸ್: 4,500 ಕೋಟಿ ರೂಪಾಯಿ
ಸ್ಪೆಷಾಲಿಟಿ ಸ್ಟೆಲ್: 6,322 ಕೋಟಿ ರೂಪಾಯಿ
ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ (ACC ) ಬ್ಯಾಟರಿ: 18,100 ಕೋಟಿ ರೂಪಾಯಿ
ಆಟೋಮೊಬೈಲ್ ಮತ್ತು ಆಟೋ ಉತ್ಪನ್ನಗಳು: 57,042 ಕೋಟಿ ರೂಪಾಯಿ
ಆಹಾರ ಉತ್ಪನ್ನಗಳು: 10,900 ಕೋಟಿ ರೂಪಾಯಿ
ವೈಟ್ ಗೂಡ್ಸ್ (ACs & LED): 6,238 ಕೋಟಿ ರೂಪಾಯಿ

 ಪಿಎಲ್‌ಐ ಯೋಜನೆ ಲಾಭ ಪಡೆದ 5 ದೊಡ್ಡ ಕಂಪನಿಗಳು

ಪಿಎಲ್‌ಐ ಯೋಜನೆ ಲಾಭ ಪಡೆದ 5 ದೊಡ್ಡ ಕಂಪನಿಗಳು

ನೆಸ್ಲೆ ಇಂಡಿಯಾ ಲಿಮಿಟೆಡ್: ನೆಸ್ಲೆ ಇಂಡಿಯಾವು ನೆಸ್ಲೆಯ ಅಂಗಸಂಸ್ಥೆಯಾಗಿದೆ, ಇದು ಆಹಾರ ವಲಯದಲ್ಲಿ ಕಾರ್ಯನಿರ್ವಹಿಸುವ ಸ್ವಿಟ್ಜರ್ಲೆಂಡ್ ಮೂಲದ ಜಾಗತಿಕ MNC ಆಗಿದೆ. ಆದಾಯದ ದೃಷ್ಟಿಯಿಂದ ನೆಸ್ಲೆ ವಿಶ್ವದ ಅತಿದೊಡ್ಡ ಆಹಾರ ಕಂಪನಿಯಾಗಿದೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್: 1981 ರಲ್ಲಿ ಕಂಪನಿಯನ್ನು ಸ್ಥಾಪಿಸಲಾಯಿತು. 1982 ರಲ್ಲಿ, ಭಾರತ ಸರ್ಕಾರ ಮತ್ತು ಜಪಾನಿನ ಕಂಪನಿಯಾದ ಸುಜುಕಿ ಮೋಟಾರ್ ಕಾರ್ಪೊರೇಷನ್ (SMC) ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕಿದವು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಟೆಡ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದ ಅತಿದೊಡ್ಡ ಖಾಸಗಿ ವಲಯದ ಕಂಪನಿ ಮತ್ತು ಫಾರ್ಚೂನ್ 500 ಕಂಪನಿಯಾಗಿದೆ. ಎಲ್ಲ ವಲಯದಲ್ಲಿ ಹೆಜ್ಜೆ ಇಟ್ಟಿರುವ ಸಂಸ್ಥೆ ಇದಾಗಿದೆ.
ಲಾರ್ಸೆನ್ & ಟೂಬ್ರೊ ಲಿಮಿಟೆಡ್: ಇದು ಬಹುರಾಷ್ಟ್ರೀಯ ಸಂಸ್ಥೆಯಾಗಿದೆ. ಮೂಲಸೌಕರ್ಯ, ಹೈಡ್ರೋಕಾರ್ಬನ್‌ಗಳು ಮೊದಲಾದ ವಲಯದಲ್ಲಿ ಹೆಜ್ಜೆ ಇರಿಸಿದೆ.
ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಲಿಮಿಟೆಡ್: ಡಾ. ರೆಡ್ಡಿ ಲ್ಯಾಬೊರೇಟರೀಸ್ ಲಿಮಿಟೆಡ್ ಔಷಧೀಯ ವಲಯದಲ್ಲಿ ಭಾರತದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ಕೋವಿಡ್ ಸಂದರ್ಭದಲ್ಲಿ ಈ ಕಂಪನಿ ಹೆಚ್ಚು ಬೆಳವಣಿಗೆಯನ್ನು ಕಂಡಿದೆ.

English summary

What is PLI Scheme of Goverment, Here's Explained Benefit and Other Details in Kannada

What is Production Linked Incentive (PLI) Scheme of Goverment,Here's Explained Benefit and Other Details in Kannada. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X