For Quick Alerts
ALLOW NOTIFICATIONS  
For Daily Alerts

ಬೆಂಗಳೂರು ನಗರ- ವಿಮಾನ ನಿಲ್ದಾಣದ ಮಧ್ಯೆ ರೈಲು ಸಂಚಾರ ಶುರು

By ಅನಿಲ್ ಆಚಾರ್
|

ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರದ ಕಾರ್ಯ ನಿರ್ವಹಣೆ ಜನವರಿ 4ರ ಸೋಮವಾರದಿಂದ ಆರಂಭವಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಸಂಚಾರ ದಟ್ಟಣೆ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಲಿದೆ ಎಂದು ಹೊಸದಾಗಿ ಆರಂಭವಾಗಿರುವ ರೈಲು ನಿಲ್ದಾಣದ ಫೋಟೋಗಳನ್ನು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮಾಡಿದ್ದಾರೆ.

 

ಈ ಮಾರ್ಗವನ್ನು ನೈರುತ್ಯ ರೈಲ್ವೆಯಿಂದ ನಿರ್ವಹಣೆ ಮಾಡಲಾಗುತ್ತದೆ. ಈ ಮೂಲಕ ರಸ್ತೆಗೆ ಪರ್ಯಾಯವಾಗಿ ಹಲವು ಪ್ರಯಾಣಿಕರಿಗೆ ವಿಮಾನ ನಿಲ್ದಾಣ ತಲುಪುವುದಕ್ಕೆ ಸಹಾಯ ಆಗುತ್ತದೆ. ಸದ್ಯಕ್ಕೆ ಐದು ರೈಲುಗಳು ನಗರ ಮತ್ತು ವಿಮಾನ ನಿಲ್ದಾಣದ ಮಧ್ಯೆ ಸಂಚರಿಸುತ್ತವೆ. ದರವು 10- 15 ರುಪಾಯಿ ಇರುತ್ತದೆ.

ಬೆಂಗಳೂರು ವಿಮಾನ ನಿಲ್ದಾಣ ಸೆಂಟ್ರಲ್ ಏಷ್ಯಾದಲ್ಲೇ ಬೆಸ್ಟ್

ರಸ್ತೆ ಮಾರ್ಗದಲ್ಲಿ ಕೆಎಸ್ ಆರ್ ಟಿಸಿಯಿಂದ ಸಂಚರಿಸುವ ಬಸ್ ಪ್ರಯಾಣ ದರವು ನಗರದ ವಿವಿಧ ಪ್ರಮುಖ ಭಾಗಗಳಿಂದ ಕನಿಷ್ಠ 250 ರುಪಾಯಿ ಇದೆ. ಇನ್ನು ಕ್ಯಾಬ್ ಗಳಿಗೆ ಕನಿಷ್ಠ 700 ರುಪಾಯಿ ಇದೆ.

ಬೆಂಗಳೂರು ನಗರ- ವಿಮಾನ ನಿಲ್ದಾಣದ ಮಧ್ಯೆ ರೈಲು ಸಂಚಾರ ಶುರು

ಇನ್ನು ವೇಳಾಪಟ್ಟಿ ವಿಚಾರಕ್ಕೆ ಬಂದರೆ, ನಗರ ರೈಲು ನಿಲ್ದಾಣದಿಂದ ಬೆಳಗ್ಗೆ 4.45, ರಾತ್ರಿ 9 ಗಂಟೆಗೆ ರೈಲುಗಳು ತೆರಳುತ್ತದೆ. ಯಲಹಂಕ, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಕ್ರಮವಾಗಿ ಬೆಳಗ್ಗೆ 7, 8.30 ಮತ್ತು ಸಂಜೆ 5.55ಕ್ಕೆ ಹೊರಡುತ್ತದೆ.

ವಿಮಾನ ನಿಲ್ದಾಣದಿಂದ ರೈಲು ಸಂಜೆ 6.43, ರಾತ್ರಿ 10.37ಕ್ಕೆ ಮೆಜೆಸ್ಟಿಕ್ ಗೆ ಹೊರಡುತ್ತದೆ. ಬೆಳಗ್ಗೆ 6.22, 7.45 ಮತ್ತು 8.21ಕ್ಕೆ ಯಲಹಂಕ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಕ್ಕೆ ಕ್ರಮವಾಗಿ ತೆರಳುತ್ತವೆ. ಇನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಜತೆಗೆ ಚರ್ಚೆಯ ನಂತರ ಈ ಸಮಯ ನಿಗದಿ ಮಾಡಲಾಗಿದೆ. ಇದರಿಂದ ವಿಮಾನ ನಿಲ್ದಾಣದ ನೂರಾರು ಸಿಬ್ಬಂದಿಗೆ ಅನುಕೂಲ ಆಗುತ್ತದೆ.

ಇನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನಿರ್ವಹಿಸುವ ಷಟಲ್ ಬಸ್ ಗಳು ಪ್ರಯಾಣಿಕರನ್ನು ಟರ್ಮಿನಲ್ ಗೆ ಕರೆದೊಯ್ಯಲು ಕಾರ್ಯ ನಿರ್ವಹಿಸುತ್ತವೆ.

English summary

Bengaluru City And Kempegowda International Airport Connecting Train Start Operations From Today

Bengaluru city and Kempe Gowda International Airport connecting train starts operation from January 4, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X