For Quick Alerts
ALLOW NOTIFICATIONS  
For Daily Alerts

ಸಾಲಮನ್ನಾದಿಂದ ದೇಶದ ಆರ್ಥಿಕತೆಗೆ ಪೆಟ್ಟು, ಚುನಾವಣಾ ಪ್ರಣಾಳಿಕೆಯಿಂದ ತೆಗೆಯಬೇಕು: ರಘುರಾಮ್ ರಾಜನ್

ರೈತರ ಸಾಲಮನ್ನಾ ಯೋಜನೆಯಿಂದ ರೈತರ ಬದುಕು ಹಸನಾಗಿದೆಯೇ ಎಂದು ಆರ್ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ಪ್ರಶ್ನಿಸಿದ್ದಾರೆ.

|

ರೈತರ ಸಾಲಮನ್ನಾ ಯೋಜನೆಯಿಂದ ರೈತರ ಬದುಕು ಹಸನಾಗಿದೆಯೇ ಎಂದು ಆರ್ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ಪ್ರಶ್ನಿಸಿದ್ದಾರೆ.
ರೈತರ ಸಾಲ ಮನ್ನಾ ರಾಷ್ಟ್ರದ ಆರ್ಥಿಕತೆಗೆ ಒಳ್ಳೆಯದಲ್ಲ. ಇದು ದೇಶದಲ್ಲಿನ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ರಘುರಾಮ್‌ ರಾಜನ್‌ ಒತ್ತಿ ಹೇಳಿದ್ದಾರೆ. ರೈತರಿಗೆ ಭರ್ಜರಿ ಬಂಪರ್! ಕೇಂದ್ರದಿಂದ ರೈತರ 4 ಲಕ್ಷ ಕೋಟಿ ಸಾಲ ಮನ್ನಾ..!?

 

ಚುನಾವಣಾ ಪ್ರಣಾಳಿಕೆ

ಚುನಾವಣಾ ಪ್ರಣಾಳಿಕೆ

ಚುನಾವಣೆಗಳನ್ನು ಗೆಲ್ಲುವುದಕ್ಕಾಗಿ ರಾಜಕೀಯ ಪಕ್ಷಗಳು ಸಾಲ ಮನ್ನಾ ಮಾಡುತ್ತಿರುವುದರಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದ್ದು, ಸಾಲ ಮನ್ನಾ ಚುನಾವಣೆ ಭರವಸೆಗಳ ಪ್ರಣಾಳಿಕೆಯಿಂದ ತೆಗೆದು ಹಾಕಬೇಕು ಎಂದು ಚುನಾವಣೆ ಆಯೋಗಕ್ಕೆ ಪತ್ರ ರಾಜನ್‌ ಬರೆದಿದ್ದಾರೆ.

ಆರ್ಥಿಕ ತಜ್ಞರೊಂದಿಗೆ ವರದಿ

ಆರ್ಥಿಕ ತಜ್ಞರೊಂದಿಗೆ ವರದಿ

ಆರ್ಥಿಕ ತಜ್ಞರಾದ ಅಭಿಜಿತ್‌ ಬ್ಯಾನರ್ಜಿ, ಪ್ರಂಜುಲ್‌ ಭಂಡಾರಿ, ಅಮರ್ಥ್ಯ ಲಹಿರಿ, ನೀಲಕಾಂತ್‌ ಮಿಶ್ರಾ, ಸಜ್ಜಿದ್‌ ಚಿನಾಯ್‌, ಮೈತ್ರೀಶ್‌ ಘಟಕ್‌, ಗೀತಾ ಗೋಪಿನಾಥ್‌, ಪ್ರಾಚಿ ಮಿಶ್ರಾ, ಕಾರ್ತಿಕ್‌ ಮುರಳಿದರನ್‌, ರೋಹಿಣಿ ಪಾಂಡೆ, ಈಶ್ವರ್‌ ಪ್ರಸಾದ್‌ ಮತ್ತು ಸೋಮನಾಥನ್‌ ಅವರ ಜತೆಗೂಡಿ ರಾಜನ್‌ ಭಾರತದ ಆರ್ಥಿಕ ಕಾರ್ಯತಂತ್ರ ವರದಿಯನ್ನು ಸಿದ್ಧ ಪಡಿಸಿದ್ದಾರೆ.

ಪಂಚರಾಜ್ಯ ಚುನಾವಣೆ ಫಲಿತಾಂಶ
 

ಪಂಚರಾಜ್ಯ ಚುನಾವಣೆ ಫಲಿತಾಂಶ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವುದಕ್ಕೆ ರೈತರ ಸಾಲ ಮನ್ನಾ ಭರವಸೆ ಪ್ರಮುಖ ಕಾರಣ ಎನ್ನಲಾಗಿದೆ. ಛತ್ತೀಸ್‌ಗಢ ರಾಜ್ಯದಲ್ಲಿ ಸಾಲ ಮನ್ನಾ ಭರವಸೆಯಿಂದಲೇ ಕಾಂಗ್ರೆಸ್‌ ಪ್ರಾಬಲ್ಯ ಸಾಧಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಪಂಚ ರಾಜ್ಯಗಳ ಸೋಲಿನ ನಂತರ ಕೇಂದ್ರ ಸರ್ಕಾರ ಸುಮಾರು ರೂ. 4 ಲಕ್ಷ ಕೋಟಿ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

English summary

Raghuram Rajan seeks abolition of farm loan waivers from election manifestos

Raghuram Rajan says he has written to the Election Commission that issues, such as farm loan waivers, should be taken off the table
Story first published: Saturday, December 15, 2018, 16:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X