For Quick Alerts
ALLOW NOTIFICATIONS  
For Daily Alerts

ಗೋದ್ರೇಜ್ ಪ್ರಾಪರ್ಟೀಸ್‍ನಿಂದ ಬೆಂಗಳೂರಿನಲ್ಲಿ ಗೋದ್ರೇಜ್ ಅಕ್ವಾ ಬಿಡುಗಡೆ

|

ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಸಂಸ್ಥೆಯು ಬೆಂಗಳೂರು ಉತ್ತರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಬಳ್ಳಾರಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ 7), ತನ್ನ ನೂತನ ಯೋಜನೆಗೆ ಚಾಲನೆ ನೀಡಿತು. ಯೋಜನೆಯು ನೀರಿನ ಸೌಲಭ್ಯವುಳ್ಳ ಮನೆಗಳನ್ನು ಒಳಗೊಳ್ಳಲಿದ್ದು, ಗೋದ್ರೇಜ್ ಕ್ಯೂಎಸ್‍ಟಿ ಸಿಸ್ಟಮ್ ಅನ್ನು ಒಳಗೊಂಡಿರಲಿದೆ. ಇದು, ಬೆಂಗಳೂರಿನ ಮೊದಲ ಹಾಗೂ ಸಂಪೂರ್ಣವಾಗಿ ಸುಸ್ಥಿರಾಭಿವೃದ್ಧಿ ಜಲನಿರ್ವಹಣೆ ವ್ಯವಸ್ಥೆ ಇರುವ ಯೋಜನೆಯಾಗಿರಲಿದೆ.

ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್, ದೇಶದ ಪ್ರಮುಖವಾದ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದು, ಬೆಂಗಳೂರಿನಲ್ಲಿ ತನ್ನ ಗೋದ್ರೇಜ್ ಅಕ್ವಾ ಅನ್ನು ಆರಂಭಿಸಿತು. ಯೋಜನೆಯು ಒಟ್ಟು 7.19 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.

ಬೆಂಗಳೂರಿನಲ್ಲಿ ಗೋದ್ರೇಜ್ ಅಕ್ವಾ ಬಿಡುಗಡೆ

 

ಗೋದ್ರೇಜ್ ಅಕ್ವಾ ಒಟ್ಟಾರೆ 72,918 ಚದರ ಮೀಟರ್‍ನಷ್ಟು ಮಾರಾಟದ ಪ್ರದೇಶ ಒಳಗೊಳ್ಳಲಿದೆ (ಅಂದಾಜು 784,878 ಚದರ ಅಡಿ). ಯೋಜನೆಯಡಿ 2ಬಿಎಚ್‍ಕೆ ಮತ್ತು 3ಬಿಎಚ್‍ಕೆಯ ಅಪಾರ್ಟ್‍ಮೆಂಟ್‍ಗಳು ಇರಲಿದ್ದು, ಇವು 69 ಚದರ ಮೀಟರ್ ಹಾಗೂ 116 ಚದರ ಮೀಟರ್ (738 ಚದರ ಅಡಿ ಮತ್ತು 1251 ಚದರ ಅಡಿ) ವಿಸ್ತೀರ್ಣವನ್ನು ಹೊಂದಿರುತ್ತವೆ.

ಬಳ್ಳಾರಿ ರಸ್ತೆಯಲ್ಲಿ ಆಯಕಟ್ಟಿನ ಸ್ಥಳದಲ್ಲಿ ಇರುವ ಪ್ರಮುಖ ವಸತಿ ಪ್ರದೇಶವಾಗಿದೆ. ಗೋದ್ರೇಜ್ ಅಕ್ವಾ ಪ್ರಮುಖ ವಆಣಿಜ್ಯ ಮತ್ತು ಕೈಗಾರಿಕೆ ಪ್ರದೇಶಗಳಾದ ಹೆಬ್ಬಾಳ, ಯಲಹಂಕ, ದೇವನಹಳ್ಳಿಗೆ ಹತ್ತಿರದಲ್ಲಿದೆ. ಇದರಿಂದ, ಹೊರ ವರ್ತುಲ ರಸ್ತೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ಬಳ್ಳಾರಿ ರಸ್ತೆಯು ಸೂಕ್ಷ್ಮ ಮಾರುಕಟ್ಟೆಯು ತ್ವರಿತಗಿಯಲ್ಲಿ ವಸತಿ ಪ್ರದೇಶ ಬೆಳೆಯುತ್ತಿದ್ದು, ಅನೇಕ ಮೂಲಸೌಕರ್ಯ ಅಭಿವೃದ್ಧಿ, ಯೋಜನೆಗಳು ಈ ಭಾಗದಲ್ಲಿ ಆರಂಭವಾಗುತ್ತಿವೆ. ಗೋದ್ರೇಜ್ ಪ್ರಾಪರ್ಟೀಸ್ ಬೆಂಗಳೂರಿನಲ್ಲಿ ಈ ಒಟ್ಟು 17 ಯೋಜನೆಗಳನ್ನು ಒಳಗೊಂಡಿದೆ.

ಬೆಂಗಳೂರಿನಲ್ಲಿ ಗೋದ್ರೇಜ್ ಅಕ್ವಾ ಬಿಡುಗಡೆ

ಗೋದ್ರೇಜ್ ಅಕ್ವಾ ಯೋಜನೆಯು ಬೆಂಗಳೂರಿನಲ್ಲಿ ವಸತಿ ನೀರು ನಿರ್ವಹಣೆಯನ್ನು ಕ್ರಾಂತಿಕಾರಕ ಬದಲಾವಣೆ ಮಾಡಲು ಉದ್ದೇಶಿಸಿದೆ. ಗೋದ್ರೇಜ್‍ನ ಕ್ವಾಡ್‍ಸ್ಟೆಪ್ ಟ್ರೀಟ್‍ಮೆಂಟ್ ಪ್ರಾಸೆಸ್ (ಕ್ಯೂಎಸ್‍ಟಿಪಿ) ಯೋಜನೆಯು ಎಲ್ಲ ಅವಧಿಯಲ್ಲಿ ಗುಣಮಟ್ಟದ ಶುದ್ಧ ಕುರಿಯುವ ನೀರು ಒದಿಗಸಲು ಒತ್ತು ನೀಡಲಿದೆ.

ಮರುಬಳಕೆ, ಕಡಿಮೆ ಬಳಕೆ, ಮರುಬಳಕೆ ಚಿಂತನೆಯಡಿ ಕಾರ್ಯ ನಿರ್ವಹಿಸಲಿದೆ. ಪ್ರತಿಯೊಂದು ಮನೆಗೂ ಸಮರ್ಪಕವಾದ ನೀಡು ಪೂರೈಸಲು ಒತ್ತು ನೀಡಲಿದೆ. ಮುಂದುವರಿದು, ವಸತಿ ಯೋಜನೆಯಡಿ ಗೋದ್ರೇಜ್ ಅಕ್ವಾ ಅಡ್ವಾನ್ಸಡ್ ಟ್ರೀಟ್‍ಮೆಂಟ್ ಪ್ಲಾಟ್, ಕೇಂದ್ರೀಕೃತ ಆರ್.ಒ ನೀರು ಪೂರೈಕೆ, ನೀರು ಸಂಸ್ಕರಣಾ ಸೌಲಭ್ಯವನ್ನು ಒಳಗೊಳ್ಳಲಿದೆ.

English summary

Godrej Properties launches Godrej Aqua in Bengaluru

The Mumbai-based real estate developer launches its project in Bellary road (NH-7), located at International Airport Road in North Bengaluru. The project comprises of water secure homes which will make use of the Godrej QST System – Bangalore’s first and only fully sustainable water management system
Story first published: Tuesday, January 22, 2019, 16:30 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more