For Quick Alerts
ALLOW NOTIFICATIONS  
For Daily Alerts

ನಗರ ಪ್ರದೇಶಗಳಲ್ಲಿ 10 ರಲ್ಲಿ 8 ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ: ಎಪಿಯು ಸಮೀಕ್ಷೆ

|

ಲಾಕ್‌ಡೌನ್‌ ಸಮಯದಲ್ಲಿ ನಗರ ಪ್ರದೇಶಗಳಲ್ಲಿನ 10 ಕಾರ್ಮಿಕರಲ್ಲಿ ಎಂಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಗ್ರಾಮೀಣ ಭಾರತದ 10 ಜನರಲ್ಲಿ 6 ಉದ್ಯೋಗ ನಷ್ಟವಾಗಿದೆ ಎಂದು ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯ (ಎಪಿಯು) ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.

ಅದೇ ಸಮಯದಲ್ಲಿ ಸರ್ಕಾರದ ನಗದು ಸವಲತ್ತುಗಳ ವರ್ಗಾವಣೆ, ನಗರ ಪ್ರದೇಶದ ಸುಮಾರು ಮೂರನೇ ಒಂದು ಭಾಗದಷ್ಟು ದುರ್ಬಲ ಕುಟುಂಬಗಳಿಗೆ (36%) ತಲುಪಿದೆ, ಹಾಗೆಯೇ ಗ್ರಾಮೀಣ ಭಾಗದ ಅರ್ಧದಷ್ಟು ಕುಟುಂಬಗಳು ಅಂತಹ ಪ್ರಯೋಜನವನ್ನು ಪಡೆದಿವೆ ಎಂದು ಸಮೀಕ್ಷೆ ಹೇಳಿದೆ.

ನಗರ ಪ್ರದೇಶಗಳಲ್ಲಿ 10 ರಲ್ಲಿ 8 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ!

ಎಪಿಯು ಭಾರತದ 12 ರಾಜ್ಯಗಳಲ್ಲಿ 4000 ಕಾರ್ಮಿಕರ ನಡುವೆ ನಡೆಸಿದ ಸಮೀಕ್ಷೆಯಲ್ಲಿ, ಜಮೀನು ಹೊಂದಿರುವ 688 ರೈತರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಪಿಎಂ-ಕಿಸಾನ್ ಯೋಜನೆಯ ಮೂಲಕ ನಗದು ವರ್ಗಾವಣೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ಸ್ಟಿಟ್ಯೂಟ್‌ನಿಂದ ಸಮೀಕ್ಷೆ ನಡೆಸಿದ ಕಾರ್ಮಿಕರು ಮತ್ತು ರೈತರ ಅಭಿಪ್ರಾಯದಂತೆ 500 ರುಪಾಯಿ ತಮ್ಮ ಎರಡು ಮೂರು ದಿನಗಳ ಗಳಿಕೆಯಾಗಿದೆ. ಆದರೆ ಸುಮಾರು 45 ದಿನಗಳವರೆಗೆ ಲಾಕ್ಡೌನ್ ಆಗಿರುವುದರಿಂದ ಮುಂದಿನ ಎರಡು ತಿಂಗಳವರೆಗೆ ಅವರಿಗೆ ಕನಿಷ್ಠ 7000 ರುಪಾಯಿಗಳನ್ನು ನೀಡಬೇಕೆಂದು ಸಂಸ್ಥೆ ಸೂಚಿಸಿದೆ.

ಎಪಿಯು ಸಮೀಕ್ಷೆಯ ಪ್ರಕಾರ, ಲಾಕ್ ಡೌನ್ ಸಮಯದಲ್ಲಿ 90 ಪರ್ಸೆಂಟ್‌ಕ್ಕಿಂತ ಹೆಚ್ಚು ನಗರ ರೈತರು ತಮ್ಮ ಉತ್ಪನ್ನಗಳನ್ನು ಪೂರ್ಣ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಮತ್ತು ಗ್ರಾಮೀಣ ಭಾರತದ ಸುಮಾರು 88 ಪರ್ಸೆಂಟ್ ರೈತರು ಪೂರ್ಣ ಬೆಲೆ ಪಡೆಯಲು ವಿಫಲರಾಗಿದ್ದಾರೆ.

ಸುಮಾರು 80 ಪರ್ಸೆಂಟ್ ನಗರ ಕುಟುಂಬಗಳು ಮೊದಲಿಗಿಂತ ಕಡಿಮೆ ಆಹಾರವನ್ನು ಸೇವಿಸಿವೆ ಎಂದು ಸಮೀಕ್ಷೆ ತಿಳಿಸಿದೆ.

English summary

8 Out Of 10 Workers Lost Jobs In Urban India Survey

8 Out Of 10 Workers Lost Jobs In Urban India during lockdown Survey By Azim Premji University
Story first published: Wednesday, May 13, 2020, 14:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X