For Quick Alerts
ALLOW NOTIFICATIONS  
For Daily Alerts

IIM- B ಹಳೇ ವಿದ್ಯಾರ್ಥಿ ಕರಣ್ ಬಜಾಜ್ ಈಗ 'ಸ್ಟಾರ್ಟ್ ಅಪ್ ಸ್ಟಾರ್'

|

ಬೆಂಗಳೂರಿಗೆ ಸ್ಟಾರ್ಟ್ ಅಪ್ಸ್ ಗಳ ರಾಜಧಾನಿ ಎಂಬ ಕಿರೀಟ ಇದ್ದು, ಈಗ ಮತ್ತೊಂದು ಗರಿ ಸೇರಿಕೊಂಡಿದೆ. ಬೆಂಗಳೂರಿನ ಇಂಡಿಯನ್ಸ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ನಲ್ಲಿ (IIM- B) ವಿದ್ಯಾಭ್ಯಾಸ ಮುಗಿಸಿರುವ 41 ವರ್ಷದ ಕರಣ್ ಬಜಾಜ್ ತಮ್ಮ ಸ್ಟಾರ್ಟ್‌ ಅಪ್‌ ಕಂಪೆನಿ ವೈಟ್‌ಹ್ಯಾಟ್ ಜೂನಿಯರ್ ಅನ್ನು ಬೈಜೂಸ್ ಗೆ 30 ಕೋಟಿ USDಗೆ (ಭಾರತದ ರೂಪಾಯಿ ಲೆಕ್ಕದಲ್ಲಿ 2,248 ಕೋಟಿ ರುಪಾಯಿ) ಮಾರಾಟ ಮಾಡಿದ್ದಾರೆ.

6ರಿಂದ 14 ವರ್ಷದ ಮಕ್ಕಳನ್ನು ಗಮನದಲ್ಲಿ ಇರಿಸಿಕೊಂಡು ಆರಂಭಿಸಿದ್ದ ಈ ಆನ್‌ ಲೈನ್ ಕೋಡಿಂಗ್ ಪ್ಲಾಟ್‌ಫಾರ್ಮ್ ಕೇವಲ 20 ತಿಂಗಳ ಹಿಂದೆ ಆರಂಭವಾಗಿದ್ದು, ಈವರೆಗೂ 1.1 ಕೋಟಿ ಡಾಲರ್ ಸಂಗ್ರಹಿಸಿದೆ. ಆದರೆ ಈಗ 30 ಕೋಟಿ ಡಾಲರ್ ಗೆ ಮಾರಾಟ ಮಾಡಿದ ನಂತರ ಕಂಪೆನಿಯದು ಭಾರತದ ಎಜುಕೇಷನ್- ಟೆಕ್ ಜಾಗದಲ್ಲಿ ಅತಿದೊಡ್ಡ ವ್ಯವಹಾರವಾಗಿದೆ.

ಆನ್‌ ಲೈನ್ ಕೋಡಿಂಗ್ ವೇದಿಕೆಯಾದ ಈ ಸ್ಟಾರ್ಟ್‌ ಅಪ್ ಕಂಪೆನಿಯ ಎಲ್ಲಾ ಹಣವು ಇನ್ನೂ ಬ್ಯಾಂಕಿನಲ್ಲಿದ್ದು, 5 ತಿಂಗಳಿಂದ ಹಣದ ಹರಿವು ಪಾಸಿಟಿವ್ ಆಗಿದೆ. ಬಜಾಜ್ ಈಗಲೂ ಕಂಪೆನಿಯಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಮಾಲೀಕತ್ವವನ್ನು ಹೊಂದಿದ್ದಾರೆ. ಎಲ್ಲ ನಗದು ಒಪ್ಪಂದದ ನಂತರ ಅವರನ್ನು ಮಲ್ಟಿಮಿಲಿಯನೇರ್ ಆಗಿ ಮಾಡಿದೆ. ಮುಖ್ಯವಾಗಿ, ಈ ಸ್ಟಾರ್ಟ್ ಅಪ್ ಕೇವಲ 18 ತಿಂಗಳಲ್ಲಿ ವಾರ್ಷಿಕ 15 ಕೋಟಿ ಅಮೆರಿಕನ್ ಡಾಲರ್ ದರವನ್ನು ಸಾಧಿಸಿದೆ.

IIM- B ಹಳೇ ವಿದ್ಯಾರ್ಥಿ ಕರಣ್ ಬಜಾಜ್ ಈಗ 'ಸ್ಟಾರ್ಟ್ ಅಪ್ ಸ್ಟಾರ್'

ಕರಣ್ ಬಜಾಜ್ ಬಗ್ಗೆ ಒಂದಿಷ್ಟು ಮಾಹಿತಿ
ಅಮೆರಿಕದ ಪೌರತ್ವ ಹೊಂದಿರುವ ಕರಣ್ ಬಜಾಜ್ ಯೋಗ ಶಿಕ್ಷಕ. ಇದರ ಜತೆಗೆ ಮೂರು ಕಾದಂಬರಿಗಳ ಲೇಖಕ. ಬಿಟ್ಸ್, ಮೆಸ್ರಾ ಮತ್ತು ಐಐಎಂ ಬೆಂಗಳೂರಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ವಿಶೇಷ ಏನೆಂದರೆ, ಕರಣ್ ಬಜಾಜ್ ಒಂದು ವರ್ಷ ಆಶ್ರಮದಲ್ಲಿ ಯೋಗ ಶಿಕ್ಷಕರಾಗಿ ವಾಸಿಸುತ್ತಿದ್ದರು.

English summary

Bengaluru IIM Alumni Sold His Company To Byjus

Karan Bajaj, 41-year old alumni of IIM- B, now he become news by selling his Whitehat Jr to Byjus to 30 crore USD. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X