For Quick Alerts
ALLOW NOTIFICATIONS  
For Daily Alerts

ಬೆಂಗಳೂರು ವಿಮಾನ ನಿಲ್ದಾಣ ಸೆಂಟ್ರಲ್ ಏಷ್ಯಾದಲ್ಲೇ ಬೆಸ್ಟ್

|

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಡೀ ಕರ್ನಾಟಕ, ಅಷ್ಟೇ ಏಕೆ ಭಾರತಕ್ಕೇ ಹೆಮ್ಮೆ ತಂದುಕೊಟ್ಟಿದೆ. ಭಾರತದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಕೀರ್ತಿ ಪಡೆದುಕೊಂಡಿದೆ ಬಿಐಎಎಲ್. ಅಷ್ಟೇ ಅಲ್ಲ, ಕೇಂದ್ರ ಏಷ್ಯಾಗೆ ನಾಲ್ಕು ವರ್ಷದಲ್ಲಿ ಮೂರನೇ ಬಾರಿಗೆ ಉತ್ತಮ ವಿಮಾನ ನಿಲ್ದಾಣ- 2020 ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ಸ್ ಪಡೆದಿದೆ.

ಇಲ್ಲಿನ ವಿಮಾನ ನಿಲ್ದಾಣ ಆರಂಭವಾಗಿ 11 ವರ್ಷ ಕಳೆದಿದೆ. ಇಷ್ಟು ಅವಧಿಯಲ್ಲಿ ಅಮೋಘ ಸಾಧನೆ ಇದು ಎಂದು ಬಿಐಎಎಲ್ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್) ಸಿಇಒ ಹಾಗೂ ಎಂ.ಡಿ. ಹರಿ ಎಂ. ಮರಾರ್ ಅವರು ಹೇಳಿದ್ದಾರೆ.

ವಿಮಾನ ನಿಲ್ದಾಣ ವಲಯದಲ್ಲೇ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ಸ್ ಅತ್ಯಂತ ಪ್ರತಿಷ್ಠಿತವಾದದ್ದು. ಜಾಗತಿಕ ಮಟ್ಟದಲ್ಲಿ ವಾರ್ಷಿಕವಾಗಿ ನಡೆಯುವ ಪ್ರಕ್ರಿಯೆಯಲ್ಲಿ ವಿಮಾನ ನಿಲ್ದಾಣಗಳ ಗ್ರಾಹಕರು ಇದಕ್ಕಾಗಿ ಮತ ಚಲಾಯಿಸುತ್ತಾರೆ. 550 ವಿಮಾನ ನಿಲ್ದಾಣಕ್ಕೂ ಹೆಚ್ಚು ಇದರಲ್ಲಿ ಭಾಗಿಯಾಗಿದ್ದು, ಗ್ರಾಹಕರಿಗೆ ಒದಗಿಸುವ ಸೇವೆ ಮತ್ತು ವ್ಯವಸ್ಥೆಯನ್ನು ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತದೆ.

ಬೆಂಗಳೂರು ವಿಮಾನ ನಿಲ್ದಾಣ ಸೆಂಟ್ರಲ್ ಏಷ್ಯಾದಲ್ಲೇ ಬೆಸ್ಟ್

ಆರು ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ ನೂರಕ್ಕೂ ದೇಶಗಳ ನಾಗರಿಕರು ಭಾಗವಹಿಸಿದ್ದರು. ಚೆಕ್ ಇನ್ ಸೇರಿದಂತೆ ಹಲವು ವಿಭಾಗಗಳಲ್ಲಿ ವಿಮಾನ ನಿಲ್ದಾಣದಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ಇದರಲ್ಲಿ ಮುಖ್ಯವಾಗಿ ಪರಿಗಣಿಸಲಾಗುತ್ತದೆ.

English summary

Bengaluru International Airport Best In Central Asia

Bengaluru International Airport best in central Asia. Here is the complete details.
Story first published: Monday, May 11, 2020, 15:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X